»   » ಪ್ರಥಮ್ ಗೆ 'ಹುಚ್ಚು': ಮೋಹನ್, ಮಾಳವಿಕಾ ಕೊಟ್ಟ ಸಬೂಬು.!

ಪ್ರಥಮ್ ಗೆ 'ಹುಚ್ಚು': ಮೋಹನ್, ಮಾಳವಿಕಾ ಕೊಟ್ಟ ಸಬೂಬು.!

Posted By: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

ವೀಕ್ಷಕರೆಲ್ಲರೂ ಕಣ್ಣಾರೆ ನೋಡುತ್ತಿರುವ ಹಾಗೆ 'ಬಿಗ್ ಬಾಸ್ ಕನ್ನಡ-4' ಮನೆಯಲ್ಲಿ 'ಟ್ರೆಂಡಿಂಗ್ ಟಾಪಿಕ್' ಆಗಿರುವುದು 'ಒಳ್ಳೆ ಹುಡುಗ' ಪ್ರಥಮ್.!

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ವಾರದಿಂದಲೂ ಪ್ರಥಮ್ 'ಟಾರ್ಗೆಟ್' ಆಗಿದ್ದಾರೆ. ಸಾಲದಕ್ಕೆ ಪ್ರಥಮ್ ಬೆನ್ನಹಿಂದೆ ಉಳಿದ ಸದಸ್ಯರು ಬೇಕಾಬಿಟ್ಟಿ ಮಾತನಾಡುತ್ತಿರುತ್ತಾರೆ.

ಬರೀ ಅಷ್ಟಾಗಿದ್ದರೆ ಪರ್ವಾಗಿಲ್ಲ. ಕೆಲವು ವಾರಗಳ ಹಿಂದೆ ಪ್ರಥಮ್ ರವರ 'ಮೆಂಟಲ್ ಸ್ಟೆಬಿಲಿಟಿ' ಬಗ್ಗೆ ಹಿರಿಯರಾದ ಮೋಹನ್ ಮತ್ತು ಮಾಳವಿಕಾ ರವರೇ ಕಾಮೆಂಟ್ ಮಾಡಿದ್ದರು.! ಇದು ಸರಿನಾ? ಅಂತ ಮೊನ್ನೆ 'ಬಿಗ್ ಬಾಸ್' ಮನೆಗೆ ಭೇಟಿ ಕೊಟ್ಟಿದ್ದ ಪತ್ರಕರ್ತರು, ಮೋಹನ್ ಮತ್ತು ಮಾಳವಿಕಾ ರವರನ್ನ ತರಾಟೆಗೆ ತೆಗೆದುಕೊಂಡರು. ಆಗ ಅವರಿಬ್ಬರು ಕೊಟ್ಟ ಸಬೂಬು ಇಲ್ಲಿದೆ....

ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆ ಇದು...

''ಮಾಳವಿಕಾ ಮತ್ತು ಮೋಹನ್ ವಯಸ್ಸಲ್ಲಿ ದೊಡ್ಡವರು. ಆದರೆ ಸಾಕಷ್ಟು ಬಾರಿ ಪ್ರಥಮ್ ಬಗ್ಗೆ ಚರ್ಚೆ ಆಗ್ತಿರುತ್ತೆ. ''ಇವನನ್ನ ಹೀಗೆ ಬಿಟ್ಟರೆ ಹುಚ್ಚ ಆಗ್ಹೋಗ್ತಾನೆ. ಮೆಂಟಲ್ ಸ್ಟೆಬಿಲಿಟಿ ಕಳೆದುಕೊಳ್ಳುತ್ತಾನೆ'' ಅಂತೆಲ್ಲಾ ನೀವು ಮಾತನಾಡಿದ್ದೀರಾ. ತುಂಬಾ ಅನುಭವಿ ಆಗಿರುವ ನೀವಿಬ್ಬರು, ಇನ್ನೊಬ್ಬರ 'ಮೆಂಟಲ್ ಸ್ಟೆಬಿಲಿಟಿ' ಬಗ್ಗೆ ದೊಡ್ಡ ರಿಯಾಲಿಟಿ ಶೋನಲ್ಲಿ ಹೀಗೆ ಮಾತನಾಡುವುದು ಎಷ್ಟು ಸರಿ?'' ಎಂಬ ಪ್ರಶ್ನೆಯನ್ನ ಪತ್ರಕರ್ತ ಸೋಮಣ್ಣ ಕೇಳಿದರು. [ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

ಮಾಳವಿಕಾ ಕೊಟ್ಟ ಉತ್ತರ

''ಮೆಂಟಲ್ ಸ್ಟೆಬಿಲಿಟಿ ಕಳೆದುಕೊಂಡಿದ್ದಾನೆ, ಕಳ್ಕೊಳ್ತಾನೆ ಅಂತ ಯಾವತ್ತೂ ಹೇಳಿಲ್ಲ. ಸ್ಟೇಬಲ್ ಆಗಿ ಅವನು ಇರುವುದಿಲ್ಲ'' ಅಂತ ಮಾಳವಿಕಾ ಹೇಳಿದರು.[Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]

'ಹುಚ್ಚು' ಬಗ್ಗೆ ಚರ್ಚೆ ಆಗಿದೆ

''ಮೋಹನ್, ಭುವನ್ ಮತ್ತು ನೀವು (ಮಾಳವಿಕಾ) ಈ Conversation ನಲ್ಲಿ ಇದ್ರಿ. ಆ ಟೈಮ್ ನಲ್ಲಿ ''ಒಬ್ಬೊಬ್ಬನೇ ಪ್ರಥಮ್ ಮಾತನಾಡಿಕೊಳ್ತಿರ್ತಾನೆ. ಹುಚ್ಚನ ತರಹ ಆಡ್ತಾನೆ. ಹೀಗೆ ಮುಂದುವರಿದರೆ ಇನ್ನೂ ಜಾಸ್ತಿ ಆಗುತ್ತೆ'' ಅಂತ ಹೇಳಿದ್ದೀರಾ'' ಅಂತ ಪತ್ರಕರ್ತೆ ಹರ್ಷಿತಾ ಪ್ರಶ್ನೆ ಕೇಳಿದರು.['ಬಿಗ್ ಬಾಸ್' ಮನೆಯಲ್ಲಿ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ ಹರ್ಷಿತಾ!]

ಪ್ರಥಮ್ ಗೆ ಕೌನ್ಸಿಲ್ಲಿಂಗ್ ಬೇಕಾ?

''ಕೌನ್ಸೆಲ್ಲಿಂಗ್ ಕೂಡ ಬೇಕಾಗುತ್ತೆ ಅನ್ನೋ ತರಹ ಮಾತನಾಡಿದ್ದೀರಾ. ಅಂದ್ರೆ ಎಲ್ಲರೂ ಸೇರಿ ಪ್ರಥಮ್ ನ ಟಾರ್ಗೆಟ್ ಮಾಡುತ್ತಿದ್ದೀರಾ ಅಂತ ಅನ್ಸುತ್ತೆ ನಮಗೆ ವೀಕ್ಷಕರಾಗಿ ನೋಡುವಾಗ...'' ಅಂತ ಪತ್ರಕರ್ತೆ ರೋಹಿಣಿ ಕೇಳಿದರು.

ಟಾರ್ಗೆಟ್ ಅಲ್ಲ.!

''ನಮಗೆ ಪ್ರಥಮ್ ನ ಟಾರ್ಗೆಟ್ ಮಾಡುವ ಅಗತ್ಯ ಇಲ್ಲ'' ಅಂತ ಮಾಳವಿಕಾ ಉತ್ತರ ಕೊಟ್ಟರು.

ಮಾಳವಿಕಾ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ?!

''ಮಾಳವಿಕಾ ಯಾವುದನ್ನೂ ಕೂಡ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ನಾನು ಹೇಳಿದ್ದೇ ಸರಿ, ನಾನು ಮಾಡಿದ್ದೇ ಸರಿ. ಆ ರೀತಿ ಕಾಣ್ತಿದ್ದೀರಾ ನೀವು. ನನ್ನ ಅನಿಸಿಕೆಯಲ್ಲಿ'' ಎಂದರು ಪತ್ರಕರ್ತ ಸೋಮಣ್ಣ. ಅದಕ್ಕೆ ಮಾಳವಿಕಾ - ''ಅದು ನಿಮ್ಮ ಅಭಿಪ್ರಾಯ'' ಅಂತ ಹೇಳಿ ಸುಮ್ಮನಾದರು.

ಹಿರಿಯರಾಗಿ ನೀವು ಮಾಡಬೇಕಾಗಿದ್ದದ್ದು...

''ಮಾಳವಿಕಾ ಮತ್ತು ಮೋಹನ್... ನೀವು ಇಬ್ಬರೂ ತುಂಬಾ ಹಿರಿಯರು. ತುಂಬಾ ಅನುಭವ ಇದೆ. ಹೊರಗಡೆ ತುಂಬಾ ಜನರನ್ನ ನೋಡಿರ್ತೀರಾ. ಪ್ರಥಮ್ ಗೆ ಆ ತರಹ ಏನೋ ಸಮಸ್ಯೆ ಇದೆ ಅಂತಿದ್ದರೆ.. ನೀವೇ ಯಾಕೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನೇರವಾಗಿ ಮಾತನಾಡಬಾರದು'' ಅಂತ ಪತ್ರಕರ್ತೆ ಹರ್ಷಿತಾ ಕೇಳಿದರು. ಅದಕ್ಕೆ, ಮಾಳವಿಕಾ ರವರಿಂದ ಬಂದ ಸಬೂಬು ''ಅವನು ಕೇಳಿಸಿಕೊಳ್ಳುತ್ತಾನಾ.?'' ಅಂತ.!

'ಬಿಗ್ ಬಾಸ್' ಸೆಲೆಕ್ಷನ್ ಮಾಡ್ತಿದ್ರಾ?

''ಒಂದ್ವೇಳೆ ಅವರಿಗೆ ಅಂತಹ ಪ್ರಾಬ್ಲಂ ಇದ್ದಿದ್ದೇ ಹೌದಾದರೆ, 'ಬಿಗ್ ಬಾಸ್'.. ಪ್ರಥಮ್ ನ ಈ ಶೋಗೆ ಆಯ್ಕೆ ಮಾಡ್ತಿದ್ರಾ?'' ಅಂತ ಪತ್ರಕರ್ತೆ ರೋಹಿಣಿ ಕೇಳಿದರು.

ಮೋಹನ್ ಕೊಟ್ಟ ಸ್ಪಷ್ಟನೆ

''ನಾವು ಮಾತನಾಡಿದ್ದು ನಿಜ. ಅವನಿಗೂ ಹೇಳಿದ್ದು ನಿಜ. ಬಾತ್ ರೂಮ್ ನಲ್ಲಿ ಕನ್ನಡಿ ಮುಂದೆ ಕೂತ್ಕೊಂಡು ಒಬ್ಬನೇ ಮಾತನಾಡುತ್ತಿರುತ್ತಾನೆ. ಪ್ರತಿ ಬಾರಿ 'ಬಿಗ್ ಬಾಸ್' ಬಗ್ಗೆ ತಲೆಕೆಡಿಸಿಕೊಂಡಿರ್ತಾನೆ. ಹೀಗೆ ಥಿಂಕ್ ಮಾಡ್ತಿದ್ರೆ... ಕೌನ್ಸಿಲಿಂಗ್ ಅಗತ್ಯ ಇದೆ ಅಂತ ಹೇಳಿದ್ದೆ. ಪ್ರಥಮ್ ಬಗ್ಗೆ ನಮ್ಮೆಲ್ಲರಿಗೂ ಸ್ವಲ್ಪ ಸಲುಗೆ ಜಾಸ್ತಿ. ಹೊರಗೆ ಅದು ಬೇರೆ ತರಹ ಕಾಣಿಸಿದ್ರೆ, ಕ್ಷಮೆ ಇರಲಿ. ನಮ್ಮ ಸ್ವಭಾವ ಆ ತರಹ ಅಲ್ಲ. ಪ್ರಥಮ್ ತುಂಬಾ ಬುದ್ದಿವಂತ. ಅದರಲ್ಲಿ ಡೌಟ್ ಇಲ್ಲ'' ಎಂದರು ಮೋಹನ್.

ಪ್ರಥಮ್ ಗೆ ಶಾಕ್.!

ತಮಗೆ ಗೊತ್ತಿಲ್ಲದೇ, ಬೆನ್ನ ಹಿಂದೆ ಹೀಗೆಲ್ಲ ಮಾತನಾಡಿಕೊಂಡಿದ್ದಾರೆ ಅಂತ ಗೊತ್ತಾಗ್ತಿದ್ದಂತೆ ಪ್ರಥಮ್ ಸ್ವಲ್ಪ ಶಾಕ್ ಆಗಿದ್ದು ಸುಳ್ಳಲ್ಲ.!

English summary
Bigg Boss Kannada 4: Day 105, Kannada Actor Mohan and Kannada Actress Malavika Avinash clarifies regarding their statement on Pratham's Mental Stability.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada