»   » ಬಿಬಿ7: ಸಂಗ್ರಾಮ್, ತನೀಶಾ, ಗೌಹರ್ ಬಣ್ಣ ಬಯಲು

ಬಿಬಿ7: ಸಂಗ್ರಾಮ್, ತನೀಶಾ, ಗೌಹರ್ ಬಣ್ಣ ಬಯಲು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಿನಿಮಾ ಹಾಗೂ ರಾಜಕೀಯಕ್ಕೂ ಬಿಡಿಸಲಾರದ ನಂಟು ಎನ್ನಬಹುದು. ದೀಪಾವಳಿ ಸಂಭ್ರಮದ ನಂತರ ಮನೆ ಮಂದಿಗೆ ರಾಜನೀತಿ ಟಾಸ್ಕ್ ಕೊಟ್ಟಿರುವ ಬಿಗ್ ಬಾಸ್ ಎಲ್ಲರ ಬಣ್ಣ ಬಯಲು ಮಾಡಲು ತಂತ್ರ ರೂಪಿಸಿದ್ದಂತೆ ಕಾಣುತ್ತದೆ. ಕಾಮ್ಯಾ ಹಾಗೂ ಸಂಗ್ರಾಮ್ ಇಬ್ಬರು ಎರಡು ರಾಜಕೀಯ ಪಕ್ಷದ ಮುಖಂಡರಾಗಿ ಸಪ್ಪೆ ಭಾಷಣ ಮಾಡಿದರೂ ಇತರೆ ಸ್ಪರ್ಧಿಗಳನ್ನು ತಮ್ಮತ್ತ ಸೆಳೆಯುಕೊಳ್ಳುವಲ್ಲಿ ಮಾಡುವ ತಂತ್ರಗಾರಿಕೆ ಯಾವ ರಾಜಕಾರಣಿಗಳಿಗೂ ಕಮ್ಮಿಯೇನಿಲ್ಲ.

ಪಕ್ಷದ ಉಳಿವಿಗಾಗಿ ನಿಂತ ಸಂಗ್ರಾಮ್ ಈಗ ಉಗ್ರ ಪ್ರತಾಪಿ ಅರ್ಮಾನ್ ಸಮಕ್ಕೂ ನಿಂತು ವಾದ ಮಾಡುತ್ತಾ ತನ್ನ ಅಸಲಿ ರೂಪದ ಪರಿಚಯ ಮಾಡಿಕೊಡುತ್ತಿದ್ದಾನೆ. ಹಳೆ ನಾಮಿನೇಷನ್ ಪ್ರಕ್ರಿಯೆಯನ್ನು ತಲೆಯಲ್ಲಿ ಇಟ್ಟುಕೊಂಡು ಇಬ್ಬರು ನೀನೇ ಸುಳ್ಳುಗಾರ ತಂತ್ರಗಾರ ಎಂದೆಲ್ಲ ಕಿತ್ತಾಡಿದ್ದು ಈಗ ಹೊಸ ಜಗಳಕ್ಕೆ ನಾಂದಿ ಹಾಡಿದೆ.

ಅರ್ಮಾನ್ ಹಾಗೂ ಸಂಗ್ರಾಮ ನಡುವಿನ ಕಿತ್ತಾಟದ ಮಧ್ಯೆ ಬಂದ ತನೀಶಾ ಮೇಲೆ ಅರ್ಮಾನ್ ಕೂಗಾಡಿ ನನ್ನ ಜತೆ ಮಾತನಾಡಬೇಡಿ ಎಂದು ತನೀಶಾಳನ್ನು ದೂರ ತಳ್ಳುತ್ತಾನೆ. ಇದರಿಂದ ಕೋಪಗೊಂಡ ತನೀಶಾ ಸಂಗ್ರಾಮ್ ರಿಂದ ನಾಯಕತ್ವವನ್ನು ಎಲ್ಲಿ ಗೆ ನೀಡುತ್ತಾಳೆ.

ಆದರೆ, ಮುಂದೆ ಗೌಹರ್ ಹಾಗೂ ತನೀಶಾ ನಡುವಿನ ಮುಸುಕಿನ ಗುದ್ದಾಟ ದೊಡ್ಡದಾಗಿ ಪ್ರಕಟಗೊಂಡು ತಾವಿಬ್ಬರೂ ಏಕೆ ಆಜನ್ಮ ಶತ್ರುಗಳು ಎಂಬುದನ್ನು ಪ್ರದರ್ಶಿಸುತ್ತಾರೆ. ರಾಜನೀತಿ ಟಾಸ್ಕ್ ಸಂದರ್ಭದಲ್ಲಿ ಚರ್ಚೆ ಬದಲಿಗೆ ಇಬ್ಬರು ಕಿತ್ತಾಡಿದ್ದಾರೆ.

ಕಾಮ್ಯಾ ಪರವಾಗಿ ಗೌಹರ್ ಹಾಗೂ ಎಲ್ಲಿ ಪರವಾಗಿ ಆಂಡಿ ಚರ್ಚೆಗಿಳಿಯುತ್ತಾರೆ. ಆದರೆ, ಚರ್ಚೆ ಸಂದರ್ಭದಲ್ಲಿ ಸಂಗ್ರಾಮ್ ಹೇಗೆ ನಾಯಕನಾಗಲು ನಾಲಾಯಕ್ ಎಂದು ವಿವರಿಸುತ್ತಾಳೆ. ಇದರಿಂದ ಕೆರಳಿದ ತನೀಶಾ ಇದು ವೈಯಕ್ತಿಕ ನಿಂದನೆ ಎಂದು ಹೇಳುತ್ತಾಳೆ. ಮುಂದೇನು ಇಲ್ಲಿ ಓದಿ

ದೀಪಾವಳಿ ಸಂಭ್ರಮದ ನಂತರ ಮನೆ

ಸಿನಿಮಾ ಹಾಗೂ ರಾಜಕೀಯಕ್ಕೂ ಬಿಡಿಸಲಾರದ ನಂಟು ಎನ್ನಬಹುದು. ಆರ್ಮಾನ್ ಹಾಗೂ ಸಂಗ್ರಾಮ್ ಜಗಳ ಆರಂಭ

ಆರ್ಮಾನ್ ಹಾಗೂ ಸಂಗ್ರಾಮ್

ಆರ್ಮಾನ್ ಹಾಗೂ ಸಂಗ್ರಾಮ್ ಇಬ್ಬರು ಎತ್ತರದ ದನಿ ಕಿರುಚಾಡುತ್ತಾ ವೈಯಕ್ತಿಕ ನಿಂದನೆಗಿಳಿದರು

ಸಂಗ್ರಾಮ್ ಹೊಸ ಅವತಾರ

ಸೌಮ್ಯ ಸ್ವಭಾವದ ಸಂಗ್ರಾಮ್ ಹೊಸ ಅವತಾರ ನೋಡಿ ಇತರೆ ಸ್ಪರ್ಧಿಗಳಿಗೂ ಅಚ್ಚರಿಯಾಯಿತು

ಶಾಂತನಾದ ಸಂಗ್ರಾಮ್

ಶಾಂತನಾದ ಸಂಗ್ರಾಮ್ ಇತರೆ ಸ್ಪರ್ಧಿಗಳ ಸಲಹೆ ಪಡೆಯುತ್ತಿದ್ದಾರೆ

ಜಗಳಕ್ಕೂ ಮುನ್ನ

ಜಗಳಕ್ಕೂ ಮುನ್ನ ಎಲ್ಲರೂ ದೀಪಾವಳಿ ಸಂಭ್ರಮದಲ್ಲಿ ಮಿಂದೆದ್ದರು

ಕಂಗಾಲಾದ ತನೀಶಾ

ಅರ್ಮಾನ್ ಒಬ್ಬ ತಂತ್ರಗಾರ ಎಂದು ಸಂಗ್ರಾಮ್ ಹೇಳಿದಾಗ ಸಿಟ್ಟಾದ ಅರ್ಮಾನ್ ತನೀಶಾ ಬಳಿ ಬಂದು ಹೇಳು ನಾನು ಎಂದಾದರೂ ತಂತ್ರ ಹೂಡಿದ್ದು ನಿಜವೇ ಎಂದು ಕೂಗಾಡುತ್ತಾನೆ

ತನೀಶಾ ಅರ್ಮಾನ್

ಇದರಿಂದ ಕಂಗಾಲಾದ ತನೀಶಾ ಉತ್ತರ ನೀಡಲು ಬಿಡದಂತೆ ಅರ್ಮಾನ್ ಮತ್ತೆ ಕೂಗಾಡುತ್ತಾನೆ

ಪತಿಯಂತೆ ದಬ್ಬಾಳಿಕೆ

ತನೀಶಾ ಮೇಲೆ ಪತಿಯಂತೆ ದಬ್ಬಾಳಿಕೆ ಮಾಡುತ್ತಿರುವಂತೆ ಅರ್ಮಾನ್ ಕಂಡು ಬಂದಿದ್ದಾನೆ. ತನೀಶಾ ಎಲ್ಲಿಗೆ ಹೋದರೂ ಅಲ್ಲಿಗೆ ಬಂದು ಕಾಟ ಕೊಡುತ್ತಾನೆ

ಸೌಮ್ಯ ಸ್ವರೂಪಿ ತನೀಶಾ

ಆದರೆ, ಎಂದಿನಂತೆ ಸೌಮ್ಯ ಸ್ವರೂಪಿ ತನೀಶಾ ವಿಷಯವನ್ನು ನಿಭಾಯಿಸಲು ಯತ್ನಿಸುತ್ತಾಳೆ

ಸಂಗ್ರಾಮ್ ಗೆ ಅರ್ಮಾನ್

ಹಳೆ ನಾಮಿನೇಷನ್ ಪ್ರಕ್ರಿಯೆಯನ್ನು ತಲೆಯಲ್ಲಿ ಇಟ್ಟುಕೊಂಡು ಇಬ್ಬರು ನೀನೇ ಸುಳ್ಳುಗಾರ ತಂತ್ರಗಾರ ಎಂದು ಸಂಗ್ರಾಮ್ ಗೆ ಅರ್ಮಾನ್ ಹೇಳುತ್ತಾನೆ

ತನೀಶಾ ಖಿನ್ನಸ್ಥಿತಿಯಲ್ಲಿ

ಚರ್ಚೆಗಳಿಂದ ಬೇಸತ್ತ ತನೀಶಾ ಖಿನ್ನಸ್ಥಿತಿಯಲ್ಲಿ

ಹೊಸ ಸ್ಪರ್ಧಿಗಳು

ಹಳೆ ಜಗಳದ ಬಗ್ಗೆ ತಿಳಿಯದ ಹೊಸ ಸ್ಪರ್ಧಿಗಳು ಕಂಗಾಲಾಗಿ ಎಲ್ಲವನ್ನು ನೋಡುತ್ತಾರೆ

ತನೀಶಾ ಕೋಪದಲ್ಲಿ

ಕೋಪದಲ್ಲಿ ತನೀಶಾ ಸಂಗ್ರಾಮ್ ಅವರನ್ನು ಬದಲಿಸಿ ಎಲ್ಲಿಗೆ ಪಟ್ಟಕಟ್ಟುತ್ತಾಳೆ

ಗೌಹರ್ -ತನೀಶಾ

ಮುಂದೆ ರಾಜಕೀಯ ಸಂದರ್ಭದಲ್ಲಿ ನೀನೊಬ್ಬ ಅಡುಗೆ ಕೆಲಸದವಳು(cook) ಆಗಲು ಲಾಯಕ್ಕು ಎಂದು ತನೀಶಾ ಕೂಗಾಡುತ್ತಾಳೆ. ಇದಕ್ಕೆ ಪ್ರತಿಯಾಗಿ ಗೌಹರ್ ಹಾಗಾದರೆ ನಾನು ಅಡುಗೆ ಮಾಡುವುದೆ ಇಲ್ಲ ಆಗ ಗೊತ್ತಾಗುತ್ತದೆ ನನ್ನ ಬೆಲೆ ಎಂದು ಹೇಳಿ ಕಾಮ್ಯಾಗೂ ಅಡುಗೆ ಮಾಡದಂತೆ ತಾಕೀತು ಮಾಡುತ್ತಾಳೆ.

English summary
Bigg Boss 7's good-hearted-caring-guy Sangram looses his diplomatic image. He has a bad fight with Armaan when he is called a liar and accuses him of plotting previously for nominations.
Please Wait while comments are loading...