»   » ಫ್ರೆಂಡ್ಸ್ ಮಧ್ಯೆ 'ಕಿರಿಕ್' ಶುರು: ಶೀತಲ್ ಶೆಟ್ಟಿ-ಕೀರ್ತಿ ಮಧ್ಯೆ ಗದ್ದಲ ಜೋರು.!

ಫ್ರೆಂಡ್ಸ್ ಮಧ್ಯೆ 'ಕಿರಿಕ್' ಶುರು: ಶೀತಲ್ ಶೆಟ್ಟಿ-ಕೀರ್ತಿ ಮಧ್ಯೆ ಗದ್ದಲ ಜೋರು.!

Posted By:
Subscribe to Filmibeat Kannada

ಹೇಳಿ ಕೇಳಿ ಶೀತಲ್ ಶೆಟ್ಟಿ ಮತ್ತು 'ಕಿರಿಕ್' ಕೀರ್ತಿ ಮೀಡಿಯಾದಲ್ಲಿ ಕೆಲಸ ಮಾಡಿದವರು. ವರ್ಷಗಳಿಂದಲೂ ಇಬ್ಬರಿಗೂ ಪರಿಚಯ, ಸ್ನೇಹ ಇದ್ದೇ ಇದೆ. 'ಬಿಗ್ ಬಾಸ್' ಮನೆಗೆ ಹೋದ್ಮೇಲೂ 'ಕಿರಿಕ್' ಕೀರ್ತಿ ಮತ್ತು ಶೀತಲ್ ಶೆಟ್ಟಿ ಫ್ರೆಂಡ್ ಶಿಪ್ ಎದ್ದು ಕಾಣ್ತಿತ್ತು. ಒಬ್ಬರಿಗೊಬ್ಬರು ನಾಮಿನೇಟ್ ಕೂಡ ಮಾಡಿಕೊಳ್ಳುತ್ತಿರಲಿಲ್ಲ.

ಇಂತಿಪ್ಪ ಕುಚ್ಚಿಕ್ಕು ಗೆಳೆಯರ ಮಧ್ಯೆ ಈಗ ಕಿತ್ತಾಟ ಶುರುವಾಗಿದೆ. 'ಕಿರಿಕ್' ಕೀರ್ತಿ ನಡವಳಿಕೆ ಬಗ್ಗೆ ಶೀತಲ್ ಶೆಟ್ಟಿ ಬೇಸರಗೊಂಡಿದ್ದಾರೆ. ಅಸಲಿಗೆ, ಕೀರ್ತಿ ಮತ್ತು ಶೀತಲ್ ಶೆಟ್ಟಿ ನಡುವೆ ಏನಾಯ್ತು.? ಸಂಪೂರ್ಣ ವರದಿ ಇಲ್ಲಿದೆ ಓದಿರಿ....

'ಬಿಗ್ ಬಾಸ್' ನೀಡಿದ್ದ ಮೋಜಿನ ಚಟುವಟಿಕೆ

50ನೇ ದಿನ ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಮೋಜಿನ ಚಟುವಟಿಕೆಯೊಂದನ್ನು ನೀಡಿದ್ದರು. ಅದುವೇ 'ಇಲ್ಲ ಅನ್ನಲ್ಲ'. ಇದರ ಅನುಸಾರ ಮನೆಯ ಸದಸ್ಯರು ಒಬ್ಬೊಬ್ಬರಾಗಿ ಬಂದು ಲಿವಿಂಗ್ ಏರಿಯಾದಲ್ಲಿ ಇರಿಸಲಾದ ಹಲಗೆಯನ್ನು ತಿರುಗಿಸಬೇಕು. ಹಲಗೆ ಯಾವ ಸದಸ್ಯರ ಹೆಸರಿಗೆ ಬಂದು ನಿಲ್ಲುತ್ತದೋ, ಆ ಸದಸ್ಯರಿಗೆ ಸವಾಲೊಂದನ್ನು ನೀಡಬೇಕು. ಸದಸ್ಯರು ಸವಾಲನ್ನು ಕಡ್ಡಾಯವಾಗಿ ಪೂರ್ಣಗೊಳಸಬೇಕಿತ್ತು. ['ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?]

ಮೋಜಿನ ಟಾಸ್ಕ್ ಹೀಗಿತ್ತು...

ಮದುಮಗಳಂತೆ ಸಂಜನಾ ಅಲಂಕರಿಸಿಕೊಂಡಿದ್ದು, ಹೆಣ್ಣಿನ ಹಾಗೆ ಭುವನ್ ಸಿಂಗಾರ ಮಾಡಿಕೊಂಡು ಹಾಡು ಹೇಳಿದ್ದು, ಶಾರ್ಟ್ ಸ್ಕರ್ಟ್ ನಲ್ಲಿ ಮಾಳವಿಕಾ ಅವಿನಾಶ್ ಡ್ಯಾನ್ಸ್ ಮಾಡಿದ್ದು... ಇವೆಲ್ಲ 'ಇಲ್ಲ ಅನ್ನಲ್ಲ' ಟಾಸ್ಕ್ ಅನುಗುಣವಾಗಿಯೇ. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

ಶೀತಲ್ ಶೆಟ್ಟಿಗೆ ನಿರಂಜನ್ ದೇಶಪಾಂಡೆ ಕೊಟ್ಟ ಸವಾಲು

ಟೂತ್ ಬ್ರಷ್ ಗೆ ಪೇಸ್ಟ್ ಬದಲು ಶ್ಯಾಂಪೂ ಹಾಕೊಂಡು ಹಲ್ಲುಜ್ಜುವಂತೆ ನಿರಂಜನ್ ದೇಶಪಾಂಡೆ ಸವಾಲು ನೀಡಿದರು. [ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?]

ಇದರಲ್ಲಿ ಮಜಾ ಎಲ್ಲಿದೆ.?

''ಮಜವಾದ ಟಾಸ್ಕ್ ಮಾಡಿ ಅಂತ ಬಿಗ್ ಬಾಸ್ ಹೇಳಿದ್ದಾರೆ. ಶ್ಯಾಂಪೂ ನಲ್ಲಿ ಹಲ್ಲುಜ್ಜುವುದರಿಂದ ಮಜಾ ಎಲ್ಲಿ ಬರುತ್ತೆ'' ಅಂತ ಶೀತಲ್ ಶೆಟ್ಟಿ ಕೊಂಚ ಸಿಡಿಮಿಡಿಗೊಂಡು ಟಾಸ್ಕ್ ಪೂರ್ಣಗೊಳಿಸಿದರು. ['ಮೋಸ' ಮಾಡಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಕೆಂಡಾಮಂಡಲ.!]

ಐದು ಬಾರಿ ವಾಂತಿ ಮಾಡಿದ ಶೀತಲ್

ಶ್ಯಾಂಪೂನಲ್ಲಿ ಹಲ್ಲುಜಿದ ಪರಿಣಾಮ ಐದು ಬಾರಿ ವಾಂತಿ ಮಾಡಿದರು ಶೀತಲ್ ಶೆಟ್ಟಿ

ಶೀತಲ್ ಶೆಟ್ಟಿ ಕೋಪಕ್ಕೆ ಕಾರಣ...

'ವೋಲಿನಿ, ಡೊಮೆಕ್ಸ್ ನಲ್ಲಿ ಹಲ್ಲುಜ್ಜಿಸಬೇಕು ಅಂತ ಪ್ಲಾನ್ ಇತ್ತು' ಅಂತ ಕೀರ್ತಿ ಹೇಳಿದಕ್ಕೆ ಶೀತಲ್ ಶೆಟ್ಟಿ ಕೋಪಗೊಂಡರು. ನಂತರ 'ಆ ತರಹ ನಡೆದುಕೊಳ್ಳಬಾರದಿತ್ತು' ಅಂತ ಶೀತಲ್ ಕ್ಷಮೆ ಕೇಳಿದಕ್ಕೆ ಕೀರ್ತಿ 'ಗಾಂಚಲಿ' ಎಂದರು. ಆಗ ಶೀತಲ್ ಶೆಟ್ಟಿ ಪಿತ್ತ ನೆತ್ತಿಗೇರ್ತು.

ನಿರಂಜನ್ ಫಿಟ್ಟಿಂಗ್.!

ಶ್ಯಾಂಪೂನಲ್ಲಿ ಹಲ್ಲುಜ್ಜುವ ಐಡಿಯಾ ಕೀರ್ತಿ ಕೊಟ್ಟಿದ್ದು ಅಂತ ಶೀತಲ್ ಶೆಟ್ಟಿಗೆ ನಿರಂಜನ್ ಹೇಳ್ಬಿಟ್ಟರು.

ಕೀರ್ತಿ-ಶೀತಲ್ ಸಂಭಾಷಣೆ

ಕೀರ್ತಿ - ದೇಹ ಹೋಗಲ್ಲ ತಾನೆ
ಶೀತಲ್ ಶೆಟ್ಟಿ - ಯಾಕೆ ಆಗ್ಲಿಂದ ಹೀಗೆ ಮಾಡ್ತಿದ್ದೀರಾ. ಐದು ಸಲ ವಾಂತಿ ಆಗಿದೆ. ನಿಮಗೂ ಹಾಗೆ ಮಾಡಿದರೆ.? ಗಾಂಜಲಿ ಅಂದ್ರಿ. ಒಂದು ಸಲ ಬಂದು ಕೇಳಿದ್ರಾ ನನ್ನ ಪರಿಸ್ಥಿತಿ ಏನು ಅಂತ.?
ಕೀರ್ತಿ - ನಿಮ್ಮ ಮೂಡ್ ಹಾಳ್ ಮಾಡ್ದೇ ಅಂತ ನೀವು ಅಂದಾಗ ಗಾಂಜಲಿ ಅಂದೆ. ದೇವರಾಣೆ ನನ್ನ ಉದ್ದೇಶ ಅದಲ್ಲ. ಐ ಆಮ್ ರಿಯಲಿ ಸಾರಿ.
ಶೀತಲ್ ಶೆಟ್ಟಿ - ನಿಮಗೆ ಬೇರೆಯವರ ನೋವು ತಮಾಷೆ ಆಗಿ ಕಾಣಿಸಿಬಹುದೇನೋ..ಥ್ಯಾಂಕ್ಸ್

English summary
Bigg Boss Kannada 4, Week 8 : News Anchor Sheethal Shetty gets annoyed with Kirik Keerthi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada