»   » 'ಕಿರಿಕ್' ಕೀರ್ತಿ ಗೇಮ್ ಪ್ಲಾನ್ ಬಟಾಬಯಲು ಮಾಡಿದ ನಟ ಮೋಹನ್

'ಕಿರಿಕ್' ಕೀರ್ತಿ ಗೇಮ್ ಪ್ಲಾನ್ ಬಟಾಬಯಲು ಮಾಡಿದ ನಟ ಮೋಹನ್

Posted By:
Subscribe to Filmibeat Kannada

'ಕಿರಿಕ್' ಕೀರ್ತಿ, ನಟಿ ಶಾಲಿನಿ, ನಿರಂಜನ್ ದೇಶಪಾಂಡೆ ಮತ್ತು ಶೀತಲ್ ಶೆಟ್ಟಿ 'ಒಂದು ಗುಂಪು' ಎನ್ನುವುದು 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ನೋಡುವ ಎಲ್ಲಾ ವೀಕ್ಷಕರಿಗೂ ಗೊತ್ತು. ಇವರೆಲ್ಲಾ ಹೊರಗಡೆ 'ಫಿಕ್ಸ್' ಮಾಡಿಕೊಂಡು ಬಂದು ಒಳಗೆ ಆಡುತ್ತಿದ್ದಾರೆ ಎಂಬ ಆರೋಪ ಕೂಡ ಈ ಹಿಂದೆ ಕೇಳಿಬಂದಿತ್ತು. ಅದಕ್ಕೆ ಕಿಚ್ಚ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದೂ ಆಯ್ತು. ಈಗ ಮತ್ತದೇ ಕೀರ್ತಿ ಮತ್ತು ಶಾಲಿನಿ ಗೇಮ್ ಪ್ಲಾನ್ ಟಾಪಿಕ್ 'ಬಿಗ್ ಬಾಸ್' ಮನೆಯಲ್ಲಿ ಬಿಸಿ ಬಿಸಿ ಚರ್ಚೆ ಆಗ್ತಿದೆ.

''ಕೀರ್ತಿ ಮತ್ತು ಶಾಲಿನಿ 'ಓವರ್ ಆಕ್ಟಿಂಗ್' ಮಾಡ್ತಿದ್ದಾರೆ. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಯಾರು ಯಾವಾಗ ಔಟ್ ಆಗ್ತಾರೆ ಅಂತ ಕೀರ್ತಿ ಡಿಸೈಡ್ ಮಾಡ್ಬಿಟ್ಟಿದ್ದಾರೆ. 'ಬಿಗ್ ಬಾಸ್' ಆಟ ಆಡಿಸ್ತಿರೋದೇ ಕೀರ್ತಿ'' ಅಂತ ಮಾಳವಿಕಾ ಅವಿನಾಶ್ ಬಳಿ ಮೋಹನ್ ಹೇಳ್ಬಿಟ್ರು. ['ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?]

ಹಾಗಾದ್ರೆ, ''ಕೀರ್ತಿ 'ಗೇಮ್ ಪ್ಲಾನ್' ಏನು.? ಕೀರ್ತಿ ಪ್ರಕಾರ ಈ ವಾರ ಯಾರು ಔಟ್ ಆಗ್ತಾರೆ?'' ಅಂತ 50ನೇ ದಿನ ಮೋಹನ್-ಮಾಳವಿಕಾ ಮಾತನಾಡಿರುವ ಸಂಭಾಷಣೆ ವಿವರ ಇಲ್ಲಿದೆ ಓದಿರಿ....

ಬಕೆಟ್ ಹಿಡಿಯುತ್ತಿದ್ದಾರೆ.!

ಮಾಳವಿಕಾ - ''ಈ ರೇಂಜಿಗೆ ಬಕೆಟ್?''
ಮೋಹನ್ - ''ತುಂಬಾ ಹಿಡಿಯುತ್ತಿದ್ದಾರೆ''
ಮಾಳವಿಕಾ - ''ಶೀತಲ್ ಮಾತ್ರ ಮಧ್ಯೆ ಸಿಕ್ಕಿ ಹಾಕೊಂಡು, ಒದ್ಡಾಡುತ್ತಿದ್ದಾಳೆ''
ಮೋಹನ್ - ''ಹ್ಹೂಂ... ಅವಳು ಇಲ್ಲೂ ಇಲ್ಲ, ಅಲ್ಲೂ ಇಲ್ಲ. ಅವಳಿಗೆ ಡೌಟ್ ಇದೆ. ಆದರೂ 'ನನ್ನ ನಂಬಿಕೆ ಸರಿ' ಅಂತ ಒಳಗೆ ಇದ್ದಾಳೆ. ಆ ತರಹ ಕ್ಯಾರೆಕ್ಟರ್ ಅವಳದ್ದು''

[ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

ಶೀತಲ್ ಶೆಟ್ಟಿ 'ಪೆದ್ದು'

ಮೋಹನ್ - ''ಅವಳಿಗೂ ಗೊತ್ತು, ಒಂದೆರಡು ವಾರ ಇಟ್ಕೊಳ್ತಾರೆ. ಆಮೇಲೆ ಕಳುಹಿಸುತ್ತಾರೆ ಎಲ್ಲರೂ ಸೇರಿ ಅಂತ. ಆದರೂ ಅವಳು (ಶೀತಲ್ ಶೆಟ್ಟಿ) ಪೆದ್ದು''
ಮಾಳವಿಕಾ - ''ಅವರ (ಕೀರ್ತಿ, ಶಾಲಿನಿ) ಜೊತೆ ಸೇರಿ ಅವಳು (ಶೀತಲ್ ಶೆಟ್ಟಿ) ಕೆಟ್ಟವಳಾಗ್ತಿದ್ದಾಳೆ''

[ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?]

ಕೀರ್ತಿ-ಶಾಲಿನಿ ಉದ್ದೇಶ ಏನು.?

ಮೋಹನ್ - ''ತಪ್ಪು ಮಾಡ್ತಿದ್ದಾರೆ ಅವರು. ಎಲ್ಲಾದಕ್ಕೂ ಅವಳನ್ನ (ಶೀತಲ್ ಶೆಟ್ಟಿ) ಮುಂದೆ ಬಿಡ್ತಾರೆ''
ಮಾಳವಿಕಾ - ''ಇವರು (ಕೀರ್ತಿ, ಶಾಲಿನಿ) ಮಾತಾಡೋದನ್ನ ಅವಳು (ಶೀತಲ್ ಶೆಟ್ಟಿ) ಹೋಗಿ ಇನ್ನೊಬ್ಬರಿಗೆ ಬೈದು ಬರ್ತಾಳೆ''
ಮೋಹನ್ - ''ಹಾ...ಅವರ ಉದ್ದೇಶ ಅದೇ. ಇವರದ್ದು ಪೋಸ್ಟಿಂಗ್ ಎಲ್ಲ ಆ ಹುಡುಗಿ ಮಾಡ್ತಾಳೆ. ಅವಳ ತಲೆಗೆ ವಿಷ ತುಂಬಿದ್ರೆ, ತಕ್ಷಣ ಹೋಗಿ ಮಾತಾಡಿ ಬಿಡ್ತಾಳೆ. ಆ ತರಹ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅವಳನ್ನ''

['ಮೋಸ' ಮಾಡಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಕೆಂಡಾಮಂಡಲ.!]

ಕೀರ್ತಿ, ಶಾಲಿನಿಗೆ ಶೀತಲ್ ಶೆಟ್ಟಿ ಯಾಕ್ ಬೇಕು?

ಮಾಳವಿಕಾ - ''ಇನ್ನೊಂದು...ಡಿಫೆಂಡ್ ಮಾಡಿಕೊಳ್ಳುವುದಕ್ಕೂ ಅವಳನ್ನ (ಶೀತಲ್ ಶೆಟ್ಟಿ) ಮುಂದೆ ಇಟ್ಟುಕೊಂಡಿದ್ದಾರೆ. ಯಾಕಂದ್ರೆ ಅವರಿಗೆ (ಕೀರ್ತಿ, ಶಾಲಿನಿ) ಡಿಫೆನ್ಸ್ ಬರಲ್ಲ''
ಮೋಹನ್ - ''ಹೌದು''

'ಬಿಗ್ ಬಾಸ್ ಆಡಿಸ್ತಿರೋದೇ ಕೀರ್ತಿ.!

ಮೋಹನ್ - ''ಕೀರ್ತಿ ಏನ್ ಮಾಡ್ತಿದ್ದಾನೆ ಗೊತ್ತಾ.. ಅವನು ಡಿಸೈಡೆಡ್ ಈ ವಾರ ಭುವನ್ ಔಟ್ ಆಗ್ತಾನೆ ಅಂತ. ಮುಂದಿನ ವಾರ ಸಂಜನಾ ಹೋಗ್ತಾಳಂತೆ. ಅದರ ನೆಕ್ಸ್ಟ್ ಪ್ರಥಮ್ ಹೊರಟು ಹೋಗ್ತಾನಂತೆ. ಕೀರ್ತಿ ಈಗ ಡಿಸೈಡೆಡ್. ಅವನೇ ಡಿಸೈಡ್ ಮಾಡ್ಕೊಂಡ್ ಬಿಟ್ಟಿದ್ದಾನೆ. ಅವನೇ ಆಡಿಸ್ತಿರೋದು 'ಬಿಗ್ ಬಾಸ್''

ಈ ವಾರ ಯಾರು ಔಟ್ ಆಗ್ತಾರೆ ಗೊತ್ತಾ?

ಮೋಹನ್ - ''ನಿನ್ನೆ ಕೀರ್ತಿ ಹೇಳ್ತಿದ್ದ ಸನ್ನೆಯಲ್ಲಿ... ಅದಕ್ಕೆ ಅಂತೆ ಸುದೀಪ್ ಹೇಳಿದ್ದು 'ನೀನು ಜಸ್ಟ್ ಸೇಫ್ ಆಗಿದ್ದೀಯಾ' ಅಂತ. ಅಂದ್ರೆ ಭುವನ್ ನ ಈಗ ಕಳುಹಿಸಿಬಿಡ್ತಾರೆ. ಭುವನ್ ಇಲ್ಲ ಅಂದ್ರೆ ಸಂಜನಾಗೆ ಸ್ಕೋಪ್ ಇಲ್ಲ. ಈ ವಾರ ಸಂಜನಾಗೆ ಇಮ್ಯೂನಿಟಿ ಇದೆ ಅಲ್ವಾ. ಅದಕ್ಕೆ ಮುಂದಿನ ವಾರ ಕಳುಹಿಸ್ತಾರಂತೆ. ಅಲ್ಲಿಯವರೆಗೂ ಪ್ರಥಮ್ ಉಳಿದುಕೊಳ್ತಾನಂತೆ. ಆಮೇಲೆ ಪ್ರಥಮ್ ನ ಕಳುಹಿಸ್ತಾರಂತೆ. ಆಮೇಲೆ ನಮ್ಮ ಮಧ್ಯೆ ಫೈಟ್ ಅಂತೆ''

ಕೀರ್ತಿ ಬಗ್ಗೆ ಸುದೀಪ್ ಕೇಳೋದೇ ಇಲ್ಲ!

ಮಾಳವಿಕಾ - ''ಇವರು ನಿರಂಜನ್ ಡೈರೆಕ್ಷನ್ ಅಂತಾರೆ. 24 ಗಂಟೆ ಇದನ್ನ ಚರ್ಚೆ ಮಾಡಿದವನು ಅವನೇ (ಕೀರ್ತಿ). ಮತ್ತೆ ಅವನ ಬಗ್ಗೆ ಏನೂ ಹೇಳೋದೇ ಇಲ್ವಲ್ಲಾ ಮೋಹನ್?''
ಮೋಹನ್ - ''ಯಾರನ್ನೂ ಬಿಡಲ್ಲ. ಯಾವತ್ತೋ ಒಂದು ದಿನ ಟೈಮ್ ಬರುತ್ತೆ''

ಕೀರ್ತಿ ತುಂಬಾ ಓವರ್ ಆಕ್ಟ್ ಮಾಡ್ತಾರೆ.!

ಮೋಹನ್ - ''ತುಂಬಾ ಓವರ್ ಆಕ್ಟಿಂಗ್ ಮಾಡ್ತಾನೆ ಕೀರ್ತಿ. ಹೆಂಗ್ ಆಡ್ತಿರ್ತಾರೆ...ಯಾಕೆ ಇಷ್ಟು ಓವರ್ ಆಗಿ ಆಡ್ತಾರೆ...ಏನೋ ಬಿಗ್ ಬಾಸ್ ಮನೆ ಇವರುಗಳೇ ನೋಡಿಕೊಳ್ಳುವ ತರಹ ರಿಯಾಕ್ಟ್ ಮಾಡ್ತಾರೆ''

ಅಸಹ್ಯ ಆಗ್ತಿದೆ

ಮೋಹನ್ - ''ನಿನ್ನೆ ಸುದೀಪ್ ಇವರಿಬ್ಬರಿಗೇ ಊಟ ಕಳುಹಿಸಿದ್ದು ಅನ್ನೋ ತರಹ ಆಡ್ತಾರೆ. ಎಲ್ಲರೂ ಥ್ಯಾಂಕ್ಸ್ ಹೇಳಿದ್ದೀವಿ. ಅದೇನು ಸೆಪರೇಟ್ ಆಗಿ ಹೋಗಿ ಮತ್ತೆ ಹೇಳುವುದು? ತುಂಬಾ ಮಾಡಿದರೆ ಬಕೆಟ್ ತರಹ ಕಾಣಿಸುತ್ತೆ. ತೀರಾ ಮಾಡಿದರೆ ಅಸಹ್ಯ ಕಾಣುತ್ತೆ. ಎಷ್ಟು ಜನ ಇಂಥವರನ್ನ ಸುದೀಪ್ ನೋಡಿಲ್ಲ''

English summary
Bigg Boss Kannada 4, Week 8 : Kannada Director, Actor Mohan speaks about Keerthi and Shalini with Malavika Avinash. Read the article to know conversation between Malavika Avinash and Mohan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada