»   » ನಟಿ ಮಾಳವಿಕಾ ಕಂಡ್ರೆ ಮೋಹನ್ ಗೆ ಹೊಟ್ಟೆಕಿಚ್ಚಾ.?

ನಟಿ ಮಾಳವಿಕಾ ಕಂಡ್ರೆ ಮೋಹನ್ ಗೆ ಹೊಟ್ಟೆಕಿಚ್ಚಾ.?

By: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

ನಟಿ ಮಾಳವಿಕಾ ಅವಿನಾಶ್ ಕಂಡ್ರೆ ನಟ, ನಿರ್ದೇಶಕ ಮೋಹನ್ ಗೆ ಹೊಟ್ಟೆ ಉರಿ ಇದ್ಯಾ.? ಹೀಗೊಂದು ಅನುಮಾನ ಮೂಡಲು ಕಾರಣ ಕಳೆದ ವಾರ ನಡೆದ ಒಂದು ಘಟನೆ.

ಸೀಕ್ರೆಟ್ ರೂಮ್ ನಿಂದ ಹೊರಬಂದು ನಟಿ ಮಾಳವಿಕಾ ಅವಿನಾಶ್ 'ಬಿಗ್ ಬಾಸ್' ಮನೆ ಪ್ರವೇಶ ಮಾಡುತ್ತಿದ್ದಂತೆಯೇ ಮೋಹನ್ ಗೆ ಶಾಕ್ ಆಯ್ತು. ಅಲ್ಲಿಯವರೆಗೂ ಅವರ ತಲೆಯಲ್ಲಿ ಇದ್ದ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ ಆಯ್ತು.[ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

BBK4: Is Mohan jealous about Malavika?

'ಬಿಗ್ ಬಾಸ್' ಕೊಟ್ಟ ಈ ಟ್ವಿಸ್ಟ್ ನ ಅರಗಿಸಿಕೊಳ್ಳೋಕೆ ನಟ ಮೋಹನ್ ಗೆ ಎರಡು ದಿನ ಬೇಕಾಯ್ತಾ? ಇದೇ ಕಾರಣಕ್ಕೆ ಎರಡು ದಿನ ಮಾಳವಿಕಾ ಹತ್ರ ಮೋಹನ್ ಮಾತನಾಡಿರಲಿಲ್ವಾ.? ಈ ಅನುಮಾನ ಅನೇಕ ವೀಕ್ಷಕರಿಗೆ ಕಾಡಿರಬಹುದು. ಅದಕ್ಕೆ ಮೊನ್ನೆ 'ಬಿಗ್ ಬಾಸ್' ಮನೆಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮೋಹನ್ ಕ್ಲಾರಿಟಿ ಕೊಟ್ಟಿದ್ದಾರೆ.['ಬಿಗ್ ಬಾಸ್' ಬಗ್ಗೆ ನಟ ಮೋಹನ್ ಗೆ ಅನುಮಾನ ಕಾಡ್ತಿದ್ಯಾ.?]

''ಮಾಳವಿಕಾ ಆಪ್ತ ಸ್ನೇಹಿತೆ ಶ್ರುತಿ ಮನೆಯಲ್ಲಿ ಇದ್ದರು. ಮಾಳವಿಕಾ ಬರ್ತಿದ್ದ ಹಾಗೆ ಎಕ್ಸೈಟ್ ಆಗಿದ್ದು ಶ್ರುತಿ ನೋಡಿ. ಮಾಳವಿಕಾ ಬಗ್ಗೆ ನನಗೆ ಹೊಟ್ಟೆಉರಿ ಇಲ್ಲ. ಮಾಳವಿಕಾ ವಾಪಸ್ ಬರ್ತಾಳೆ ಅಂತ ನಾನು ಹೇಳ್ತಾನೇ ಇದ್ದೆ. ಮಾಳವಿಕಾ ಫೈನಲಿಸ್ಟ್ ಅಂತ ಹೇಳುತ್ತಲೇ ಇದ್ದೆ. ನಮ್ಮಿಬ್ಬರ ನಡುವೆ ಒಳ್ಳೆ ಸ್ನೇಹ ಇದೆ. ಜೆಲಸಿ ಇಲ್ಲ'' ಅಂತ ಮೋಹನ್ ಸ್ಪಷ್ಟಪಡಿಸಿದರು.

English summary
Bigg Boss Kannada 4: Day 105, Is Mohan jealous about Malavika? Read the article to know the answer
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada