»   » ಪ್ರಥಮ್ ಬಳಿ 'ಕ್ಷಮೆ' ಕೇಳಿದ ಕೀರ್ತಿ: ಡ್ಯಾಮೇಜ್ ಕಂಟ್ರೋಲ್ ಪಾರ್ಟ್-2!

ಪ್ರಥಮ್ ಬಳಿ 'ಕ್ಷಮೆ' ಕೇಳಿದ ಕೀರ್ತಿ: ಡ್ಯಾಮೇಜ್ ಕಂಟ್ರೋಲ್ ಪಾರ್ಟ್-2!

By: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

'ಒಳ್ಳೆ ಹುಡುಗ' ಪ್ರಥಮ್ ಮುಖದ ಮೇಲೆ ಮಾತನಾಡಿದ್ದಕ್ಕಿಂತ ಮೋಹನ್, ಮಾಳವಿಕಾ ಅವಿನಾಶ್, ಕೀರ್ತಿ ಮತ್ತು ಶಾಲಿನಿ... ಪ್ರಥಮ್ ಬೆನ್ನ ಹಿಂದೆ ಮಾತನಾಡಿದ್ದೇ ಹೆಚ್ಚು. ಇದೇ ಕಾರಣಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಆಗಾಗ ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಅಭಿಪ್ರಾಯ ವೀಕ್ಷಕರದ್ದು.

ಈ ಬಗ್ಗೆ ಪತ್ರಕರ್ತರು ನೇರ ಪ್ರಶ್ನೆ ಕೇಳಿದ ಬಳಿಕ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರು ಎಚ್ಚೆತ್ತುಕೊಂಡಿದ್ದಾರೆ. ಪ್ರಥಮ್ ಬಗ್ಗೆ ನೀಡಿರುವ ಹೇಳಿಕೆಯಿಂದಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಮಾಳವಿಕಾ ಅವಿನಾಶ್ ಮುಂದಾಗಿದ್ದಾರೆ. ಅದನ್ನೇ ಸೇಮ್ ಟು ಸೇಮ್ ಅನುಸರಿಸುತ್ತಿದ್ದಾರೆ 'ಕಿರಿಕ್' ಕೀರ್ತಿ.

ಪ್ರಥಮ್ ಜೊತೆ ಕೀರ್ತಿ ಮಾತುಕತೆ

ಸದಾ ಕಾಲ ಪ್ರಥಮ್ ವಿರುದ್ಧ ಮಾತನಾಡುವ 'ಕಿರಿಕ್' ಕೀರ್ತಿ, ಇದಕ್ಕಿದ್ದಂತೆ ಪ್ರಥಮ್ ಬಳಿ ಬಂದು ಕ್ಷಮೆ ಕೇಳಿದ್ದಾರೆ.[ಡ್ಯಾಮೇಜ್ ಕಂಟ್ರೋಲ್ ಶುರು: ಪ್ರಥಮ್ ಗಾಗಿ ಮಾಳವಿಕಾ 'ಸ್ಪೆಷಲ್ ಕ್ಲಾಸ್']

ಹಳೆಯದ್ದೆಲ್ಲ ಮರೆತು ಬಿಡೋಣ

''ಕೀರ್ತಿ ಮತ್ತು ಪ್ರಥಮ್ ನಡುವೆ ಆಗದೇ ಇಲ್ಲ' ಅನ್ನೋ ತರಹ ಕಾಣಿಸಿಕೊಂಡಿದ್ದೀವಿ. ಆದ್ರೆ, ಇವತ್ತು ಸ್ಪಷ್ಟವಾಗಿ ಹೇಳುತ್ತಿದ್ದೇನೆ ನಿಮ್ಮಲ್ಲಿ ಮೆಚ್ಚಿಕೊಳ್ಳುವಂಥದ್ದನ್ನು ಸಾಕಷ್ಟು ನೋಡಿದ್ದೇನೆ. ಸಾಕಷ್ಟು ವಿಚಾರಗಳಲ್ಲಿ ನಿಮ್ಮ ಬಗ್ಗೆ ಬೇಸರ ಇತ್ತು. ಆದ್ರೆ ಅದನ್ನ ತಲೆಯಿಂದ ತೆಗೆದು ಹಾಕಿದ್ದೇನೆ'' ಅಂತ ಪ್ರಥಮ್ ಬಳಿ ಕೀರ್ತಿ ಹೇಳಿದರು.

ಕ್ಷಮೆ ಕೇಳಿದ ಕೀರ್ತಿ

''ಹೊರಗಡೆ ಪ್ರಪಂಚದಲ್ಲೂ ನಿಮ್ಮನ್ನ ಒಳ್ಳೆಯ ಸ್ನೇಹಿತನಾಗಿ ನೋಡಬೇಕು ಅಂತ ಇಷ್ಟಪಡ್ತೀನಿ. ನಿಮಗೆ ಇಷ್ಟ ಇದ್ದರೆ.. ನನ್ನಿಂದ ಇಲ್ಲಿಯವರೆಗೂ ಏನಾದರೂ ತಪ್ಪಾಗಿದ್ದರೆ, ಕ್ಷಮೆ ಇರಲಿ'' - ಕೀರ್ತಿ ಕುಮಾರ್

ಪ್ರಥಮ್ ಕೇಳಿದ ಪ್ರಶ್ನೆ

ಪ್ರಥಮ್ - ''ಪ್ರಥಮ್ ಜೊತೆ ಮಾಳವಿಕಾ ಹೋಗಿದ್ದು ವರ್ಸ್ಟ್ ಎಕ್ಸಿಟ್ ಅಂದ್ರಿ.. ನನಗೆ ನಿಜವಾಗ್ಲೂ ಅನಿಸಿದ್ದು ಅಷ್ಟೊಂದು ಕೆಟ್ಟ ಮನುಷ್ಯನಾ ನಾನು.?''

ಕೀರ್ತಿ - ''ನೀವು ಏನೇನು ಹೇಳಿದ್ದೀರಿ ಅಂತ ನನಗೆ ಗೊತ್ತು. ಆದ್ರೆ ನಾನು ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡಿಲ್ಲ''

ಪ್ರಥಮ್ - ''ನಾನು ಆಟದ ವೈಖರಿಯಲ್ಲಿ ಮಾತನಾಡಿದ್ದೇನೆ. ವೈಯುಕ್ತಿಕವಾಗಿ ಕೀರ್ತಿ ವಿರೋಧಿ ಅಲ್ಲ''

ಒಳ್ಳೆಯ ಸ್ನೇಹಿತನಾಗುತ್ತೇನೆ

''ನನ್ನ ಯಾವುದೇ ತಪ್ಪುಗಳಿದ್ದರೂ, ದಯವಿಟ್ಟು ಅದಕ್ಕೆ ಕ್ಷಮೆ ಇರಲಿ. ನಿಜವಾಗಲೂ ನಿಮಗೆ ಒಳ್ಳೆಯ ಸ್ನೇಹಿತ ಸಿಕ್ಕಿದ್ದಾನೆ. ಎಂತಹ ಸಮಯ ಬಂದರೂ ನಾನು ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಬಗ್ಗೆ ಅಪಾರ ಪ್ರೀತಿ ಇದೆ'' - ಕೀರ್ತಿ ಕುಮಾರ್

ತಬ್ಬಿಕೊಂಡರು.!

ಇಷ್ಟೆಲ್ಲ ಹೇಳಿದ ಮೇಲೆ ಪ್ರಥಮ್ ರವರನ್ನ ಕೀರ್ತಿ ತಬ್ಬಿಕೊಂಡರು. ನಿಮಗೆ ಅಚ್ಚರಿ ಅನಿಸಿದರೂ ಇದೇ ಸತ್ಯ.!

English summary
Bigg Boss Kannada 4: Day 106, Kirik Keerthi apologizes 'Olle Huduga' Pratham
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada