»   » ಓಸಿ ಪಟಾಕಿಗೆ ಬಾಯ್ಬಿಟ್ರಾ ನಗರದ ಪೊಲೀಸರು ?

ಓಸಿ ಪಟಾಕಿಗೆ ಬಾಯ್ಬಿಟ್ರಾ ನಗರದ ಪೊಲೀಸರು ?

By: ಗಿರೀಶ್ ಹಿರೇಮಠ್
Subscribe to Filmibeat Kannada
Janashree TV
ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮಾಡಲು ಎಲ್ಲಂದರಲ್ಲಿ ಅನುಮತಿ ನೀಡಲು ಬೆಂಗಳೂರು ಪೋಲೀಸ್ ನಿರಾಕರಿಸಿತ್ತು. ನಿಗದಿತ ಸ್ಥಳದಲ್ಲಿ ಮಾತ್ರ ಪಟಾಕಿ ಮಾರಬೇಕೆಂದು ಕಟ್ಟು ನಿಟ್ಟಿನ ಆದೇಶ ನೀಡಿತ್ತು. ಅದೇ ರೀತಿ ಲೈಸೆನ್ಸ್ ಕೂಡಾ ವಿತರಿಸಿತ್ತು.

ಆದರೆ... ನಗರದ ಕೆಲವೊಂದು ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಓಸಿ ಪಟಾಕಿ ಬಾಕ್ಸ್ ಜೊತೆಗೆ ದುಡ್ಡು ಕೊಟ್ಟರೆ ಪೋಲೀಸ್ ಇಲಾಖೆಯಿಂದ ಸುಲಭವಾಗಿ ಲೈಸೆನ್ಸ್ ಸಿಗುತ್ತಿತ್ತು. ಮುಖ್ಯವಾಗಿ ನಗರದ ಬಸವೇಶ್ವರ ನಗರ, ಹೈಗ್ರೌಂಡ್ಸ್, ಕೆ ಆರ್ ಪುರಂ, ಸುಬ್ರಮಣ್ಯಪುರ, ಸ್ಯಾಂಕಿ ರಸ್ತೆ, ಪೀಣ್ಯಾ ಮುಂತಾದ ಪೋಲೀಸ್ ಠಾಣೆಯಲ್ಲಿ ಲಕ್ಷ್ಮಿ ಪಟಾಕಿಯಂತೆ ಲೈಸೆನ್ಸ್ ಬಿಕರಿಯಾಗಿದೆ ಎನ್ನುವ ಗುರುತರ ಆರೋಪ ಪೋಲೀಸ್ ಇಲಾಖೆ ಮೇಲಿದೆ.

ಜನಶ್ರೀ ವಾಹಿನಿ ನಡೆಸಿದ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯಲ್ಲಿ ಪೋಲೀಸ್ ಇಲಾಖೆಯ ಬಣ್ಣ ಬಟ್ಟ ಬಯಲಾಗಿದೆ. ಹತ್ತು ಸಾವಿರ ಜೊತೆಗೆ ಎರಡೋ ಮೂರೋ ಪಟಾಕಿ ಪೊಟ್ಟಣ ನೀಡಿದರೆ ಲೈಸೆನ್ಸ್ ಕಣ್ಣು ಮಿಟುಕಿಸುವಷ್ಟರಲ್ಲಿ ಸಿಗುತ್ತಿತ್ತು ಎನ್ನುವ ವಿಷಯ ಹೊರಗೆ ಬಂದಿದೆ. ಕೆಲ ಠಾಣೆಯಲ್ಲಿ ಮಧ್ಯವರ್ತಿಯೊಬ್ಬ ವ್ಯಾಪಾರಿ ಮತ್ತು ಪೋಲೀಸ್ ಇಲಾಖೆಯ ಪರವಾಗಿ ವ್ಯವಹಾರ ನಡೆಸುತ್ತಿದ್ದ ಎನ್ನುವ ವಿಷಯ ಕೂಡ ತಿಳಿದು ಬಂದಿದೆ.

ಇದಲ್ಲದೆ ಅಗ್ನಿಶಾಮಕ ದಳದವರೂ ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆಂದು ವಾಹಿನಿ ತನ್ನ ಗುಪ್ತ ಕಾರ್ಯಾಚರಣೆಯ ಮೂಲಕ ವರದಿ ಮಾಡಿದೆ. ವ್ಯಾಪಾರಿಯ ಸೋಗಿನಲ್ಲಿ ಪೋಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಹೋಗುತ್ತಿದ್ದ ವಾಹಿನಿಯ ವರದಿಗಾರ ಎರಡೂ ಇಲಾಖೆಯ ನಿಜ ಸ್ವರೂಪವನ್ನು ಹೊರಗೆಳೆದಿದ್ದಾನೆ. ಗುಡ್ ಒನ್ ಫ್ರಂ ಜನಶ್ರೀ, ಗುಡ್. ಈ ಕಾರ್ಯಕ್ರಮ ಗುರುವಾರ ಮತ್ತು ಬುಧವಾರದಂದು ವಾಹಿನಿ ಮತ್ತೆ ಮತ್ತೆ ಪ್ರಸಾರ ಮಾಡುತ್ತಿತ್ತು.

English summary
Janashree sting operation reveals wide spread corruption from Bangalore police in issuing license to cracker sale depots

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada