»   » ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ & ಗ್ಯಾಂಗ್.!

ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ & ಗ್ಯಾಂಗ್.!

Posted By:
Subscribe to Filmibeat Kannada

ಇದು ಸ್ಟ್ರಾಟೆಜಿಯೋ ಅಥವಾ ನಡವಳಿಕೆಯೇ ಹಾಗೋ...ಗೊತ್ತಿಲ್ಲ. ಒಟ್ನಲ್ಲಿ, ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಮಾತ್ರ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರ ಇಮೇಜ್ ಡ್ಯಾಮೇಜ್ ಮಾಡುತ್ತಿದ್ದಾರೆ.

''ಕರ್ನಾಟಕದ ಹೆಮ್ಮೆಯ ಕ್ರಿಕೆಟರ್ ದೊಡ್ಡ ಗಣೇಶ್, ಕಿರುತೆರೆ ನಟಿ ಸಂಜನಾ ಹಿಂದೆ ಬಿದ್ದಿದ್ದಾರೆ'' ಅಂತ ಇಡೀ ಕರ್ನಾಟಕವೇ ಕೇಳುವ ಹಾಗೆ ಗಂಭೀರ ಆರೋಪ ಮಾಡಿದ್ದು ಇದೇ ಶೀತಲ್ ಶೆಟ್ಟಿ.!

ಕಾವ್ಯ ಶಾಸ್ತ್ರಿ ಮತ್ತು ನಟಿ ರೇಖಾ ಜೊತೆ ಕುಳಿತು ದೊಡ್ಡ ಗಣೇಶ್ ಬಗ್ಗೆ ಬಾಯಿಗೆ ಬಂದ ಹಾಗೆ ಗಾಸಿಪ್ ಮಾಡಿದ್ದ ಶೀತಲ್ ಶೆಟ್ಟಿ, 'ತಮ್ಮ ಹೇಳಿಕೆ ಸರಿ' ಎನ್ನುವ ಧಾಟಿಯಲ್ಲೇ ಕಿಚ್ಚ ಸುದೀಪ್ ಎದುರು ಸಮರ್ಥಿಸಿಕೊಂಡರು. [ಕಿಚ್ಚ ಸುದೀಪ್ ಮುಂದೆ ಎರಡು ಬಾರಿ ಕ್ಷಮೆ ಕೇಳಿದ ದೊಡ್ಡ ಗಣೇಶ್.!]

'ಗಾಸಿಪ್ ಗ್ಯಾಂಗ್' ಎದುರು ವಾದ ಅನವಶ್ಯಕ ಎಂದು ಭಾವಿಸಿದ ಕ್ರಿಕೆಟರ್ ದೊಡ್ಡ ಗಣೇಶ್ ಎಲ್ಲರ ಎದುರು ಕ್ಷಮೆ ಕೇಳಿ ದೊಡ್ಡತನ ಮೆರೆದರು. ಆದರೇನು ಪ್ರಯೋಜನ? ಈ ಘಟನೆ ನಡೆದ ಒಂದೇ ವಾರದಲ್ಲಿ ದೊಡ್ಡ ಗಣೇಶ್ 'ಬಿಗ್ ಬಾಸ್' ಮನೆಯಿಂದ ಹೊರಬಂದರು. ಈಗ ಶೀತಲ್ ಶೆಟ್ಟಿ & ಗ್ಯಾಂಗ್ ಕಣ್ಣು ನಟಿ ಮಾಳವಿಕಾ ಅವಿನಾಶ್ ಮೇಲೆ ಬಿದ್ದಿರುವ ಹಾಗಿದೆ.! ಮುಂದೆ ಓದಿ....

ಕ್ಯಾಪ್ಟನ್ ಆಗಲು 'ಬಿಗ್ ಬಾಸ್' ಮನೆ ಸದಸ್ಯರು ಬಿಡಲಿಲ್ಲ.!

ಮೂರನೇ ವಾರದ ಕ್ಯಾಪ್ಟನ್ ಆಗಲು 'ಬಿಗ್ ಬಾಸ್', ಮನೆಯ ಸದಸ್ಯರಿಗೆ 'ಬಲೂನ್' ಟಾಸ್ಕ್ ನೀಡಿದ್ದರು. ತಮಗೆ ನೀಡಿರುವ ಬಲೂನ್ ನ ಎಲ್ಲರಿಗಿಂತ ಹೆಚ್ಚು ಕಾಲ ಕಾಪಾಡಿಕೊಂಡವರಿಗೆ 'ಕ್ಯಾಪ್ಟನ್' ಪಟ್ಟ. ನಟಿ ಮಾಳವಿಕಾ ಅವಿನಾಶ್ ರವರಿಗೆ 'ಕ್ಯಾಪ್ಟನ್' ಪಟ್ಟ ಸಿಗಬಾರದು ಅಂತ ನಿರ್ಧರಿಸಿದ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರು, ಮಾಳವಿಕಾ ರವರ ಬಲೂನ್ ನ ಒಡೆದು ಹಾಕಿದರು. ['ಬಿಗ್ ಬಾಸ್ ಕನ್ನಡ-4': ಅರ್ಧಕರ್ಧ ಮನೆ ಸದಸ್ಯರು ಈ ವಾರ ಡೇಂಜರ್ ಝೋನಲ್ಲಿ.!]

ಬಲೂನ್ ಒಡೆದ ನಿರಂಜನ್.!

ನಟಿ ಮಾಳವಿಕಾ ಅವಿನಾಶ್ ರವರನ್ನ 'ತಾಯಿ' ಅಂತ ಕರೆಯುವ ಆರ್.ಜೆ ನಿರಂಜನ್ ದೇಶಪಾಂಡೆ, ಅದೇ ತಾಯಿಯ ಬಲೂನ್ ನ ಒಡೆದು ಹಾಕಿದರು.

ಮೋಹನ್ ಗೆ ಇದೇ ಬೇಕಾಗಿತ್ತು.!

ಮಾಳವಿಕಾ ಕ್ಯಾಪ್ಟನ್ ಆದ್ರೆ ಗ್ಯಾರೆಂಟಿ ''ನನಗೂ-ಅವರಿಗೂ ಗಲಾಟೆ ಆಗುತ್ತದೆ. ಹೀಗಾಗಿ ಮಾಳವಿಕಾ ಕ್ಯಾಪ್ಟನ್ ಆಗಬಾರದು'' ಅಂತ ನಟ ಮೋಹನ್ ಹೇಳಿದರು.

ಮಾಳವಿಕಾ ವಿರೋಧಿಸಲಿಲ್ಲ.!

''ನಿಮಗೆಲ್ಲ ಕಾವ್ಯ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇದ್ದರೆ ಒಡೆದು ಹಾಕಿ'' ಅಂತ ಹೇಳಿದರೆ ವಿನಃ, ಬಲೂನ್ ಒಡೆಯುವ ಬಗ್ಗೆ ನಟಿ ಮಾಳವಿಕಾ ಅವಿನಾಶ್ ವಿರೋಧಿಸಲಿಲ್ಲ.

ಮಾಳವಿಕಾಗೆ ಬೇಸರ ಆಯ್ತು.!

''ನಾನು ಗಿವಪ್ ಮಾಡಲಿಲ್ಲ. ಚುಚ್ಚಿದರು ಅಷ್ಟೆ'' ಅಂತ್ಹೇಳಿ ಬೆಡ್ ರೂಮ್ ಕಡೆ ಹೋದ ಮಾಳವಿಕಾ ಅವಿನಾಶ್ ಕಣ್ಣೀರು ಹಾಕಿದರು. ''ಎಲ್ಲರೂ ನಿರ್ಧಾರ ಮಾಡಿದ್ದಾರೆ. ನನ್ನ ಬಗ್ಗೆ ಇಲ್ಲಿ ಎಷ್ಟೊಂದು ಡಿಸ್ ಲೈಕ್ ಇದೆ. ಹೀಗಿರುವಾಗ ಇಲ್ಲಿ ಯಾಕೆ ಇರಬೇಕು'' ಅಂತ ಮಾಳವಿಕಾ ಅವಿನಾಶ್ ಬೇಸರ ವ್ಯಕ್ತಪಡಿಸಿದರು.

ಬೇರೆ ವಿಧಿ ಇಲ್ಲದೇ ಕ್ಯಾಪ್ಟನ್ ಆದರಂತೆ ಕಾವ್ಯ

''ನಾನು ಇಷ್ಟ ಪಟ್ಟು ಕ್ಯಾಪ್ಟನ್ ಆಗಿಲ್ಲ. ಬೇರೆ ವಿಧಿ ಇಲ್ಲದೇ ಆಗಿರುವುದು. ಬೇಜಾರು ನನಗೆ ಆಗಬೇಕು'' ಅಂತ ಮಾಳವಿಕಾ ಅವಿನಾಶ್ ರವರಿಗೆ ಸಮಾಧಾನ ಮಾಡುವ ವೇಳೆ ಕಾವ್ಯ ಶಾಸ್ತ್ರಿ ಹೇಳಿದರು.

ಮಾಳವಿಕಾಗೆ 'ಹೊಟ್ಟೆ ಕಿಚ್ಚಿನ ಮೊಟ್ಟೆ' ಎಂದ ಶೀತಲ್ ಶೆಟ್ಟಿ

''ಮನೆಯವರಿಗೆ ನನ್ನ ಮೇಲೆ ಎಷ್ಟೊಂದು ಡಿಸ್ ಲೈಕ್ ಇದೆ'' ಅಂತ ಒಂದೆಡೆ ಮಾಳವಿಕಾ ಅವಿನಾಶ್ ಬೇಜಾರು ಮಾಡಿಕೊಂಡಿದ್ದರೆ, ಇತ್ತ ಮಾಳವಿಕಾ ಅವಿನಾಶ್ ಗೆ 'ಹೊಟ್ಟೆ ಕಿಚ್ಚಿದೆ' ಎಂದುಬಿಟ್ಟರು ಶೀತಲ್ ಶೆಟ್ಟಿ.

ಚಟುವಟಿಕೆ ವೇಳೆ ಬಂದ ಮಾತು 'ಅದು'

''ಮನೆಯ ಸದಸ್ಯರು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರಿತುಕೊಂಡಿದ್ದಾರೆ'' ಎಂಬುದನ್ನು ತಿಳಿಯಲು 'ಮನದ ಮಾತು' ಎಂಬ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಈ ಚಟುವಟಿಕೆ ವೇಳೆ, ನ್ಯೂಸ್ ಆಂಕರ್ ಶೀತಲ್ ಶೆಟ್ಟಿಗೆ 'ಹೊಟ್ಟೆ ಕಿಚ್ಚಿನ ಮೊಟ್ಟೆ' ಅಂತ ಬರೆದಿರುವ ಚೀಟಿ ಸಿಕ್ಕಿತು. ಆ ಚೀಟಿಯನ್ನ ನಟಿ ಮಾಳವಿಕಾ ಅವಿನಾಶ್ ರವರಿಗೆ ಕೊಡುವ ಮೂಲಕ ಮಾಳವಿಕಾ ರವರಿಗೆ 'ಹೊಟ್ಟೆ ಕಿಚ್ಚಿದೆ' ಅಂತ ಶೀತಲ್ ಶೆಟ್ಟಿ ಹೇಳಿದರು.

ಶೀತಲ್ ಶೆಟ್ಟಿ ಹೇಳಿದ್ದೇನು?

''ಇವತ್ತು ನಾಯಕತ್ವದ ವಿಚಾರ ಬಂದಾಗ ಮಾಳವಿಕಾ ಪಾಸಿಟಿವ್ ಆಗಿ ತೆಗೆದುಕೊಳ್ಳಬಹುದಿತ್ತು ಅಂತ ನನಗೆ ಅನಿಸಿತು'' ಅಂತ ಹೇಳಿ 'ಹೊಟ್ಟೆ ಕಿಚ್ಚಿನ ಮೊಟ್ಟೆ' ಚೀಟಿಯನ್ನ ಮಾಳವಿಕಾ ಅವಿನಾಶ್ ಕೈಗಿತ್ತರು.

ಮಾಳವಿಕಾ ಅವಿನಾಶ್ ಪ್ರತಿಕ್ರಿಯೆ?

'ಥ್ಯಾಂಕ್ಯು. ನಾನು ಏನನ್ನೂ ಹೇಳಲು ಬಯಸುವುದಿಲ್ಲ'' ಅಂತಷ್ಟೆ ಮಾಳವಿಕಾ ಅವಿನಾಶ್ ಹೇಳಿದರು.

ಶೀತಲ್ ಶೆಟ್ಟಿ 'ನೇರ' ಎಂದರು ಶಾಲಿನಿ.!

'ಅನಿಸಿದ್ದನ್ನ ನೇರವಾಗಿ ಹೇಳುವ' ಶೀತಲ್ ಶೆಟ್ಟಿ ಬೆನ್ನುತಟ್ಟುತ್ತಾ 'ನೇರ' ಚೀಟಿಯನ್ನ ಶಾಲಿನಿ, ಶೀತಲ್ ಶೆಟ್ಟಿಗೆ ನೀಡಿದರು.

ಹಾಗಾದ್ರೆ, ಮಾಳವಿಕಾ 'ಹೊಟ್ಟೆ ಕಿಚ್ಚಿನ ಮೊಟ್ಟೆ'

ನಟಿ ಮಾಳವಿಕಾ ರವರಿಗೆ ಶೀತಲ್ 'ಹೊಟ್ಟೆ ಕಿಚ್ಚಿನ ಮೊಟ್ಟೆ' ಚೀಟಿ ಕೊಟ್ಟಿದ್ದಕ್ಕೂ, ಶೀತಲ್ ಶೆಟ್ಟಿಗೆ ಶಾಲಿನಿ 'ನೇರ' ಚೀಟಿ ಕೊಟ್ಟಿದಕ್ಕೂ 'ಲಿಂಕ್' ಇದೆ ಅಂತ ಭಾವಿಸಿ ಇಬ್ಬರ ಮೇಲೂ ಮಾಳವಿಕಾ ಬೇಸರಗೊಂಡರು.

ಮಾನ ಮರ್ಯಾದೆ ಕಳೆದುಬಿಟ್ಟರಲ್ಲ...

''ನನಗೆ ಹೊಟ್ಟೆ ಉರಿ ಇಲ್ಲ. ಯಾವುದೋ ಕಿತ್ತುಹೋದ ಕ್ಯಾಪ್ಟೆನ್ಸಿಗೆ ಇಷ್ಟೊಂದು ಮಾಡಬೇಕಾ? ಈ ತರಹ ದೊಡ್ಡ ದೊಡ್ಡ ಮಾತುಗಳನ್ನ ಆಡಿಬಿಟ್ಟರೆ ಹೇಗೆ? ಬಾಯಿಗೆ ಬಂದ ಹಾಗೆ ಆಡುವ ಮಾತುಗಳೆಲ್ಲ ನೇರ ಮಾತುಗಳಾ? ವಿವೇಚನೆ ಬೇಡ್ವಾ? ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಳ್ಳುವುದಕ್ಕೆ ಇನ್ನೊಬ್ಬರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಬಿಡುವುದಾ? ನನ್ನ ಮಾನ ಮರ್ಯಾದೆ ಪೂರ್ತಿ ಕಳೆದುಬಿಟ್ಟರಲ್ಲ?'' ಅಂತ ನಿರಂಜನ್, ಕೀರ್ತಿ ಮತ್ತು ಶಾಲಿನಿ ಬಳಿ ಮಾಳವಿಕಾ ಅವಿನಾಶ್ ಅಳಲು ತೋಡಿಕೊಂಡರು.

English summary
Bigg Boss Kannada 4, Day 16 : Bigg Boss house witnessed Cold War between Malavika Avinash and Sheetal Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada