'ಮಾಸ್ತಿ ಗುಡಿ' ಸಿನಿಮಾ ಮಾಡಬಾರದಿತ್ತಂತೆ ನಟಿ ಅಮೂಲ್ಯ.!
ಪತಿ ಜಗದೀಶ್ ಪ್ರಕಾರ, ನಟಿ ಅಮೂಲ್ಯ 'ಮಾಸ್ತಿ ಗುಡಿ' ಸಿನಿಮಾ ಮಾಡಬಾರದಿತ್ತಂತೆ. ಹಾಗಂತ, ಜಗದೀಶ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದರು.
'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹರಟೆ ಹೊಡೆದ ಬಳಿಕ ನಿರೂಪಕ ಅಕುಲ್ ಬಾಲಾಜಿ ದಿಢೀರ್ ಬೆಂಕಿ (Rapid Fire) ರೌಂಡ್ ಗೆ ಚಾಲನೆ ನೀಡಿದರು.

ಅಮೂಲ್ಯ ಪತಿ ಜಗದೀಶ್ ರವರ ಕಡೆಗೆ ಅಕುಲ್ ಬಾಲಾಜಿ ಪ್ರಶ್ನೆಗಳ ಬಾಣ ಸುರಿಸಿದರು. ಅದರಲ್ಲಿ ''ನಿಮ್ಮ ಪ್ರಕಾರ, ಅಮೂಲ್ಯ ಯಾವ ಸಿನಿಮಾ ಮಾಡಬಾರದಿತ್ತು.?'' ಎಂದು ಅಕುಲ್ ಕೇಳಿದ್ದಕ್ಕೆ, ''ಮಾಸ್ತಿ ಗುಡಿ'' ಎಂದರು ಜಗದೀಶ್.
ಅದಕ್ಕೆ ಕಾರಣ ಏನು ಅಂತ ಕೇಳಿದಾಗ, ''ಸಿನಿಮಾದಲ್ಲಿ ಅವರು (ಅಮೂಲ್ಯ) ಸತ್ತು ಹೋಗುತ್ತಾರೆ'' ಎಂದು ಜಗದೀಶ್ ಉತ್ತರ ಕೊಟ್ಟರು.

ಇದೇ ಸಮಯಕ್ಕೆ 'ಮಾಸ್ತಿ ಗುಡಿ' ಶೂಟಿಂಗ್ ಸಂದರ್ಭದಲ್ಲಿ ದುರಂತ ಸಾವಿಗೀಡಾದ ಅನಿಲ್ ಹಾಗೂ ಉದಯ್ ರವರ ನೆನಪಿಸಿಕೊಂಡರು. ಆಗ ಜಗದೀಶ್, '' ಅನಿಲ್ ಹಾಗೂ ಉದಯ್ ರವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದರು.
More from Filmibeat
English summary
Kannada Actress Amulya should not have done 'Maasthi Gudi' film says her husband Jagadeesh in Colors Super Channel's popular show 'Super Talk Time'.
amulya akul balaji colors channel tv reality show ಅಮೂಲ್ಯ ಅಕುಲ್ ಬಾಲಾಜಿ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ


Click it and Unblock the Notifications











