For Quick Alerts
  ALLOW NOTIFICATIONS  
  For Daily Alerts

  'ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಲ್ಲ' ಎಂದು ಚಿತ್ರವನ್ನೇ ಕ್ಯಾನ್ಸಲ್ ಮಾಡಿದ್ರಂತೆ ಭಾರತಿ.!

  By Harshitha
  |

  ಅಪ್ರತಿಮ ಚೆಲುವೆ.. ಅದ್ಭುತ ಅಭಿನಯ.. ಅಪೂರ್ವ ಗುಣಗಳ ಸಾಕಾರದಂತಿದ್ದ ನಟಿ ಭಾರತಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಜನಮನಗೆದ್ದರು. ಚಿನ್ನದಂಥ ನಟಿ ಭಾರತಿ, ಗುಣದಲ್ಲೂ ಅಪ್ಪಟ ಚಿನ್ನ.

  ನೋಡಲು ದಂತದ ಗೊಂಬೆಯಂತಿದ್ದ ಭಾರತಿಗೆ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿದ್ದ ಕಾಲವದು. ಆಗ ನಟಿ ಭಾರತಿ ''ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಲ್ಲ'' ಎಂದು ಒಂದು ಚಿತ್ರವನ್ನೇ ಕ್ಯಾನ್ಸಲ್ ಮಾಡಿದ್ರಂತೆ. ['ಸಂಧ್ಯಾರಾಗ'ದಲ್ಲಿ ಅರಳಿದ ಭಾರತಿ ಬಗ್ಗೆ ಎಸ್.ಕೆ.ಭಗವಾನ್ ನೆನಪಿಸಿಕೊಂಡಿದ್ದೇನು?]

  'ಸಂಧ್ಯಾರಾಗ' ಚಿತ್ರದಲ್ಲಿ ನಿರ್ದೇಶಕ ದೊರೈ-ಭಗವಾನ್ ಜೊತೆ ಕೆಲಸ ಮಾಡಿದ್ದ ನಟಿ ಭಾರತಿಗೆ, ಅದೇ ಭಗವಾನ್ ರವರಿಂದ ಮತ್ತೊಂದು ಚಿತ್ರಕ್ಕೆ ಚಾನ್ಸ್ ಸಿಕ್ತಂತೆ. ಆ ಸಿನಿಮಾದಲ್ಲಿ ಭಾರತಿ ಸ್ವಿಮ್ಮಿಂಗ್ ಕಾಸ್ಟ್ಯೂಮ್ ತೊಡಬೇಕಿತ್ತಂತೆ. ಇದರಿಂದ ಕೋಪಗೊಂಡ ಭಾರತಿ ಆ ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ. ಈ ಸಂಗತಿ ಬೆಳಕಿಗೆ ಬಂದಿದ್ದು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ.!

  ''ಭಗವಾನ್ ಸ್ವಲ್ಪ ಸೆಲ್ಫಿಶ್. ಕಾದಂಬರಿ ಆಧಾರಿತ ಚಿತ್ರಗಳಿಗೆಲ್ಲ ಬೇರೆಯವರ ಕಡೆ ಹೋಗೋರು. ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಿಕೊಳ್ಳುವುದಕ್ಕೆ ನಾನು ಬೇಕಾಗಿತ್ತು. ಅದಕ್ಕೆ ''ಮಾಡಲ್ಲ ಹೋಗ್ರಿ'' ಎಂದಿದ್ದೆ. ಬರೀ ಗ್ಲಾಮರ್ ಗೆ ಮಾತ್ರ ನಾನು ಬೇಕು. ಇವರ ಮೇಲಿನ ಈ ಕೋಪಕ್ಕೆ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಲ್ಲ ಅಂತ ಒಂದು ಸಿನಿಮಾ ಕ್ಯಾನ್ಸಲ್ ಮಾಡಿಬಿಟ್ಟೆ'' ಎಂದರು ನಟಿ ಭಾರತಿ ವಿಷ್ಣುವರ್ಧನ್.[ನಟಿ ಭಾರತಿ ವಿಷ್ಣುವರ್ಧನ್ ರವರಿಗೆ ನನಸಾಗದ ಒಲಿಂಪಿಕ್ಸ್ ಕನಸು]

  ಇದಕ್ಕೆ ಪ್ರತಿಕ್ರಿಯೆ ನೀಡಿದ ಭಗವಾನ್, ''ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಿ ಅಂತ ಕೇಳಲು ನಮಗೆ ಧೈರ್ಯವೇ ಬರಲಿಲ್ಲ. ಯಾಕಂದ್ರೆ, 'ಸಂಧ್ಯಾರಾಗ' ಚಿತ್ರದಲ್ಲಿ ಗೃಹಿಣಿಯ ಪಾತ್ರ ಮಾಡಿ ಆಮೇಲೆ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕೊಂಡು ಬನ್ನಿ ಅಂದ್ರೆ ಏನು ಚೆನ್ನಾಗಿರುತ್ತೆ'' ಎಂದರು.

  ಗ್ಲಾಮರ್ ಕ್ಕಿಂತ ಅಭಿನಯಕ್ಕೆ ಹೆಚ್ಚು ಒತ್ತು ಕೊಟ್ಟ ಭಾರತಿ ವಿಷ್ಣುವರ್ಧನ್ ತಮ್ಮ ಸಿನಿ ಜರ್ನಿಯಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ ಅಂದ್ರೆ ಅದು ದೊಡ್ಡ ಸಾಧನೆಯೇ ಸರಿ.

  English summary
  Bharathi Vishnuvardhan had once rejected an offer because of Swimming Costume.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X