»   » ಬುಲೆಟ್ ಪ್ರಕಾಶ್ ಬಿಚ್ಚಿಟ್ಟ ಬದುಕಿನ ಕರಾಳ ಮುಖ

ಬುಲೆಟ್ ಪ್ರಕಾಶ್ ಬಿಚ್ಚಿಟ್ಟ ಬದುಕಿನ ಕರಾಳ ಮುಖ

By: ಉದಯರವಿ
Subscribe to Filmibeat Kannada

ಇವನ ಮೇಲಿನ ದ್ವೇಷಕ್ಕೆ ಶಿವನ ಧ್ಯಾನ ಮಾಡಕ್ಕೆ ಆಗುತ್ತಿಲ್ಲ ಎಂದು ಬೇಸರಿಸಿಕೊಂಡರು ಗುರುಪ್ರಸಾದ್. ಅವರು ಹಾಗೆ ಹೇಳಿದ್ದು ಬುಲೆಟ್ ಪ್ರಕಾಶ್ ಕುರಿತು. ಅವರಿಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದ್ದು ಒಂದು ಸಣ್ಣ ಜಗಳ.

ಬಳಿಕ ಅದೇನನ್ನಿಸಿತೋ ಏನೋ ಇಬ್ಬರೂ ಒಬ್ಬರಿಗೊಬ್ಬರು ಕ್ಷಮಾಪಣೆ ಕೇಳಿಕೊಂಡು ರಾಜಿಯಾದರು. ಇನ್ನೊಂದು ಕಡೆ ಬುಲೆಟ್ ಪ್ರಕಾಶ್ ಮಾತನಾಡುತ್ತಾ, ನಮ್ಮ ತಾಯಾಣೆ ಊಟದ್ದೇ ಚಿಂತೆಯಾಗಿದೆ ಗುರು ಎಂದರು. ಚಪಾತಿ ಇಲ್ಲಿ ರಟ್ಟು ಇದ್ದಂತೆ ಇತ್ತು ಆದರೂ ಕಷ್ಟಪಟ್ಟು ತಿಂದೆ ಎಂದರು.

ಬಿಗ್ ಬಾಸ್ ಆಸ್ಪತ್ರೆ ಟಾಸ್ಕ್ ನಲ್ಲಿ ಯಾರು ಚೆನ್ನಾಗಿ ಟಾಸ್ಕ್ ನಿಭಾಯಿಸಿ ಮನರಂಜನೆ ನೀಡಿದರು ಎಂದು ಶ್ವೇತಾ ಅವರನ್ನು ಬಿಗ್ ಬಾಸ್ ಕೇಳಿದಾಗ ಅವರು ದೀಪಿಕಾ, ಸೃಜನ್ ಮತ್ತು ಅನುಪಮಾ ಎಂದರು. ಮತ್ತೆ ಅದೇ ಹೆಸರನ್ನು ಬಿಗ್ ಬಾಸ್ ಕೇಳಿದಾಗ. ಅವರ ಉತ್ತರ ಸ್ವಲ್ಪ ಬದಲಾಯಿತು. ಬಳಿಕ ಶ್ವೇತಾ ಅವರು ಗುರುಪ್ರಸಾದ್, ಅನುಪಮಾ ಮತ್ತು ದೀಪಿಕಾ ಹೆಸರು ಹೇಳಿದರು.

ಹೊಸ ಕ್ಯಾಪ್ಟನ್ ಆಗಿ ನೀತೂ ಶೆಟ್ಟಿ ಆಯ್ಕೆ

ಶ್ವೇತಾ ಚೆಂಗಪ್ಪ ಅವರ ಕ್ಯಾಪ್ಟನ್ ಅವಧಿ ಐವತ್ತ ಮೂರನೇ ದಿನ ಮುಕ್ತಾಯವಾಯಿತು. ಹೊಸ ಕ್ಯಾಪ್ಟನ್ ಆಯ್ಕೆ ಮಾಡುವ ಅವಕಾಶವನ್ನು ಗುರುಪ್ರಸಾದ್, ಅನುಪಮಾ ಮತ್ತು ದೀಪಿಕಾ ಅವರಿಗೆ ನೀಡಲಾಯಿತು. ಈ ಮೂವರು ಒಮ್ಮತದಿಂದ ಕ್ಯಾಪ್ಟನ್ ಆಯ್ಕೆ ಮಾಡಿದ್ದು ನೀತೂ ಅವರನ್ನು. ಈ ವಾರದ ಹೊಸ ಕ್ಯಾಪ್ಟನ್ ಆಗಿ ನೀತೂ ಆಯ್ಕೆಯಾದರು.

ಸೃಜನ್ ಲೋಕೇಶ್ ಗೆ ಸತ್ಯ ಅಸತ್ಯದ ಪರೀಕ್ಷೆ

ಸತ್ಯಪರೀಕ್ಷೆಯ ಯಂತ್ರ ಅಳವಡಿಸಿ ಸೃಜನ್ ಗೆ ಅಗ್ನಿಪರೀಕ್ಷೆ. ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಸೃಜನ್ ಅವರನ್ನು ಕರೆದು ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ಅದಕ್ಕೆ ತಾವು ಹೌದು ಅಥವಾ ಇಲ್ಲ ಎಂಬ ಉತ್ತರಗಳನ್ನು ಕೊಡಬೇಕು. ಅವರ ದೇಹಕ್ಕೆ ಒಂದು ಯಂತ್ರವನ್ನೂ ಅಳವಡಿಸಲಾಯಿತು. ಸುಳ್ಳು ಹೇಳಿದರೆ ಅವರ ಧ್ವನಿಯ ಏರಿಳಿತ, ರಕ್ತದ ಒತ್ತಡದ ಆಧಾರದ ಮೇಲೆ ಅವರು ಹೇಳುತ್ತಿರುವುದು ಎಷ್ಟು ನಿಜ, ಎಷ್ಟು ಸುಳ್ಳು ಎಂದು ಕಂಡುಹಿಡಿಯುವ ಪ್ರಯತ್ನ ಮಾಡಲಾಯಿತು.

ಅಗ್ನಿಪರೀಕ್ಷೆಯಲ್ಲಿ ಬಹುತೇಕ ಗೆದ್ದ ಸೃಜನ್

ಮೂರ್ನಾಲ್ಕು ಪ್ರಶ್ನೆಗಳಿಗೆ ಉತ್ತರ ಸರಿ ಇಲ್ಲ ಎಂಬುದನ್ನು ಯಂತ್ರದ ಸಹಾಯದಿಂದ ಕಂಡುಹಿಡಿದರೂ ಸತ್ಯ ಅಸತ್ಯದ ಪರೀಕ್ಷೆಯಲ್ಲಿ ಅವರು ಬಹುತೇಕ ಗೆದ್ದರು. ಕನ್ಫೆಷನ್ ರೂಮಿನಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರೆ ಅದನ್ನು ಮನೆಯ ಸದಸ್ಯರು ನೋಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ವಿಷಯ ಸೃಜನ್ ಗೆ ಗೊತ್ತಿರಲಿಲ್ಲ.

ಬಿಗ್ ಬಾಸ್ ಕೇಳಿದ ಕೆಲವು ಪ್ರಶ್ನೆಗಳು ಹೀಗಿವೆ

ವೈಲ್ಡ್ ಕಾರ್ಡ್ ಎಂಟ್ರಿಗಳಿಂದ ನಿಮಗೆ ಭಯವಾಗುತ್ತದೆ, ನೀತೂ ಅವರಿಗೆ ಮೂಗಿನ ತುದಿಯಲ್ಲೇ ಕೋಪ ಇರುತ್ತದೆ, ಗುರು ನಿಮ್ಮ ಗೆಲುವಿಗೆ ಕುತ್ತಾಗಿದ್ದಾರೆ, ಆದಿ ಅವರದು ಚಂಚಲ ಮನಸ್ಥಿತಿ, ಅನುಪಮಾ ಅವರ ಸಿಹಿಯಾದ ನಟವಳಿಕೆ ಅವರ ನಿಜ ಗುಣವಲ್ಲ, ಬುಲೆಟ್ ಅವರು ಮನೆಯಲ್ಲಿ ಬಹಳ ದಿನ ಉಳಿಯಲು ಅಸಾಧ್ಯ, ಶ್ವೇತಾ ಅವರು ಮನೆಯಲ್ಲಿ ಪಕ್ಷಪಾತ ಮಾಡುತ್ತಾರೆ. ಎಲ್ಲರೂ ಕೇವಲ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳಲಾಯಿತು.

ಬುಲೆಟ್ ಪ್ರಕಾಶ್ ಹಂಚಿಕೊಂಡ ಸಂತಸದ ಸಂಗತಿ

ಇನ್ನೊಂದು ಕಡೆ ಗುರುಪ್ರಸಾದ್ ಜೊತೆ ಬುಲೆಟ್ ಪ್ರಕಾಶ್ ಮಾತನಾಡುತ್ತಾ ತಮ್ಮ ಜೀವನದ ತುಂಬಾ ಸಂತೋಷದ ಮತ್ತು ದುಃಖದ ಸಂಗತಿಗಳನ್ನು ಹಂಚಿಕೊಂಡರು. ತುಂಬಾ ಖುಷಿ ಪಟ್ಟ ಗಳಿಕೆ, ರಾಮು ಅವರು ಫೋನ್ ಮಾಡಿ 'ಎಕೆ 47' ಚಿತ್ರದಲ್ಲಿ ಅಭಿನಯಿಸಬೇಕು ಎಂದದ್ದು. ಅಂದು ಅವರು ವರಮಹಾಲಕ್ಷ್ಮಿ ಹಬ್ಬದ ದಿನ ಲ್ಯಾಂಡ್ ಲೈನ್ ಗೆ ಕರೆ ಮಾಡಿ ಕರೆದಿದ್ದನ್ನು ನೆನಪಿಸಿಕೊಂಡರು ಬುಲೆಟ್.

ಬುಲೆಟ್ ಪ್ರಕಾಶ್ ಬಿಚ್ಚಿಟ್ಟ ಬದುಕಿನ ಕರಾಳ ಮುಖ

ಅವರು ಹೇಳಿದ ದುಃಖದ ಕಥೆ ಹೀಗಿದೆ. "ನಾನು ಆಗ ಕಾಟನ್ ಪೇಟೆಯಲ್ಲಿದ್ದೆ. ತುಂಬಾ ಬಡತನ. ಒಂದು ರಾತ್ರಿ ತನ್ನಿಬ್ಬರು ಮಕ್ಕಳು ಮಲಗಿದ್ದಾರೆ. ಒಂದು ಕಡೆ ನಮ್ಮ ತಾಯಿ, ಇನ್ನೊಂದು ಕಡೆ ನಾನೂ ನನ್ನ ಹೆಂಡ್ತಿ. ಈ ರೀತಿ ಮಲಗಿರಬೇಕಾದರೆ ಮನೆಯ ಸೀಲಿಂಗ್ ಕಳಚಿ ಬಿತ್ತು. ಅದೂ ಮಕ್ಕಳ ಪಕ್ಕದಲ್ಲೇ ಬಿತ್ತು.

ಜಲ್ಲಿ, ಸಿಮೆಂಟು, ಮರಳು ಕದ್ದಿದ್ದೀನಿ ಎಂದ ಬುಲೆಟ್

ಮಾರೆನೇ ದಿನ ಬೆಳಗ್ಗೆ ದೊಡ್ಡಮ್ಮನ ತಿಥಿ ಬೇರೆ ಇತ್ತು. ಅವರ ಮನೆಯೂ ಪಕ್ಕದಲ್ಲೇ ಇತ್ತು. ಬೆಳಗ್ಗೆ ಅಲ್ಲಿಗೆ ಬಂದ ನೆಂಟರು ನಮ್ಮ ಮನೆಗೂ ಬಂದೇ ಬರುತ್ತಾರೆ. ಇಂತಹ ಸಂದರ್ಭದಲ್ಲಿ ರಾತ್ರೋರಾತ್ರಿ ನಾನು ಏನು ಮಾಡುವುದು. ಆಗ ನನ್ನ ಗೆಳೆಯನೊಬ್ಬ ಸಹಾಯ ಮಾಡಿದ. ರಾತ್ರೋ ರಾತ್ರಿ ಕಾರ್ಪೆಂಟರ್ ಒಬ್ಬರನ್ನು ಕರೆದುಕೊಂಡು ಬಂದ. ಆದರೆ ನನ್ನಲ್ಲಿ ದುಡ್ಡಿಲ್ಲದ ಕಾರಣ ಜಲ್ಲಿ, ಸಿಮೆಂಟು ಮರಳು ಕದ್ದಿದ್ದೀನಿ ನೆನೆಸಿಕೊಂಡು ಕಣ್ಣೀರಿಟ್ಟರು.

English summary
Srujan Bigg Boss gave a unique task to Srujan. He undergone lie detector test. Bullet Prakash got emotional and revealed about the time when he was so poor that he could not afford to fix the fallen roof in his house. Bigg Boss Kannada 2 day 53 highlights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada