For Quick Alerts
ALLOW NOTIFICATIONS  
For Daily Alerts

  ಅರ್ಮಾನ್ ಗೆ ಕೊಳೆತ ಮೊಟ್ಟೆ ಎಸೆದು ಸ್ವಾಗತ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ 'ಬಿಗ್ ಬಾಸ್ 7' ರಿಯಾಲಿಟಿ ಶೋನಲ್ಲಿ ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ಮೇಲೆ ಹಲ್ಲೆ ಮಾಡಿದ ಆರೋಪದ ಹೊತ್ತು ಬಂಧನಕ್ಕೊಳಗಾಗಿದ್ದ ನಟ ಅರ್ಮಾನ್ ಕೊಹ್ಲಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಮುಂದಾದ ಅರ್ಮಾನ್ ಮೇಲೆ ಕೊಳೆತ ಮೊಟ್ಟೆ, ಟೊಮ್ಯಾಟೋ ಗಳನ್ನು ಎಸೆದು ಪ್ರತಿಭಟಿಸಲಾಗಿದೆ.

  ಮಹಿಳೆಯರ ವಿರುದ್ಧ ಅವಾಚ್ಯ ಶಬ್ದ ಬಳಸುವ, ಮಹಿಳೆಯರನ್ನು ಕೀಳಾಗಿ ಕಾಣುವ ಹಲ್ಲೆ ಮಾಡುವ ಅರ್ಮಾನ್ ಗೆ ಧಿಕ್ಕಾರ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆ ನಡೆಸಿದೆ.

  ಲೋನಾವಾಲಾ ಪೊಲೀಸರು ಸೋಮವಾರ ಡಿ.16 ರಾತ್ರಿ ಬಂಧಿಸಿದ್ದರು. ವಡಗಾಂವ್ ಮಾವಲ್ ನ್ಯಾಯಾಲಯಕ್ಕೆ ಅರ್ಮಾನ್ ಅವರನ್ನು ಹಾಜರುಪಡಿಸಲಾಗಿತ್ತು. ಕೊಹ್ಲಿಗೆ ಇಬ್ಬರು ಶ್ಯೂರಿಟಿ ಹಾಗೂ 50 ಸಾವಿರ ರು ಪಾವತಿಸಿದ ಮೇಲೆ ನ್ಯಾಯಾಲಯ ಜಾಮೀನು ನೀಡಿದೆ. ಅರ್ಮಾನ್ ಕೊಹ್ಲಿ ತಂದೆ ರಾಜಕುಮಾರ್ ಕೊಹ್ಲಿ ಹಾಗೂ ಅರ್ಮಾನ್ ಆಪ್ತ ಗೆಳೆಯನೊಬ್ಬ ಶ್ಯೂರಿಟಿಗೆ ಸಹಿ ಹಾಕಿ ಮತ್ತೊಮ್ಮೆ ಈ ರೀತಿ ಘಟನೆ ನಡೆದುಕೊಳ್ಳದಂತೆ ಅರ್ಮಾನ್ ತಿಳಿ ಹೇಳಲಾಗಿದೆ ಎಂದಿದ್ದಾರೆ.

  ಭಾರತೀಯ ದಂಡ ಸಂಹಿತೆ 324, 509, 506 ಮತ್ತು 504ರ ಅಡಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಅರ್ಮಾನ್ ರನ್ನು ಬಂಧಿಸಿದ್ದಾರೆ. ಕಳೆದ ವಾರವೇ ತನ್ನ ಮೇಲೆ ಅರ್ಮಾನ್ ದೈಹಿಕವಾಗಿ ಹಲ್ಲೆ ಮಾಡಿರುವುದಾಗಿ ಮುಂಬೈನ ಸಾಂತಾಕ್ರೂಜ್ ಪೊಲೀಸರಿಗೆ ಸೋಫಿಯಾ ದೂರು ನೀಡಿದ್ದಳು.

  ಡಿಸೆಂಬರ್ 4ರಂದು ಲೋನಾವಾಲಾದಲ್ಲಿರುವ 'ಬಿಗ್ ಬಾಸ್' ಮನೆಯಲ್ಲಿ ಅರ್ಮಾನ್ ತನ್ನ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ. ಅದರ ಜೊತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದೂ ಸೋಫಿಯಾ ದೂರಿನಲ್ಲಿ ತಿಳಿಸಿದ್ದಳು. ಡಿ.10 ರಂದು ಸೋಫಿಯಾ ಮನೆಯಿಂದ ಹೊರಬಿದ್ದ ಮರುದಿನವೇ ಅರ್ಮಾನ್ ಮೇಲೆ ದೂರು ದಾಖಲಿಸಿದ್ದಳು.

  ಶ್ರೀಮಂತ ಮಕ್ಕಳಿಗೆ ಮಾಮೂಲು

  ಹಲ್ಲೆ ನಡೆಸಿ ಬಂಧನಕ್ಕೊಳಪಟ್ಟರು ಶ್ರೀಮಂತ ಮನೆತನದ ಮಕ್ಕಳಿಗೆ ಪೊಲೀಸರ ಹಿಡಿತದಿಂದ ಹೊರ ಬರುವುದು ಕಷ್ಟವೇನಲ್ಲ. ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳನ್ನು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಬೇಕು ಎಂದು ಮಹಿಳಾ ಸಂಘಟನೆಗಳು ದೂರಿವೆ.

  ಮಹಿಳೆ ಮೇಲೆ ಹಲ್ಲೆ ಮಾಡಿದ ಸ್ಪರ್ಧಿಯನ್ನು ಮತ್ತೆ ಸೇರಿಸಿಕೊಂಡಿರುವ ಕಲರ್ಸ್ ವಾಹಿನಿ ಮೇಲೂ ಮಹಿಳಾ ಸಂಘಟನೆಗಳು ಕಿಡಿಕಾರಿವೆ.

  ಮನೆಯಲ್ಲಿ ಹೇಗಿದೆ ಪರಿಸ್ಥಿತಿ

  ಅರ್ಮಾನ್ ಅಚಾನಕ್ ಅಗಿ ಹೊರ ಬಿದ್ದ ನಂತರ ಆಂಡಿ ಜತೆ ಮಾತ್ರ ಹೆಚ್ಚು ಮಾತನಾಡುತ್ತಿರುವ ಅರ್ಮಾನ್ ನ ಸಖಿ ತನೀಶಾಗಂತೂ ತುಂಬಾ ಖುಷಿಯಾಗಿದೆ. ಅರ್ಮಾನ್ ಏನು ಮಾಡಿದರೂ ಸರಿ ಎನ್ನುವ ಹುಚ್ಚು ಆಪ್ತತೆ ಬೆಳೆಸಿಕೊಂಡಿದ್ದಾಳೆ.

  ಸೋಫಿಯಾ ಪರ ವಹಿಸಿಕೊಂಡು ಅರ್ಮಾನ್ ಪರ ಕತ್ತಿ ಮಸೆಯುತ್ತಿದ್ದ ಗೌಹರ್ ಹಾಗೂ ಕುಶಾಲ್ ಜೋಡಿ ಪರಿಸ್ಥಿತಿ ಹೇಗೆ ಎಂಬುದನ್ನು ಈಗಲೇ ವಿವರಿಸಲು ಸಾಧ್ಯವಿಲ್ಲ. ಈ ನಡುವೆ ಕಳೆದ ರಾತ್ರಿ ಸುಖಾ ಸುಮ್ಮನೆ ಕುಶಾಲ್ ಹಾಗೂ ಗೌಹರ್ ಕಿತ್ತಾಡಿಕೊಂಡಿದ್ದಾರೆ.

  ವಿಜೆ ಆಂಡಿಗೆ ಸಹಕಾರಿ

  ಅರ್ಮಾನ್ ಎಲ್ಲರೊಟ್ಟಿಗೆ ಕಿತ್ತಾಡಿಕೊಂಡು ಹೆಸರು ಕೆಡಿಸಿಕೊಂಡಿದ್ದಾನೆ. ಕುಶಾಲ್ ಹಾಗೂ ಗೌಹರ್ ಪ್ರೇಮ ಪ್ರಕರಣ ಹಾಗೂ ಏಜಾಜ್ ಭಗ್ನ ಪ್ರೇಮಿ ಪಾತ್ರ ನಾಟಕ ಎಲ್ಲವೂ ಪ್ರೇಕ್ಷಕರಿಗೆ ಅಷ್ಟಾಗಿ ಹಿಡಿಸುತ್ತಿಲ್ಲ. ಹೀಗಾಗಿ ವಿಜೆ ಆಂಡಿ ಹಾಗೂ ಸಂಗ್ರಾಮ್ ನಡುವೆ ಫೈನಲ್ ಹಣಾಹಣಿಗೆ ಪೈಪೋಟಿ ನಡೆಯುವ ಎಲ್ಲಾ ಸಾಧ್ಯತೆಯಿದೆ.

  ಈ ನಡುವೆ ತನೀಶಾ ಬಗ್ಗೆ ಪ್ರೇಕ್ಷಕರಲ್ಲಿ ಏನೋ ಅನುಕಂಪ, ಪ್ರೀತಿ ಮೊದಲಿನಿಂದಲೂ ಇದ್ದೇ ಇದೆ. ಈ ವಾರದ ಎಪಿಸೋಡುಗಳು ಬಿಗ್ ಬಾಸ್ ವಿಜೇತರನ್ನು ನಿರ್ಧರಿಸಲಿದೆ ಎನ್ನಲಾಗಿದೆ.

  ಮನೆ ಹೊರಗೆ ಸಮರ ಇನ್ನೂ ಜಾರಿ

  ಬ್ರಿಟಿಷ್ ರೂಪದರ್ಶಿ ಕಮ್ ಗಾಯಕಿ ನುಡಿದಂತೆ ನಡೆದಿದ್ದಾಳೆ. ಉಗ್ರ ಪ್ರತಾಪಿ ಕೊಹ್ಲಿ ವಿರುದ್ಧ ದೂರು ನೀಡಿದ್ದಳು. ಇದಕ್ಕೆ ಪ್ರತಿಯಾಗಿ ಕೊಹ್ಲಿ ಸೀನಿಯರ್ ರಾಜಕುಮಾರ್ ಅವರು ಸೋಫಿಯಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

  ಗೌಹರ್ ಖಾನ್ ಹಾಗೂ ಕುಶಾಲ್ ಥಂಡನ್ ಅವರ ಪರವಾಗಿ ನಾನು ಅರ್ಮಾನ್ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಸೋಫಿಯಾ ಹೇಳಿದ್ದಾಳೆ. ಹೀಗಾಗಿ ಮನೆಯಿಂದ ಇವರಿಬ್ಬರು ಹೊರಬಿದ್ದ ಮೇಲೆ ಅರ್ಮಾನ್ ವಿರುದ್ಧ ಸೋಫಿಯಾ ಸಹಾಯ ಹಸ್ತ ಚಾಚುವ ಎಲ್ಲಾ ಲಕ್ಷಣಗಳಿವೆ. ಸದ್ಯಕ್ಕೆ ಅರ್ಮಾನ್ ಬೇಲ್ ಪಡೆದು ಬಿಗ್ ಬಾಸ್ ಮನೆ ಹೊಕ್ಕಿದ್ದಾನೆ.

  ತನೀಶಾ ಕುಟುಂಬದ ಅಳಲು

  ಅರ್ಮಾನ್ ಕೊಹ್ಲಿ ಜತೆ ಸಾಂಗತ್ಯ ಬೆಳೆಸಿಕೊಂಡು ಎಲ್ಲೆ ಮೀರಿ ವರ್ತಿಸುತ್ತಿರುವ ತನೀಶಾಳನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲು ಸಾಧ್ಯವಾಗದ ಅಕ್ಕ ಕಾಜೋಲ್ ಹಾಗೂ ಭಾವ ಅಜಯ್ ದೇವಗನ್ ಅವರು ಬಿಗ್ ಬಾಸ್ ರಿಯಾಲಿಟಿ ಶೋನ ನಿರ್ವಹಣೆ ಹೊತ್ತಿರುವ ವಯಾಕಾಂ 18 ಸಂಸ್ಥೆಗೆ ಬೆದರಿಕೆ ಹಾಕಿದ್ದರು.

  ಆದರೆ, ಅರ್ಮಾನ್ ಹಾಗೂ ತನೀಶಾ ಜೋಡಿಯಿಂದ ಬರುವ ಟಿಆರ್ ಪಿ ತಪ್ಪಿಸಿಕೊಳ್ಳಲು ಇಚ್ಛೆ ಪಡೆದ ಕಲರ್ಸ್ ವಾಹಿನಿ ತಂಡ ವಾರಕ್ಕೆ ಏಳೂವರೆ ಲಕ್ಷ ತೆತ್ತು ತನೀಶಾಳನ್ನು ಉಳಿಸಿಕೊಂಡಿದೆ.

  ಯಾರಿಗೆ ಹೆಚ್ಚು ಸಂಭಾವನೆ

  ಬಿಗ್ ಬಾಸ್ ನಲ್ಲಿ ತನೀಶಾಗೆ ಹೆಚ್ಚು ಸಂಭಾವನೆ, ಎಲ್ಲಿಗೆ ಕಡಿಮೆ ಸಂಭಾವನೆ ಸಿಕ್ಕಿದೆ ತನೀಶಾಗೆ ವಾರಕ್ಕೆ 7.5 ಲಕ್ಷ ರು ನಂತೆ ಸಿಕ್ಕಿದೆ. ಅರ್ಮಾನ್ ಕೊಹ್ಲಿ, ಕುಶಾಲ್ ಗೆ 5 ಲಕ್ಷ ರು, ಗೌಹರ್ ಖಾನ್ ಗೆ 6 ಲಕ್ಷ, ಸಂಗ್ರಾಮ್ ಹಾಗೂ ಆಂಡಿಗೆ 3 ರಿಂದ 3.5 ಲಕ್ಷ ರು ಪ್ರತಿ ವಾರಕ್ಕೆ ಸಿಗುತ್ತಿದೆ. ಪ್ರತ್ಯೂಷಾ ಹಾಗೂ ಕಾಮ್ಯಾಗೆ 3.5 ರಿಂದ 4 ಲಕ್ಷ ರು ತನಕ ಸಿಕ್ಕಿದೆ. ಆದರೆ, ವಿದೇಶಿ ಸ್ಪರ್ಧಿ ಎಲ್ಲಿ ಆವ್ರಾಮ್ ಗೆ ವಾರಕ್ಕೆ ಸಿಕ್ಕಿದ್ದು ಕೇವಲ 1 ಲಕ್ಷ ರು ಮಾತ್ರ.ವಿವೇಕ್, ಏಜಾಜ್ ಹಾಗೂ ಸೋಫಿಯಾಗೂ ಕಡಿಮೆ ಸಂಭಾವನೆ ಸಿಕ್ಕಿದೆ.

  ಬಿಗ್ ಬಾಸ್ ಕಿರಿಕ್ ಗಳು

  ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುವ ಸ್ಪರ್ಧೆಗಳು ಅಮಾನವೀಯವಾಗಿದೆ. ಕುರ್ಚಿಯಲ್ಲಿ ಕುಳಿತು ಎಲೆಕ್ಟ್ರಿಕ್ ಶಾಕ್ ನೀಡುವುದು, ಸಗಣಿಯಲ್ಲಿ ಸ್ನಾನ ಮಾಡುವುದು, 12 ಗಂಟೆ ಕುಳಿತ ಕಡೆ ಕುಳಿತಿರುವ ಶಿಕ್ಷೆ, ಸ್ಪರ್ಧಿಗಳಿಗೆ ವಿಚಿತ್ರ ಕೇಶ ವಿನ್ಯಾಸ ನೀಡುವುದು, ಸ್ಪರ್ಧಿಗಳನ್ನು ಉಪವಾಸ ಕೂರಿಸುವುದು ಇವೆ ಮುಂತಾದ ಶಿಕ್ಷೆಗಳು ಆಕ್ಷೇಪಾರ್ಹ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಲರ್ಸ್ ವಾಹಿನಿಗೆ ಲೀಗಲ್ ನೋಟಿಸ್ ಜಾರಿ ಮಾಡಿತ್ತು

  ಆದರೆ, ಬಿಗ್ ಬಾಸ್ ಕಾರ್ಯಕ್ರಮ 7 ವರ್ಷ ವಯಸ್ಕರಿಂದ 70 ವರ್ಷ ವಯಸ್ಕರು ನೋಡುವಂತೆ ರೂಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, Broadcasting Content Complaints Council ನಿರ್ದೇಶನದಂತೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕುಟುಂಬಸ್ಥರು ಕುಳಿತು ನೋಡುವಂತೆ ಕಾರ್ಯಕ್ರಮವನ್ನು ಕಾಯ್ದುಕೊಳ್ಳಲಾಗಿದೆ ಎಂದು ವಾಹಿನಿ ಹೇಳಿದೆ.

  English summary
  Armaan Kohli is back in the Bigg Boss 7 house after being granted bail against the complaint of physically abusing Sofia Hayat. He was pelted with rotten tomatoes by the women of Rashtrawadi Congress Party.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more