»   » ರಿಯಾಲಿಟಿ ಶೋ 'ಸಂಭಾವನೆ,' ಸಲ್ಲೂ ಬಿಗ್ ಬಾಸ್

ರಿಯಾಲಿಟಿ ಶೋ 'ಸಂಭಾವನೆ,' ಸಲ್ಲೂ ಬಿಗ್ ಬಾಸ್

Posted By: * ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS  
For Daily Alerts

  ಸ್ವರ್ಗ ನರಕ ಕಲ್ಪನೆ ಹೊರ ತಂದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಮತ್ತೊಮ್ಮೆ ಕಲರ್ಸ್ ವಾಹಿನಿಯಲ್ಲೇ ಪ್ರಸಾರವಾಗಲಿದೆ. ಬಿಗ್ ಬಾಸ್ 8 ರ ಸರಣಿಯನ್ನು ಮತ್ತೊಮ್ಮೆ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ ಎಂಬುದು ಖಚಿತವಾಗಿದೆ. ಸೆ.21ರಿಂದ ಹೊಸತನದ ಬಿಗ್ ಬಾಸ್ ಕಾಣಬಹುದಾಗಿದೆ. ಆದರೆ, ಸ್ಪರ್ಧಿಗಳ್ಯಾರು ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

  ಬಿಗ್ ಬಾಸ್ 8ರಲ್ಲಿ ಏರ್ ಕ್ರಾಫ್ಟ್ ಥೀಮ್ ಬಳಸಲಾಗಿದೆ. ಕಳೆದ ಬಾರಿಯ ಸ್ವರ್ಗ ನರಕ ಕಲ್ಪನೆಯಂತೆ ಇಲ್ಲಿ ಎಕಾನಮಿ ಹಾಗೂ ಬಿಸಿನೆಸ್ ಕ್ಲಾಸ್ ಎಂದು ಇರುತ್ತದೆ. ಜೊತೆಗೆ ವೇಟಿಂಗ್ ಲಾಂಜ್ ಕೂಡಾ ಇರುತ್ತದೆಯಂತೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಸಲ್ಮಾನ್ ಖಾನ್ ಅವರು ಪೈಲಟ್ ರೀತಿ ಡ್ರೆಸ್ ಹಾಕಿಕೊಂಡು ಮಿಂಚಿದ್ದಾರೆ. [ಬಿಗ್ ಬಾಸ್ 8 ಮತ್ತೆ ಆರಂಭ, ಸ್ಪರ್ಧಿಗಳ್ಯಾರು?]

  ಕಳೆದ ಎಲ್ಲಾ ಆವೃತ್ತಿಗಳಿಗಿಂತ ಭಿನ್ನವಾಗಿ ಇನ್ನಷ್ಟು ಐಷಾರಾಮಿಯಾಗಿ ಬಿಗ್ ಬಾಸ್ 8 ಮೂಡಿ ಬರಲಿದೆ ಎಂದು ಕಲರ್ಸ್ ವಾಹಿನಿ ಹೇಳಿದೆ. ಸಾಲದ್ದಕ್ಕೆ ನಿರೂಪಕ ಸಲ್ಮಾನ್ ಖಾನ್ ಕೂಡಾ ಈ ಜನಪ್ರಿಯ ರಿಯಾಲಿಟಿ ಶೋ ನಡೆಸಿಕೊಡಲು ಭಾರಿ ಸಂಭಾವನೆ ಪಡೆದುಕೊಳ್ಳುವ ಮೂಲಕ ಇತರರಿಗೆ ಹೋಲಿಸಿದರೆ 'ಬಿಗ್ ಬಾಸ್' ಎನಿಸಿಕೊಂಡಿದ್ದಾರೆ. ಸಲ್ಲೂ ಮಿಯಾ ಸಂಭಾವನೆ, ಸಂಭಾವ್ಯ ಸ್ಪರ್ಧಿಗಳ ವಿವರ ನಿಮ್ಮ ಮುಂದೆ

  ಸ್ಪರ್ಧಿಗಳ ಬಗ್ಗೆ ನನ್ನನ್ನು ಕೇಳಬೇಡಿ
    

  ಸ್ಪರ್ಧಿಗಳ ಬಗ್ಗೆ ನನ್ನನ್ನು ಕೇಳಬೇಡಿ

  ಸ್ಪರ್ಧಿಗಳ ಬಗ್ಗೆ ನನ್ನನ್ನು ಕೇಳಬೇಡಿ ನನಗೆ ಈ ಬಗ್ಗೆ ಅರಿವಿಲ್ಲ. ನನಗೆ ಈ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ ಎಂದಿದ್ದಾರೆ. ಕೊನೆ ಕ್ಷಣದ ತನಕ ಸ್ಪರ್ಧಿಗಳ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದಾರೆ ಎಂದರು.

  ಸ್ಪರ್ಧೆ ಪೂರ್ವ ನಿಯೋಜಿತವಲ್ಲ. ಹೊಸ ಹೊಸ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಮನುಷ್ಯರ ಭಾವನೆಗಳು ಪ್ರತಿಕ್ರಿಯೆಗಳನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ವೇದಿಕೆಯನ್ನಷ್ಟೇ ಒದಗಿಸಬಹುದು. ಅಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆ ಅವರಿಗೆ ಬಿಟ್ಟಿದ್ದು ಎಲ್ಲವೂ ನೈಜವಾಗಿರುತ್ತದೆ ಎಂದರು.

   

  ಸಲ್ಮಾನ್ ಖಾನ್ ಸಂಭಾವನೆ ಎಷ್ಟಿದೆ?
    

  ಸಲ್ಮಾನ್ ಖಾನ್ ಸಂಭಾವನೆ ಎಷ್ಟಿದೆ?

  ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಅವರಿಗೆ ನೀಡಲಾಗುತ್ತಿರುವ ಸಂಭಾವನೆಯಲ್ಲಿ ಹಲವಾರು SUV ಗಳನ್ನು ಖರೀದಿಸಬಹುದಂತೆ. ಎಪಿಸೋಡಿಗೆ 5-6 ಕೋಟಿ ರು ನಂತೆ 26 ಎಪಿಸೋಡುಗಳಿಗೆ ಸರಿ ಸುಮಾರು 130 ಕೋಟಿ ರು ಪಡೆದುಕೊಳ್ಳುತ್ತಿದ್ದಾರಂತೆ. ಒಟ್ಟಾರೆ ಶೋಗೆ ಮಾಡುತ್ತಿರುವ ಖರ್ಚು ಕೂಡಾ ಸಲ್ಮಾನ್ ಗೆ ನೀಡುತ್ತಿರುವ ಸಂಭಾವನೆಯಷ್ಟೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.ಆದರೆ, ಲಾಭ ಮಾತ್ರ ಭರಪೂರ.

  ಲೇಟೇಸ್ಟ್ ಸಂಭಾವ್ಯ ಸ್ಪರ್ಧಿಗಳು
    

  ಲೇಟೇಸ್ಟ್ ಸಂಭಾವ್ಯ ಸ್ಪರ್ಧಿಗಳು

  ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಲವಾರು ಹೆಸರುಗಳ ಪೈಕಿ ಅರ್ಯಾ ಬಬ್ಬರ್, ಉಪೇನ್ ಪಟೇಲ್, ಶ್ವೇತಾ ಸಾಳ್ವೆ, ಪ್ರಣೀತ್ ಭಟ್, ಮೋಹಿತ್ ಮಲ್ಹೋತ್ರ ಹೊರ ಸೇರ್ಪಡೆಯಾಗಿದೆ. ಇವರೆಲ್ಲ ಸಂಭಾವ್ಯ ಅಭ್ಯರ್ಥಿಗಳಾಗಿದ್ದು, ಇನ್ನೂ ಅಧಿಕೃತ ಪಟ್ಟಿ ಹೊರ ಹಾಕಿಲ್ಲ.

  ಮುಂಬೈ ಛಾಯಾಗ್ರಾಹಕರಿಂದ ಬ್ಯಾನ್
    

  ಮುಂಬೈ ಛಾಯಾಗ್ರಾಹಕರಿಂದ ಬ್ಯಾನ್

  ಬಿಗ್ ಬಾಸ್ 8 ಲಾಂಚ್ ಕಾರ್ಯಕ್ರಮವನ್ನು ಮುಂಬೈನ ಅನೇಕ ಛಾಯಾಗ್ರಾಹಕ ಪತ್ರಕರ್ತರು ನಿಷೇಧಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಲ್ಮಾನ್, ನಾನು ಏನು ಮಾಡಲು ಸಾಧ್ಯ. ನನ್ನ ಕಾರ್ಯಕ್ರಮಕ್ಕೆ ಕವರೇಜ್ ನೀಡಿ ನಾನು ಯಾರನ್ನು ಬಲವಂತ ಮಾಡಿಲ್ಲ. ಫೋಟೋ ತೆಗೆಯಬೇಡಿ ಎಂದಿಲ್ಲ. ಅದರೆ, ಯಾವುದೋ ಘಳಿಗೆಯಲ್ಲಿ ಅದ ಒಂದು ಮಾತಿನ ಚಕಮಕಿಗೆ ನನ್ನ ವಿರುದ್ಧ ಕಿಡಿ ಕಾರಿದ್ದಾರೆ. ನಾನು ಅವರ ನಿರ್ಣಯವನ್ನು ಗೌರವಿಸುತ್ತೇನೆ, ನಾನೇನು ಮಾರುಕಟ್ಟೆಯಲ್ಲಿರುವ ಮೀನಲ್ಲ ಎಂದಿದ್ದಾರೆ.

  ಶಾರುಖ್ ಖಾನ್ ಗೂ ಆಹ್ವಾನ ಕಳಿಸಲಾಗಿದೆ
    

  ಶಾರುಖ್ ಖಾನ್ ಗೂ ಆಹ್ವಾನ ಕಳಿಸಲಾಗಿದೆ

  ಚಿತ್ರಗಳ ಪ್ರೊಮೋಷನ್ ಗೆ ಬಿಗ್ ಬಾಸ್ ವೇದಿಕೆ ಏರಲು ಬಾಲಿವುಡ್ ಮಂದಿ ಹಾತೊರೆಯುತ್ತಾರೆ. ಎಲ್ಲರಂತೆ ಶಾರುಖ್ ಖಾನ್ ಗೂ ಆಹ್ವಾನ ಕಳಿಸಲಾಗಿದೆ. ಅವರ ಹ್ಯಾಪಿ ನ್ಯೂ ಇಯರ್ ಚಿತ್ರದ ಪ್ರಚಾರ ಮಾಡಲಾಗುತ್ತದೆ. ಅವರು ಯಾಕೆ ಹಿಂದೇಟು ಹಾಕುತ್ತಾರೆ ಎಂದು ಸಲ್ಮಾನ್ ಮರು ಪ್ರಶ್ನಿಸಿದರು.

  ನಿರೂಪಕನಾಗಿ ನನ್ನ ಕೆಲಸ ಜವಾಬ್ದಾರಿಯುತವಾಗಿದೆ
    

  ನಿರೂಪಕನಾಗಿ ನನ್ನ ಕೆಲಸ ಜವಾಬ್ದಾರಿಯುತವಾಗಿದೆ

  ನಿರೂಪಕನಾಗಿ ನನ್ನ ಕೆಲಸ ಜವಾಬ್ದಾರಿಯುತವಾಗಿದೆ. ಈ ಆಟದಲ್ಲಿ ತಾಳ್ಮೆ, ತಂತ್ರಗಾರಿಕೆ, ನಂಬಿಕೆ, ಗೆಳೆತನ, ಮನರಂಜನೆ ಇದ್ದೆ ಇದೆ. ವಿಮಾನ ಎತ್ತರಕ್ಕೆ ಏರುತ್ತಿದ್ದಂತೆ ಸಮತೋಲನ ಕಾಯ್ದುಕೊಳ್ಳಬೇಕು, ಪ್ರಯಾಣಿಕರು ಯಾವುದೇ ಕ್ಲಾಸ್ ನಲ್ಲಿರಲಿ ಪೈಲಟ್ ತನ್ನ ಕರ್ತವ್ಯ ಸರಿಯಾಗಿ ನಿಭಾಯಿಸಿ ಸಮಾಹಿತನಾಗಿರಬೇಕು ಎಂದರು.

  ಸುದ್ದಿಗೋಷ್ಠಿ ವಿವರ ವಿಡಿಯೋ

  ಬಿಗ್ ಬಾಸ್ 8 ಲಾಂಚ್ ಸುದ್ದಿಗೋಷ್ಠಿ ವಿವರ ವಿಡಿಯೋ

  English summary
  "Bigg Boss 8" is all set to air on 21 September in Colors Channel. Salman Khan who will be reprising his role as a host launched Bigg Boss 8 recently and explained about the theme and set-up of the new season which was hinted earlier on released teasers and photos. Here are the details of his remuneration.
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more