»   » 'ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?

'ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?

Posted By:
Subscribe to Filmibeat Kannada

''ಬಿಗ್ ಬಾಸ್' ಕಾರ್ಯಕ್ರಮ ಶುರು ಆಗುವ ಮುನ್ನವೇ ಸ್ಪರ್ಧಿಗಳು ಯಾರ್ಯಾರು ಅಂತ ಅನೌನ್ಸ್ ಮಾಡಿಬಿಟ್ಟರೆ, 'ಡೀಲ್' ನಡೆಯುತ್ತೆ, ಸ್ಪರ್ಧಿಗಳ ಮಧ್ಯೆ ಸ್ಟ್ರಾಟೆಜಿ ಪ್ಲಾನ್ ಆಗುತ್ತೆ'' ಎಂಬುದನ್ನ ಅರಿತೇ ಎಲ್ಲವನ್ನು ಗುಪ್ತ್ ಗುಪ್ತ್ ಆಗಿಡುತ್ತಾರೆ 'ಬಿಗ್ ಬಾಸ್'.

ಹೀಗಿದ್ದರೂ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಆರಂಭ ಆಗುವ ಮುನ್ನ 'ಬಿಗ್ ಡೀಲ್' ನಡೆದಿದೆ ಎಂಬ ಗುಸು ಗುಸು ಬೇರೆಲ್ಲೂ ಅಲ್ಲ, 'ಬಿಗ್ ಬಾಸ್' ಮನೆಯೊಳಗೇ ಕೇಳಿಬರುತ್ತಿದೆ.! [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ & ಗ್ಯಾಂಗ್.!]

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸದ್ಯ ಇರುವ ಮೂವರು ಸ್ಪರ್ಧಿಗಳು 'ಡೀಲ್' ಮಾಡಿಕೊಂಡಿದ್ದಾರೆ ಅಂತ 'ಒಳ್ಳೆ ಹುಡುಗ' ಪ್ರಥಮ್ ಹೇಳಿದ ಮಾತನ್ನ ಮಾಳವಿಕಾ ಅವಿನಾಶ್ ಬಳಿ ನಟಿ ಸಂಜನಾ ಬಾಯಿಬಿಟ್ಟಿದ್ದು ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದೆ.

ಮಾಳವಿಕಾ ಅವಿನಾಶ್ ಮತ್ತು ಸಂಜನಾ ನಡುವೆ 24ನೇ ದಿನ ನಡೆದ ಸಂಭಾಷಣೆಯ ಸಂಪೂರ್ಣ ವಿವರ ಇಲ್ಲಿದೆ. ಓದಿರಿ....

ಮೂವರದ್ದೇ ಒಂದು ಟೀಮ್ ಇದೆ.!

''ಇವರು ಮೂವರದ್ದೇ ಒಂದು ಟೀಮ್ ಇದೆ ಅಲ್ವಾ?'' ಅಂತ ನಟಿ ಮಾಳವಿಕಾ ಅವಿನಾಶ್ ಮಾತು ಶುರು ಮಾಡಿದರು. ಅದಕ್ಕೆ ''ತುಂಬಾ ಇದೆ. ಸಿಕ್ಕಾಪಟ್ಟೆ'' ಅಂತ ಹೇಳುತ್ತಾ, 'ಬಿಗ್ ಡೀಲ್' ಬಗ್ಗೆ ಬಾತ್ ರೂಮ್ ನಲ್ಲಿ ಪ್ರಥಮ್ ಹೇಳಿದ್ದನ್ನ ಸಂಜನಾ ಬಿಚ್ಚಿಟ್ಟರು. [BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!]

ಪ್ರಥಮ್ ಏನಂತ ಹೇಳಿದ್ದರು.?

''ಪ್ರಥಮ್, ನಿನ್ನೆ ಓಪನ್ ಆಗಿ ಒಂದು ವಿಷಯ ಹೇಳಿದ. ಬಾತ್ ರೂಮ್ ನಲ್ಲಿ ನನ್ನ ಹತ್ರ, ಕಾರುಣ್ಯ ಮತ್ತು ಭುವನ್ ಹತ್ರ ಬಂದು ''ಅಯ್ಯೋ, ನಿಮಗೆ ಗೊತ್ತಿಲ್ಲ ಸಂಜನಾ...ಇಲ್ಲಿ ಮೂರು ಜನ ಕನ್ಟೆಸ್ಟೆಂಟ್ಸ್ ಇದ್ದಾರೆ. ಮೂವರೂ, ಇದಕ್ಕೂ ಮುಂಚೆನೇ ಮೀಟ್ ಮಾಡಿಕೊಂಡು, ಪ್ಲಾನ್ ಮಾಡಿ, ಅಮೌಂಟ್ ಎಲ್ಲ ಶೇರ್ ಮಾಡಿಕೊಳ್ಳುವ ತರಹ ಒಂದು ಡೀಲ್ ಫಿಕ್ಸ್ ಮಾಡಿಕೊಂಡು, ಬಿಜಿನೆಸ್ ತರಹ ಮಾಡಿಕೊಂಡು ಬಂದಿದ್ದಾರೆ. ನನಗೆ ಅದಕ್ಕೆ ಕೋಪ ಬರ್ತಿರೋದು'' ಅಂತ ಪ್ರಥಮ್ ಹೇಳಿದನ್ನ ಮಾಳವಿಕಾಗೆ ನಟಿ ಸಂಜನಾ ಹೇಳಿದರು.

ಪ್ರಥಮ್ ಬಳಿ ಸಾಕ್ಷಿ ಇದ್ಯಂತೆ.!

''ಬೇಗ ಆಚೆ ಬನ್ನಿ. ನಾನು ಪ್ರೂಫ್ ತೋರಿಸುತ್ತೇನೆ. ನನ್ನ ಹತ್ರ ಇದೆ ವಾಯ್ಸ್ ರೆಕಾರ್ಡಿಂಗ್. ಎಲ್ಲಾ ಪ್ರೂಫ್ ನನ್ನ ಹತ್ರ ಇದೆ ಅಂತ ಪ್ರಥಮ್ ಹೇಳ್ತಿದ್ದ'' - ಸಂಜನಾ [ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?]

ಇದು ಸ್ಟ್ರಾಟೆಜಿ ಅಲ್ವಾ?

''ಸ್ಟ್ರಾಟೆಜಿ ಅಂತ ನನಗೆ ಹೇಳ್ತಿರ್ತಾರೆ. ಇವರುಗಳು ಮಾಡಿಕೊಂಡು ಬಂದಿರುವುದೇನು? ಅಂತ ಪ್ರಥಮ್ ಕೇಳ್ತಿದ್ದ'' - ಸಂಜನಾ [ಇದು ನಿಜವೋ...ಸುಳ್ಳೋ...'ಬಿಗ್ ಬಾಸ್' ನೀವೇ ಹೇಳಿ, ಡೌಟ್ ಕ್ಲಿಯರ್ ಮಾಡಿ.!]

ಯಾರು ಆ ಮೂವರು?

''ಯಾರು ಅಂತ ಹೇಳ್ಲಿಲ್ಲ. ಮೂರ್ನಾಲ್ಕು ಜನ ಅಂದ. ಅಂದ್ರೆ, ನಾವು ಅರ್ಥ ಮಾಡಿಕೊಂಡ್ವಿ, ಯಾರು ಆ ಮೂರು ಜನ ಅಂತ'' - ಸಂಜನಾ

ಯಾರು ಅಂತ ಮಾಳವಿಕಾ ಅವರಿಗೂ ಗೊತ್ತಾಯ್ತು.!

ಮಾಳವಿಕಾ - ''ಆದರೆ, ಕಳೆದ ವಾರ ಅವರೇ ಎಕ್ಸ್ ಪೋಸ್ ಆದರಲ್ಲ.!''
ಸಂಜನಾ - ''ಹ್ಹಾ...ಹೌದು. ತೋರಿಸಿಕೊಂಡುಬಿಟ್ಟರು. ಎಮೋನಲ್ ಆಗಿ ಎಲ್ಲಾ ಆಗಿದ್ದು''
ಮಾಳವಿಕಾ - ''ನನ್ನ ಮೇಲೆ ಎಗರಾಡಿಬಿಟ್ಟರು''
ಸಂಜನಾ - ''ಸುದೀಪ್ ಹೇಳಿದರಲ್ಲಾ ಆಮೇಲೆ, 10 ಗಂಟೆಯೊಳಗೆ 10 ಮುಖ ಆಚೆ ಬಂತು''
ಮಾಳವಿಕಾ - ''ಸ್ಯಾಡ್ ಫಾರ್ ದೆಮ್ ಸಂಜನಾ. ವೀ ಡೋಂಟ್ ಟೇಕ್ ಹೋಮ್ ಎನಿಥಿಂಗ್''

ಮೂವರಲ್ಲಿ ಕಿತ್ತಾಟ ಶುರು ಆಗಿದೆ.!

ಮಾಳವಿಕಾ - ''ಅವರವರಲ್ಲೇ ಈಗ ಕಿತ್ತಾಟ ಶುರು ಆಗಿದೆ. ಏನಾಯ್ತು ಡೀಲ್ ಈಗ?''
ಸಂಜನಾ - ''ಸರಿ ಮಾಡುಕೊಳ್ಳುತ್ತಿರುತ್ತಾರೆ''
ಮಾಳವಿಕಾ - ''ಬಲೂನ್ ಚುಚ್ಚಿಕೊಳ್ಳುವುದೇನು. ಅವಳನ್ನ ಉಳಿಸಲು ಹೀರೋ ಆಗುವುದೇನು.! ಯಾರನ್ನೋ ಕಳುಹಿಸೋಕೆ, ಯಾರನ್ನೋ ಉಳಿಸುವ ನೆಪ ಮಾಡುತ್ತಿದ್ದಾರೆ ಇವರು''

ಮೈ ತೋರಿಸ್ತಾಳಂತೆ ಸಂಜನಾ!

ಮಾಳವಿಕಾ - ''ನನಗೆ ನಿನ್ನ ಡ್ರೆಸ್ ಬಗ್ಗೆ ಕಾಮೆಂಟ್ ಮಾಡುವುದು ಇಷ್ಟ ಆಗಲ್ಲ. ಅದು ನಿನ್ನ ಇಷ್ಟ''
ಸಂಜನಾ - ''ಸುಮ್ಮನೇ ಕಾಮೆಂಟ್ ಮಾಡ್ತಾರೆ. ಸಂಜನಾ ಏನೂ ಇಲ್ಲ. ಸುಮ್ನೆ ಮೈ ತೋರಿಸುತ್ತಾಳೆ ಅಂತ ಇಟ್ಕೊಂಡಿದ್ದಾರೆ ಅಂತೆಲ್ಲ ಹೇಳುತ್ತಾರೆ''
ಮಾಳವಿಕಾ - ''ಮೈ ತೋರಿಸುವುದು ಅವರವರ ಇಷ್ಟ. ಈ ಬಗ್ಗೆ ಮಾತನಾಡುವುದು ನನಗೆ ಇಷ್ಟ ಇಲ್ಲ''

ನಿಮಗೆ ಸೂಕ್ಷ್ಮ ಅರ್ಥ ಆಯ್ತಾ?

'ಬಿಗ್ ಡೀಲ್' ಮಾಡಿಕೊಂಡಿರುವ ಮೂವರ ಬಗ್ಗೆ ಮಾತನಾಡುತ್ತಿರುವಾಗ 10 ಗಂಟೆಯೊಳಗೆ 10 ಮುಖ ಹಾಗೂ ಬಲೂನ್ ವಿಚಾರಗಳನ್ನ ಮಾಳವಿಕಾ ಮತ್ತು ಸಂಜನಾ ಪ್ರಸ್ತಾಪ ಮಾಡಿದರು. ಅಲ್ಲಿಗೆ, ಆ ಮೂವರು ಯಾರು ಅಂತ ನಾವು ಹೆಸರನ್ನ ಒತ್ತಿ ಹೇಳಬೇಕಾಗಿಲ್ಲ. ಪ್ರತಿದಿನ 'ಬಿಗ್ ಬಾಸ್' ನೋಡುವ ನಿಮಗೆ ಎಲ್ಲಾ ಸೂಕ್ಷ್ಮ ಅರ್ಥವಾಗಿರುತ್ತದೆ ಎಂಬ ನಂಬಿಕೆ ನಮ್ಮದು.

English summary
Bigg Boss Kannada 4: Day 24, According to Pratham, Three Of Bigg Boss Contestants are involved in 'Deal' prior to the show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada