For Quick Alerts
  ALLOW NOTIFICATIONS  
  For Daily Alerts

  ಗೆಳತಿಯರೊಂದಿಗೆ 'ಬೆಣ್ಣೆ ದೋಸೆ' ತಿಂದ 'ಬೇಬಿ ಡಾಲ್' ಅಮೂಲ್ಯ

  By Super Admin
  |

  'ಮಾದೇಸ', ಏನೋ?, ಯಾಕೆ? ಅಂತ ಕ್ಯೂಟ್ ಕ್ಯೂಟ್ ಆಗಿ ಬಬ್ಲಿ ಬಬ್ಲಿ ಆಗಿ ತೆರೆ ಮೇಲೆ ಅಮೂಲ್ಯ ಅವರು ಮಾತನಾಡುತ್ತಿದ್ದರೆ ಅವರ ನಟನೆಗೆ ಮಾರು ಹೋಗದವರು ಯಾರೂ ಇಲ್ಲ.

  ಚಿಕ್ಕಂದಿನಿಂದಲೇ ಜನ-ಮನ ಗೆದ್ದ ಸಣ್ಣ ವಯಸ್ಸಿನ ನಟಿ ಅಮೂಲ್ಯ ಅವರು 'ಚೆಲುವಿನ ಚಿತ್ತಾರ', 'ಚೈತ್ರದ ಚಂದ್ರಮ', 'ಖುಷಿ ಖುಷಿಯಾಗಿ', 'ಶ್ರಾವಣಿ ಸುಬ್ರಮಣ್ಯ', 'ಗಜಕೇಸರಿ', 'ರಾಮ್ ಲೀಲಾ', 'ಮಳೆ' ಮುಂತಾದ ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿ ಮತ್ತು 'ಚಿನ್ನದ ಹುಡುಗಿ' ಎನಿಸಿಕೊಂಡಿದ್ದಾರೆ.[ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?]

  ಇನ್ನು ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ಗಂಡುಬೀರಿಯಂತೆ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ಮನ ಗೆದ್ದಿರುವ ನಟಿ ಅಮೂಲ್ಯ ಅವರು ಈ ವಾರ 'ಬೆಂಗಳೂರು ಬೆಣ್ಣೆ ದೋಸೆ'ಯ 15ನೇ ಎಪಿಸೋಡ್ ನ ಸ್ಪೆಷಲ್ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.[ಶಿವರಾಜ್ ಕುಮಾರ್ ತಂಗಿಯಾಗಿ ಗೋಲ್ಡನ್ ಕ್ವೀನ್ ಅಮೂಲ್ಯ?]

  ಈ ವಾರದ ಬೆಣ್ಣೆ ದೋಸೆ ಸಂಚಿಕೆಗೆ ನಟಿ ಅಮೂಲ್ಯ ಅವರು ತಮ್ಮ ಕಾಲೇಜು ಗೆಳತಿಯರನ್ನು ಕರೆದುಕೊಂಡು ಬಂದು ಕೇರಂ, ವಾಲಿಬಾಲ್ ಆಡಿ, ಕರಾಟೆ ಸ್ಟಂಟ್ ಮಾಡಿ, ಭರತನಾಟ್ಯ ಮಾಡಿ ವೀಕ್ಷಕರಿಗೆ ಸಾಕಷ್ಟು ಮನೋರಂಜನೆಯನ್ನು ನೀಡಲಿದ್ದಾರೆ.[ಗೋಲ್ಡನ್ ಕ್ವೀನ್ ಮದುವೆಗೆ ನೀವೂ ಬರ್ತಿರಾ ಅಲ್ವಾ?]

  ಅಮೂಲ್ಯ ಮತ್ತು ಅವರ ಕಾಲೇಜು ಗೆಳತಿಯರು ಇದೇ ಭಾನುವಾರ (ಜನವರಿ 17) ರಾತ್ರಿ 9 ಘಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಬೆಂಗಳೂರು ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲಿ ಯಾವ ರೀತಿ ಮೋಜು-ಮಸ್ತಿ ಮಾಡಿದರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  ಅರುಣ್ ಸಾಗರ್ ಗೆ ಭರತನಾಟ್ಯ ಕಲಿಸಿದ ಅಮೂಲ್ಯ

  ಅರುಣ್ ಸಾಗರ್ ಗೆ ಭರತನಾಟ್ಯ ಕಲಿಸಿದ ಅಮೂಲ್ಯ

  ನಟನೆಯ ಜೊತೆಗೆ ನೃತ್ಯದಲ್ಲೂ ಪಳಗಿರುವ ನಟಿ ಅಮೂಲ್ಯ ಅವರು ಬೆಣ್ಣೆ ದೋಸೆ ವೇದಿಕೆಯಲ್ಲಿ ನಟ ಕಮ್ ನಿರೂಪಕ ಅರುಣ್ ಸಾಗರ್ ಅವರಿಗೆ ಭರತನಾಟ್ಯವನ್ನು ಹೇಳಿಕೊಟ್ಟರು.

  ಗೆಳತಿ ವೈಷ್ಣವಿ (ಸನ್ನಿಧಿ) ಜೊತೆ ಅಮೂಲ್ಯ

  ಗೆಳತಿ ವೈಷ್ಣವಿ (ಸನ್ನಿಧಿ) ಜೊತೆ ಅಮೂಲ್ಯ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಅಗ್ನಿ ಸಾಕ್ಷಿ' ಧಾರಾವಾಹಿ ಖ್ಯಾತಿಯ ನಟಿ ಸನ್ನಿಧಿ (ವೈಷ್ಣವಿ) ಮತ್ತು ನಟಿ ಅಮೂಲ್ಯ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಒಟ್ಟಾಗಿ ಓದಿದ್ದು, ಮಾತ್ರವಲ್ಲದೇ ಇವರಿಬ್ಬರೂ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತೆಯರು. ಕಿರುತೆರೆ ನಟಿ ಸನ್ನಿಧಿ ಜೊತೆ ನಟಿ ಅಮೂಲ್ಯ ಅವರು ಬೆಣ್ಣೆ ದೋಸೆ ವೇದಿಕೆಯಲ್ಲಿ ಮಸ್ತ್ ಮಜಾ ಮಾಡಿದರು.

  ವಾಲಿಬಾಲ್ ಆಡಿದ ಅಮೂಲ್ಯ

  ವಾಲಿಬಾಲ್ ಆಡಿದ ಅಮೂಲ್ಯ

  ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್ ಪಟು ಆಗಿದ್ದ ನಟಿ ಅಮೂಲ್ಯ ಅವರು ನಟ ಅರುಣ್ ಸಾಗರ್ ಅವರ ನೇತೃತ್ವದಲ್ಲಿ 'ಬೆಣ್ಣೆ ದೋಸೆ' ವೇದಿಕೆಯಲ್ಲಿ ವಾಲಿಬಾಲ್ ಆಡಿ ವೀಕ್ಷಕರನ್ನು ನಕ್ಕು ನಗಿಸಿದರು.

  ಕರಾಟೆ ಪಟು ಅಮ್ಮು

  ಕರಾಟೆ ಪಟು ಅಮ್ಮು

  ಇನ್ನು ನಟನೆ, ನೃತ್ಯ, ಆಟೋಟದ ಜೊತೆಗೆ ಅಮೂಲ್ಯ ಅವರಲ್ಲಿ ಮತ್ತೊಂದು ಕಲೆ ಇದೆ ಅದುವೇ ಕರಾಟೆ. ಹೌದು ನಟಿ ಅಮೂಲ್ಯ ಅವರು ಕರಾಟೆ ಪಟು ಆಗಿದ್ದು, ಬೆಣ್ಣೆ ದೋಸೆ ಸೆಟ್ ನಲ್ಲಿ ನಟಿ ಅಮೂಲ್ಯ ಅವರ ಕರಾಟೆ ಕಲೆ ಅನಾವರಣಗೊಂಡಿತು. ಚಿತ್ರದಲ್ಲಿ ಅಮೂಲ್ಯ ಅವರಿಗೆ ಹುರಿದುಂಬಿಸುತ್ತಿರುವ ಅರುಣ್ ಸಾಗರ್.

  ಕೇರಂ ಆಡಿದ ಅಮೂಲ್ಯ

  ಕೇರಂ ಆಡಿದ ಅಮೂಲ್ಯ

  ನಟಿ ಅಮೂಲ್ಯ ಅವರು ನಿರೂಪಕ ಅರುಣ್ ಸಾಗರ್ ಮತ್ತು ತಮ್ಮ ಗೆಳತಿಯರ ಜೊತೆಗೂಡಿ 'ಬೆಣ್ಣೆ ದೋಸೆ' ವೇದಿಕೆಯಲ್ಲಿ ಕೇರಂ ಆಡಿ ವೀಕ್ಷಕರನ್ನು ರಂಜಿಸಿದರು.

  ಅಣ್ಣ-ಅತ್ತಿಗೆಯರೊಂದಿಗೆ ಅಮೂಲ್ಯ

  ಅಣ್ಣ-ಅತ್ತಿಗೆಯರೊಂದಿಗೆ ಅಮೂಲ್ಯ

  ನಟಿ ಅಮೂಲ್ಯ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾಯಿ ಮತ್ತು ಸಹೋದರ ಅಮ್ಮು ಬಗ್ಗೆ ಹಂಚಿಕೊಂಡರು. ಅಮೂಲ್ಯ ಅವರು ಮನೆಯಲ್ಲಿ ಸಣ್ಣ ಹುಡುಗಿಯಂತೆ ಇರುತ್ತಾರೆ. ನಾಯಕಿಯಾದ ಮೇಲೆ ಗುಣದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಂಡಿಲ್ಲ. ನನ್ನ ಜೊತೆ ಯಾವಾಗಲೂ ತಮಾಷೆ ಮಾಡುತ್ತಾ ಇರುತ್ತಾಳೆ ಎಂದು ಸಹೋದರ ನುಡಿದರು. 'ಸಣ್ಣ ವಯಸ್ಸಿನಲ್ಲಿಯೇ ಇಷ್ಟು ಬೇಗ ನಾಡಿನ ಜನತೆಯ ಪ್ರೀತಿಗೆ ಪಾತ್ರಳಾಗುತ್ತಾಳೆ ಎಂದರೆ ನಮಗೆ ಹೆಮ್ಮೆಯ ವಿಷಯ. ಅವಳ ಕಾರ್ಯ ಸಾಧನೆಗೆ ನಮ್ಮ ಕುಟುಂಬದ ಪ್ರೋತ್ಸಾಹ ಮತ್ತು ಬೆಂಬಲವಿದೆ ಎಂದು ತಾಯಿ ನುಡಿದರು.

  ಚಿನ್ನದ ಹುಡುಗನನ ಜೊತೆ ಚಿನ್ನದ ಹುಡುಗಿ

  ಚಿನ್ನದ ಹುಡುಗನನ ಜೊತೆ ಚಿನ್ನದ ಹುಡುಗಿ

  ಇನ್ನು ನಟಿ ಬೆಣ್ಣೆ ದೋಸೆ ವೇದಿಕೆಯಲ್ಲಿರುವ ಸಮಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಫೋನ್ ಕರೆ ಮಾಡುವ ಮೂಲಕ ಮಾತನಾಡಿ, ಅಮೂಲ್ಯ ಅವರ ಜೊತೆ ಮೊದಲ ಚಿತ್ರದಿಂದ ಇಲ್ಲಿಯವರೆಗೂ ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಅವರ ಮುಂದಿನ ಎಲ್ಲಾ ಚಿತ್ರಗಳು ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.

  English summary
  Kannada Actress Amoolya has taken part in Suvarna Channel's comedy show 'Bengaluru Benne Dose'. Watch the 15th episode on January 17th Sunday at 9pm..
  Friday, February 3, 2017, 15:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X