»   » ಬಿಗ್ ಬಾಸ್ ಮನೆಯಲ್ಲಿ ಅನುಶ್ರೀಗೆ ವಾಂತಿಗಳು!

ಬಿಗ್ ಬಾಸ್ ಮನೆಯಲ್ಲಿ ಅನುಶ್ರೀಗೆ ವಾಂತಿಗಳು!

Posted By:
Subscribe to Filmibeat Kannada
<ul id="pagination-digg"><li class="next"><a href="/tv/rishi-kumar-enters-bigg-boss-members-worried-073008.html">Next »</a></li></ul>

ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದೆ. ಮನೆಯಲ್ಲಿ ಒಳಜಗಳ, ಪಿತೂರಿ, ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುವುದು, ಕುತಂತ್ರಗಳು ಹೆಚ್ಚಾಗುತ್ತಿವೆ.

ಯಾವುದೇ ದೈನಿಕ ಧಾರಾವಾಹಿಗಿಂತಲೂ ಕಡಿಮೆಯಿಲ್ಲದಂತೆ ಒಂಚೂರು ಹೆಚ್ಚಾಗಿಯೇ ತಿರುವುಗಳಿವೆ. ಬಿಗ್ ಬಾಸ್ ಕಾರ್ಯಕ್ರಮದ 14ನೇ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ. 14 ಹಾಗೂ 15ನೇ ದಿನದ ಚಿತ್ರಣ ಸೋಮವಾರ (ಏ.8) ಪ್ರಸಾರವಾಯಿತು.

ಹದಿನಾಲ್ಕನೇ ದಿನದ ಆರಂಭ 7.30ಕ್ಕೆ ಪ್ರಾರಂಭವಾಯಿತು. ಬಳಿಕ ಸ್ವಲ್ಪ ಹೊತ್ತಿಗೆಲ್ಲಾ ಅನುಶ್ರೀ ಹೊಟ್ಟೆ ಹಿಡಿದು ವಾಂತಿ ಮಾಡಿಕೊಳ್ಳಲು ಶುರುವಚ್ಚಿದರು. ಉಳಿದ ಸ್ಪರ್ಧಿಗಳು ಇದರಿಂದ ಸ್ಪಲ್ಪ ಧೃತಿಗೆಟ್ಟರಾದರೂ ಆಕೆಗೆ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯೂ ಆದರು.

Etv Kannada reality show 'Bigg Boss'

ಅನುಶ್ರೀ ವಾಂತಿ ಮಾಡಿಕೊಳ್ಳುವುದರ ಜೊತೆ ಪ್ರಜ್ಞೆಯನ್ನೂ ತಪ್ಪಿ ಬಿದ್ದುಬಿಟ್ಟರು. ಇದರಿಂದ ಸ್ಪರ್ಧಿಗಳು ಕಂಗಾಲಾದರು. ಎಲ್ಲರೂ ಆಕೆಯ ಕೈ, ಕಾಲು ಉಜ್ಜಿ ಮುಖಕ್ಕೆ ನೀರು ಚುಮುಕಿಸಿ ಪ್ರಜ್ಞೆ ಬರುವಂತೆ ಮಾಡಿದರು. ಸ್ವಲ್ಪ ಹೊತ್ತಿನ ಬಳಿಕ ಅನುಶ್ರೀ ಸರಿಹೋದರು.

ಮನೆಯಲ್ಲಿ ಅಷ್ಟೆಲ್ಲಾ ಮಹಿಳಾ ಸ್ಪರ್ಧಿಗಳಿದ್ದರೂ ಆಕೆಯನ್ನು ಹಾಸಿಗೆ ತನಕ ತನ್ನ ಕೈಯಾರೆ ಹೊತ್ತುಕೊಂಡು ಸಾಗಿಸಿದ್ದು ಮಾತ್ರ ವಿನಾಯಕ ಜೋಶಿ. ಬಳಿಕ ಎಲ್ಲರೊಂದಿಗೂ ಮಾತನಾಡುತ್ತಾ ಯಾಕೋ ಅನುಶ್ರೀ ಅವರದು ನಾಟಕ ಜಾಸ್ತಿ ಆಯಿತು ಎಂದ. ಅದೇನು ನಾಟಕವೋ ಏನೋ!

<ul id="pagination-digg"><li class="next"><a href="/tv/rishi-kumar-enters-bigg-boss-members-worried-073008.html">Next »</a></li></ul>
English summary
Etv Kannada reality show 'Bigg Boss' 14th and 15th highlights. Narendra Babu Sharma seems to be very unhappy with Bigg Boss for bringing Rishi Kumar to the house. At every given opportunity, he was seen criticising the latter. He also advised a couple of housemates to stay away from him and seeded a fear of black magic

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada