»   » ವೀಕ್ಷಕರ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ 'ಬಿಗ್ ಬಾಸ್' & ಸುದೀಪ್.!

ವೀಕ್ಷಕರ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ 'ಬಿಗ್ ಬಾಸ್' & ಸುದೀಪ್.!

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ವೋಟಿಂಗ್ ಲೈನ್ಸ್ ಓಪನ್ ಆಗುತ್ತೆ. ಸೋಮವಾರದಿಂದ ಬುಧವಾರ ಅಥವಾ ಗುರುವಾರದವರೆಗೂ ತಮ್ಮ ನೆಚ್ಚಿನ ಸ್ಪರ್ಧಿಗಳನ್ನ ಸೇಫ್ ಮಾಡಲು ವೀಕ್ಷಕರಿಗೆ ಎಸ್.ಎಂ.ಎಸ್ ಮಾಡುವ ಅವಕಾಶವನ್ನು 'ಬಿಗ್ ಬಾಸ್' ನೀಡುತ್ತಾರೆ.

ಈ ಅವಕಾಶ ಕಳೆದ ವಾರ ವೀಕ್ಷಕರಿಗೆ ಲಭಿಸಲಿಲ್ಲ. ಕೇವಲ 2/3 ಗಂಟೆಗಳು ಮಾತ್ರ ವೋಟಿಂಗ್ ಲೈನ್ಸ್ ಓಪನ್ ಇತ್ತು. ಮಂಗಳವಾರದಿಂದ ಎಲ್ಲಾ ವೋಟಿಂಗ್ ಲೈನ್ ಗಳು ಬಂದ್ ಆಗಿದ್ದವು.

ಹೀಗ್ಮಾಡಿದ್ರೆ, ಎಲಿಮಿನೇಟ್ ಆಗುವ ಸ್ಪರ್ಧಿಗಳಿಗೆ ಮೋಸ ಮಾಡಿದ ಹಾಗೆ ಆಗಲ್ವಾ.? ಎಂಬ ವೀಕ್ಷಕರ ಪ್ರಶ್ನೆಯನ್ನ ನಾವು 'ಬಿಗ್ ಬಾಸ್' ಮುಂದೆ ಇಟ್ಟಿದ್ವಿ.

ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಳೆದ ವಾರದ 'ವೋಟಿಂಗ್ ಡ್ರಾಮಾ' ಬಗ್ಗೆ ಸುದೀಪ್ 'ಕ್ಲಾರಿಟಿ' ಕೊಟ್ಟಿದ್ದಾರೆ.

ವೋಟಿಂಗ್ ಲೈನ್ಸ್ ಬಗ್ಗೆ ಮಾತನಾಡಿದ ಸುದೀಪ್.!

''ಈ ವಾರ ಬಿಗ್ ಬಾಸ್ ಕೇವಲ ನಾಲ್ಕು ಜನರನ್ನು ಮಾತ್ರ ನಾಮಿನೇಟ್ ಮಾಡಿದ್ದಾರೆ. ಮಾಳವಿಕಾ, ಪ್ರಥಮ್, ಭುವನ್ ಮತ್ತು ಕೀರ್ತಿ. ಇವರಿಗೆ ವೋಟ್ ಮಾಡುವುದಕ್ಕೆ ಕೇವಲ ಮೂರು ಗಂಟೆ ಅವಕಾಶ. ಇವರಲ್ಲಿ ಒಬ್ಬರಲ್ಲ ಇಬ್ಬರು ಇವತ್ತು ಹೊರಗೆ ಬರುತ್ತಾರೆ. ಇವತ್ತು ಹೊರಗಡೆ ಬರುತ್ತಿರುವವರಲ್ಲಿ ಒಬ್ಬರು ಅತಿ ಹೆಚ್ಚು ವೋಟ್ ಪಡೆದವರು. ಇನ್ನೊಬ್ಬರು ಅತಿ ಕಡಿಮೆ ವೋಟ್ ಪಡೆದವರು. ಇದು 'ಬಿಗ್ ಬಾಸ್' ಕೊಡ್ತಾಯಿರೋ ಟ್ವಿಸ್ಟ್'' ಎಂದರು ಕಿಚ್ಚ ಸುದೀಪ್.

ವೋಟಿಂಗ್ ಲೈನ್ಸ್ ಬಂದ್ ಮಾಡಿದ್ದು ಯಾಕೆ.?

''ಈ ವಾರ ಯಾರನ್ನೂ ಹೊರಗೆ ಕರ್ಕೊಂಡ್ ಬರೋದು 'ಬಿಗ್ ಬಾಸ್'ನ ಉದ್ದೇಶ ಆಗಿರಲಿಲ್ಲ. ಅದಕ್ಕೆ ಮೂರೇ ಗಂಟೆಗಳ ಕಾಲ ವೋಟಿಂಗ್ ಲೈನ್ಸ್ ಓಪನ್ ಇತ್ತು. ತಕ್ಷಣ ಕ್ಲೋಸ್ ಆಯ್ತು. ಯಾಕಂದ್ರೆ, 'ಬಿಗ್ ಬಾಸ್'ಗೆ ಬೇಕಾಗಿದ್ದದ್ದು ಒಂದೇ... ಅತಿ ಹೆಚ್ಚು ವೋಟ್ ಯಾರಿಗೆ.? ಅತಿ ಕಡಿಮೆ ವೋಟ್ ಯಾರಿಗೆ.? ಒಂದು ಸ್ಮಾಲ್ ಟ್ರೆಂಡ್ ಬೇಕಾಗಿತ್ತು. ಆ ಟ್ರೆಂಡ್ ಸಿಕ್ತು. ವೋಟಿಂಗ್ ಲೈನ್ಸ್ ಕ್ಲೋಸ್ ಆಯ್ತು'' ಅಂತ 'ವೋಟಿಂಗ್ ಲೈನ್' ಬಗ್ಗೆ ಮೂಡಿದ ಅನುಮಾನಕ್ಕೆ ಸುದೀಪ್ ಸ್ಪಷ್ಟ ವಿವರಣೆ ನೀಡಿದರು.

ಮಾಳವಿಕಾ, ಪ್ರಥಮ್ ರನ್ನ ಹೊರ ಕರೆದ ಸುದೀಪ್.!

ಟ್ರೆಂಡಿಂಗ್ ವೋಟ್ ಗಳ ಆಧಾರದ ಮೇಲೆ ನಟಿ ಮಾಳವಿಕಾ ಅವಿನಾಶ್ ಹಾಗೂ ಪ್ರಥಮ್ ರವರನ್ನ ಸುದೀಪ್ 'ಬಿಗ್ ಬಾಸ್' ಮನೆಯಿಂದ ಹೊರ ಕರೆದರು.

ಈ ಇಬ್ಬರೇ ಯಾಕೆ.?

''ಮಾಳವಿಕಾ ಮತ್ತು ಪ್ರಥಮ್ ರವರ ಪೈಕಿ ಒಬ್ಬರಿಗೆ ಅತಿ ಹೆಚ್ಚು ವೋಟ್ ಬಂದಿದೆ. ಇನ್ನೊಬ್ಬರಿಗೆ ಅತಿ ಕಮ್ಮಿ ವೋಟ್ ಬಂದಿದೆ. ಯಾರಿಗೆ ಹೆಚ್ಚು, ಯಾರಿಗೆ ಕಮ್ಮಿ... ನಿಮ್ಮ ನಿಮ್ಮ ಊಹೆಗೆ ಬಿಡ್ತೀವಿ ನಾವು'' ಎಂದಿದ್ದಾರೆ ಸುದೀಪ್.

ಕಳೆದ ವಾರ ಎಲಿಮಿನೇಷನ್ ಆಗಲಿಲ್ಲ.!

ವೀಕ್ಷಕರಿಗೆ ತಮ್ಮ ಇಷ್ಟದ ಸ್ಪರ್ಧಿಗಳನ್ನು ಸೇಫ್ ಮಾಡಲು ಕೆಲವೇ ಗಂಟೆಗಳ ಕಾಲ ಅವಕಾಶ ನೀಡಿದ್ದರಿಂದ, ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆಯಲಿಲ್ಲ [ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಸೀಕ್ರೆಟ್ ರೂಮ್ ಗೆ ಮಾಳವಿಕಾ, ಪ್ರಥಮ್

'ಬಿಗ್ ಬಾಸ್' ಮನೆಯಿಂದ ಹೊರಬಂದ ಮಾಳವಿಕಾ ಮತ್ತು ಪ್ರಥಮ್, ನೇರವಾಗಿ ಸೀಕ್ರೆಟ್ ರೂಮ್ ಒಳಗೆ ಹೋಗಿದ್ದಾರೆ ಹೊರತು ಎಲಿಮಿನೇಟ್ ಆಗಿಲ್ಲ. ಹೀಗಾಗಿ ಯಾರಿಗೂ ಮೋಸ ಆಗ್ಲಿಲ್ಲ.!

English summary
Bigg Boss Kannada 4: Week 13, Why Voting lines were closed since Monday midnight? Kiccha Sudeep clarified Viewers Doubt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada