»   » ಹರ್ಷಿಕಾರಿಂದ ಗುರುಪ್ರಸಾದ್ ಮರ್ಮಸ್ಥಾನಕ್ಕೆ ಪೆಟ್ಟು

ಹರ್ಷಿಕಾರಿಂದ ಗುರುಪ್ರಸಾದ್ ಮರ್ಮಸ್ಥಾನಕ್ಕೆ ಪೆಟ್ಟು

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋ ಸತತವಾಗಿ ಸಾಗುತ್ತಿದ್ದು ನಲವತ್ತನಾಲ್ಕನೇ ದಿನಕ್ಕೆ ಅಡಿಯಿಟ್ಟಿದೆ. ಮನೆಯಲ್ಲಿ ಇಷ್ಟು ದಿನ ಕಾಣದಂತಹ ಕೆಲವು ಘಟನೆಗಳು ನಲವತ್ತನಾಲ್ಕನೇ ದಿನ ನಡೆಯಿತು. ಕೆಲವರಿಗೆ ಎಲ್ಲೆಲ್ಲೋ ಪೆಟ್ಟುಗಳೂ ಬಿದ್ದವು.

ಈ ಬಾರಿ ಬಿಗ್ ಬಾಸ್ ಕೊಟ್ಟ ಟಾಸ್ಕ್ 'ಕಾಡು ಪ್ರಾಣಿಗಳ ಪ್ಯಾಟೆ ಲೈಫು'. ಈ ಟಾಸ್ಕ್ ನಿಭಾಯಿಸಬೇಕಾದರೆ ಕೆಲವರು ಥೇಟ್ ಕಾಡು ಪ್ರಾಣಿಗಳೇ ಆದರು. ಇನ್ನೂ ಕೆಲವರು ಶಿಕಾರಿಗಳಂತೆಯೇ ವರ್ತಿಸಿದರು. ಈ ಆಟದಲ್ಲಿ ಕೆಲವರಿಗೆ ಸಣ್ಣಪುಟ್ಟ ಪೆಟ್ಟುಗಳೂ ಆದವು.

ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಾರಣಕ್ಕೂ ದೈಹಿಕ ಹಲ್ಲೆ ಮಾಡುವಂತಿಲ್ಲ ಎಂಬ ನಿಯಮ ಈ ಟಾಸ್ಕ್ ನಲ್ಲಿ ಹರಿದ ಗಾಳಿಪಟದಂತಾಯಿತು. ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವರಿಗೆ ನೋವಾಯಿತು. ಬನ್ನಿ ನೋಡೋಣ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು.

ಕಾಡು ಪ್ರಾಣಿಗಳ ಪ್ಯಾಟೆ ಲೈಫ್ ಟಾಸ್ಕ್

ಕಾಡು ಪ್ರಾಣಿಗಳ ಪ್ಯಾಟೆ ಲೈಫಿನಲ್ಲಿ ಎರಡು ತಂಡಗಳಾಗಿ ವಿಗಂಡಿಸಲಾಯಿತು. ಒಂದು ತಂಡ ಕಾಡುಪ್ರಾಣಿಗಳಾಗಿ, ಇನ್ನೊಂದು ತಂಡ ಶಿಕಾರಿಗಳಾಗಿ ವಿಗಂಡಿಸಲಾಯಿತು. ಶಿಕಾರಿಗಳು ಕಾಡುಪ್ರಾಣಿಗಳನ್ನು ಹಿಡಿದು ತರಬೇತಿ ನೀಡಿ, ಮಾರಾಟ ಮಾಡುವಂತೆ ಮಾಡಬೇಕು.

ಕ್ಯಾಪ್ಟನ್ ಗೆ ಟಾಸ್ಕ್ ನಲ್ಲಿ ಮಧ್ಯಪ್ರವೇಶಿಸುವ ಸ್ವಾತಂತ್ರ್ಯ

ಇನ್ನು ಕಾಡುಪ್ರಾಣಿಗಳು ಶಿಕಾರಿ ಮಾತು ಕೇಳದೆ ಹೆಸರಿಗೆ ತಕ್ಕಂತೆ ನಡೆದುಕೊಳ್ಳಬೇಕು. ಒಂದು ಕೋತಿ ಮಾತ್ರ ಬೋನಿನಿಂದ ಹೊರಗಿದ್ದು ಕೀಯನ್ನು ಕದ್ದು ಉಳಿದ ಪ್ರಾಣಿಗಳನ್ನು ಬಿಡಿಸಬೇಕು. ಈ ಟಾಸ್ಕ್ ನಲ್ಲಿ ಮಧ್ಯಪ್ರವೇಶಿಸುವ ಸ್ವಾತಂತ್ರ್ಯ ಮನೆಯ ಕ್ಯಾಪ್ಟನ್ ಸಂತೋಷ್ ಅವರಿಗಿತ್ತು.

ಅಕುಲ್-ಕೋತಿ, ಹರ್ಷಿಕಾ-ಕರಡಿ, ಶ್ವೇತಾ-ಜಿರಾಫೆ

ಕಾಡು ಪ್ರಾಣಿಗಳ ಪಟ್ಟಿ ಹೀಗಿದೆ ಅಕುಲ್-ಕೋತಿ, ಹರ್ಷಿಕಾ-ಕರಡಿ, ಶ್ವೇತಾ-ಜಿರಾಫೆ, ಆದಿಲೋಕೇಶ್-ಕೋತಿ, ದೀಪಿಕಾ-ಚಿರತೆಯಾದರೆ. ಶಿಕಾರಿಗಳಾಗಿ ಗುರುಪ್ರಸಾದ್, ನೀತೂ, ಸೃಜನ್, ಅನುಪಮಾ ಮತ್ತು ರೋಹಿತ್ ಇದ್ದರು.

ಬೋನಿನಲ್ಲಿ ಇರದ ಕೋತಿಯಾಗಿ ಅಕುಲ್

ಬೋನಿನಲ್ಲಿ ಇರದ ಕೋತಿಯಾಗಿ ಅಕುಲ್ ಆಟ ಆಡಬೇಕಾಗಿತ್ತು. ಈ ವಾರದ ಟಾಸ್ಕ್ ಸಖತ್ ಮಜವಾಗಿಯೇ ಶುರುವಾಯಿತು. ಕೀ ಕದಿಯುವ ಆಟದಲ್ಲಿ ತನಗೆ ಪೆಟ್ಟಾಯಿತು ಎಂದು ಅಕುಲ್ ಖ್ಯಾತೆ ತೆಗೆದರೆ ರೋಹಿತ್ ನಾನು ಆ ರೀತಿ ಮಾಡಲಿಲ್ಲ ಎಂದರು.

ರೋಹಿತ್ ಬಾಯಿಂದ F*** ಎಂಬ ಪ್ರಯೋಗ

ಇದೇ ವಿಷಯವಾಗಿ ರೋಹಿತ್ ಮತ್ತು ಅಕುಲ್ ನಡುವೆ ಭರ್ಜರಿ ಮಾತಿನ ಚಕಮಕಿಯೂ ನಡೆಯಿತು. ಇಬ್ಬರೂ ಕೈಕೈ ಮಿಲಾಯಿಸು ಹಂತಕ್ಕೆ ಹೋಗಿದ್ದರು. ಈ ಮಾತಿನ ಚಕಮಕಿಯಲ್ಲಿ ರೋಹಿತ್ F*** ಎಂಬ ಪದವನ್ನೂ ಬಳಸಿ ಎಲ್ಲರ ಅಸಹನೆಗೆ ಗುರಿಯಾದರು. ಬಳಿಕ ತಾನು ಆ ರೀತಿಯ ಪದ ಉದ್ದೇಶಪೂರ್ವಕವಾಗಿ ಬಳಸಲಿಲ್ಲ ಎಂಬಂತೆ ನಡೆದುಕೊಂಡರು.

ಹಳಿ ತಪ್ಪಿದ ಕಾಡುಪ್ರಾಣಿಗಳ ಪ್ಯಾಟೆ ಲೈಫು

ಇನ್ನೊಂದು ಕಡೆ ಕಾಡು ಪ್ರಾಣಿಗಳ ಪ್ಯಾಟೆ ಲೈಫು ಟಾಕ್ಸ್ ಹಳಿ ತಪ್ಪಿತು. ನೀತೂ ಮತ್ತು ಅಕುಲ್ ನಡುವೆ ದೊಡ್ಡ ಯುದ್ಧವೇ ನಡೆದು ಹೋಯಿತು. ಮಾತಿನ ಭರಾಟೆಯಲ್ಲಿ ನೀತೂ ಅವರು ಅಕುಲ್ ಅವರನ್ನು ಲೋಫರ್ ಎಂದು ಜರಿದರು. ಇಬ್ಬರ ನಡುವೆ ಸಿಕ್ಕಾಪಟ್ಟೆ ಏಕವಚನದ ಪದಗಳು ಹರಿದಾಡಿದವು.

ರಣರಂಗವಾಗಿ ಬದಲಾದ ಬಿಗ್ ಬಾಸ್ ಮನೆ

ಬಿಗ್ ಬಾಸ್ ಮನೆಯೊಂದು ರಣರಂಗದಂತೆ ಬದಲಾಯಿತು. ಕೋತಿಯ ಮುಖವಾಡವನ್ನು ತಲೆ ಮೇಲೆ ಎತ್ತಿ ಹಾಕುತ್ತೇನೆ ಎಂದು ಅಕುಲ್ ಹೇಳಿದ್ದಕ್ಕೆ ನೀತೂ ಇದ್ದಕ್ಕಿದ್ದಂತೆ ರುದ್ರತಾಂಡವ ಶುರು ಮಾಡಿದರು. ನೀನ್ಯಾವೋನೋ ಲೋ ನನ್ನ ಮೇಲೆ ಎತ್ತಿ ಹಾಕ್ತೀನಿ ಎನ್ನಲು ಎಂದು ರಂಪಾಟ ಶುರು ಮಾಡಿದರು.

ಅಕುಲ್ ಬಾಲಾಜಿ ಮೇಲೆ ರಾಂಗ್ ಆದ ನೀತೂ

ಇಬ್ಬರ ನಡುವಿನ ಕಾದಾಟ ತಾರಕ್ಕೆ ಹೋಗಿ ಯಾರೂ ಬಿಡಿಸಲು ಸಾಧ್ಯವಾಗಲಿಲ್ಲ. ನನ್ನ ಹೆತ್ತ ತಂದೆತಾಯಿ ಈ ಪ್ರೋಗ್ರಾಂ ನೋಡ್ತಿರ್ತಾರೆ. ನೀನ್ಯಾರು ನನಗೆ ಎತ್ತಿ ಹಾಕ್ತೀನಿ ಎಂದು ಹೇಳಲು ಎಂದು ನೀತೂ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡರು. ಕಡೆಗೆ ಆದಿ ಲೋಕೇಶ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮಾಡಿದ ಪ್ರಯತ್ನವೂ ವಿಫಲವಾಯಿತು.

ಹರ್ಷಿಕಾ ಗುರುಪ್ರಸಾದ್ ನಡುವೆ ಮುಜುಗರದ ಘಟನೆ

ಕಡೆಗೆ ಈ ಗಲಾಟೆಯಲ್ಲಾ ತಣ್ಣಗಾದ ಮೇಲೆ ಇನ್ನೊಂದು ಎಡವಟ್ಟು ಸಂಭವಿಸಿತು. ಸುಮ್ಮನೆ ಮಾತನಾಡುತ್ತಾ ಕೂತಿದ್ದ ಹರ್ಷಿಕಾ ಹಾಗೂ ಗುರುಪ್ರಸಾದ್ ನಡುವೆ ಒಂದು ಮುಜುಗರದ ಘಟನೆ ನಡೆದುಹೋಯಿತು. ಹರ್ಷಿಕಾ ಅವರು ಇದನ್ನು ಬೇಕೆಂದು ಮಾಡಿದ್ದಲ್ಲ. ಅಚಾನಕ್ ಆಗಿ ಸಂಭವಿಸಿದ ಘಟನೆ ಇದು.

ಗುರುಪ್ರಸಾದ್ ಮರ್ಮಸ್ಥಾನಕ್ಕೆ ಪೆಟ್ಟು

ಹರ್ಷಿಕಾ ಕೈಯಲ್ಲಿದ್ದ ವಸ್ತುವೊಂದು ಕೈಜಾರಿ ಗುರುಪ್ರಸಾದ್ ಅವರ ಮರ್ಮಸ್ಥಾನಕ್ಕೆ ತಲುಲಿತು. ಇದರಿಂದ ತೀರಾ ಆಘಾತಕ್ಕ್ಕೆ ಒಳಗಾದ ಗುರುಪ್ರಸಾದ್, ಏನಮ್ಮಾ ಹಿಂಗ್ ಮಾಡ್ಬಿಟ್ಟೆ ಎಂದು ತಮ್ಮ ಚಡ್ಡಿ ಮೇಲೆ ಕೈಹಿಡಿದುಕೊಂಡು ಬಾತ್ ರೂಮಿಗೆ ಓಡಿಹೋದರು.

ಶಾಕ್ ಗೆ ಗುರಿಯಾದವರು ಹರ್ಷಿಕಾ

ಈ ಘಟನೆಯಿಂದ ಅಷ್ಟೇ ಶಾಕ್ ಗೆ ಗುರಿಯಾದವರು ಹರ್ಷಿಕಾ. ಅಯ್ಯೋ ತಾನೇನು ಮಾಡಿದೆ ಎಂಬುದು ಅವರಿಗೆ ಸರಿಯಾಗಿ ಅರ್ಥವಾಗದೆ ಚಡಪಡಿಸಿದರು. ಬಾತ್ ರೂಮಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡ ಗುರುಪ್ರಸಾದ್ ಅಲ್ಲೇ ನೋವನ್ನು ಅನುಭವಿಸುತ್ತಿದ್ದರು.

ಐಸ್ ತರ್ಲಾ ಗುರುಗಳೇ ಎಂದ ಅಕುಲ್

ಆಗ ಅಲ್ಲಿಗೆ ಬಂದ ಸಂತೋಷ್ ಮತ್ತು ಅಕುಲ್ ಬಾಲಾಜಿ, ಗುರುಗಳೇ ಈಗ ಓಕೆನಾ ಎಂದರು. ಇಲ್ರಪ್ಪಾ ಸಿಕ್ಕಾಪಟ್ಟೆ ನೋವಾಗ್ತಿದೆ ಎಂದರು. ರಕ್ತ ಏನೂ ಬರ್ತಿಲ್ಲಾ ತಾನೆ ಎಂದು ಕೇಳಿದ್ದಕ್ಕೆ, ಛೇ ಅಂತಾದ್ದೇನು ಇಲ್ರಯ್ಯಾ, ಸಿಕ್ಕಾಪಟ್ಟೆ ನೋಯುತ್ತಿದೆ. ಕೂಲಾಗಿರುವಂತಹದ್ದು ಐಸ್ ಏನಾದರೂ ತನ್ನಿ ಎಂದರು. ಬಳಿಕ ಅವರು ಸರಿ ಹೋದರು ಅನ್ನಿ.

ಉತ್ಸಾಹ ಕಳೆದುಕೊಂಡ ಮನೆಯ ಸದಸ್ಯರು

ಕಾಡುಪ್ರಾಣಿಗಳ ಪ್ಯಾಟೆ ಲೈಫ್ ಟಾಸ್ಕ್ ನಲ್ಲಿ ಶುರುವಾದ ಸಣ್ಣ ಪಾಣಿಪತ್ ಕದನ ಮುಂದೆ ಅಶೋಕನ ಕಳಿಂಗ ಯುದ್ಧವಾಗಿ ಬದಲಾಗುತ್ತದೋ ನೋಡಬೇಕು. ಟಾಸ್ಕ್ ನಲ್ಲಿ ನಡೆದ ಕೆಲವು ಅಹಿತಕರ ಘಟನೆಗಳ ಕಾರಣ ಎಲ್ಲರೂ ಉತ್ಸಾಹ ಕಳೆದುಕೊಂಡಂತಿದ್ದಾರೆ.

English summary
An hour into the task, things turned very ugly. Rohit accused Akul of using physical violence. While Santhosh tried to intervene, things got even more ugly and violent when Rohit used a foul word. Bigg Boss Kannada 2: Day 44 Highlights.
Please Wait while comments are loading...