»   » 'ಬೆಣ್ಣೆ ದೋಸೆ' ಸೆಟ್ ನಲ್ಲಿ ಮತ್ತೆ ನೆನಪಾದ 'ಮಾನಸ ಸರೋವರ'

'ಬೆಣ್ಣೆ ದೋಸೆ' ಸೆಟ್ ನಲ್ಲಿ ಮತ್ತೆ ನೆನಪಾದ 'ಮಾನಸ ಸರೋವರ'

Posted By:
Subscribe to Filmibeat Kannada

''ನೀನೇ...ಸಾಕಿದ ಗಿಣಿ....'' ಹಾಡು ಕೇಳಿದ ಕೂಡಲೆ ನಿಮಗೆ ಥಟ್ ಅಂತ ನೆನಪಾಗುವುದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮತ್ತು ನಟ ಪ್ರಣಯರಾಜ ಶ್ರೀನಾಥ್.

ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಾನಸ ಸರೋವರ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿರುವ ಶ್ರೀನಾಥ್ ಈ ವಾರದ 'ಬೆಂಗ್ಳೂರು ಬೆಣ್ಣೆ ದೋಸೆ' ಕಾರ್ಯಕ್ರಮದ ಅತಿಥಿ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

Bengaluru Benne Dose : Actor Srinath Special Episode

ಹದಿಹರೆಯದ ಉತ್ಸಾಹದ ಚಿಲುಮೆಯಂತಿರುವ ಶ್ರೀನಾಥ್ 'ಬೆಂಗ್ಳೂರು ಬೆಣ್ಣೆ ದೋಸೆ' ಸೆಟ್ ಗೆ ಡ್ಯಾನ್ಸ್ ಮೂಲಕ ಪದಾರ್ಪಣೆ ಮಾಡಿ, ತಮ್ಮ ಬಾಲ್ಯ ಜೀವನದ ತುಣುಕುಗಳನ್ನು ಮೆಲುಕು ಹಾಕಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ಭಾಗಿಯಾದ ನಟಿ ಪದ್ಮಾ ವಾಸಂತಿ ಕೂಡ ತಾವು 'ಮಾನಸ ಸರೋವರ' ಚಿತ್ರಕ್ಕೆ ಆಯ್ಕೆಯಾದ ರೀತಿಯನ್ನು ವಿವರಿಸಿದ್ದಾರೆ. ['ಬೆಣ್ಣೆ ದೋಸೆ' ಸೆಟ್ ನಲ್ಲಿ ರಮ್ಯಾ ಹುಟ್ಟುಹಬ್ಬ ಸಂಭ್ರಮ]

Bengaluru Benne Dose : Actor Srinath Special Episode

ಪ್ರಣಯ ರಾಜ ಶ್ರೀನಾಥ್ ಜೊತೆ 'ಬೆಂಗ್ಳೂರು ಬೆಣ್ಣೆ ದೋಸೆ' ಇದೇ ಭಾನುವಾರ ರಾತ್ರಿ 9 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Actor Srinath and Kannada Actress Padma Vasanthi has taken part in Suvarna Channel's comedy show 'Bengaluru Benne Dose'. Watch the episode on January 10th 9pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada