»   » ಬಿಗ್ ಬಾಸ್ 7: ತನೀಶಾ ಏಂಜೆಲ್, ರಜತ್ ಅಳುಮುಂಜಿ

ಬಿಗ್ ಬಾಸ್ 7: ತನೀಶಾ ಏಂಜೆಲ್, ರಜತ್ ಅಳುಮುಂಜಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ವರ್ಗ ಹಾಗೂ ನರಕವಾಸಿಗಳ ಕಿತ್ತಾಟಕ್ಕಿಂತ ಗುಂಪುಗಾರಿಕೆ ಮಾಡುವುದರಲ್ಲೇ ನಿನ್ನೆ ದಿನ ಕಾಲ ದೂಡಿದ್ದಾರೆ. ನಾಯಕಿ ತನೀಶಾ ಮತ್ತೊಮ್ಮೆ ಏಂಜೆಲ್ ನಂತೆ ಕಂಡರೆ ಸ್ಥೂಲದೇಹಿ ರಜತ್ ಅಳುಮುಂಜಿಯಾಗಿದ್ದು ಸಹಿಸಲು ಸ್ವಲ್ಪ ಕಷ್ಟವಾಯಿತು.

ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಕಳೆದ ವಾರದಲ್ಲಿ ಊಟದ ವಿಷಯ ಎರಡೂ ಕಡೆ ಸ್ಪರ್ಧಿಗಳ ಕಿತ್ತಾಟ, ಹೇಜೆಲ್ ಮನೆಯಿಂದ ಹೊರ ಬಿದ್ದಿದ್ದು, ಅರ್ಮಾನ್ ಹಾಗೂ ಗೌಹರ್ ಸ್ವರ್ಗ-ನರಕಕ್ಕೆ ಅದಲು ಬದಲಾಗಿದ್ದು, ವಿದೇಶಿ ಸ್ಪರ್ಧಿ ಎಲ್ಲಿ ಅವ್ರಾಮ್ ನಡುವೆ ಅರ್ಮಾನ್ ಕಿತ್ತಾಟ ಹಾಗೂ ಎಲ್ಲಾ ಪ್ರಸಂಗಗಳ ಲಾಭ ಪಡೆಯಲು ಯತ್ನಿಸುವ ಗೌಹರ್, ವಾರಾಂತ್ಯದ ವೇಳೆ ಗೌಹರ್ -ಕುಶಾಲ್ ನಡುವೆ ಏನೋ ಏನೋ ನಡೆಯುತ್ತಿದೆ ಎನ್ನಿಸಿದ್ದು ಎಲ್ಲವೂ ನಡೆದು ಬಿಟ್ಟಿದೆ.

ಎರಡು ಕಡೆ ಜನರ ಮೇಲೆ ಬಿಗ್ ಬಾಸ್ ಮನೆ ನಿಯಮಗಳನ್ನು ಜಾರಿಗೊಳಿಸಲು ಸಮರ್ಥ ಕ್ಯಾಪ್ಟನ್ ಆಯ್ಕೆ ತನೀಶಾ ಆಯ್ಕೆಯಾದ ಮೇಲೆ ಆಂಡಿ ವರ್ತನೆಯಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಅಲ್ಲದೆ, ತನೀಶಾ ವಿರುದ್ಧ ಸ್ವರ್ಗವಾಸಿಗಳೆ ಕತ್ತಿ ಮಸಿಯುತ್ತಿರುವುದು ಕಂಡು ಬಂದಿದೆ.

ದುಃಖತಪ್ತನಾದ ರಜತ್ ದೇಹಾರೋಗ್ಯ ವಿಚಾರಿಸಲು ಮೂವರು ಡಾಕ್ಟರ್ ಬಂದರೂ ಸರಿ ಮಾಡಲು ಆಗಲಿಲ್ಲ, ರಜತ್ ಗಾಗಿ ಬಿಗ್ ಬಾಸ್ ಏನು ಮಾಡುತ್ತಿಲ್ಲ ಎಂದು ತನೀಶಾ ಎಲ್ಲರೂ ಮೈಕ್ ತೆಗೆದು ಪ್ರತಿಭಟಿಸಲು ಮುಂದಾಗಿದ್ದು ಗಮನಾರ್ಹ ಬೆಳವಣಿಗೆಯಾಗಿತ್ತು.

ತನೀಶಾ ಸಮಸ್ಯೆಗಳನ್ನು ಪರಿಹರಿಸುವ ರೀತಿ ಕಂಡು ಬಿಗ್ ಬಾಸ್ ಗೆ ಅಚ್ಚರಿಯಾಗಿ ಕನ್ಫೆಷನ್ ರೂಮಿಗೆ ಕರೆಸಿಕೊಂಡು ಇಷ್ಟೊಂದು ಭಾವನಾತ್ಮಕ ಕ್ರಮ ಬೇಡ ಇದು ಸ್ಪರ್ಧೆ ನಮಗೂ ಮಾನವೀಯತೆ ಇದೆ ಎಂದು ಬುದ್ಧಿವಾದ ಹೇಳಬೇಕಾಯಿತು.. ಮುಂದೇನಾಯ್ತು ನೋಡಿ...

ಅಳುಮುಂಜಿ ರಜತ್

ಸ್ವರ್ಗವಾಸಿ ರಜತ್ ಗೆ ಏನಾಯ್ತೋ ಗೊತ್ತಿಲ್ಲ ದಿನದ ಆರಂಭದಿಂದಲೇ ರಚ್ಚೆ ಹಿಡಿದು ಕುಳಿತ ಪುಟ್ಟ ಮಗುವಿನಂತೆ ಅಳಲು ಆರಂಭಿಸಿಬಿಟ್ಟ, ದೈತ್ಯ ದೇಹಿ ರಜತ್ ಅಳುವುದನ್ನು ಕಂಡು ಸ್ವರ್ಗವಾಸಿಗಳು ಕಂಗಾಲಾದರೆ, ನರಕವಾಸಿಗಳು ಕನಿಕರದ ದೃಷ್ಟಿ ಬೀರಿ ಸುಮ್ಮನಾದರು.

ಶೋ ತೊರೆಯಲು ಮುಂದಾದ

ನನ್ನ ಮಗಳನ್ನು ನೋಡಬೇಕು. ನನ್ನ ಕುಟುಂಬದೊಡನೆ ಇರಬೇಕು. ನಾನು ಈ ಶೋನಲ್ಲಿ ಇರಲು ಅಸಮರ್ಥ. ನನ್ನ ದೇಹ ಇಲ್ಲಿ ಯಾವ ಟಾಸ್ಕ್ ಮಾಡಲು ಸಹಕರಿಸುತ್ತಿಲ್ಲ ಎಂದು ಮಾತಿಗಿಂತ ಹೆಚ್ಚು ಅಳುವುದರಲ್ಲೇ ರಜತ್ ದಿನವೀಡಿ ಕಾಲದೂಡಿದ್ದು ವಿಶೇಷ

ಭರವಸೆಗೂ ಬಗ್ಗಲಿಲ್ಲ

ರಜತ್ ನಿಮ್ಮ ಕುಟುಂಬದವರು ಸುರಕ್ಷಿತವಾಗಿ ಆರೋಗ್ಯದಿಂದಿದ್ದಾರೆ. ನೀವು ಸ್ಪರ್ಧೆಯಲ್ಲಿ ಇನ್ನಷ್ಟು ದಿನ ಇರಬೇಕು ಎಂದು ಬಯಸಿದ್ದಾರೆ ಎಂದು ಬಿಗ್ ಬಾಸ್ ಭರವಸೆ ನೀಡಿದರೂ ರಜತ್ ತನ್ನ ಹಠ ಬಿಡಲಿಲ್ಲ

ನನಗೆ ಅಲ್ಲಿ ನೋವು ಇಲ್ಲಿ ನೋವು ನಾನು ಹಾಸಿಗೆ ಬಿಟ್ಟು ಏಳಲಾರೆ ಎಂದು ಮಾನಸಿಕವಾಗಿ ಜರ್ಝರಿತ ರೋಗಿಯಂತೆ ವರ್ತಿಸತೊಡಗಿದ.

ತನೀಶಾ ಮುಖರ್ಜಿ

ರಜತ್ ದೇಹಸ್ಥಿತಿ ನೋಡಿದರೆ ನಮಗೆ ಭಯವಾಗುತ್ತಿದೆ. ದಯವಿಟ್ಟು ಡಾಕ್ಟರ್ ಕಳಿಸಿ ಎಂದು ಕ್ಯಾಪ್ಟನ್ ತನೀಶಾ ಮನವಿ ಮಾಡಿಕೊಂಡಳು. ವೈದ್ಯರ ನೆರವು ಸಿಗದಿದ್ದರೆ ಎಲ್ಲರೂ ಮೈಕ್ ತೆಗೆದು ಪ್ರತಿಭಟಿಸುತ್ತೇವೆ ಎಂದು ತನೀಶಾ ಬೆದರಿಕೆ ಹಾಕಿದಳು.

ನಂತರ ಕಾಮತ್ ಸೇರಿದಂತೆ ಮೂವರು ವೈದ್ಯರು ಬಂದು ನೋಡಿಕೊಂಡು ಹೋದರು ರಜತ್ ಆರೋಗ್ಯದಿಂದಿದ್ದಾರೆ. ಸ್ವಲ್ಪ ರೆಸ್ಟ್ ಮಾಡ್ಲಿ, ಮಾನಸಿಕ ಖಿನ್ನತೆ ಕಡಿಮೆಯಾದರೆ ಸರಿಯಾಗುತ್ತೆ ಎಂದು ವೈದ್ಯರು ಹೇಳಿ ಹೊರಟರು.

ರಜತ್ ಫೇಕ್ ?

ಅಗತ್ಯ ಸೌಕರ್ಯ ಹೊಂದಲು ರಜತ್ ಏನಾದರೂ ನಾಟಕ ಮಾಡುತ್ತಿದ್ದಾನಾ? ಎಂಬ ಅನುಮಾನ ಕೂಡಾ ಸ್ವರ್ಗವಾಸಿಗಳಿಗೆ ಬಂದಿತ್ತು. ಊಟ, ತಿಂಡಿ ಬಿಟ್ಟು ನಿರಂತರವಾಗಿ ಅಳುವುದಾದರೂ ಏತಕ್ಕಾಗಿ ಎಂಬುದು ಅನೇಕ ಸ್ಪರ್ಧಿಗಳಿಗೆ ತಿಳಿಯಲೇ ಇಲ್ಲ. ಪ್ರೇಕ್ಷಕರಿಗೂ ರಜತ್ ಅಳುಮುಂಜಿತನ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ

ಆಂಡಿ ಕಾಮ್ ವಾಲಿ

ಮನೆಕೆಲಸದವನಂತೆ ಆಂಡಿ ನಟಿಸುತ್ತಿದ್ದಾನೋ ಅಥವಾ ಕೆಲಸ ಇಷ್ಟಪಟ್ಟು ಮಾಡುತ್ತಿದ್ದಾನೋ ತಿಳಿಯಲಿಲ್ಲ. ಆದರೆ, ಆಂಡಿ ಅವತಾರಕ್ಕೆ ಎಲ್ಲರೂ ಖುಷಿಯಿಂದ ಬಹುಪರಾಕ್ ಹೇಳಿದಾಗ ಸುಮ್ಮನಿದ್ದ ಆಂಡಿ ನಂತರ ತನೀಶಾ ವಿರುದ್ಧ ಹರಿಹಾಯ್ದಿದ್ದು ಏಕೋ ತಿಳಿಯಲಿಲ್ಲ. ಕ್ಯಾಪ್ಟನ್ಸಿ ಹೋಗಿದ್ದು ಆಂಡಿಗೆ ಇನ್ನೂ ಕಾಡುತ್ತಿದೆ.

ಶಿಲ್ಪಾ ಅಗ್ನಿಹೋತ್ರಿ

ಸ್ವರ್ಗವಾಸಿಗಳ ಪೈಕಿ ಶಿಲ್ಪಾಗೆ ಇನ್ನೂ ನರಕವಾಸಿಯಾಗಿರುವ ಅಫೂರ್ವ ಅವರದ್ದೇ ಚಿಂತೆಯಾಗಿದೆ. ಅದರೆ, ಶಿಲ್ಪಾ ಎಲ್ಲಾ ಸ್ಪರ್ಧಿಗಳ ಮನಗೆದ್ದಿದ್ದಾರೆ.

ರಜತ್ ನಕಲು ಮಾಡಿದ ಸಂಗ್ರಾಮ್

ನಿಧಾನವಾಗಿ ಬಿಗ್ ಬಾಸ್ ಮನೆ ಆಟಗಳನ್ನು ಕಲಿಯುತ್ತಿರುವ ಸಂಗ್ರಾಮ್, ರಜತ್ ನನ್ನು ಅಣಕಿಸಿ ನರಕವಾಸಿಗಳಿಗೆ ಮಜಾ ನೀಡಿದ. ನಂತರ ಎಲ್ಲಿ ಜತೆ ಸಂಭಾಷಣೆಗೆ ಇಳಿದ

ಎಲ್ಲಿ ಅವ್ರಾಮ್

ಎಲ್ಲಿ ಅವ್ರಾಮ್ ಗೆ ಹಿಂದಿ ಪಾಠ ಮಾಡಿದ ಸಂಗ್ರಾಮ್, ನನಗೆ ಸಂಗ್ರಾಮ್ ಹಾಗೂ ಸಲ್ಮಾನ್ ಬಿಟ್ಟರೆ ಮಿಕ್ಕವರೆಲ್ಲರೂ ಸೋದರರು ಎಂದು ಹೇಳು ಎಂದು ಎಲ್ಲಿಗೆ ಸಂಗ್ರಾಮ್ ಹೇಳಿಕೊಟ್ಟ. ಇದರ ಅರ್ಥ ನಿಧಾನವಾಗಿ ಎಲ್ಲಿ ತಲೆಗೆ ಹತ್ತಿದ ಮೇಲೆ ನಗುವ ಸರದಿ ಎಲ್ಲಿಯದಾಯಿತು.

ಸಲ್ಮಾನ್ ಗೆ ಈ ಡೈಲಾಗ್ ಹೇಳಿದರೆ ಸಂಗ್ರಾಮ್ ಏಕೆ ಅವನನ್ನು ಬಿಟ್ಟು ಬಿಡು ಎನ್ನುತ್ತಾರೆ ಎಂದು ಎಲ್ಲಿ ನಗೆ ಚೆಲ್ಲಿದಳು

ರಜತ್ ಗೆ ಅರ್ಮಾನ್ ಸಾಂತ್ವನ

ರಜತ್ ನಿನ್ನಿಂದಾಗಿ ಸ್ವರ್ಗವಾಸಿಗಳ ಮನಸ್ಸು ಕದಡಿದೆ. ಎಲ್ಲರಲ್ಲೂ ನೆಗಟಿವ್ ಎನರ್ಜಿ ತುಂಬುತ್ತಿದೆ. ರೋಗಿಯಂತೆ ಆಡಬೇಡ. ನಿನಗೆ ಏನು ಬೇಕಾದರೂ ನಾವು ವ್ಯವಸ್ಥೆ ಮಾಡಲು ಸಿದ್ಧ ಎಂದು ಅರ್ಮಾನ್ ಹೇಳಿದ. ಆದರೆ, ರಜತ್ ಕೊನೆಗೆ ಬಿಗ್ ಬಾಸ್ ನೀಡಿದ ಆಶ್ವಾಸನೆ ಮೇರೆಗೆ ಕಣ್ಣೀರು ಒರೆಸಿಕೊಂಡು ಎಂದಿನಂತೆ ಮನೆಯಲ್ಲಿ ಓಡಾಡತೊಡಗಿದ.

ಕುಶಾಲ್- ಗೌಹರ್

ಕುಶಾಲ್ ಹಾಗೂ ಗೌಹರ್ ಸರಸ ಸಲ್ಲಾಪದ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇಬ್ಬರು ಪ್ರೇಮಿಗಳಂತೆ ಓಡಾಡುತ್ತಾ ತಮ್ಮದೇ ಲೋಕದಲ್ಲಿದ್ದಾರೆ. ಆದರೆ, ಇಲ್ಲಿ ಯಾರನ್ನೂ ನಂಬಬೇಡ, ನನ್ನನ್ನೂ ಕೂಡಾ ಎಂದು ಗೌಹರ್ ಕುಶಾಲ್ ಗೆ ಕಿವಿಮಾತು ಹೇಳಿದ್ದಾಳೆ.

ಗೌಹರ್ ಗಾಗಿ ಹಾಡು ಹಾಡಿದ ಕುಶಾಲ್ ರಾತ್ರಿ ವೇಳೆ ಕೂಡಾ ಪಕ್ಕದಲ್ಲೇ ಮಲಗಿದ ಗೌಹರ್ ಜತೆ ಸಂಭಾಷಣೆ ನಡೆಸುತ್ತಲೆ ಇದ್ದ. ಸ್ವರ್ಗವಾಸಿಗಳು ಇವರಿಬ್ಬರನ್ನು ಪ್ರೇಮಿಗಳು ಎಂದೇ ಕರೆಯುತ್ತಿದ್ದಾರೆ. ಮುಂದೇನಾಗುತ್ತೆ ನೋಡೋಣ

ಫೋಟೋ ಆಫ್ ದಿ ಡೇ

ಸ್ಲೀಪಿಂಗ್ ಬ್ಯೂಟಿ ರಜತ್

ಅರ್ಮಾನ್ ಹಾಗೂ ತನೀಶಾ

ತನೀಶಾ ಕ್ಯಾಪ್ಟನ್ ಆದ ಕಾಲದಿಂದಲೂ ಆಕೆ ಪರ ನಿಂತಿರುವ ಅರ್ಮಾನ್, ರಜತ್ ಎಪಿಸೋಡ್ ನಲ್ಲೂ ಕೂಡಾ ತನೀಶಾ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಮಿನೇಷನ್ ನಲ್ಲಿ ರಜತ್ ಕೋರಿಕೆಯಂತೆ ಮೊದಲ ಬಾರಿಗೆ ಸ್ವರ್ಗವಾಸಿ ರಜತ್ ಹೆಸರನ್ನು ತನೀಶಾ ಸೂಚಿಸಿದರು.

ದಿನದ ಮುಖ್ಯಾಂಶ

ಎಂಟನೇ ದಿನದಲ್ಲಿ ನರಕಕ್ಕಿಂತ ಸ್ವರ್ಗವಾಸಿಗಳದ್ದೇ ಹೆಚ್ಚಿನ ಸುದ್ದಿಯಾಗಿತ್ತು. ತನೀಶಾ ಒಳ್ಳೆ ಕ್ಯಾಪ್ಟನ್ ಆಗಿ ಎಲ್ಲರ ಮನ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ. ರಜತ್ ಅಳುಮುಂಜಿತನ ಎಪಿಸೋಡ್ ಮುಂದುವರೆದರೆ ಪ್ರೇಕ್ಷಕರನ್ನು ಬಿಗ್ ಬಾಸ್ ಕಳೆದುಕೊಳ್ಳಬೇಕಾಗುತ್ತದೆ

English summary
Bigg Boss Season 7, the show hosted by Salman Khan, has just completed one week and has already become a hot favourite show for millions. Hazel evicted from the house, Gauhar and Armaan exchange places, Gauhar and Kushal getting too close, Captain Tanisha plays angel. The tasks, fights, misunderstandings, pretensions and what not, it has all been served on plate every day
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada