»   » ಮೊದಲ ಎಲಿಮಿನೇಷನ್ನಲ್ಲೇ ಸಲ್ಲೂ ತುಂಟಾಟ

ಮೊದಲ ಎಲಿಮಿನೇಷನ್ನಲ್ಲೇ ಸಲ್ಲೂ ತುಂಟಾಟ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ, ಟಿವಿ ಜಗತ್ತಿನ ಅತಿ ವಿವಾದಿತ ಶೋ ಎನಿಸಿರುವ ಬಿಗ್ ಬಾಸ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಕಳೆದ ಆವೃತ್ತಿಯಲ್ಲಿ ಸ್ವರ್ಗ ನರಕ ಕಲ್ಪನೆಯ ಸೆಟ್ ನಲ್ಲಿ ಸ್ಪರ್ಧಿಗಳಿಗೆ ಕಾಟ ಕೊಟ್ಟ ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಏರೋಪ್ಲೇನ್ ಹತ್ತಿರುವ ಸ್ಪರ್ಧಿಗಳ ಪೈಕಿ ಮೊದಲ ಸ್ಪರ್ಧಿ ವಿಮಾನದಿಂದ ಹೊರ ನಡೆದಿದ್ದಾರೆ. ಮೊದಲ ಎಲಿಮಿನೇಷನ್ ನಲ್ಲೇ ಸಲ್ಮಾನ್ ಖಾನ್ ತುಂಟಾಟವಾಡಿದ್ದಾರೆ.

ರಹಸ್ಯ ಕೋಣೆಯಲ್ಲಿರುವ ಮೂವರು ಅತಿಥಿಗಳ ಪರಿಚಯ ಈಗ ಪ್ರೇಕ್ಷಕರು ಹಾಗೂ ಸ್ಪರ್ಧಿಗಳಿಗೆ ಸಿಕ್ಕಿದೆ. ಅನ್ನ, ಚಪಾತಿ, ನೀರು ಇಲ್ಲದೆ ಕೊನೆಗೆ ಒಳಚಡ್ಡಿ ಸಿಗದೆ ಮೊದಲ ವಾರವೇ ಪಡಬಾರದ ಪರದಾಟ ಪಟ್ಟ ಸ್ಪರ್ಧಿಗಳಿಗೆ ಬಿಗ್ ಬಾಸ್ ಸರಿಯಾಗಿ ಚುರುಕು ಮುಟ್ಟಿಸಿದ್ದಾರೆ.

ಬಿಗ್ ಬಾಸ್ 8 ರ ಮೊದಲ ವಾರದ ನಾಮಿನೇಷನ್ ಮುಕ್ತವಾಗಿ ನಡೆದಿದ್ದು, ಮಜಾ ಇನ್ನೂ ಬಾಕಿ ಇದೆ ನೋಡುತ್ತಿರಿ ಎಂದು ತೆರಲಿದ್ದ ಪೈಲಟ್ ಸಲ್ಮಾನ್ ಖಾನ್ ಶನಿವಾರ ಮೊದಲ ಸ್ಪರ್ಧಿಯನ್ನು ವಿಮಾನ ಬಿಟ್ಟು ತಾನಿರುವ ವೇದಿಕೆಗೆ ಸಲ್ಮಾನ್ ಕರೆದಿದ್ದಾರೆ. [12 ಜನರಿಗೆ ಏರೋಪ್ಲೇನ್ ಹತ್ತಿಸಿದ ಸಲ್ಮಾನ್]

Bigg Boss 8 Elimination: Sonali Rout Exits Show!

ಡೇಂಜರ್ ಜೋನ್ ನಲ್ಲಿದ್ದ ನಾಲ್ವರ ಪೈಕಿ ಸುಕ್ರಿತಿ ಹಾಗೂ ಸೊನಾಲಿ ನಡುವೆ ಕನ್ ಫ್ಯೂಷನ್ ಸೃಷ್ಟಿಸಿದ ಸಲ್ಮಾನ್ ಕೊನೆಗೆ ಸುಕ್ರಿತಿ ಅಲ್ಲ ಸೊನಾಲಿ ವಿಮಾನದಿಂದ ಹೊರಬರಲಿ ಎಂದು ಕೊನೆ ಕ್ಷಣದ ತನಕ ಕುತೂಹಲ ಕಾಯ್ದುಕೊಂಡರು.

ಮೊದಲ ವಾರದ ಡೇಂಜರ್ ಜೋನ್ ನಲ್ಲಿ ನಟಾಶಾ ಸ್ಟಾನ್ಕೋವಿಕ್, ಸುಕ್ರಿತಿ ಕಂದ್ಪಾಲ್, ಸೋನಾಲಿ ರಾವತ್, ಗೌತಮ್ ಗುಲಾಟಿ ಇದ್ದರು.ಅದರೆ, ವೀಕ್ಷಕರ ಮತಗಳು, ಸೀಕ್ರೇಟ್ ಸೊಸೈಟಿ(ಎಸ್ಎಸ್) ನಿರ್ಧಾರದಂತೆ ಸೊನಾಲಿ ಬಿಗ್ ಬಾಸ್ ನಿಂದ ಹೊರ ನಡೆದಿದ್ದಾರೆ.

ಬಣ್ಣದ ಬೀಸಣಿಗೆ ಸೋನಾಲಿ ಮನೆಯ ಟಾಸ್ಕ್ ಗಳಲ್ಲಿ ತೋರಿದ್ದು, ನೆಗಟಿವ್ ಭಾವನೆ ಬಿತ್ತಿದ್ದು, ಇತರೆ ಸ್ಪರ್ಧಿಗಳ ಜೊತೆ ಹೆಚ್ಚು ಮಾತನಾಡದೆ ಎಲ್ಲರೊಟ್ಟಿಗೆ ಬೆರೆಯದೆ ಉಳಿದಿದ್ದು ಆಕೆಯ ಎಲಿಮಿನೇಷನ್ ಗೆ ಕಾರಣ ಎನ್ನಬಹುದು.

English summary
Bigg Boss 8 first elimination had Salman Khan calling Sonali Raut's name to join him on stage. Sonali thus becomes the first contestant to get eliminated from Bigg Boss house.ret Society (SS).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada