»   » 'ಬಿಗ್ ಬಾಸ್' ವೀಕೆಂಡ್ ಸ್ಪೆಷಲ್ ನಲ್ಲಿ ನೀವೂ ಭಾಗವಹಿಸಬಹುದು.!

'ಬಿಗ್ ಬಾಸ್' ವೀಕೆಂಡ್ ಸ್ಪೆಷಲ್ ನಲ್ಲಿ ನೀವೂ ಭಾಗವಹಿಸಬಹುದು.!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಶುರುವಾಗುವುದಕ್ಕೆ ನಾಲ್ಕು ದಿನಗಳಷ್ಟೇ ಬಾಕಿ. ಎಂದಿನಂತೆ ಕಿಚ್ಚ ಸುದೀಪ್ ಈ ಬಾರಿಯೂ ನಿಮ್ಮೆಲ್ಲರನ್ನ ರಂಜಿಸುವುದಕ್ಕೆ ಉತ್ಸುಕರಾಗಿದ್ದಾರೆ.

'ಬಿಗ್ ಬಾಸ್' ಕಣ್ತುಂಬಿಕೊಳ್ಳುವುದಕ್ಕೆ ಮುಂದಿನ ವಾರದಿಂದ ಪ್ರತಿ ರಾತ್ರಿ 9 ಗಂಟೆಗೆ ನೀವು ಟಿವಿ ಮುಂದೆ ಹಾಜರಾಗ್ತೀರಾ. ಮನೆಯಲ್ಲಿ ನಡೆಯುವ ಗದ್ದಲ, ಗಲಾಟೆ, ತಮಾಷೆಯನ್ನ ನೋಡಿ ಮಜಾ ಮಾಡ್ತೀರಾ. ಇದರೊಂದಿಗೆ 'ಬಿಗ್ ಬಾಸ್-3' ಮೂಲಕ ನಿಮಗೆಲ್ಲರಿಗೊಂದು ಸರ್ಪ್ರೈಸ್ ಕಾದಿದೆ. [ಮನೆ ಒಳಗಡೆ ಕಿಚ್ಚು, ಹೊರಗಡೆ ನಿಮ್ಮ ಕಿಚ್ಚ]

Bengaluru Audience can take part in 'Bigg Boss-3' weekend episodes

ಶನಿವಾರ ಮತ್ತು ಭಾನುವಾರ ಬಂತೂಂದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಿಂಚ್ತಾರೆ. ಇದುವರೆಗಿನ ಎರಡು ಸೀಸನ್ ಗಳ ಸುದೀಪ್ ವೀಕೆಂಡ್ ಸ್ಪೆಷಲ್ ಎಪಿಸೋಡ್ ಗಳನ್ನ ನೀವು ಟಿವಿಯಲ್ಲಿ ಮಾತ್ರ ನೋಡ್ತಿದ್ರಿ. ಈಗ 'ಬಿಗ್ ಬಾಸ್-3' ನಲ್ಲಿ ಅದೇ ವೀಕೆಂಡ್ ಸ್ಪೆಷಲ್ ಎಪಿಸೋಡ್ ಗಳನ್ನು LIVE ಆಗಿ ನೋಡುವ ಅವಕಾಶವನ್ನು ನಿಮಗೆಲ್ಲರಿಗೂ ಕಲರ್ಸ್ ಕನ್ನಡ ವಾಹಿನಿ ಕಲ್ಪಿಸಿದೆ. [ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]

ಈಗಾಗಲೇ ನಿಮಗೆ ಗೊತ್ತಿರುವ ಹಾಗೆ, ಈ ಬಾರಿ ಕನ್ನಡದ 'ಬಿಗ್ ಬಾಸ್' ಬೆಂಗಳೂರಿನಲ್ಲೇ ನಡೆಯಲಿದೆ. ಬಿಡದಿ ಬಳಿಯ ಇನೊವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್' ಮನೆ ನಿರ್ಮಿಸಲಾಗಿದೆ. ಅದರೊಂದಿಗೆ ಕಿಚ್ಚನ ಕಿಚ್ಚಿನ ಕಾರ್ಯಕ್ರಮಕ್ಕಾಗಿ ಸ್ಪೆಷಲ್ ವೇದಿಕೆ ಕೂಡ ರೆಡಿಯಾಗಿದೆ. ಅದಕ್ಕೆ ನಿಮಗೂ ಸ್ವಾಗತ ಇದೆ. ['ನನ್ನ ಮದುವೆ ಆಗಿ' ಅಂತ ಸುದೀಪ್ ಬಹಿರಂಗವಾಗಿ ಕೇಳಿದ್ದು ಯಾರಿಗೆ?]

Bengaluru Audience can take part in 'Bigg Boss-3' weekend episodes

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮವನ್ನ LIVE ಆಗಿ ನೋಡಿ, ಭಾಗವಹಿಸಲು ಬಯಸುವವರು ನೇರವಾಗಿ ಇನೊವೇಟಿವ್ ಫಿಲ್ಮ್ ಸಿಟಿಗೆ ತೆರಳಬಹುದು. [ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ]

ಶೂಟಿಂಗ್ ಯಾವಾಗ ಅಂತ ವಾಹಿನಿ ಮಾಹಿತಿ ನೀಡಿದ ನಂತರ ಶೂಟಿಂಗ್ ಜಾಗಕ್ಕೆ ನೀವು ಹಾಜರಾಗಬಹುದು. ಇದಕ್ಕೆ ಯಾವುದೇ ಪಾಸ್ ಆಗಲಿ, ಅಥವಾ ಟಿಕೆಟ್ ಆಗಲಿ ಇರುವುದಿಲ್ಲ ಅಂತ ಎಂಡೆಮಾಲ್ ಶೈನ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ಅಭಿಶೇಕ್ ರೇಗೆ ತಿಳಿಸಿದರು. ಹೀಗಾಗಿ ಫ್ರೀ ಆಗಿ, ಎಲ್ಲರಿಗಿಂತ ಮೊದಲು 'ವಾರದ ಕಥೆ'ಯನ್ನ ಕಿಚ್ಚನ ಜೊತೆ ನೀವು LIVE ಆಗಿ ವೀಕ್ಷಿಸಬಹುದು. 'ಬಿಗ್ ಬಾಸ್' ಪ್ರಿಯರಿಗೆ ಇದಕ್ಕಿಂತ ಗುಡ್ ನ್ಯೂಸ್ ಬೇಕಾ..?

English summary
Since Bigg Boss Kannada-3 house is shifted from Poona to Bengaluru, Colours Kannada Channel have made the option open for the audience from Bengaluru to visit the shooting spot and watch the Weekend episodes of Sudeep live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada