For Quick Alerts
  ALLOW NOTIFICATIONS  
  For Daily Alerts

  ಸೂಪರ್-ಡೂಪರ್ ಹಿಟ್ ಧಾರಾವಾಹಿ ನಿರ್ದೇಶಕ ಈಗ ತರಕಾರಿ ವ್ಯಾಪಾರಿ

  |

  'ಬಾಲಿಕಾ ವಧು' ಎಂಬ ಸೂಪರ್-ಡೂಪರ್ ಹಿಟ್ ಹಿಂದಿ ಧಾರಾವಾಹಿಯ ಎಪಿಸೋಡ್ ಡೈರೆಕ್ಟರ್ (ಕಂತು ನಿರ್ದೇಶಕ) ಇಂದು ಜೀವನ ಸಾಗಿಸಲು ಸೈಕಲ್ ಮೇಲೆ ತರಕಾರಿ ಒಯ್ದು ಮಾರಾಟ ಮಾಡುತ್ತಿದ್ದಾರೆ.

  ಕನ್ನಡ, ತೆಲುಗು, ತಮಿಳು, ಬಂಗಾಳಿ, ಗುಜರಾತಿ ಹೀಗೆ ಹಲವು ಭಾಷೆಗಳಿಗೆ ರೀಮೇಕ್ ಆಗಿದ್ದ 'ಬಾಲಿಕಾ ವಧು' ಧಾರಾವಾಹಿ ನಿರ್ದೇಶಿಸಿದ್ದ ರಾಮ್ ವೃಕ್ಷ ಗೌರ್ ಇಂದು ಜೀವನ ಸಾಗಿಸಲು ತರಕಾರಿ ವ್ಯಾಪಾರದ ಮೊರೆ ಹೋಗಿದ್ದಾರೆ. ಕನ್ನಡದಲ್ಲಿ 'ಪುಟ್ಟಗೌರಿ ಮದುವೆ' ಹೆಸರಲ್ಲಿ 'ಬಾಲಿಕಾ ವಧು' ಧಾರಾವಾಹಿ ರೀಮೇಕ್ ಆಗಿತ್ತು.

  ನಿರ್ದೇಶಕ ರಾಮ್ ವೃಕ್ಷ ಗೌರ್ ಅವರು ಉತ್ತರ ಪ್ರದೇಶದ ಅಜಮ್‌ಘರ್ ಜಿಲ್ಲೆಯಲ್ಲಿ ಸೈಕಲ್‌ನಲ್ಲಿ ತೆರಳಿ ತರಕಾರಿ ಮಾರುತ್ತಿದ್ದಾರೆ. ತರಕಾರಿ ಮಾರಾಟಕ್ಕೆ ಒಂದು ತಳ್ಳು ಗಾಡಿಯನ್ನು ಸಹ ಇಟ್ಟುಕೊಂಡಿದ್ದಾರೆ ನಿರ್ದೇಶಕ ಗೌರ್.

  ಲೊಕೇಶ್ ಹುಡುಕಲು ಬಂದವರು ವಾಪಸ್ ಹೋಗಲಾಗಿಲ್ಲ

  ಲೊಕೇಶ್ ಹುಡುಕಲು ಬಂದವರು ವಾಪಸ್ ಹೋಗಲಾಗಿಲ್ಲ

  ಭೋಜಪುರಿ ಸಿನಿಮಾದ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಲೆಂದು ಅಜಮ್‌ನಗರಕ್ಕೆ ರಾಮ್ ಕೃಷ್ಣ ಗೌರ್ ಬಂದಿದ್ದರಂತೆ. ಆ ವೇಳೆಗೆ ಸರಿಯಾಗಿ ಲಾಕ್‌ಡೌನ್ ಘೋಷಣೆಯಾಗಿದೆ. ಆ ನಂತರ ಅವರಿಗೆ ಮುಂಬೈಗೆ ವಾಪಸ್ ಹೋಗಲಾಗಿಲ್ಲ.

  ಸಿನಿಮಾ ಮಾಡುವುದಿಲ್ಲ ಎಂದ ನಿರ್ಮಾಪಕರು

  ಸಿನಿಮಾ ಮಾಡುವುದಿಲ್ಲ ಎಂದ ನಿರ್ಮಾಪಕರು

  ಭೋಜಪುರಿ ಸಿನಿಮಾದ ನಿರ್ಮಾಪಕರು ಸಹ ಒಂದು ವರ್ಷದ ವರೆಗೆ ಸಿನಿಮಾ ಪ್ರಾರಂಭ ಮಾಡಲು ಸಾಧ್ಯವಿಲ್ಲ ಎಂದು ಬಿಟ್ಟಿದ್ದಾರೆ. ಹಣ ಇಲ್ಲದ ಕಾರಣ ಜೀವನ ನಿರ್ವಹಣೆಗೆ ತರಕಾರಿ ವ್ಯಾಪಾರ ಪ್ರಾರಂಭಿಸಿದ್ದಾರೆ ಗೌರ್. ನನ್ನ ತಂದೆ ಇದೇ ವ್ಯಾಪಾರ ಮಾಡುತ್ತಿದ್ದರು, ಹಾಗಾಗಿ ನಾನೂ ಇದೇ ವ್ಯಾಪಾರ ಪ್ರಾರಂಭಿಸಿದೆ ಎಂದಿದ್ದಾರೆ ಗೌರ್.

  ಲೈಟ್ ಬಾಯ್ ದುಡಿದಿದ್ದ ರಾಮ್ ವೃಕ್ಷ ಗೌರ್

  ಲೈಟ್ ಬಾಯ್ ದುಡಿದಿದ್ದ ರಾಮ್ ವೃಕ್ಷ ಗೌರ್

  ಬಹು ವರ್ಷಗಳ ಹಿಂದೆ ಸಿನಿಮಾದಲ್ಲಿ ಅವಕಾಶ ಅರಸಿ ಮುಂಬೈಗೆ ಹೋಗಿದ್ದ ಗೌರ್, ಮೊದಲಿಗೆ ಲೈಟ್ ಬಾಯ್ ಆಗಿ ದುಡಿದಿದ್ದಾರೆ. ನಂತರ ಧಾರಾವಾಹಿಗಳಲ್ಲಿ ಸ್ಪಾಟ್ ಬಾಯ್ ಆಗಿಯೂ ಕೆಲಸ ಮಾಡಿದ್ದಾರೆ. ನಂತರ ಒಂದೊಂದೇ ಹಂತ ಮೇಲೆ ಎದ್ದು, ಎಪಿಸೋಡ್ ಡೈರೆಕ್ಟರ್, ಯುನಿಟ್ ಡೈರೆಕ್ಟರ್ ಆಗಿದ್ದರು, ಈಗ ಸಿನಿಮಾ ನಿರ್ದೇಶನದ ಯತ್ನಕ್ಕೆ ಇಳಿದಿದ್ದರು.

  SPB Special | 50 ವರ್ಷ ಟ್ರೆಂಡಿಂಗ್ ನಲ್ಲಿ ಇರೋಕೆ ಯಾರಿಗೂ ಆಗಲ್ಲ | Filmibeat Kannada
  ಸಹಾಯ ಮಾಡಲಿದೆ 'ಬಾಲಿಕಾ ವಧು' ತಂಡ

  ಸಹಾಯ ಮಾಡಲಿದೆ 'ಬಾಲಿಕಾ ವಧು' ತಂಡ

  ಬಾಲಿಕಾ ವಧು ಧಾರಾವಾಹಿಯಲ್ಲಿ ಭೈರೋನ್ ಸಿಂಗ್ ಪಾತ್ರ ನಿರ್ವಹಿಸಿದ್ದ ಅನುಪ್ ಸೋನಿಗೆ ತಮ್ಮ ಹಳೆಯ ನಿರ್ದೇಶಕ ತರಕಾರಿ ಮಾರುತ್ತಿರುವ ವಿಷಯ ಗೊತ್ತಾಗಿತ್ತು, ಟ್ವಿಟ್ಟರ್‌ನಲ್ಲಿ ಚಿತ್ರ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ, 'ಬಾಲಿಕಾ ವಧು' ತಂಡವು ಗೌರ್ ಅವರನ್ನು ಸಂಪರ್ಕಿಸುವ ಯತ್ನ ಮಾಡುತ್ತಿದ್ದು, ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ.

  English summary
  Famous TV serial Balika Vadhu director selling vegetables in Uttar Pradesh's Azamgarh to lead life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X