For Quick Alerts
  ALLOW NOTIFICATIONS  
  For Daily Alerts

  ದೊಡ್ಮನೆಯಲ್ಲಿ ದಿಢೀರ್ ಬೆಳವಣಿಗೆ: ಇಂದೇ ಹೊರಹೋಗ್ತಾರಾ ಆಂಡಿ.?

  |
  Bigg Boss Kannada Season 6: ದೊಡ್ಮನೆಯಲ್ಲಿ ದಿಢೀರ್ ಬೆಳವಣಿಗೆ: ಇಂದೇ ಹೊರಹೋಗ್ತಾರಾ ಆಂಡಿ.?| FILMIBEAT KANNADA

  ಈ ಸಲ ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿದ್ದಾರೆ. ಈ ಹಿಂದಿನ ಯಾವ ಆವೃತ್ತಿಯಲ್ಲೂ ಇಷ್ಟೊಂದು ಜಗಳ, ಇಷ್ಟೊಂದು ಗಲಾಟೆ ಆಗೇ ಇಲ್ಲ ಎಂಬುವುದು ಪ್ರೇಕ್ಷಕರ ಅಭಿಪ್ರಾಯ.

  ಅದರಲ್ಲೂ ಆಂಡಿ ಬಗ್ಗೆ ಹೇಳಲೇಬೇಕು. ಒಂದಲ್ಲ ಒಂದು ವಿಷ್ಯಕ್ಕೆ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳಿಗೂ ಆಂಡಿ ಕಿರಿಕಿರಿ ಕೊಟ್ಟಿದ್ದಾರೆ. ಕೆಲ ಚಟುವಟಿಕೆಗಳಲ್ಲಿ ಆಂಡ್ರ್ಯೂ ಎಲ್ಲೆ ಮೀರಿ ವರ್ತಿಸಿದ್ದು ಉಂಟು. ಇದನ್ನೆಲ್ಲಾ ನೋಡಿದ ಪ್ರೇಕ್ಷಕರು ಆಂಡಿ ಬಗ್ಗೆ ಕೀಳಾಗಿ ಯೋಚಿಸಿರುವುದಂತೂ ನಿಜಾ.

  ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

  ಅಂತಹದ್ರಲ್ಲಿ ಅವರ ಮನೆಯವರು ಹೇಗೆ ಸ್ವೀಕಾರ ಮಾಡಿರಬಹುದು ಎಂಬುದು ಪ್ರಶ್ನೆಯಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ, ಬಿಗ್ ಬಾಸ್ ಮನೆಯೊಳಗೆ ಬಂದ ಆಂಡಿ ಅವರ ತಂದೆ ಫುಲ್ ಗರಂ ಆಗಿದ್ದಾರೆ. ಅದರ ಪರಿಣಾಮ ತನ್ನ ಮಗನನ್ನ ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ? ಮುಂದೆ ಓದಿ...

  ಬಿಗ್ ಬಾಸ್ ಮನೆಗೆ ಬಂದ ಅಂಡಿ ತಂದೆ

  ಬಿಗ್ ಬಾಸ್ ಮನೆಗೆ ಬಂದ ಅಂಡಿ ತಂದೆ

  ಈ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಬರ್ತಿದ್ದಾರೆ. ಮುಂದಿನ ಸರದಿ ಆಂಡ್ರ್ಯೂ ಅವರದ್ದು. ಆಂಡಿಯನ್ನ ನೋಡಲು ಅವರ ತಂದೆ ಮನೆಯೊಳಗೆ ಬಂದಿದ್ದಾರೆ. ಮನೆಗೆ ಬಂದವರು ಮಗನ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಾರೆ ಅಂದುಕೊಂಡಿದ್ದರೇ, ಮಗನ ನಡವಳಿಕೆ ಬಗ್ಗೆ ಕೋಪಗೊಂಡಿದ್ದಾರೆ.

  ಚಿತ್ರಹಿಂಸೆ ನೀಡಿದ 'ವಿಲನ್' ಆಂಡಿ ವಿರುದ್ಧ ಪೊಲೀಸ್ ಕಂಪ್ಲೇಂಟ್.!

  ಎಲ್ಲರನ್ನ ಕ್ಷಮೆ ಕೇಳಿದ ಆಂಡಿ ತಂದೆ

  ಎಲ್ಲರನ್ನ ಕ್ಷಮೆ ಕೇಳಿದ ಆಂಡಿ ತಂದೆ

  ಮನೆಯಲ್ಲಿದ್ದ ಇತರೆ ಸದಸ್ಯರ ಬಳಿ ಆಂಡಿ ಅವರ ತಂದೆ ಕ್ಷಮೆ ಕೇಳಿದ್ದಾರೆ. ''ನಿಮಗೆಲ್ಲಾ ಇವನು ಎಷ್ಟು ತೊಂದರೆ ಕೊಟ್ಟಿದ್ದಾನೆ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ'' ಎಂದು ಬೇಸರದಿಂದ ಹೇಳಿದರು. ಇದನ್ನ ಕಂಡು ಮನೆಯಲ್ಲಿದ್ದ ಸದಸ್ಯರು ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾದರು.

  ಕ್ರೂರತನ ಮೆರೆದ ಆಂಡಿಗೆ ಚಡಿಯೇಟು ಕೊಟ್ಟ ಕಿಚ್ಚ ಸುದೀಪ್.!

  ಮನೆಗೆ ಕರೆದುಕೊಂಡು ಹೋಗ್ತೀನಿ

  ಮನೆಗೆ ಕರೆದುಕೊಂಡು ಹೋಗ್ತೀನಿ

  ಮನೆಯಲ್ಲಿ ಎಲ್ಲರಿಗೂ ತೊಂದರೆ ಕೊಟ್ಟಿದ್ದಾನೆ, ಸರಿಯಾಗಿ ಆಟವಾಡುತ್ತಿಲ್ಲ ಎಂಬ ಕಾರಣಕ್ಕೆ ಆಂಡಿ ಅವರ ತಂದೆ, ತಮ್ಮ ಮಗನನ್ನು ಮನೆಯಿಂದ ಕರೆದುಕೊಂಡು ಹೋಗುವುದಾಗಿ ಬಿಗ್ ಬಾಸ್ ಗೆ ಮನವಿ ಮಾಡಿಕೊಂಡಿದ್ದಾರೆ.

  ಎರಡುವರೆ ವರ್ಷ ಡಿಪ್ರೆಶನ್ ನಲ್ಲಿದ್ದ ಆಂಡಿ: ಯಾಕೆ.?

  ನಾನು ಕಷ್ಟ ಪಟ್ಟು ಆಡಿದ್ದೀನಿ

  ನಾನು ಕಷ್ಟ ಪಟ್ಟು ಆಡಿದ್ದೀನಿ

  ನೀನು ಇಲ್ಲಿ ಬೇಡ, ನಾನು ಮನೆಗೆ ಕರೆದುಕೊಂಡು ಹೋಗ್ತೀನಿ ಎಂದು ಆಂಡಿ ಅವರ ತಂದೆ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಮಧ್ಯ ಪ್ರವೇಶ ಮಾಡಿದ ಅಂಡಿ ''ಅಪ್ಪ ನಾನು ಕಷ್ಟಪಟ್ಟು ಆಡಿದ್ದೀನಿ'' ಎಂದು ಕೇಳಿಕೊಂಡಿದ್ದಾರೆ. ಆದ್ರೆ, ಅವರ ತಂದೆ ಆಂಡಿಯ ಮಾತಿಗೆ ಬೆಲೆ ನೀಡಿಲ್ಲ. ''ಸುಮ್ಮನಿರು, ನೀನು ಎಲ್ಲರ ಬಳಿ ಪ್ರೀತಿ ಸಂಪಾದನೆ ಮಾಡ್ಬೇಕು'' ಎಂದು ಹೇಳಿದ್ದಾರೆ.

  'ಗುಡ್ನೆಸ್' ಹೆಸರಲ್ಲಿ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ಬಯಲು ಮಾಡಿದ ಆಂಡಿ.!

  ಬಿಗ್ ಬಾಸ್ ದ್ವಾರದ ಬಳಿ ಆಂಡಿ.?

  ಬಿಗ್ ಬಾಸ್ ದ್ವಾರದ ಬಳಿ ಆಂಡಿ.?

  ಸದ್ಯ, ಆಂಡಿಯ ತಂದೆ ಬಿಗ್ ಮನೆಗೆ ಬಂದು ಮಗನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಮಗನನ್ನು ಕರೆದುಕೊಂಡು ಹೋಗಿ ಬಿಗ್ ಬಾಸ್ ದ್ವಾರದ ಬಳಿ ನಿಂತಿರುವ ಪ್ರೋಮೋ ಬಿಡುಗಡೆಯಾಗಿದೆ. ನಿಜಕ್ಕೂ ಆಂಡಿಯನ್ನ ಅವರ ತಂದೆ ಬಿಗ ಮನೆಯಿಂದ ವಾಪಸ್ ಕರೆದುಕೊಂಡು ಹೋಗ್ತಾರಾ ಅಥವಾ ಒಂದು ಎಚ್ಚರಿಕೆ ನೀಡಿ ಅಲ್ಲೇ ಬಿಟ್ಟು ಹೋಗ್ತಾರಾ ಎಂಬುದು ಈಗ ಕುತೂಹಲ ಮೂಡಿಸಿದೆ.

  English summary
  Andrew's father came into the big boss house today and he get angry on his son attitude.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X