Rakesh Adiga Prize Money : ಗೆಲುವಿನಂಚಿನಲ್ಲಿ ಎಡವಿದ ರಾಕೇಶ್ ಅಡಿಗಗೆ ಸಿಕ್ಕ ಬಹುಮಾನವೆಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್ 09 ಹೊಸವರ್ಷದ ರಾತ್ರಿ ಅದ್ಧೂರಿಯಾಗಿ ಮುಗಿದಿದೆ. ಒಟಿಟಿಯಲ್ಲಿ ಅದ್ಭುತವಾಗಿ ಆಡಿ ಚಾಂಪಿಯನ್ ಎನಿಸಿಕೊಂಡಿದ್ದ ರೂಪೇಶ್ ಶೆಟ್ಟಿಯವರೇ ಬಿಗ್‌ಬಾಸ್ ಸೀನಸ್ 09ರ ವಿನ್ನರ್ ಆಗಿದ್ದಾರೆ.
ಒಟಿಟಿಯಲ್ಲಿಯೂ ಅದ್ಭುತವಾಗಿ ಆಡಿದ್ದ ರಾಕೇಶ್ ಅಡಿಗ ಬಿಗ್‌ಬಾಸ್ ಕನ್ನಡ ಸೀಸನ್ 09 ರಲ್ಲಿ ಚೆನ್ನಾಗಿ ಆಡಿ ರನ್ನರ್ ಅಪ್ ಆಗಿದ್ದಾರೆ. ಹಲವು ಮಂದಿ ಸ್ವತಃ ರಾಕೇಶ್ ಅಡಿಗ ಅವರೇ ಗೆಲ್ಲುತ್ತಾರೆ ಎಂದುಕೊಂಡಿದ್ದರು ಆದರೆ ಅದು ಸುಳ್ಳಾಗಿದೆ.
ನೂರು ದಿನದಲ್ಲಿ ಕೇವಲ ಒಂದು ಬಾರಿಯಷ್ಟೆ ಮನೆಯವರಿಂದ ನಾಮಿನೇಟ್ ಆಗಿದ್ದ ರಾಕೇಶ್ ಅಡಿಗ ಅವರೇ ಬಿಗ್‌ಬಾಸ್ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ. ರೂಪೇಶ್‌ಗೆ 60 ಲಕ್ಷ ರುಪಾಯಿ ಬಹುಮಾನ ನೀಡಲಾಗಿದೆ.

ಆದರೆ ರನ್ನರ್ ಅಪ್ ಆದ ರಾಕೇಶ್ ಅಡಿಗಾಗೂ ಬಹುಮಾನ ಧಕ್ಕಿದ್ದು ರೂಪೇಶ್ ಶೆಟ್ಟಿಯಷ್ಟು ಅಲ್ಲದಿದ್ದರೂ ಸಮಾಧಾನಕರವಾದ ಬಹುಮಾನವೇ ರಾಕೇಶ್‌ಗೆ ಲಭಿಸಿದೆ.
ರಾಕೇಶ್ ಅಡಿಗಗೆ ಆಯೋಜಕರ ಕಡೆಯಿಂದ ಏಳು ಲಕ್ಷ ರುಪಾಯಿ ಬಹುಮಾನ ಲಭಿಸಿದೆ. ಅದಾದ ಬಳಿಕ ಫಿನೊಲೆಕ್ಸ್ ಅತ್ಯತ್ತಮ ನಾಯಕ ಪ್ರಶಸ್ತಿ ಸಹ ರಾಕೇಶ್ ಅಡಿಗ ಪಾಲಾಗಿದ್ದು, ಫಿನೋಲೆಕ್ಸ್‌ನವರು ಐದು ಲಕ್ಷ ರುಪಾಯಿ ಬಹುಮಾನವನ್ನು ರಾಕೇಶ್ ಅಡಿಗಗೆ ನೀಡಿದ್ದಾರೆ.
ಇನ್ನು ಮೂರನೇ ಸ್ಥಾನ ಪಡೆದ ದೀಪಿಕಾ ದಾಸ್‌ಗೆ ಐದು ಲಕ್ಷ ರುಪಾಯಿ ಬಹುಮಾನ ನೀಡಲಾಯಿತು. ನಾಲ್ಕನೇ ಸ್ಥಾನ ಪಡೆದ ರೂಪೇಶ್ ರಾಜಣ್ಣ ಅವರಿಗೆ ಮೂರು ಲಕ್ಷ ರುಪಾಯಿ ಬಹುಮಾನ ದೊರಕಿತು.
ರಾಕೇಶ್ ಅಡಿಗ, ಒಟಿಟಿ ಸೀಸನ್‌ನಲ್ಲಿಯೇ ಗೆಲ್ಲಬೇಕಿತ್ತು ಆದರೆ ಅಲ್ಲಿಯೂ ಕೊನೆಗೆ ಬಂದು ಎಡವಿದರು. ಅಲ್ಲಿ ಚಾಂಪಿಯನ್ ಪಟ್ಟ ರೂಪೇಶ್ ಶೆಟ್ಟಿ ಪಾಲಾಗಿ ಅವರಿಗೆ ಐದು ಲಕ್ಷ ರುಪಾಯಿ ಬಹುಮಾನ ದೊರಕಿತು. ರಾಕೇಶ್ ಅಡಿಗ ಟಿವಿ ಸೀಸನ್‌ನಲ್ಲಿ ಅರಂಭದಿಂದಲೂ ಬಹಳ ಚೆನ್ನಾಗ ಆಡಿದರು. ಮನೆಯವರಿಂದ ಕೇವಲ ಒಂದು ಬಾರಿ ಮಾತ್ರ ನಾಮಿನೇಟ್ ಆಗಿದ್ದರು. ಈ ಬಾರಿ ರಾಕೇಶ್ ಅವರೇ ಗೆಲ್ಲುತ್ತಾರೆ ಎನ್ನಲಾಗಿತ್ತು ಆದರೆ ಗೆದ್ದಿದ್ದು ರೂಪೇಶ್ ಶೆಟ್ಟಿ.


Click it and Unblock the Notifications











