For Quick Alerts
  ALLOW NOTIFICATIONS  
  For Daily Alerts

  ಬೆಂಗಾಲಿ ನಟಿ ಪಾಯಲ್ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ?

  By ಜೇಮ್ಸ್ ಮಾರ್ಟಿನ್
  |

  ಬೆಂಗಾಲಿ ಕಿರುತೆರೆ, ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಪಾಯಲ್ ಚಕ್ರವರ್ತಿ ಅವರ ಶವ ಆತ್ಮಹತ್ಯೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಿಲಿಗುರಿಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

  36 ವರ್ಷ ವಯಸ್ಸಿನ ಪಾಯಲ್ ಅವರು 'ಚೋಕರ್ ತರಾ ತುಯಿ', 'ಗೋಯೆಂಡಾ ಗಿನ್ನಿ' ಮುಂತಾದ ಟೆಲಿವಿಷನ್ ಸರಣಿಗಳು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

  ತಮಿಳು ನಟನ ಪತ್ನಿ ನೇಣಿಗೆ ಶರಣು: ಕಾರಣವೇನು.? ತಮಿಳು ನಟನ ಪತ್ನಿ ನೇಣಿಗೆ ಶರಣು: ಕಾರಣವೇನು.?

  ದಕ್ಷಿಣ ಕೋಲ್ಕತ್ತಾದ ಸಿಲಿಗುರಿಯ ಚರ್ಚ್ ರಸ್ತೆಯಲ್ಲಿರುವ ಹೊಟೇಲ್ ನಲ್ಲಿ ಪಾಯಲ್ ಅವರ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದೆ ಎಂದು ಸಿಲಿಗುರಿ ಪೊಲೀಸರು ಹೇಳಿದ್ದಾರೆ.

  ಮಂಗಳವಾರದಂದು ಸಿಕ್ಕಿಂನ ಗ್ಯಾಂಗ್ ಟಾಕ್ ಗೆ ತೆರಳಬೇಕಿದ್ದ ಪಾಯಲ್, ಸಿಲಿಗುರಿಗೆ ಬಂದಿದ್ದು ಏಕೆ ಎಂಬುದು ಗೊತ್ತಿಲ್ಲ. ಆಕೆ ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಪಾಯಲ್ ಅವರ ತಂದೆ ಪ್ರಭೀರ್ ಗುಹಾ ಹೇಳಿದ್ದಾರೆ.

  ಸಿಲಿಗುರಿ ಚರ್ಚ್ ರಸ್ತೆಯಲ್ಲಿರುವ ಹೊಟೇಲ್

  ಸಿಲಿಗುರಿ ಚರ್ಚ್ ರಸ್ತೆಯಲ್ಲಿರುವ ಹೊಟೇಲ್

  ದಕ್ಷಿಣ ಕೋಲ್ಕತ್ತಾದ ಸಿಲಿಗುರಿ ಚರ್ಚ್ ರಸ್ತೆಯಲ್ಲಿರುವ ಹೊಟೇಲ್ ನಲ್ಲಿ ಮಂಗಳವಾರದಂದು ರೂಮ್ ಪಡೆದಿದ್ದ ಪಾಯಲ್ ಅವರು ಗುರುವಾರಂದು ರೂಮ್ ಖಾಲಿ ಮಾಡುವುದಾಗಿ ಹೇಳಿದ್ದರು. ರೂಮಿನೊಳಗೆ ಹೋದ ಬಳಿಕ ರೂಮ್ ಸರ್ವೀಸ್ ಗೆ ಕರೆ ಮಾಡಿರಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

  ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನೃತ್ಯ ಕಲಾವಿದ ಅಭಿಜಿತ್ ಶಿಂಧೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನೃತ್ಯ ಕಲಾವಿದ ಅಭಿಜಿತ್ ಶಿಂಧೆ

  ಗುರುವಾರದಂದು ಚೆಕ್ ಔಟ್ ಆಗಬೇಕಿತ್ತು

  ಗುರುವಾರದಂದು ಚೆಕ್ ಔಟ್ ಆಗಬೇಕಿತ್ತು

  ಬುಧವಾರ ಸಂಜೆ ವೇಳೆಗೆ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದು, ಬಾಗಿಲು ಬಡಿದು ನೋಡಿದಾಗ, ಪಾಯಲ್ ಅವರು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಗುರುವಾರದಂದು ಹೋಟೆಲ್ ನಿಂದ ಚೆಕ್ ಔಟ್ ಆಗುವುದಾಗಿ ತಿಳಿಸಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದೆ ಎಂದು ಸಿಲಿಗುರಿ ಪೊಲೀಸರು ಹೇಳಿದ್ದಾರೆ.

  ರಮ್ಯಾ ಕೃಷ್ಣ ಜೊತೆ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕಾ ಆತ್ಮಹತ್ಯೆ ರಮ್ಯಾ ಕೃಷ್ಣ ಜೊತೆ ಅಭಿನಯಿಸುತ್ತಿದ್ದ ನಟಿ ಪ್ರಿಯಾಂಕಾ ಆತ್ಮಹತ್ಯೆ

  ಸೆ. 14ಕ್ಕೆ ಹೊಸ ಚಿತ್ರದ ರಿಲೀಸ್ ನಿಗದಿಯಾಗಿದೆ

  ಸೆ. 14ಕ್ಕೆ ಹೊಸ ಚಿತ್ರದ ರಿಲೀಸ್ ನಿಗದಿಯಾಗಿದೆ

  36 ವರ್ಷ ವಯಸ್ಸಿನ ಪಾಯಲ್ ಅವರು 'ಎಕ್ ಮಶೇರ್ ಸಾಹಿತ್ಯಾ' 'ಚೋಕರ್ ತರಾ ತುಯಿ', 'ಗೋಯೆಂಡಾ ಗಿನ್ನಿ' ಮುಂತಾದ ಟೆಲಿವಿಷನ್ ಸರಣಿಗಳು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸೆಪ್ಟೆಂಬರ್ 14ಕ್ಕೆ ಅವರ ಹೊಸ ಚಿತ್ರ ಕೇಲೋ ತೆರೆಗೆ ಬರಲು ಸಿದ್ಧವಾಗಿದೆ.

  ವಿವಾಹ ವಿಚ್ಛೇದನವೇ ಕಾರಣವಾಯಿತೆ?

  ವಿವಾಹ ವಿಚ್ಛೇದನವೇ ಕಾರಣವಾಯಿತೆ?

  ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಪಾಯಲ್ ಅವರು ತಮ್ಮ 2 ವರ್ಷ ವಯಸ್ಸಿನ ಮಗನ ಜೊತೆ ತಂದೆ ಮನೆಯಲ್ಲಿ ವಾಸವಿದ್ದರು. ಮಾನಸಿಕ ಖಿನ್ನತೆಯಿಂದ ಮನೆಯವರಿಗೆ ಹೇಳದೆ ಸಿಲಿಗುರಿಗೆ ಬಂದಿದ್ದರು. ಅವರ ಸಾವಿನ ಕಾರಣ ಹಾಗೂ ಇನ್ನಿತರ ವಿವರಗಳು ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ ಸಿಲಿಗುರಿ ಡಿಸಿಪಿ ಗೌರಬ್ ಲಾಲ್ ಹೇಳಿದ್ದಾರೆ.

  English summary
  Bengali actress Payel Chakraborty was on Wednesday evening found dead in a hotel room in West Bengal's Siliguri. Chakraborty's father Prabir Guha has stated that she was suffering from mental stress. Primafacie police believe it is a case of suicide, reported DNA.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X