For Quick Alerts
  ALLOW NOTIFICATIONS  
  For Daily Alerts

  ಋಷಿಕುಮಾರನಿಗೆ ಸ್ಟುಪಿಡ್ ಫೆಲೋ ನಿಖಿತಾ ಬೈಗುಳ

  By Rajendra
  |

  ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ 16ನೇ ದಿನಕ್ಕೆ ಅಡಿಯಿಟ್ಟಿದೆ. ಮನೆಯಲ್ಲಿ ಗೊಂದಲ, ಕಿತ್ತಾಟ, ಕಾಲೆಳೆದಾಟ, ಹುಸಿಕೋಪ ತಾಪಗಳು ಮುಂದುವರೆದಿವೆ. ಈ ಬಾರಿ ಮನೆಯಿಂದ ಹೊರಬೀಳುವವರ ಪಟ್ಟಿಯಲ್ಲಿ ಚಂದ್ರಿಕಾ ಸಹ ಇದ್ದಾರೆ.

  ಹಾಗಾಗಿ ಅವರ ಮನಸ್ಥಿತಿಯೋ ಸ್ವಲ್ಪ ಬದಲಾವಣೆಗಳಾಗಿವೆ. ನಿಖಿತಾ ಜೊತೆ ಆಗಾಗ ಕಿತ್ತಾಟ, ಬೈಯ್ದಾಟಗಳು ನಡೆಯುತ್ತಲೇ ಇವೆ. ಮನೆಯಲ್ಲಿ ಎಲ್ಲರೊಂದಿಗೂ ಹೊಂದಿಕೊಂಡು ಹೋಗಲು ಅವರು ಪ್ರಯತ್ನಿಸುತ್ತಿದ್ದಾರೆ.

  ಇನ್ನೊಂದು ಕಡೆ ವಿನಾಯಕ ಜೋಶಿ, ಶ್ವೇತಾ ಪಂಡಿತ್ ಅವರು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ. ಈ ಬಾರಿ ಮನೆಯಿಂದ ಯಾರು ಹೊರಹೋಗುತ್ತಾರೆ ಎಂಬ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ.

  ಒಂಚೂರು ಅರ್ಥವತ್ತಾದ ಟಾಸ್ಕ್ ಕೊಟ್ಟ ಬಿಗ್ ಬಾಸ್

  ಒಂಚೂರು ಅರ್ಥವತ್ತಾದ ಟಾಸ್ಕ್ ಕೊಟ್ಟ ಬಿಗ್ ಬಾಸ್

  ಬಿಗ್ ಬಾಸ್ ಈ ಬಾರಿ ಸ್ಪರ್ಧಿಗಳಿಗೆ ತಿಕ್ಕಲು ತಿಕ್ಕಲು ಟಾಸ್ಕ್ ಗಳನ್ನು ಕೊಡದೆ ಒಂಚೂರು ಅರ್ಥವತ್ತಾಗಿರುವ ಟಾಸ್ಕ್ ನೀಡಿದ್ದಾನೆ. ಅದೇನೆಂದರೆ ಕೆಲವರಿಗೆ ರಾಕ್ಷಸರ ಪಾತ್ರ ಇನ್ನು ಕೆಲವರಿಗೆ ದೇವತೆಗಳ ಪಾತ್ರ. ರಾಕ್ಷಸರಾದವರು ದೇವತೆಗಳ ಬಳಿ ಇರುವ ಅಮೃತವನ್ನು ಜಾಣ್ಮೆಯಿಂದ ಕಿತ್ತುಕೊಳ್ಳಬೇಕು.

  ರಾಕ್ಷಸರ ಗುರು ಆಗಿ ಋಷಿಕುಮಾರ

  ರಾಕ್ಷಸರ ಗುರು ಆಗಿ ಋಷಿಕುಮಾರ

  ದೇವತೆಗಳ ಗುರುವಾಗಿ ನರೇಂದ್ರ ಬಾಬು ಶರ್ಮಾ ಇದ್ದರೆ ಜೊತೆಗೆ ಅಪರ್ಣಾ, ನಿಖಿತಾ, ವಿಜಯ ರಾಘವೇಂದ್ರ ಹಾಗೂ ವಿನಾಯಕ ಜೋಶಿ ಇದ್ದಾರೆ. ಇನ್ನು ರಾಕ್ಷಸರ ಗುರುವಾಗಿ ಋಷಿಕುಮಾರ ಸ್ವಾಮೀಜಿ ಜೊತೆ ಚಂದ್ರಿಕಾ, ಶ್ವೇತಾ ಪಂಡಿತ್, ಅರುಣ್ ಸಾಗರ್, ತಿಲಕ್ ಹಾಗೂ ಅನುಶ್ರೀ ಇದ್ದರು.

   ಅರುಣ್ ಸಾಗರ್ ಅದ್ಭುತ ಅಭಿನಯ

  ಅರುಣ್ ಸಾಗರ್ ಅದ್ಭುತ ಅಭಿನಯ

  ಅರುಣ್ ಸಾಗರ್ ಅವರ ಅಭಿನಯವಂತೂ ರಾಕ್ಷಸನ ಪಾತ್ರದಲ್ಲಿ ಅದ್ಭುತ ಅಭಿನಯ ಪ್ರದರ್ಶಿಸಿದರು. ಏನೇನೋ ಪ್ಲಾನು ಮಾಡಿ ದೇವತೆಗಳ ಬಳಿ ಇರುವ ಅಮೃತವನ್ನು ಕಬಳಿಸಲು ವಿಫಲ ಯತ್ನ ಮಾಡಿದರು. ಕೊನೆಗೂ ಅವರಿಂದ ಅಮೃತವನ್ನು ಕಸಿದುಕೊಳ್ಳಲು ಯಶಸ್ವಿಯಾದರು.

  ಸಮುದ್ರ ಮಥನ ಆಟ ಅದಲು ಬದಲು

  ಸಮುದ್ರ ಮಥನ ಆಟ ಅದಲು ಬದಲು

  ಬಳಿಕ ಇಬ್ಬರ ಪಾತ್ರಗಳು ಅದಲು ಬದಲಾದವು. ಮೊದಲು ದೇವತೆಗಳಾಗಿದ್ದವರು ರಾಕ್ಷಸರಾಗಿ ಬದಲಾದರು. ಬಿಗ್ ಬಾಸ್ ಆಣತಿಯಂತೆ ಆಟ ಮುಂದುವರಿಯುತ್ತಿದೆ. ದೇವತೆಗಳಿಂದ ಅಮೃತವನ್ನು ಸವಿಯಲು ಯೋಜನೆ ಹಾಕುತ್ತಿದ್ದಾರೆ.

  ಸಂಕೋಚದ ಮುದ್ದೆಯಾಗಿರುವ ಋಷಿಕುಮಾರ

  ಸಂಕೋಚದ ಮುದ್ದೆಯಾಗಿರುವ ಋಷಿಕುಮಾರ

  ಅದ್ಯಾಕೋ ಏನೋ ಋಷಿಕುಮಾರ ಸ್ವಾಮೀಗಳು ಮನೆಗೆ ಬಂದು ಎರಡು ದಿನಗಳಾದರೂ ಇನ್ನೂ ಅಲ್ಲಿನ ವಾತಾವರಣಕ್ಕೆ ಹೊಂದಾಣಿಕೆಯಾದಂತೆ ಕಂಡುಬರುತ್ತಿಲ್ಲ. ಅವರು ಇನ್ನೂ ಸಂಕೋಚದಿಂದಲೇ ಎಲ್ಲರೊಂದಿಗೂ ಬೆರೆಯುತ್ತಿದ್ದಾರೆ.

  ನಿಖಿತಾ ಕೈಲಿ ಸ್ಟುಪಿಡ್ ಫೆಲೋ ಬೈಗುಳ

  ನಿಖಿತಾ ಕೈಲಿ ಸ್ಟುಪಿಡ್ ಫೆಲೋ ಬೈಗುಳ

  ಟಿವಿ ವಾಹಿನಿಗಳಲ್ಲಿ ಚಟಪಟ ಎಂದು ಮಾತನಾಡುತ್ತಿದ್ದ ಋಷಿಕುಮಾರ ಇಲ್ಲಿ ಸೈಲೆಂಟ್ ಆಗಿದ್ದಾರೆ. ನಿಖಿತಾ ಬಳಿ ತಿಂಡಿ ಕಸಿದುಕೊಳ್ಳಲು ಈಡಿಯಟ್, ಸ್ಟುಪಿಡ್ ಫೆಲೋ ಎಂದು ಬೈಸಿಕೊಂಡರು. ಪ್ಯಾಲಿ ನಗುಬೀರುತ್ತಾ ಅತ್ತಿಂದಿತ್ತ ಇತ್ತಿಂದ್ದತ್ತ ಕಾಲುಸುಟ್ಟ ಬೆಕ್ಕಿನಂತೆ ಓಡಾಡಿಕೊಂಡಿದ್ದಾರೆ.

  ತಿಲಕ್, ಜೋಶಿ ನಡುವೆ ಬಿಗ್ ಫೈಟ್

  ತಿಲಕ್, ಜೋಶಿ ನಡುವೆ ಬಿಗ್ ಫೈಟ್

  ಒಂದು ಹಂತದಲ್ಲಿ ವಿನಾಯಕ ಜೋಶಿ ಹಾಗೂ ತಿಲಕ್ ಅವರಿಗೆ ಬಿಗ್ ಫೈಟ್ ನಡೆಯಿತು. ನರಪೇತಲ ನಾರಾಯಣನಂತಿರುವ ವಿನಾಯಕ ಜೋಶಿ ಅವರನ್ನು ತಿಲಕ್ ತಮ್ಮ ಎರಡು ಕೈಗಳಲ್ಲಿ ಬಿಗಿಹಿಡಿದು ಬಂಧಿಸಿದ್ದರು. ತಿಲಕ್ ಬಿಗಿಹಿಡಿತದಿಂದ ಬಿಡಿಸಿಕೊಳ್ಳಲು ಜೋಶಿ ಹರಸಾಹಸ ಪಡಬೇಕಾಯಿತು. ಈ ವಿಚಾರದಲ್ಲಿ ಇಬ್ಬರಿಗೂ ಮಿನಿ ವಾರ್ ನಡೆದುಹೋಯಿತು.

  English summary
  Etv Kannada reality show Bigg Boss day 16th highlights. Nikita was not happy when Rishi Kumar tried to steal the food. The latter forced her physically to give up the food and scratched her on her hand. The actress could not control her anger and said, "Stupid fellow and greedy man."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X