»   » 'ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ'

'ದಂಡನಾಯಕ' ಪ್ರಥಮ್: ಈ ವಾರ ಪೂರಾ 'ದಂಡಂ ದಶಗುಣಂ'

Posted By:
Subscribe to Filmibeat Kannada

ಮಾತ್ತೆತ್ತಿದರೆ 'ಪ್ರತಿಭಟನೆ' ಮಾಡುವ... 'ಖಂಡಿಸುವ' ಪ್ರಥಮ್ ಕ್ಯಾಪ್ಟನ್ ಆಗ್ಬಿಟ್ಟರೆ, 'ಬಿಗ್ ಬಾಸ್' ಮನೆ ಗತಿ ಅಧೋಗತಿ ಅಂತ ಇಲ್ಲಿಯವರೆಗೂ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಥಮ್ ರನ್ನ ಇತರೆ ಸ್ಪರ್ಧಿಗಳು ಹೊರಗಿಟ್ಟಿದ್ರು.

ಒಂದ್ವೇಳೆ ಪ್ರಥಮ್ ಕ್ಯಾಪ್ಟನ್ ಆಗ್ಬಿಟ್ರೆ, ನಾಮಿನೇಷನ್ ನಿಂದ ಸೇಫ್ ಆಗ್ಬಿಡ್ತಾರೆ ಅನ್ನೋ ಗೇಮ್ ಪ್ಲಾನ್ ಕೆಲವರ ತಲೆಯಲ್ಲಿ ಇರಬಹುದೇನೋ?! ಏನೇ ಪ್ಲಾನ್ ಮಾಡಿದರೂ, 'ಬಿಗ್ ಬಾಸ್' ಮುಂದೆ ಯಾವುದೂ ನಡೆಯಲ್ಲ ಎಂಬ ಮಾತಿಗೆ ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಸಾಕ್ಷಿ.! [BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!]

ಪ್ರಥಮ್ 'ನಾಯಕ' ಆಗ್ಬಾರ್ದು ಅಂತ ಕಲ್ಲು ಹಾಕುತ್ತಿದ್ದವರಿಗೆ ಈ ವಾರ ಸ್ವತಃ 'ಬಿಗ್ ಬಾಸ್' ಬಿಗ್ ಶಾಕ್ ಕೊಟ್ಟಿದ್ದಾರೆ. 'ಸರ್ವಾಧಿಕಾರ' ನೀಡಿ ಪ್ರಥಮ್ ಗೆ 'ದಂಡನಾಯಕ'ನ ಪಟ್ಟ ಕೊಟ್ಟಿದ್ದಾರೆ ಸ್ವತಃ 'ಬಿಗ್ ಬಾಸ್'.!

ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ.!

ಏಳನೇ ವಾರ ಭುವನ್ ರವರ ಕ್ಯಾಪ್ಟನ್ ಅವಧಿ ಮುಗಿದ ಬಳಿಕ 'ಬಿಗ್ ಬಾಸ್' ಮನೆಯಲ್ಲಿ ಎಂಟನೇ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಈ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಿರುವಾಗಲೇ 'ಎಮರ್ಜೆನ್ಸಿ' ಘೋಷಿಸಿಬಿಟ್ಟರು 'ಬಿಗ್ ಬಾಸ್'. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

'ಬಿಗ್ ಬಾಸ್' ಮನೆಯಲ್ಲಿ 'ಎಮರ್ಜೆನ್ಸಿ'

ಕ್ಯಾಪ್ಟನ್ ಇಲ್ಲದ ಮತ್ತು ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯದ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮನೆಯಲ್ಲಿ 'ತುರ್ತು ಪರಿಸ್ಥಿತಿ'ಯನ್ನು 'ಬಿಗ್ ಬಾಸ್' ಘೋಷಿಸಿದರು.

ಪ್ರಥಮ್ ರನ್ನ 'ದಂಡನಾಯಕ'ರನ್ನಾಗಿ ನೇಮಿಸಿದ 'ಬಿಗ್ ಬಾಸ್'.!

ನಾಯಕರಿಲ್ಲದ 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ರವರನ್ನ 'ದಂಡನಾಯಕ'ರನ್ನಾಗಿ 'ಬಿಗ್ ಬಾಸ್' ನೇಮಿಸಿದರು. ['ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!]

ಪ್ರಥಮ್ ಗಿದೆ ಇಮ್ಯೂನಿಟಿ ಗೆಲ್ಲುವ ಅವಕಾಶ

'ತುರ್ತು ಪರಿಸ್ಥಿತಿ'ಯಲ್ಲಿ ಕಾಲ ಕಾಲಕ್ಕೆ 'ಬಿಗ್ ಬಾಸ್' ನೀಡುವ ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ಮುಂದಿನ ವಾರ ಪ್ರಥಮ್ ಗೆ ನಾಮಿನೇಷನ್ ನಿಂದ ಇಮ್ಯೂನಿಟಿ ಸಿಗಲಿದೆ. [ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!]

ಪ್ರಥಮ್ ಗೆ 'ಬಿಗ್ ಬಾಸ್' ಕೊಟ್ಟಿರುವ ರೂಲ್ಸ್

'ಬಿಗ್ ಬಾಸ್' ಮನೆಯ ಶಿಸ್ತು ಕಾಪಾಡುವ ಜವಾಬ್ದಾರಿ ಪ್ರಥಮ್ ಹೆಗಲ ಮೇಲಿದೆ.

ಪ್ರಥಮ್ ರಾಜ್ಯಭಾರ

ಸರ್ವಾಧಿಕಾರಿ ಆಗಿರುವುದರಿಂದ 'ಬಿಗ್ ಬಾಸ್' ಮನೆಯಲ್ಲಿ ತಮ್ಮಿಷ್ಟದ ನಿಯಮಗಳನ್ನು ರೂಪಿಸಿಕೊಳ್ಳುವ ಸಂಪೂರ್ಣ ಅಧಿಕಾರ ಪ್ರಥಮ್ ಗೆ ದೊರಕಿದೆ.

'ನ್ಯಾಯ ಪಾಲಕಿ' ಮಾಳವಿಕಾ

ಪ್ರಥಮ್ 'ದಂಡನಾಯಕ'ರಾಗಿದ್ದರೆ, ಮಾಳವಿಕಾ ಅವಿನಾಶ್ ಗೆ 'ನ್ಯಾಯ ಪಾಲಕಿ' ಸ್ಥಾನ ಸಿಕ್ಕಿದೆ. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

ಮಾಳವಿಕಾಗೆ ಶಿಕ್ಷೆ ಇಲ್ಲ.!

'ಬಿಗ್ ಬಾಸ್' ಮನೆಯಲ್ಲಿ ನ್ಯಾಯ ಪಾಲನೆ ಮಾಡುವ ಅಧಿಕಾರ ಮಾಳವಿಕಾ ರವರಿಗಿದೆ. ಅವರಿಗೆ ಶಿಕ್ಷೆ ವಿಧಿಸುವ ಹಕ್ಕು ದಂಡನಾಯಕ 'ಲಾರ್ಡ್ ಪ್ರಥಮ್ ಸರ್'ಗಿಲ್ಲ.

ಕಮಾಂಡೋ ನೇಮಕ

'ದಂಡನಾಯಕ' ಪ್ರಥಮ್ ಗೆ ಇಬ್ಬರು ಕಮಾಂಡೋಗಳಾಗಿ ರೇಖಾ ಹಾಗೂ ಶಾಲಿನಿ ರವರನ್ನ 'ಬಿಗ್ ಬಾಸ್' ನೇಮಿಸಿದ್ದಾರೆ.

ಸುಳಿವು ಕೊಟ್ಟರೆ....

'ಬಿಗ್ ಬಾಸ್' ನೀಡುವ ಆದೇಶಗಳ ಕುರಿತು ಇತರೆ ಸದಸ್ಯರಿಗೆ ಸುಳಿವು ಕೊಟ್ಟರೆ ಮುಂದಿನ ವಾರ ನೇರವಾಗಿ ನಾಮಿನೇಟ್ ಆಗುವ ಎಚ್ಚರಿಕೆಯನ್ನೂ ಪ್ರಥಮ್ ಗೆ 'ಬಿಗ್ ಬಾಸ್' ಕೊಟ್ಟಿದ್ದಾರೆ.

ಪ್ರಥಮ್ ಗೆ ವಿಶೇಷ ಅರಮನೆ

'ದಂಡನಾಯಕ'ರಾಗಿರುವ ಪ್ರಥಮ್ ಗೆ 'ಬಿಗ್ ಬಾಸ್' ಮನೆಯ ಆಕ್ಟಿವಿಟಿ ಏರಿಯಾದಲ್ಲಿ ಅರಮನೆ ಸೆಟಪ್ ಹಾಕಲಾಗಿದೆ. ಅಲ್ಲಿಂದಲೇ ಇತರೆ ಸದಸ್ಯರ ಚಲನ ವಲನ ಗಮನಿಸುವ 'ಲೈವ್' ವ್ಯವಸ್ಥೆಯನ್ನೂ 'ಬಿಗ್ ಬಾಸ್' ಮಾಡಿಕೊಟ್ಟಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಹವಾ....

ಅಲ್ಲಿಗೆ ಈ ವಾರ ಪೂರ್ತಿ 'ಬಿಗ್ ಬಾಸ್' ಮನೆಯಲ್ಲಿ 'ಸರ್ವಾಧಿಕಾರಿ' ಲಾರ್ಡ್ ಪ್ರಥಮ್ ಸರ್ ಹವಾ.... ಅಸಲಿ ಆಟ ಈಗ ಶುರು...

English summary
Bigg Boss Kannada 4, Week 8 : Kannada Director Pratham turns 'Dictator' in 'Emergency' task given by 'Bigg Boss'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada