For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 7: ಎಲ್ಲಿ ಬಿಕಿನಿ ಹಾಕ್ತಿಯಾ ಕಳ್ಳಿ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ವರ್ಗ ಹಾಗೂ ನರಕವಾಸಿಗಳ ಅದಲು ಬದಲು ಕಾರ್ಯಕ್ರಮ ಯಶಸ್ವಿಯಾದ ಮೇಲೆ ಮತ್ತೆ ನಾಟಕ ಶುರುವಾಗಿದೆ. ಉಗ್ರ ಪ್ರತಾಪಿ ಅರ್ಮಾನ್ ಸ್ವರ್ಗಕ್ಕೆ ಜಿಗಿದರೆ, ನಾಟಕರಾಣಿ ಗೌಹರ್ ಸ್ವರ್ಗದಿಂದ ನರಕ ಕೂಪಕ್ಕೆ ತೂರಿ ಹೋಗಿದ್ದು ಓದಿರುತ್ತೀರಿ

  ಊಟದ ವಿಷಯ ಎರಡೂ ಕಡೆ ಸ್ಪರ್ಧಿಗಳ ಕಿತ್ತಾಟ ಬಹುತೇಕ ಅಂತ್ಯಗೊಂಡಿದೆ. ಐದನೇ ದಿನದ ಹೈಲೇಟ್ ಎಂದರೆ ಅರ್ಮಾನ್ ಹಾಗೂ ವಿದೇಶಿ ಸ್ಪರ್ಧಿ ಎಲ್ಲಿ ಅವ್ರಾಮ್ ನಡುವಿನ ಕಿತ್ತಾಟ ಹಾಗೂ ಲಾಭ ಪಡೆಯಲು ಯತ್ನಿಸಿದ ಗೌಹರ್ ಕೊನೆಗೂ ಇಬ್ಬರನ್ನು ಒಂದು ಮಾಡಿದ ಕ್ಯಾಪ್ಟನ್ ತನೀಶಾ. ಎಲ್ಲಿ ನೀನು ಹಾಕ್ತೀಯಾ ಬಿಕಿನಿ ಕಳ್ಳಿ ಎಂಬರ್ಥದಲ್ಲಿ ಅರ್ಮಾನ್ ಕೇಳಿದ್ದು ಎಲ್ಲಿಗೆ ಎಲ್ಲೆಲ್ಲೋ ತಟ್ಟಿ ಕಣ್ಣೀರಿಟ್ಟಳು ಇದರ ಬಗ್ಗೆ ಸ್ಲೈಡ್ ನಲ್ಲಿ ಓದಿ

  ಎರಡು ಕಡೆ ಜನರ ಮೇಲೆ ಬಿಗ್ ಬಾಸ್ ಮನೆ ನಿಯಮಗಳನ್ನು ಜಾರಿಗೊಳಿಸಲು ಸಮರ್ಥ ಕ್ಯಾಪ್ಟನ್ ಆಯ್ಕೆ ಮಾಡಲು ಬಿಗ್ ಬಾಸ್ ನಿರ್ಧರಿಸುತ್ತಾರೆ. ಇದಕ್ಕಾಗಿ ಸ್ವರ್ಗದಲ್ಲಿ ವೋಟಿಂಗ್ ನಡೆಯುತ್ತದೆ. ಆದರೆ, ಯಾರು ಕ್ಯಾಪ್ಟನ್ ಸ್ಥಾನಕ್ಕೆ ನಿಲ್ಲಬೇಕು ಎಂಬುದನ್ನು ನರಕವಾಸಿಗಳು ಗೌಹರ್ ಹಾಗೂ ಅಪೂರ್ವ ಅವರು ಕನ್ಫೆಷನ್ ರೂಮಿಗೆ ತೆರಳಿ ಬಿಗ್ ಬಾಸ್ ಮುಂದೆ ಆಯ್ಕೆ ಮಾಡುತ್ತಾರೆ.

  ಸ್ವರ್ಗವಾಸಿಗಳ ಕ್ಯಾಪ್ಟನ್ ಸ್ಪರ್ಧೆಗೆ ತನೀಶಾ ಹಾಗೂ ಆಂಡಿ ಆಯ್ಕೆಯಾಗುತ್ತಾರೆ. ಆದರೆ, ವೋಟಿಂಗ್ ಮಾಡುವ ಅಧಿಕಾರ ಬರೀ ಸ್ವರ್ಗವಾಸಿಗಳಿಗೆ ನೀಡಲಾಗಿರುತ್ತದೆ. ಆಂಡಿ ತನಗೆ ತಾನೇ ಹಾಕಿಕೊಂಡ 1 ಮತ ಬಂದರೆ ಮಿಕ್ಕ ಎಲ್ಲರೂ ತನೀಶಾ ಪರ ಮತ ಹಾಕುತ್ತಾರೆ. ಈಗ ಬಿಗ್ ಬಾಸ್ ಮನೆಗೆ ತನೀಶಾ ಕ್ಯಾಪ್ಟನ್. ಬಿಗ್ ಬಾಸ್ ನೀಡಿದ ವಿಶಿಂಗ್ ವಾಲ್ ನಿಂದ ಸಿಕ್ಕಿದ್ದೇನು? ತನೀಶಾ ಕ್ಯಾಪ್ಟನ್ ಆಗಲು ಏಕೆ ಸೂಕ್ತ? ಅರ್ಮಾನ್ ನಿಜಕ್ಕೂ ಹೇಳಿದ್ದೇನು? ಮುಂದೆ ಓದಿ...

  ಕ್ಯಾಪ್ಟನ್ ಅಭ್ಯರ್ಥಿ ಆಯ್ಕೆ

  ಕ್ಯಾಪ್ಟನ್ ಅಭ್ಯರ್ಥಿ ಆಯ್ಕೆ

  ಸ್ವರ್ಗವಾಸಿಗಳ ಪೈಕಿ ಕ್ಯಾಪ್ಟನ್ ಆಗಲು ಯಾರು ಸೂಕ್ತ ಎಂಬುದನ್ನು ಆಯ್ಕೆ ಮಾಡಿ ಎಂದು ಬಿಗ್ ಬಾಸ್ ಕೇಳಿಕೊಳ್ಳುತ್ತಾರೆ. ಕನ್ಫೆಷನ್ ರೂಮಿಗೆ ಬರುವ ಮುನ್ನ ಮೇಕಪ್ ಮಾಡಿಕೊಂಡು ಬಂದ ಗೌಹರ್ ಅಪೂರ್ವ ಜತೆಗೂಡಿ ತನೀಶಾ ಹಾಗೂ ಆಂಡಿಯನ್ನು ಆಯ್ಕೆ ಮಾಡುತ್ತಾರೆ.

  ಕ್ಯಾಪ್ಟನ್ ಆದವರು ಯಾವುದೇ ಕೆಲಸ ಮಾಡುವಂತಿಲ್ಲ ಎಂಬ ನಿಯಮ ಇರುವುದರಿಂದ ಅಡುಗೆ ಕೆಲಸ, ಕ್ಲೀನಿಂಗ್ ಕೆಲಸಕ್ಕೆ ತೊಂದರೆಯಾಗದಂತೆ ಇವರಿಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

  ಕ್ಯಾಪ್ಟನ್ ಆದ ತನೀಶಾ

  ಕ್ಯಾಪ್ಟನ್ ಆದ ತನೀಶಾ

  ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುವ ತನೀಶಾ ಎದುರು ಠೇವಣಿ ಕಳೆದುಕೊಂಡ ಆಂಡಿ ಸಹಜವಾಗಿ ಸ್ವಲ್ಪ ಬೇಸರ ವ್ಯಕ್ತಪಡಿಸಿದ. ಸ್ವರ್ಗವಾಸಿಗಳ ಪೈಕಿ ನಿಧಾನವಾಗಿ ಗುಂಪುಗಾರಿಕೆ ಕಂಡು ಬಂದರೂ ತನೀಶಾ ಉತ್ತಮ ಕ್ಯಾಪ್ಟನ್ ಎಂಬುದನ್ನು ಮೊದಲ ದಿನವೇ ನಿರೂಪಿಸಿದಳು.

  ಬೇಸರ ತೋಡಿಗೊಂಡ ಆಂಡಿ

  ಬೇಸರ ತೋಡಿಗೊಂಡ ಆಂಡಿ

  ತನೀಶಾ ಕ್ಯಾಪ್ಟನ್ ಆಗಿದ್ದಕ್ಕಿಂತ ತನಗೆ ಯಾರೂ ವೋಟ್ ಮಾಡಿಲ್ಲ ಎಂಬುದು ಆಂಡಿಗೆ ದೊಡ್ಡ ಅಪಮಾನ ಎನಿಸಿದೆ. ಈ ದುಃಖವನ್ನು ನರಕವಸಿ ಗೌಹರ್ ಜತೆ ಹಂಚಿಕೊಂಡಿದ್ದಾನೆ. ಎಲ್ಲರೂ ಆಟವಾಡುತ್ತಿದ್ದಾರೆ ಎಚ್ಚರ ಎಂದಿದ್ದಾನೆ. ನಾಟಕರಾಣಿ ಗೌಹರ್ ನಕ್ಕು ಸುಮ್ಮನಾಗಿದ್ದಾಳೆ

  ಕಿರಿಕ್ ರಾಣಿ ಗೌಹರ್

  ಕಿರಿಕ್ ರಾಣಿ ಗೌಹರ್

  ನರಕವನ್ನು ಕನಸಿನಲ್ಲೇ ಕಂಡಿರುವಂತೆ ಗೌಹರ್ ಖಾನ್ ಓಡಾಡುತ್ತಿರುವುದು ಇತರೆ ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡಿದೆ. ಪ್ರತ್ಯೂಷಾಳನ್ನು ನೀನು ಇನ್ನೂ ಬಾಲಕಿ ಎಂದು ಹೇಳಿದ್ದು ಜಗಳಕ್ಕೆ ನಾಂದಿ ಹಾಡಿತು. ಆದರೆ, ಎಂದಿನಂತೆ ನಾಟಕರಾಣಿ ಗೌಹರ್ ಪ್ರತ್ಯೂಷಾ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡಳು.

  ಪ್ರತಿ ಕ್ಷಣ ಕೆಮರಾ ಮುಂದೆ ಏನಾದರೂ ಚಟುವಟಿಕೆಯಿಂದ ಇರುವಂತೆ ಕಾಣುವ ಗೌಹರ್ ನೈಜವಾಗಿ ಆಟವಾಡುತ್ತಿಲ್ಲ ಎಂಬುದು ನರಕವಾಸಿಗಳಿಗೆ ಕೆಲವೇ ಗಂಟೆಗಳಲ್ಲಿ ತಿಳಿದು ಬಿಟ್ಟಿದೆ.

  ಎಲ್ಲಿ ಜತೆ ಅರ್ಮಾನ್

  ಎಲ್ಲಿ ಜತೆ ಅರ್ಮಾನ್

  ಸಂಜೆ ವೇಳೆಗೆ ರಂಗು ರಂಗಿನ ಮೂಡ್ ನಲ್ಲಿದ್ದ ಅರ್ಮಾನ್ ಎಲ್ಲಿ ಅವ್ರಾಮ್ ಳನ್ನು ಕಿಚಾಯಿಸಿದ. ಬಿಕಿನಿ ತೊಟ್ಟು ಬರ್ತೀಯಾ ಎಂದು ರೇಗಿಸಿದ. ಇದರಿಂದ ಸಿಟ್ಟಿಗೆದ್ದ ಎಲ್ಲಿ, ಕೆನ್ನೆಗೆ ಬಾರಿಸುತ್ತೇನೆ ಎಂದಳು. ಜತೆಯಲ್ಲೇ ಇದ್ದ ಪ್ರತ್ಯೂಷಾಗೆ ಇದು ಸಹಜ ಸಂಭಾಷಣೆಯಂತೆ ತೋರಿದ್ದರಿಂದ ನಕ್ಕು ಸುಮ್ಮನಾದಳು.. ಆದರೆ...

  ಎಲ್ಲಿಗೆ ನೋವು

  ಎಲ್ಲಿಗೆ ನೋವು

  ನಾನು ವಿದೇಶಿಯಾಗಿದ್ದಕೆ ಅರ್ಮಾನ್ ಈ ರೀತಿ ಸಲುಗೆಯ ಮಾತನ್ನಾಡಿದ್ದಾನೆ. ನಿಮ್ಮ ಯಾರಾದರೂ ಬಗ್ಗೆ ಈ ರೀತಿ ಹೇಳಲು ಸಾಧ್ಯವೇ? ನನಗೆ ಇಲ್ಲಿವರೆಗೂ ಯಾರು ರೀತಿ ಹೇಳಿಲ್ಲ ಎಂದು ಎಲ್ಲಿ ಗೋಳಾಡಿದಳು

  ಎಲ್ಲಿ ಕಣ್ಣೀರು

  ಎಲ್ಲಿ ಕಣ್ಣೀರು

  ಎಲ್ಲಿ ಸುಮಾರು ಹೊತ್ತು ಕಣ್ಣೀರಿಡುತ್ತಾ ಅರ್ಮಾನ್ ವಿರುದ್ಧ ಕೋಪಗೊಂಡಿದ್ದಳು. ಪ್ರತ್ಯೂಷಾ ಸಮಾಧನ ಪಡಿಸಿದರೂ ಸುಮ್ಮನಾಗಲಿಲ್ಲ. ಕೊನೆಗೆ ಬಾತ್ ರೂಮ್ ಗೆ ಹೋದ ಎಲ್ಲಿ ಹಿಂದೆ ಗೌಹರ್ ಪ್ರವೇಶಿಸಿ ಗಂಟೆಗಟ್ಟಲೇ ಉಪನ್ಯಾಸ ನೀಡಿದಳು

  ಸ್ವರ್ಗ -ನರಕವಾಸಿಗಳಿಗೆ ಚರ್ಚೆ ವಿಷಯ

  ಸ್ವರ್ಗ -ನರಕವಾಸಿಗಳಿಗೆ ಚರ್ಚೆ ವಿಷಯ

  ಎಲ್ಲಿ ಬಗ್ಗೆ ಅರ್ಮಾನ್ ಹೇಳಿಕೆ ಕುರಿತು ನರಕವಾಸಿಗಳು ಭಾರಿ ಚರ್ಚೆ ನಡೆಸಿದರು. ಹೇಜೆಲ್ ಕೂಡಾ ಎಲ್ಲಿ ಗೆ ಸಮಾಧಾನ ಹೇಳಿದಳು. ಅರ್ಮಾನ್ ಕ್ಷಮೆ ಯಾಚಿಸಬೇಕು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.

  ಸ್ವರ್ಗದಲ್ಲಿ ಆಂಡಿ, ಸಂಗ್ರಾಮ್ ಅಂತೂ ಅರ್ಮಾನ್ ನಡೆಯನ್ನು ಖಂಡಿಸಿದರು. ಕೆಮೆರಾ ಮುಂದೆ ನಿಂತ ಸಂಗ್ರಾಮ್, ನನಗೆ ಶಕ್ತಿ ಕೊಡಿ ಬಿಗ್ ಬಾಸ್ ಎಲ್ಲರಿಗೂ ಪಾಠ ಕಲಿಸುತ್ತೇನೆ ಎಂದ.

  ಸಂಗ್ರಾಮ್ ಸಿಂಗ್

  ಸಂಗ್ರಾಮ್ ಸಿಂಗ್

  ಸ್ವಿಮ್ಮಿಂಗ್ ಪೂಲ್ ಬಳಿ ಇರುವ ವಿಶಿಂಗ್ ವಾಲ್ ಬಳಿ ನಿಂತು ಹಸಿರು ದೀಪ ಉರಿಯುವ ತನಕ ನಿಮ್ಮ ಕೋರಿಕೆ ಸಲ್ಲಿಸಬಹುದು.ಅದು ಸೂಕ್ತ ಎನಿಸಿದರೆ ಪೂರೈಸಲಾಗುತ್ತದೆ ಎಂದು ಬಿಗ್ ಬಾಸ್ ಹೇಳಿದರು.

  ಸ್ವರ್ಗವಾಸಿಗಳು ಒಬ್ಬೊಬ್ಬರಾಗಿ ಬಂದು ವಿಶ್ ಹೇಳಿದರು. ಸಂಗ್ರಾಮ್ ನನಗೆ ಶಕ್ತಿ ಕೊಡಿ ಎಲ್ಲರನ್ನೂ ಸರಿ ಮಾಡುತ್ತೇನೆ ಎಂದನು

  ಅರ್ಮಾನ್

  ಅರ್ಮಾನ್

  ಅರ್ಮಾನ್ ನನಗೆ ಏನು ಬೇಡ ಎಂದು ಬಿಟ್ಟ. ಅರ್ಮಾನ್ ಗಾಗಿ ತನೀಶಾ ನಾಯಕಿಯಾಗಿದ್ದರಿಂದ ಆತನಿಗೆ ಮಲಗಲು ಬೆಡ್ ಸಿಕ್ಕಿತ್ತು.

  ತನೀಶಾ ತನ್ನ ಸರದಿಯಲ್ಲಿ ಎರಡು ಕಡೆ ಪ್ಲಗ್ ಪಾಯಿಂಟ್ ಬೇಕು ಎಂದು ಕೇಳಿಕೊಂಡಳು

  ರಜತ್ ವಿಶ್

  ರಜತ್ ವಿಶ್

  ನನಗೆ ನನ್ನ ಎಂಟು ವರ್ಷದ ಮಗಳನ್ನು ನೋಡಬೇಕು ಎನಿಸಿದೆ. ಜತೆಗೆ ಒಂದು ಕಪ್ ಕಾಫಿ ಬೇಕು ಎಂದು ಕೇಳಿದ ರಜತ್ ಗೋಳೋ ಎಂದು ಅತ್ತುಬಿಟ್ಟ.

  ದಿನದ ಅಂತ್ಯಕ್ಕೆ ಶೇವರ್ ಸಿಗಲಿಲ್ಲ, ಜಿಮ್ ಮಾಡಲು ಆಗುತ್ತಿಲ್ಲ ಎಂದು ಸ್ಪರ್ಧೆ ಬಿಟ್ಟು ಹೊರ ಹೋಗುವುದಾಗಿ ಬೆದರಿಕೆ ಹಾಕಿದ್ದ ನರಕವಾಸಿ ಕುಶಾಲ್ ಗೆ ತನೀಶಾ ಬುದ್ಧಿವಾದ ಹೇಳಿ ಮನ ಓಲೈಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು.

  English summary
  Bigg Boss 7: Day 5 - The fifth day inside the Bigg Boss house was filled with action packed drama. After Gauhar has come from Jannat to Jahannum, the hell-mates seem to be trying to adjust with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X