»   » ನಿರ್ದೇಶಕ ಫಣಿ ರಾಮಚಂದ್ರ ಬಗ್ಗೆ ಒಂದು ಇಂಟರೆಸ್ಟಿಂಗ್ ಸ್ಟೋರಿ

ನಿರ್ದೇಶಕ ಫಣಿ ರಾಮಚಂದ್ರ ಬಗ್ಗೆ ಒಂದು ಇಂಟರೆಸ್ಟಿಂಗ್ ಸ್ಟೋರಿ

By: ಪ್ರವೀಣ್ ಪಟವರ್ಧನ್
Subscribe to Filmibeat Kannada

ನಾನೊಬ್ಬ ಸಾಧಕರ ಜೊತೆ ನಿಂತಿದ್ದೇನೆ. ಇವರು ಗೊತ್ತಿರಬೇಕಲ್ಲ....ಮೊನ್ನೆ ಶನಿವಾರ, ಜನವರಿ 3, 2015 ರಂದು 'ಸಂಸ್ಕೃತ ಆರಾಧನಾ' ಕಾರ್ಯಕ್ರಮದಲ್ಲಿ ಇವರನ್ನು ಭೇಟಿಯಾಗುವಂತಾಯ್ತು. ಕನ್ನಡ ಚಲನಚಿತ್ರ ಪ್ರಿಯರು, ಸಿನಿಮಾ ಗಮನವಿಟ್ಟು ನೋಡಿದ್ದರೆ, ಗಣೇಶನ ಮದುವೆ, ಗಣೇಶ ಸುಬ್ರಮಣ್ಯ, ಗೌರಿ ಗಣೇಶ, ಒಂದು ಸಿನಿಮಾ ಕಥೆ, ಚಿತ್ರಗಳಲ್ಲಿ ಈ ವ್ಯಕ್ತಿ (ನಿರ್ದೇಶಕ) ಒಂದು ಕಥಾನಾಯಕನ ಪಾತ್ರದಲ್ಲಿ ತೆರೆಯ ಮೇಲೆ ಬಂದವರು; ತಮ್ಮ ಅತ್ಯದ್ಭುತ ನಿರ್ದೇಶನವನ್ನು ಕೊಟ್ಟವರು.

ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಒಂದು ಒಳ್ಳೆಯ message ಕೊಟ್ಟಿರುವ ಜನಪ್ರಿಯ ನಿರ್ದೇಶಕರು. ಅದೆಷ್ಟೋ ಜನರು, ಮಕ್ಕಳು ಇವರ ಚಲನಚಿತ್ರದ ಡೈಲಾಗ್ ಗಳನ್ನು ಕಂಠಮಾಡಿದವರಿರುತ್ತಾರೆ. ಇವರ ಹೆಸರು ಎಚ್ ಎಸ್ ಫಣಿ ರಾಮಚಂದ್ರ. ['ಬೀದಿಗೆ ಬಿದ್ದ' ನಿರ್ದೇಶಕ ಫಣಿ ರಾಮಚಂದ್ರ]

An interesting story on director, writer Phani Ramachandra

ಹಲವಾರು ಚಲನಚಿತ್ರಗಳ ನಂತರ, ಇವರ ನಿರ್ದೇಶನದ ಒಂದಿಷ್ಟು ಧಾರಾವಾಹಿಗಳು ಉದಯ ಟಿ.ವಿಯಲ್ಲಿ ಮೂಡಿಬರುತ್ತಿತ್ತು. ಟ್ರಿನ್ ಟ್ರಿನ್ ಟ್ರಿನ್, ಮದುವೆ ಮದುವೆ ಮದುವೆ, ದೇವರು ದೇವರು ದೇವರು, ದಂಡ ಪಿಂಡಗಳು, ಸಾಹಸ ಲಕ್ಷ್ಮಿಯರು..... ಈ ಧಾರಾವಾಹಿಗಳೂ ಸಹ ಸಾಕಷ್ಟು ಜನಮನ್ನಣೆ ಗಳಿಸಿದವು.

ಇತ್ತೀಚೆಗೆ ಇವರು 'ಕನ್ನಡ ಪ್ರಭ' ಪತ್ರಿಕೆಯಲ್ಲಿಯೂ ಬರೆಯುತ್ತಿದ್ದಾರೆ. ಸತ್ಯವನ್ನು ಹುಡುಕುವ ಇವರ ಲೇಖನಗಳು ಧೈರ್ಯದಿಂದ ಕೂಡಿರುತ್ತವೆ. ಎದೆಗಾರಿಕೆಯ ಲೇಖನಗಳಾಗಿರುತ್ತವೆ. ಹಿಂದೆ, ಇವರ ಒಂದು ಲೇಖನದ ಕುರಿತು, ಇ-ಮೇಲ್ ಮಾಡಿ "ತುಂಬಾ ಚೆನ್ನಾಗಿ ಬರೆದಿದ್ದೀರಾ ಸಾರ್" ಎಂದು ಬರೆದರೆ, ವಿನಯದಿಂದ, ನಮ್ರತೆಯಿಂದ ಧನ್ಯವಾದದ ಪತ್ರ ಬರೆದಿದ್ದರು.

ಧನ್ಯವಾದ ಎಲ್ಲರೂ ಬರೆಯುತ್ತಾರೆ. ಆದರೆ ರಾಮಚಂದ್ರರು ಬಳಸಿದ ಪದಗಳು ನನಗೆ ನೀಡಿದ ಸಂತೋಷ ಅಷ್ಟಿಷ್ಟಲ್ಲ. ಈಗ 'ಸಂಸ್ಕೃತ ಆರಾಧನಾ' ತಂಡದ ಸ್ವಾಗತ ಸಮಿತಿಯಲ್ಲಿ ಫಣಿ ರಾಮಚಂದ್ರರು ಸಾಕಷ್ಟು ಕೆಲಸ ಮಾಡಿದ್ದಾರೆ. ಅದರ ಫಲವಾಗಿ ಕಾರ್ಯಕ್ರಮಗಳೂ ಚೆನ್ನಾಗಿ ಮೂಡಿ ಬಂದಿವೆ.

ಫಣಿ ರಾಮಚಂದ್ರರು ಮುಂಚೆಯೂ ಲೇಖನಗಳನ್ನು ಬರೆಯುತ್ತಿದ್ದರೇ? ನನಗಂತೂ ಗೊತ್ತಿರಲಿಲ್ಲ. ಆ ವಿಷಯವಾಗಿಯೇ ಅವರ ಜೊತೆ ಮಾತನಾಡಲು ಸಿಕ್ಕ ಆ ಕೆಲ ನಿಮಿಷಗಳಲ್ಲಿ ಅವರಲ್ಲಿ ಪ್ರಶ್ನಿಸಿದೆ. ಅದಕ್ಕವರು ಮುಂಚೆಯೂ ಬರೆಯುತ್ತಿದ್ದೆ. ಆದರೆ ನನ್ನ ಹೆಸರು ಹಾಕುತ್ತಿರಲಿಲ್ಲ. ಬೇರೆ ಯಾವುದೋ ಹೆಸರು, ವಿಳಾಸವನ್ನು ಹಾಕಿ ಪತ್ರ, ಲೇಖನಗಳನ್ನು ಬರೆಯುತ್ತಿದ್ದೆ ಎಂದರು. ದಂಗಾದೆ.

English summary
Kannada film and television director H. S. Phani Ramachandra is very simple from top to bottom says Kannada bloger Praveen Patavardhan. Phani Ramachandra is known for directing such classic Kannada comedy films as Ganeshana Maduve and Gauri Ganesha and the TV serial Dandapindagalu. His films mainly portray middle class Karnataka society in a comic light.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada