»   » ಬಿಗ್ ಬಾಸ್ 7: ಟೈಮ್ ಮೆಷಿನ್ ಟಾಸ್ಕ್, ರಜತ್ ಈಡಿಯಟ್

ಬಿಗ್ ಬಾಸ್ 7: ಟೈಮ್ ಮೆಷಿನ್ ಟಾಸ್ಕ್, ರಜತ್ ಈಡಿಯಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಬಿಗ್ ಬಾಸ್ 7 ರಲ್ಲಿ ಸ್ವರ್ಗ ಹಾಗೂ ನರಕವಾಸಿಗಳ ಕಿತ್ತಾಟಕ್ಕೆ ಕಡಿವಾಣ ಹಾಕಲು ಹೊಸ ಟಾಸ್ಕ್ ನೀಡಿದ್ದು ಇಡೀ ದಿನ ಅದೇ ಕಥೆಯಾಯಿತು. ನಾಯಕಿ ತನೀಶಾ ಕೂಡಾ ನರಕವಾಸಿಗಳ ಕೀಟಲೆ ಮಾಡಲು ತೊಡಗಿದ್ದು ವಿಶೇಷವಾಗಿತ್ತು.

ನಿನ್ನೆ ಇಡೀ ದಿನ ಎಪಿಸೋಡು ಆಕ್ರಮಿಸಿದ್ದ ಸ್ಥೂಲದೇಹಿ ರಜತ್ ಇಂದು ತನ್ನ ಅಳುಮುಂಜಿ ಅವತಾರ ಕಳಚಿದ್ದು ಸ್ವರ್ಗವಾಸಿಗೆ ನೆಮ್ಮದಿ ತಂದಿತು. ಆದರೆ, ಅರ್ಮಾನ್ ಯಾಕೋ ರಜತ್ ಮೇಲೆ ಮುನಿಸುಗೊಂಡು ಈಡಿಯಟ್ ಎಂದು ಬಿಟ್ಟ.

ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಕಳೆದ ವಾರದಲ್ಲಿ ಊಟದ ವಿಷಯ ಎರಡೂ ಕಡೆ ಸ್ಪರ್ಧಿಗಳ ಕಿತ್ತಾಟ, ಹೇಜೆಲ್ ಮನೆಯಿಂದ ಹೊರ ಬಿದ್ದಿದ್ದು, ಅರ್ಮಾನ್ ಹಾಗೂ ಗೌಹರ್ ಸ್ವರ್ಗ-ನರಕಕ್ಕೆ ಅದಲು ಬದಲಾಗಿದ್ದು, ವಿದೇಶಿ ಸ್ಪರ್ಧಿ ಎಲ್ಲಿ ಅವ್ರಾಮ್ ನಡುವೆ ಅರ್ಮಾನ್ ಕಿತ್ತಾಟ ಹಾಗೂ ಎಲ್ಲಾ ಪ್ರಸಂಗಗಳ ಲಾಭ ಪಡೆಯಲು ಯತ್ನಿಸುವ ಗೌಹರ್, ವಾರಾಂತ್ಯದ ವೇಳೆ ಗೌಹರ್ -ಕುಶಾಲ್ ನಡುವೆ ಏನೋ ಏನೋ ನಡೆಯುತ್ತಿದೆ ಎನ್ನಿಸಿದ್ದು ಮುಂದುವರೆದಿದೆ..

ಒಂಭತ್ತನೇ ದಿನದಂದು ನರಕವಾಸಿಗಳು ಗಡಿಯಾರ ಪ್ರತಿ ಕ್ಷಣ ಸರಿಯಾಗಿ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸ್ವರ್ಗವಾಸಿಗಳು ನರಕವಾಸಿಗಳಿಗೆ ನಿರಂತರ ಕಾಟ ಕೊಡುತ್ತಿರಬೇಕು ಎಂದು ಬಿಗ್ ಬಾಸ್ ಟಾಸ್ಕ್ ನೀಡುತ್ತಾರೆ.

ಮೊದಲಿಗೆ ಕುಶಾಲ್-ಅಪೂರ್ವ ಟಾರ್ಗೆಟ್ ಮಾಡಿದ ಸ್ವರ್ಗವಾಸಿಗಳು ಭಾರಿ ಗದ್ದಲ ಮಾಡಿದರು. ತನೀಶಾ ಕೂಡಾ ಜೋರಾಗಿ ಕಿರುಚಿದರೂ ಎಮ್ಮೆ ಚರ್ಮದ ನರಕವಾಸಿಗಳಿಗೆ ಸದ್ದು ಗದ್ದಲದ ಪರಿವೆ ಇರಲಿಲ್ಲ.

ಅರ್ಮಾನ್ ಮತ್ತೊಮ್ಮೆ ಬ್ಯಾಡ್ ಬಾಯ್ ಇಮೇಜ್ ಮುಂದುವರೆಸಿದ್ದು, ಆಂಡಿ ಯಾಕೋ ನರಕವಾಸಿಗಳಿಗೆ ಹತ್ತಿರವಾಗುತ್ತಿರುವಂತೆ ಭಾಸವಾಗುತ್ತಿದೆ. ತನೀಶಾ ಮೇಲೆ ಮತ್ಸರ ಮುಂದುವರೆದಿದೆ. ಮುಂದೇನಾಯ್ತು ನೋಡಿ...

ಸಂಗ್ರಾಮ್ ಸಿಂಗ್

ನರಕವಾಸಿಗಳನ್ನು ಪೀಡಿಸಲು ಸದ್ದು ಮಾಡುತ್ತಿರುವ ಸಂಗ್ರಾಮ್ ..ಕಾವ್ಯಾ ಪಂಜಾಬಿ ಕಂಡರೆ ಯಾಕೋ ಸಂಗ್ರಾಮ್ ಗೆ ಇರುಸು ಮುರುಸು.. ಒಂದು ಕೊಟ್ಟರೆ ಕೆಳಕ್ಕೆ ಬೀಳ್ತಾಳೆ ಅವಳು ಎಂದೆಲ್ಲ ಹೇಳಿದ್ನಪ್ಪ

ಕುಶಾಲ್ ಪ್ರತ್ಯೂಷಾ

ಮೊದಲ ಬಾರಿಗೆ ಗೌಹರ್ ಸಂಘ ಬಿಟ್ಟ ಕುಶಾಲ್ ಪ್ರತ್ಯೂಷಾ ಜತೆ ಗಡಿಯಾರ ಮುಳ್ಳು ತಿರುಗುತ್ತಿದ್ದೆಯೇ ಎಂದು ಪರೀಕ್ಷಿಸುತ್ತಿದ್ದಾನೆ.

ಕಾಮ್ಯಾ ಗೌಹರ್

ಇಬ್ಬರು ಜೋಡಿಯಾಗಿ ಗಡಿಯಾರ ನೋಡಿಕೊಳ್ಳಬೇಕು ಎಂಬ ನಿಯಮವಿದ್ದರೂ ಗೌಹರ್ ಹಿಂದೆ ಬಿದ್ದಿರುವ ಕುಶಾಲ್ ಸಹಾಯಕ ಪಾತ್ರದಲ್ಲಿ ಕಾಣಿಸಿಕೊಂಡ

ಶಿಲ್ಪಾ ತನೀಶಾ

ನರಕವಾಸಿಗಳು ಟಾಸ್ಕ್ ಮಾಡದಂತೆ ಅಡ್ಡಪಡಿಸುವುದು ಸ್ವರ್ಗವಾಸಿಗಳಿಗೆ ಇದ್ದ ಸವಾಲಾಗಿತ್ತು. ಶಿಲ್ಪಾ ತನೀಶಾ ಎಂಬ ಸಿಹಿ ಕಂಠಗಳು ಎಷ್ಟೇ ಜೋರಾಗಿ ಕಿರುಚಿದರೂ ನರಕವಾಸಿಗಳಿಗೆ ಅದು ಹಿತವಾಗೇ ಕೇಳಿಸುತ್ತಿತ್ತು. ಕ್ಯಾಪ್ಟನ್ ತನೀಶಾಗೆ ಮನೆ ದೈನಂದಿನ ಕೆಲಸದಿಂದ ಮಾಫಿ ಇದ್ದರೂ ಟಾಸ್ಕ್ ಗಳಲ್ಲಿ ಪಾಲ್ಗೊಳ್ಳಲು ಬಿಗ್ ಬಾಸ್ ಸೂಚಿಸಿದ್ದರು.

ಗೌಹರ್

ಗೌಹರ್ ಖಾನ್ ಕಿಚಾಯಿಸಿದ ಸಂಗ್ರಾಮ್ ಸಿಂಗ್ ವಿರುದ್ಧ ತಿರುಗಿ ಬಿದ್ದ ಗೌಹರ್ ಇನ್ನಷ್ಟು ಜೋರಾಗಿ ಕಿರುಚುವಂತೆ ರೇಗಿಸಿದಳು

ಮಳೆ ಕಾಟ

ನರಕವಾಸಿಗಳಿಗೆ ಸೋರುವ ಮಳೆ ಜತೆ ಯುದ್ಧ ಮಾಡುವ ಸಾಹಸ ಬೇರೆ ಎದುರಿಸಬೇಕಾಯಿತು. ಕಾಮ್ಯಾ ಹಾಗೂ ಪ್ರತ್ಯೂಷಾ ಕೊಡೆ ಹಿಡಿದುಕೊಂಡು ಟಾಸ್ಕ್ ಮುಂದುವರೆಸಿದರು.

ಗೌಹರ್ ಹಾಗೂ ಆಂಡಿ

ಗೌಹರ್ ಹಾಗೂ ಆಂಡಿ ಇಬ್ಬರು ಮತ್ತೆ ಜೊತೆ ಜೊತೆಯಲ್ಲಿ ಎಂದು ರಾಗ ಹಾಡುತ್ತಿದ್ದಾರೆ. ಸ್ವರ್ಗವಾಸಿಯಾಗಿ ಗೌಹರ್ ಗೆ ಕಾಟ ನೀಡಬೇಕಿದ್ದ ಆಂಡಿ ಬಾಯ್ಮುಚ್ಚುತ್ತಿರುವ ಗೌಹರ್

ಅರ್ಮಾನ್ ಹಾಗೂ ರಜತ್

ಅರ್ಮಾನ್ ಹಾಗೂ ರಜತ್ ಜಟಾಪಟಿ ಸ್ವರ್ಗವಾಸಿಗಳಿಗೆ ಶಾಕ್ ಆಗಿತ್ತು. ರಜತ್ ಈಡಿಯೆಟ್ ಇವನಿಂದಾಗಿ ಸ್ವರ್ಗವಾಸಿಗಳು ಸರಿಯಾಗಿ ಯಾವ ಟಾಸ್ಕ್ ಮಾಡಲಾಗುತ್ತಿಲ್ಲ. ನರಕವಾಸಿಗಳ ಮುಂದೆ ತಲೆ ತಗ್ಗಿಸುವಂತಾಗುತ್ತಿದೆ ಎಂದು ಅರ್ಮಾನ್ ಕೂಗಾಡಿದ.

English summary
Bigg Boss 7: Day 9 the Hell-mates are going to have an interesting task of watching the clock and working it every minute while the Heaven-mates constantly persist on distracting them.
Please Wait while comments are loading...