»   » ಬಿಗ್ ಬಾಸ್ : ಎರಡನೇ ದಿನ ಸಾಯಿಬಾಬಾ ಕಿರಿಕ್

ಬಿಗ್ ಬಾಸ್ : ಎರಡನೇ ದಿನ ಸಾಯಿಬಾಬಾ ಕಿರಿಕ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಏನಿದು ಸ್ವರ್ಗ? ಏನಿದು ನರಕ ಎಂದು ತಲೆ ಕೆಡಿಸಿಕೊಂಡಿದ್ದವರಿಗೆ ಈಗ ಎರಡೂ ಕಡೆ ಸ್ಪರ್ಧಿಗಳ ಕಿತ್ತಾಟ, ಪೇಚಾಟ ಎಲ್ಲವೂ ಅರ್ಥವಾಗುತ್ತಿದೆ.

ಪ್ರತ್ಯೂಷಾ ಬ್ಯಾನರ್ಜಿ, ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಹವೆಲ್ ಕೀಚ್, ಅರ್ಮಾನ್, ಕುಶಾಲ್ ತಂಡನ್ ಎಂದಿನಂತೆ ಎರಡನೇ ದಿನವೂ ಸದ್ದು ಮಾಡಿದ್ದಾರೆ.

ಸ್ವೀಡಿಷ್ ಚೆಲುವೆ ಎಲ್ಲಿ ಅವ್ರಾಮ್ ಜತೆ ಸಂಗ್ರಾಮ್ ಸಿಂಗ್ ಮಾತುಕತೆ ಕುತೂಹಲಕಾರಿಯಾಗಿತ್ತು. ನರಕವಾಸಿ ಅಪೂರ್ವ ಅಗ್ನಿಹೋತ್ರಿ ಸ್ವರ್ಗವಾಸಿ ಶಿಲ್ಪಾ ಅಗ್ನಿ ಹೋತ್ರಿ ಪೇಚಾಟ. ಸಂಧಾನಕಾರನಂತೆ ವರ್ತಿಸುತ್ತಿರುವ ವಿಜೆ ಆಂಡಿ, ಎಲ್ಲದ್ದಕೂ ಮೂಕ ಪ್ರೇಕ್ಷಕರಾಗಿರುವ ರಾಜತ್ ರವೈಲ್, ಅನಿತಾ ಅದವ್, ತನಿಶಾ, ರತನ್ ಎಲ್ಲರೂ ಎರಡನೇ ದಿನ ಮೂಲ ಸೌಕರ್ಯ ಕೊರತೆ ಅನುಭವಿಸಿದ್ದು ನಿಜ.

ಸ್ವರ್ಗ, ನರಕಗಳಲ್ಲಿನ ಸ್ಪರ್ಧಿಗಳ ಪೈಕಿ ನಿರೀಕ್ಷೆಯಂತೆ ಎರಡನೇ ದಿನವೂ ನರಕವಾಸಿಗಳ ಸದ್ದು ಗದ್ದಲ ಹೆಚ್ಚಾಗಿತ್ತು. ಪುಟ್ಟಪರ್ತಿ ಸಾಯಿಬಾಬಾ ಭಕ್ತೆ ಪ್ರತ್ಯೂಷಾ ಜತೆ ವಿಜೆ ಆಂಡಿ ನಡುವಿನ ಮಾತುಕತೆ ಅರಚಾಟ ಹಂತ ತಲುಪದೆ ಸುಖಾಂತ್ಯ ಕಂಡಿತು. ಇದರ ಜತೆಗೆ ಪ್ರತ್ಯೂಷಾ ಜಡೆ ಕೂಡಾ ಚಕ್ರಕ್ಕೆ ಸಿಲುಕಿ ಒದ್ದಾಡಿದ ಪ್ರಸಂಗ ನಡೆಯಿತು. ಶಿಲ್ಪಾ, ಗೌಹಾರ್, ಅನಿತಾ ಅಡುಗೆ ಮನೆ ಡ್ಯೂಟಿ ಮಾಡಲು ಗ್ಯಾಸ್ ಸಿಕ್ಕಿರಲಿಲ್ಲ. ನೀರು ಇರಲಿಲ್ಲ ಇನ್ನಷ್ಟು ವಿವರ ಮುಂದೆ ನೋಡಿ

ನೀರಿಲ್ಲ, ಅಡುಗೆ ಅನಿಲ ಇಲ್ಲ

ಎಂದಿನಂತೆ ದಿನ ಆರಂಭವಾದರೂ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ. ಎರಡೂ ಕಡೆ ಇದೇ ದೊಡ್ಡ ಪ್ರಾಬ್ಲಂ ಆಗಿತ್ತು. ನಂತರ ಅಡುಗೆ ಅನಿಲ ಕೂಡಾ ಬಂದ್ ಆಗಿರುವುದು ಕಂಡು ಸ್ಪರ್ಧಿಗಳು ಹೌಹಾರಿದರು.

ಕುಶಾಲ್ ಅಳಿದುಳಿದ ನೀರನ್ನು ಬಕೆಟ್ ಗೆ ಹಾಕಿ ಶೌಚಾಲಯಕ್ಕೆ ನೀರು ಒದಗಿಸಿದ. ಈಜುಕೊಳದ ನೀರು ಬಳಸಿದರೆ ಹೇಗೆ ಎಂದು ಸಂಗ್ರಾಮ್ ಐಡಿಯಾ ನೀಡುತ್ತಿದ್ದಂತೆ ವಾರ್ಡನ್ ಮಾತು ಕೇಳಿ ಬಂತು. ಇದು ಬೇಕೆಂತಲೆ ಮಾಡಿರುವ ಕೃತ್ಯ, ನೀರು ಬೇಕಾದರೆ ವಾಲ್ವ್ ಚಕ್ರ ತಿರುಗಿಸಬೇಕು ಎಂಬ ನಿಯಮ ವಿಧಿಸಲಾಯಿತು.

ಆಹೋರಾತ್ರಿ ಚಕ್ರ ಸುತ್ತಬೇಕು

ನೀರು, ಗ್ಯಾಸ್ ಸಿಗುತ್ತೆ ಎಂದು ಚಕ್ರ ತಿರುಗಿಸಲು ನರಕವಾಸಿ ಕುಶಾಲ್, ಅರ್ಮಾನ್ ಮುಂದಾದರು ,ಆದರೆ ರಾತ್ರಿ ಇಡೀ ಸುತ್ತಬೇಕು ಎಂದಾಗ ನರಕವಾಸಿಗಳಿಗೆ ಕೆಂಡದಂಥ ಕೋಪ ಬಂದಿತ್ತು. ಸ್ವರ್ಗ-ನರಕವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ದಣಿದ ಕೈಗಳನ್ನು ಒಡೆದ ಹಸ್ತಗಳನ್ನು ಮುಂದೆ ಚಾಚಿ ಪರಿಸ್ಥಿತಿ ವಿವರಿಸಿದಾಗ ಸ್ವರ್ಗವಾಸಿಗಳು ಕರುಣಾಜನಕವಾಗಿ ನೋಡಿ ಸುಮ್ಮನಾಗಬೇಕಾಯಿತು.

ಮಾನವೀಯತೆ ಇಲ್ಲ

ಮೊದಲಿಗೆ ಸಿಟ್ಟಿಗೆದ್ದ ಅರ್ಮಾನ್, ಟಾಸ್ಕ್ ಗಳು ಅಮಾನವೀಯವಾಗಿದೆ ಎಂದ ಅದಕ್ಕೆ ಗೌಹರ್, ತನಿಶಾ ದನಿಗೂಡಿಸಿದರು. ಆದರೆ, ತನಿಶಾ ಹೆಚ್ಚು ಮೃದುಧೋರಣೆ ಡೈಲಾಗ್ ಹೊಡೆದರೆ, ಗೌಹರ್ ಪ್ರಾಕ್ಟಿಕಲ್ ಆಗಿ ಯೋಚಿಸಿ ಅಂದಳು.

ಚರ್ಚೆಯಿಂದ ಬೇಸತ್ತ ಪ್ರತ್ಯೂಷಾ, ಅಭಿಪ್ರಾಯಗಳು ಸಾಕಷ್ಟು ಇವೆ ಕೆಲಸ ಮಾಡುವವರು ಯಾರು ಇಲ್ಲ ಎಂದು ಸ್ವರ್ಗವಾಸಿಗಳು ಛೇಡಿಸಿದಳು.

ಸಾಯಿಬಾಬಾ ಕಿರಿಕ್

ಪ್ರತ್ಯೂಷಾ ಬ್ಯಾಗ್ ನಲ್ಲಿದ್ದ ಪುಟ್ಟಪರ್ತಿ ಸಾಯಿಬಾಬಾ ಫೋಟೊ ನೋಡಿ ಕುಶಾಲ್ ನಗುತ್ತಾನೆ. ಇದರಿಂದ ಕೋಪಗೊಂಡ ಪ್ರತ್ಯೂಷಾ ಅವನಿಗೆ ಬೈಯುವಷ್ಟರಲ್ಲಿ ಸ್ವರ್ಗವಾಸಿ ಆಂಡಿ ಎಂಟ್ರಿ.

ಅವರವರ ನಂಬಿಕೆಗಳು ಅವರವರಿಗೆ ಯಾರು ಅದನ್ನು ಪ್ರಶ್ನೆ ಮಾಡಬಾರದು. ನಾನು ಪುಟ್ಟ ಹುಡುಗಿಯಾಗಿದ್ದಾಗಲಿಂದ ಬಾಬಾರನ್ನು ನಂಬುತ್ತಿದ್ದೇನೆ ಸುಮ್ಮನೆ ಕಿಚಾಯಿಸಬೇಡಿ ಎನ್ನುತ್ತಾಳೆ.

ನಂತರ ಸಂಗ್ರಾಮ್ ಬಳಿ ಹೋದ ಆಂಡಿ ನನಗೆ ಪ್ರತ್ಯೂಷಾ ಇಷ್ಟ ಎನ್ನುತ್ತಾನೆ. ಆಶ್ಚರ್ಯ ಪಟ್ಟ ಸಂಗ್ರಾಮ್ ಹೌದಾ ಎಂದರೆ, ಹೂಂ ಆದರೆ, ಯಾವ ರೀತಿ ಅಂಥ ಹೇಳಲಾರೆ, ತುಂಬಾ ಕ್ಯೂಟ್ ಎನ್ನುತ್ತಾನೆ. ಇನ್ನಷ್ಟು ನಿರೀಕ್ಷಿಸಿ

ಸ್ಸಾರಿ ಎಂದ ವಿಜೆ ಆಂಡಿ

ಪ್ರತ್ಯೂಷಾ ಕಿಚಾಯಿಸಿ ಬಂದಿದ್ದ ಆಂಡಿ ನಂತರ ಶಿಲ್ಪಾ ಹಾಗೂ ಅನಿತಾ ಜತೆ ಮಾತನಾಡಿ ತನ್ನ ತಪ್ಪನ್ನು ತಿದ್ದುಕೊಳ್ಳಲು ಪ್ರತ್ಯೂಷಾ ಬಳಿ ಸ್ಸಾರಿ ಎಂದು ಕೇಳಿದ. ಇನ್ನೊಬ್ಬರ ನಂಬಿಕೆಗೆ ಬೆಲೆ ಕೊಡಬೇಕು ನಿಜ ಎಂದು ಒಪ್ಪಿಕೊಂಡಿದ್ದು ಪ್ರಸಂಗ ಸುಖಾಂತ್ಯವಾಯಿತು ಎಲ್ಲಾ ಸಾಯಿಬಾಬಾನ ಕೃಪೆ ಎಂದು ಪ್ರತ್ಯೂಷಾ ಸುಮ್ಮನಾದಳು

ಊಟದ ಸಮಯ

ದಿನವಿಡಿ ಕಷ್ಟಪಟ್ಟಿದ್ದ ನರಕವಾಸಿಗಳು ಭರ್ಜರಿ ಊಟ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ, ಸಿಕ್ಕ ಊಟ ಕಡಿಮೆ ಇತ್ತು. ಕೂಗಾಡುವಂತೇ ಕೂಡಾ ಇಲ್ಲ. ಶಿಲ್ಪಾ ಸಮಾಧಾನ ಪಡಿಸಿ ನಮ್ಮ ಕಡೆ ರೇಷನ್ ಮುಗಿದಿದೆ ಹಾಗಾಗಿ ಇರೋದರಲ್ಲೇ ಇಬ್ಬರು ಅಡ್ಜೆಸ್ಟ್ ಮಾಡಿಕೊಳ್ಳಬೇಕಿದೆ ಎಂದಳು

ಪ್ರತ್ಯೂಷಾ ಪ್ರಕರಣ

ಪುಟ್ಟ ಕೈಗಳಿಂದ ದೊಡ್ಡ ಚಕ್ರ ಸುತ್ತಲು ಹೋದ ಪ್ರತ್ಯೂಷಾ ತನ್ನ ತಲೆಗೂದಲನ್ನು ಚಕ್ರಕ್ಕೆ ಕೊಟ್ಟಿದ್ದು ಯಾವಾಗ ತಿಳಿಯಲೇ ಇಲ್ಲ. ಕಾಮ್ಯಾ, ಕುಶಾಲ್ ಇತರರು ನಿಧಾನವಾಗಿ ಕೂದಲು ಬಿಡಿಸಿ ಹೆಚ್ಚಿನ ಅಪಾಯವಾಗದಂತೆ ಪ್ರತ್ಯೂಷಾಳನ್ನು ಬಚಾವ್ ಮಾಡಿದರು.

ಕುಶಾಲ್ ಆರೈಕೆ

ಪ್ರತ್ಯೂಷಾಳನ್ನು ಎರಡು ಕೈಗಳಲ್ಲಿ ಮಗು ಎತ್ತಿಕೊಂಡಂತೆ ಎತ್ತಿಕೊಂಡು ಹಾಸಿಗೆ ಮೇಲೆ ಮಲಗಿಸಿದ ಕುಶಾಲ್, ನಂತರ ತಲೆ ಮಸಾಜ್ ಮಾಡಿ ನೋವು ತಡೆದುಕೊಳ್ಳುವಂತೆ ಹೇಳಿದ. ರಾತ್ರಿ ಎಷ್ಟೋ ತನಕ ಪ್ರತ್ಯೂಷಾ ತಲೆ ನೋವು ಎಂದು ಅಳುತ್ತಾ ಕಿರುಚುತ್ತಾ ಇದ್ದಳು

English summary
Bigg Boss 7 - Day 2: It's just the second day and Bigg Boss has already started giving the Jahannum-vaasis the real taste of Hell. The day starts with Bigg Boss giving the Hell-mates a task to ensure that the Heaven mates get the basic necessities like gas and water.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada