»   » 'ಪ್ರಥಮ್' ಸಾಮ್ರಾಜ್ಯದಲ್ಲಿ ಮೇಳೈಸುತ್ತಿವೆ ಘೋಷ ವಾಕ್ಯಗಳು

'ಪ್ರಥಮ್' ಸಾಮ್ರಾಜ್ಯದಲ್ಲಿ ಮೇಳೈಸುತ್ತಿವೆ ಘೋಷ ವಾಕ್ಯಗಳು

Posted By:
Subscribe to Filmibeat Kannada

ಇದುವರೆಗೂ ಯಾರೂ ನೋಡದ, ಕಂಡು ಕೇಳರಿಯದ ಎಪಿಸೋಡ್ ಗೆ 'ಬಿಗ್ ಬಾಸ್ ಕನ್ನಡ 4' ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿದೆ.

ಈ ತುರ್ತು ಪರಿಸ್ಥಿತಿ ಅವಧಿಯಲ್ಲಿ ಪ್ರಥಮ್ ಸರ್ವಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹೀಗಾಗಿ, ಇಲ್ಲಿ ಬಿಗ್ ಬಾಸ್ ಮನೆಯಲ್ಲಿ 'ಲಾರ್ಡ್ ಪ್ರಥಮ್ ಸರ್' ರದ್ದೇ ಕಾನೂನು, ಅವರದ್ದೇ ರಾಜ್ಯಭಾರ.

ಈಗಾಗಲೇ 'ಲಾರ್ಡ್ ಪ್ರಥಮ್ ಸರ್' ಅಧಿಕಾರ ಪಡೆದು ಒಂದು ದಿನ ಕಳೆದಿದೆ. ಮನೆಯಲ್ಲಿ ಹೊಸ ಹೊಸ ನಿಯಮಗಳು ಜಾರಿಯಲ್ಲಿವೆ. ಯಾರಾದರೂ ತಪ್ಪು ಮಾಡಿದ್ರೆ ಘೋರ ಶಿಕ್ಷೆ ಗ್ಯಾರೆಂಟಿ. ಆ ಶಿಕ್ಷೆ ಎಷ್ಟರ ಮಟ್ಟಿಗೆ ಅಂದ್ರೆ, ಪ್ರಥಮ್ ರಾಜ್ಯಭಾರದಲ್ಲಿ ಕೆಲವು ಘೋಷವಾಕ್ಯಗಳಿವೆ. ಅದನ್ನ ಒಮ್ಮೆ ಗಮನಿಸಿ ನಿಮ್ಗೆ ಅರ್ಥವಾಗುತ್ತೆ.

ನಾನು ಅಂದ್ರೆ ನ್ಯಾಯ, ನ್ಯಾಯ ಅಂದ್ರೆ ನಾನು

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ, ಬಿಗ್ ಬಾಸ್ ಹೇಳಿದ್ಹಾಗೆ ನಡೆಯುತ್ತಿತ್ತು. ಆದ್ರೆ, ಈ ವಾರ ಅದು ನಡೆಯಲ್ಲ. ಯಾಕಂದ್ರೆ ಈ ವಾರ ಪ್ರಥಮ್ ಸರ್ವಾಧಿಕಾರಿ. ಇಲ್ಲಿ ನ್ಯಾಯ ತೀರ್ಮಾನ ಎಲ್ಲವೂ ಪ್ರಥಮ್ ಗೆ ಬಿಟ್ಟಿದ್ದು. ಹೀಗಾಗಿ ''ನಾನು ಅಂದ್ರೆ ನ್ಯಾಯ, ನ್ಯಾಯ ಅಂದ್ರೆ ನಾನು'' ಎಂಬ ಘೋಷ ವಾಕ್ಯ ಬಿಗ್ ಬಾಸ್ ಮನೆಯಲ್ಲಿದೆ.[ಡೆಡ್ಲಿ ಡಿಕ್ಟೇಟರ್: ಎಲ್ಲೆಲ್ಲೂ 'ಪ್ರಥಮ್' ಟಾಪ್ ಟ್ರೆಂಡಿಂಗ್ ]

ದಂಡಿಸೋನೂ ನಾನೇ, ಖಂಡಿಸೋನು ನಾನೇ

ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಏನಾದರೂ ತಪ್ಪು ಮಾಡಿದರೇ, ಬಿಗ್ ಬಾಸ್ ಶಿಕ್ಷೆ ನೀಡುತ್ತಿದ್ದರು. ಆದ್ರೆ ಇನ್ಮುಂದೆ ಬಿಗ್ ಬಾಸ್ ಶಿಕ್ಷೆ ಕೊಡಲ್ಲ. ಯಾಕಂದ್ರೆ ಪ್ರಥಮ್ ರಾಜ್ಯದಲ್ಲಿ ದಂಡಿಸೋದು, ಖಂಡಿಸೋದು ಎಲ್ಲವೂ 'ಲಾರ್ಡ್ ಪ್ರಥಮ್ ಸರ್' ಎಂಬುದಕ್ಕೆ 'ದಂಡಿಸೋನೂ ನಾನೇ, ಖಂಡಿಸೋನು ನಾನೇ' ಎಂಬ ಘೋಷ ವಾಕ್ಯ ಸಾಕ್ಷಿಯಾಗಿದೆ.[ಪ್ರಥಮ್ ಈಗ 'ಸರ್ವಾಧಿಕಾರಿ': 'ಬಿಗ್ ಬಾಸ್' ಮನೆ ಸದಸ್ಯರಿಗೆ ಉರಿ ಉರಿ]

ನನ್ ರಾಜ್ಯ, ನನ್ ರೂಲ್ಸ್

ಕಳೆದ ಮೂರು ಸೀಸನ್ ಗಳಿಂದ ಬಿಗ್ ಬಾಸ್ ಮನೆಯಲ್ಲಿ, ಬಿಗ್ ಬಾಸ್ ಮಾಡಿದ್ದೇ ರೂಲ್ಸ್, ಬಿಗ್ ಬಾಸ್ ಹೇಳಿದ್ದೇ ಕಾನೂನು. ಆದ್ರೆ, ಈ ವಾರ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಹೇಳಿದ್ದೇ ಕಾನೂನೂ, ಪ್ರಥಮ್ ಮಾಡಿದ್ದೇ ರೂಲ್ಸ್.

ನಾನೇ ಬೇರೆ, ನನ್ನ ಸ್ಟೈಲೇ ಬೇರೆ

ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾರು ಹೇಗೆ ಬೇಕಾದ್ರೂ ಇರುವ ಹಾಗಿಲ್ಲ. 'ಲಾರ್ಡ್ ಪ್ರಥಮ್ ಸರ್' ಏನೂ ಹೇಳುತ್ತಾರೋ ಅದೇ ಆಗೋದು. ಹೀಗಾಗಿ, ಸದಸ್ಯರ ದಿನಚರಿ, ಅವರು ಹಾಕಿಕೊಳ್ಳುವ ಬಟ್ಟೆ, ಅವರು ಯಾವಾಗ ತಿನ್ನಬೇಕು, ಯಾವಾಗ ಮಲಗಬೇಕು ಎಂಬ ಎಲ್ಲ ಕೆಲಸಗಳನ್ನೂ ಪ್ರಥಮ್ ನಿರ್ಧಾರ ಮಾಡಲಿದ್ದಾರೆ.

English summary
Bigg Boss Kannada 4, Week 8 : Kannada Director Pratham turns 'Dictator' in 'Bigg Boss' House and gets special powers.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X