»   » ಗುರುಪ್ರಸಾದ್ ಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟ ಡಿಂಕೂ

ಗುರುಪ್ರಸಾದ್ ಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟ ಡಿಂಕೂ

By: ಉದಯರವಿ
Subscribe to Filmibeat Kannada

ಗುರುಪ್ರಸಾದ್ ಜೊತೆ ಮಾತನಾಡಬೇಕಾದರೆ ಭಯ ಆಗುತ್ತದೆ. ಫೈನಲ್ ವರೆಗೂ ನಾನು ಹೋಗ್ತೀನಿ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಮನೆಯಲ್ಲಿ ಅವರನ್ನು ಹಿಡಿಯಕ್ಕೆ ಆಗುತ್ತಿಲ್ಲ ಎಂದು ಬಿಗ್ ಬಾಸ್ ಮನೆಯ ಕ್ಯಾಮೆರಾ ಮುಂದೆ ತಮ್ಮ ಅಳಲು ತೋಡಿಕೊಂಡರು ಶ್ವೇತಾ ಚೆಂಗಪ್ಪ.

ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿರು ಏಳು ಸದಸ್ಯರ ನಡುವೆ ಗ್ರೂಪಿಸಂ ಶುರುವಾಗಿದೆ. ಸೃಜನ್ ಲೋಕೇಶ್, ಶ್ವೇತಾ, ಅನುಪಮಾ ಒಂದು ತಂಡವಾದರೆ ಗುರುಪ್ರಸಾದ್ ಹಾಗೂ ಅಕುಲ್ ಬಾಲಾಜಿ ಒಂದು ತಂಡವಾಗಿ ಮಾರ್ಪಟ್ಟಿದ್ದಾರೆ. ನೀತೂ ಮಾತ್ರ ಅಲ್ಲೂ ಸಲ್ಲುತ್ತಿಲ್ಲ ಇಲ್ಲೂ ಸಲ್ಲುತ್ತಿಲ್ಲ.

ಇದೇ ಸಂದರ್ಭದಲ್ಲಿ ಮನೆಗೆ ಹೊಸ ಅತಿಥಿಯ ಆಗಮನವಾಯಿತು. ಮಾತನಾಡುವ ಗೊಂಬೆ ಖ್ಯಾತಿಯ ಇಂದುಶ್ರೀ ತಮ್ಮ ಡಿಂಕು ಸಮೇತ ಮನೆಗೆ ಬಂದು ಎಲ್ಲರನ್ನೂ ರಂಜಿಸಿದರು. ಮನೆಯ ಸದಸ್ಯರು ಡಿಂಕೂವನ್ನು ನಿನ್ನ ಹೆಸರೇನು ಎಂದಾಗ ಮೈ ನೇಮ್ ಈಸ್ ಶನಿಪ್ರಸಾದ್ ಎಂದು ಎಲ್ಲರನ್ನೂ ನಗಿಸಿದರು. ಬನ್ನಿ ನೋಡೋಣ ಎಪ್ಪತ್ತನಾಲ್ಕನೇ ದಿನದ ಹೈಲೈಟ್ಸ್.

ಇಂದುಶ್ರೀ ಬಂದ ಮೇಲೆ ಮಿಂಚಿನ ಸಂಚಾರ

ಡಿಂಕು ನೀನು ಹೇಗಿದ್ದೀಯಾ ಎಂದಾಗ ನಾನು ಗುರು ತರಹ ಇಲ್ಲ ಚೆನ್ನಾಗಿದ್ದೀನಿ ಎಂದರು. ಮಾತನಾಡುವ ಗೊಂಬೆ ಖ್ಯಾತಿಯ ಇಂದುಶ್ರೀ ಬಂದ ಮೇಲೆ ಗರಬಡಿದವರಂತಿದ್ದ ಮನೆಯ ಸದಸ್ಯರಲ್ಲಿ ಮಿಂಚಿನ ಸಂಚಾರವಾದಂತಾಯಿತು. ಬೊಂಬೆ ಜೊತೆಗೆ ಎಲ್ಲರೂ ಮಾತನಾಡಿದರು.

ಮಟಾಷ್ ಫಿಲಂ ತೆಗೆದ ಡಿಂಕೂ

ಗುರುಪ್ರಸಾದ್ ಗಿಂತಲೂ ನಾನು ಡೊಡ್ಡ ಡೈರೆಕ್ಟರ್ ಎಂದ ಡಿಂಕೂ. ಅದು ಹೆಂಗೆ ಎಂದು ಕೇಳಿದ್ದಕ್ಕೆ ಅವರು ಮಠ ತೆಗೆದರು ನಾನು ಮಟಾಶ್ ತೆಗೆದೆ ಎಂದರು. ನಿರ್ಮಾಪಕರು,ಪ್ರೇಕ್ಷಕರು, ಟಿವಿ ರೈಟ್ಸ್ ತೆಗೆದುಕೊಂಡ ಚಾನಲ್ ಗಳು ಎಲ್ಲರೂ ಮಟಾಷ್ ಆದರು ಎಂದು ಹೇಳಿ ನಕ್ಕು ನಲಿಸಿದರು.

ಅಡ್ಡಬಿದ್ದೆ ಮಂಜುನಾಥ ತೆಗೀತೀನಿ ಎಂದ ಡಿಂಕೂ

ಗುರುಪ್ರಸಾಅದ್ 'ಎದ್ದೇಳು ಮಂಜುನಾಥ' ಎಂದು ತೆಗೆದಿದ್ದಾರೆ ನಾನು ಅಡ್ಡಬಿದ್ದೆ ಮಂಜುನಾಥ ಎಂದು ತೆಗೆಯುತ್ತೇನೆ. ಗುರುಗಳು ಹೇಳಿದ ಮಾತು ಒಂದೂ ನಿಜವಲ್ಲ ಎಂದು ಡಿಂಕೂ ಹಾಡಿ ಗುರುಪ್ರಸಾದ್ ಅವರನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಂಡರು.

ದೀಪಿಕಾ ವಿಷ ಕೊಟ್ರು ಕುಡೀತೀನಿ

ನನಗೆ ಅನೂನ ನೋಡಿದರೆ ಪ್ರೇಮಲೋಕ ಫಿಲಂ ನೋಡ್ದಂತೆ ಇರುತ್ತದೆ. ಯಾಕಂದ್ರೆ ಬರೀ ಹಾಡು ಡಾನ್ಸ್ ಎಂದು ಡಿಂಕೂ ಹೇಳಿದ. ಬಳಿಕ ದೀಪಿಕಾರನ್ನು ಏನು ಕುಡೀತಿದ್ದೀರಾ ಎಂದು ಡಿಂಕೂ ಕೇಳಿದ್ದಕ್ಕೆ, ಟೀ ಕುಡೀತಿದ್ದೀನಿ ನಿನಗೂ ಬೇಕೆ ಎಂದಾಗ ನೀನು ವಿಷ ಕೊಟ್ಟರು ಕುಡೀತಿ ಎಂದು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಡಿಂಕು.

ಡಿಂಕೂ ಪ್ರಕಾರ HTML ಎಂದರೇನು?

ಅಯ್ಯಾಮ್ ವೆರಿ ವೆರಿ ಗುಡ್ ಇನ್ HTML ಎಂದ ಡಿಂಕೂನನ್ನು. ಹಾಗೆಂದರೆ ಎಂದದ್ದಕ್ಕೆ "Hwo to Maintain Ladies ಎಂದು ಹೇಳಿ ಸದಸ್ಯರನ್ನು ಹೊಟ್ಟೆ ಬಿರಿಯುವಂತೆ ನಗಿಸಿದ.

ಡಿಂಕೂ ಹಾಸ್ಯ ಚಟಾಕಿಗೆ ಸುಸ್ತೋ ಸುಸ್ತು

ಎಬಿಸಿಡಿ ನಾನು ಉಲ್ಟಾ ಹೇಳ್ತೀನಿ ಎಂದದ್ದಕ್ಕೆ ಅಯ್ಯೋ ನನಗೆ ಸೀದಾ ಹೇಳಕ್ಕೆ ಬರಲ್ಲ ಎಂದು ಸೃಜನ್ ಅಂದಾಗ ಮಗು ಆದ ಮೇಲೆ ಒಟ್ಟಿಗೆ ಕಲಿತುಕೊಳ್ಳಬಹುದು ಬಿಡಿ ಎಂದು ಡಿಂಕೂ ಹಾಸ್ಯಚಟಾಕಿ ಸಿಡಿಸಿದ. ಬಳಿಕ ತಮ್ಮ ಈ ಕಲೆಯ ಬಗ್ಗೆ ಇಂದುಶ್ರೀ ಹೇಳಿದರು.

ತಮ್ಮ ಕಲೆಯ ಬಗ್ಗೆ ಹೇಳಿದ ಇಂದುಶ್ರೀ

ತಾನು ಸೆಕೆಂಡ್ ಸ್ಟ್ಯಾಂಡರ್ ನಲ್ಲಿ ಇರಬೇಕಾದರೆ ಈ ಕಲೆ ಕಲಿತೆ. ಇದುವರೆಗೂ 3,500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದೇನೆ. ತಮ್ಮ ಬಳಿ ತಾತ, ಅಜ್ಜಿ, ಮಗು ಈ ರೀತಿಯ ಅನೇಕ ಗೆಟಪ್ ಗಳಿವೆ ಎಂದರು. ಈ ಕಲೆಯನ್ನು Ventriloquism ಎಂದು ಕರೆಯುತ್ತಾರೆ. ಇದಕ್ಕೂ ಮುನ್ನ ತಾವು ಮ್ಯಾಜಿಕ್ ಮಾಡುತ್ತಿದ್ದೆವು. ಆದರೆ ಎರಡನ್ನೂ ನಿಭಾಯಿಸುವುದು ಕಷ್ಟವಾದ ಕಾರಣ Ventriloquism ಮುಂದುವರಿಸುತ್ತಿದ್ದೇನೆ ಎಂದು ತಿಳಿಸಿದರು ಇಂದುಶ್ರೀ.

ಮನೆಯ ಮಹಿಳಾ ಸದಸ್ಯರು ನನಗಿಷ್ಟ ಎಂದ ಡಿಂಕೂ

ಬಳಿಕ ಬಿಗ್ ಬಾಸ್ ಡಿಂಕೂ ಮತ್ತು ಇಂದುಶ್ರೀಯನ್ನು ಕನ್ಫೆಷನ್ ರೂಮ್ ಗೆ ಕರೆದರು. ಅಲ್ಲೂ ಡಿಂಕೂ ತಮಾಷೆ ಮಾಡಿದ ಇದು ಕನ್ಫೆಷನ್ ರೂಮಾ ಅಥವಾ ಕನ್ಫ್ಯೂಷನ್ ರೂಮಾ ಎಂದು. ಬಿಗ್ ಬಾಸ್ ಮನೆ ಹೇಗಿತ್ತು ಎಂದು ಕೇಳಿದ್ದಕ್ಕೆ. ಚೆನ್ನಾಗಿತ್ತು ಎಂದರು. ಬಾಯಿಯನ್ನು ತುಂಬಾ ಕಂಟ್ರೋಲ್ ಮಾಡಿಕೊಂಡು ಮಾನನಾಡಿದೆ. ಮನೆಯಲ್ಲಿ ಯಾರು ಇಷ್ಟವಾದರು ಎಂದದ್ದಕ್ಕೆ ಮನೆಯ ಮಹಿಳಾ ಸದಸ್ಯರು ಎಂದು ಹೇಳಿದ ಡಿಂಕೂ.

ಗರಂ ಆದ ಗುರುಪ್ರಸಾದ್

ಹೊರಗಡೆಯಿಂದ ಬಂದವರ ಬಳಿ ಸಾಕಷ್ಟು ಹೆಚ್ಚಿನ ಮಾಹಿತಿ ಹೊರತೆಗೆಯಬಹುದು. ಆದರೆ ನೀವು ನನ್ನನ್ನು ಚಿಕ್ಕವರನ್ನಾಗಿ ಮಾಡುವುದರಲ್ಲೇ ಕಾಲ ಕಳೆದಿರಿ ಎಂದು ಇಂದುಶ್ರೀ ಹೋದ ಮೇಲೆ ಗುರುಪ್ರಸಾದ್ ಕ್ಯಾತೆ ತೆಗೆದರು. ಇದಕ್ಕೆ ನೀತೂ ಅವರನ್ನು ಹೊಣೆ ಮಾಡಿದರು. ಇದೇ ವಿಚಾರವಾಗಿ ನೀತೂ ಸಹ ಬೇಸರ ವ್ಯಕ್ತಪಡಿಸಿದರು.

ಅಕುಲ್ ಬಾಲಾಜಿ ಕ್ಯಾಪ್ಟನ್ಸಿ ಮುಕ್ತಾಯ

ಅಕುಲ್ ಅವರ ಕ್ಯಾಪ್ಟನ್ ಅವಧಿ ಇಲ್ಲಿಗೆ ಮುಕ್ತಾಯವಾಯಿತು. ಈ ಕೂಡಲೆ ಕ್ಯಾಪ್ಟನ್ ರೂಮಿನಿಂದ ಹೊರಹೋಗಬೇಕು ಎಂದು ಬಿಗ್ ಬಾಸ್ ಆದೇಶಿಸಿದರು. ಹೊಸ ಕ್ಯಾಪ್ಟನ್ ಗಾಗಿ ಹೊಸ ರೀತಿಯ ಆಯ್ಕೆಯನ್ನು ಬಿಗ್ ಬಾಸ್ ಈ ವಾರ ಮಾಡಿದರು. ಅದೇನೆಂದರೆ ಕಂಬದ ಮೇಲೆ ಯಾರು ಹೆಚ್ಚು ನಿಲ್ಲುತ್ತಾರೋ ಅವರೇ ಹೊಸ ಕ್ಯಾಪ್ಟನ್ ಎಂದರು ಬಿಗ್ ಬಾಸ್.

ಕ್ಯಾಪ್ಟನ್ಸಿಗಾಗಿ ಹೊಸ ಸ್ಪರ್ಧೆ

ಕ್ಯಾಪ್ಟನ್ಸಿ ಪಟ್ಟಕ್ಕೆ ಅನುಪಮಾ ಹೊರತುಪಡಿಸಿ ಎಲ್ಲರೂ ಸ್ಪರ್ಧಿಸಿದರು. ಸ್ವಲ್ಪ ಹೊತ್ತು ಕಂಬದ ಮೇಲೆ ನಿಂತು ಇನ್ನು ತಮ್ಮ ಕೈಯಲ್ಲಿ ಆಗಲ್ಲ ಎಂದು ಕಂಬದಿಂದ ಜಿಗಿದು ಹೊರಬಂದರು ಗುರುಪ್ರಸಾದ್. ಅಲ್ಲಿಗೆ ಗುರುಪ್ರಸಾದ್ ಅವರು ಈ ಬಾರಿ ಕ್ಯಾಪ್ಟನ್ಸಿಯಿಂದ ಹೊರ ನಡೆದಿದ್ದಾರೆ. ಉಳಿದವರು ಕಂಬದ ಮೇಲೆಯೇ ನಿಂತು ತಮ್ಮ ಸಾಮರ್ಥ್ಯ ನಿರೂಪಿಸಿಕೊಳ್ಳಲು ಮುಂದಾಗಿದ್ದಾರೆ.

English summary
The famous Ventriloquist Indu made everyone laugh with her talking puppet Dinku. Most of her jokes were targeted towards Guruprasad. The puppet looked similar to Guruprasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada