»   » ಅಕುಲ್ ಬಾಲಾಜಿ ಹಲ್ಲುಜ್ಜಿ ಸ್ವಚ್ಛಗೊಳಿಸಿದ ಶ್ವೇತಾ

ಅಕುಲ್ ಬಾಲಾಜಿ ಹಲ್ಲುಜ್ಜಿ ಸ್ವಚ್ಛಗೊಳಿಸಿದ ಶ್ವೇತಾ

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ಸಂಖ್ಯೆ ಖಾಲಿಯಾಗುತ್ತಿದ್ದಂತೆ ಮನೆಯಲ್ಲಿರುವ ಸದಸ್ಯರೂ ಡಲ್ ಆಗುತ್ತಿದ್ದಾರೆ. ಇನ್ನು ಉಳಿದಿರುವುದು ಕೇವಲ ಎರಡೇ ಎರಡು ವಾರ. ಮನೆಯಲ್ಲಿ ಉಳಿದಿರುವುದು ಐದೇ ಮಂದಿ ಮಾತ್ರ.

ಈ ವಾರದ ಲಗ್ಜುರಿ ಬಜೆಟ್ "ಎಸ್ ಬಿಗ್ ಬಾಸ್". ಬಿಗ್ ಬಾಸ್ ಕೇಳುವ ಪ್ರಶ್ನೆಗಳಿಗೆ ಎಲ್ಲರೂ ಎಸ್ ಬಿಗ್ ಬಾಸ್ ಎಂದು ಹೇಳಬೇಕು. ಅದೇ ರೀತಿ ಆ ಕೆಲಸವನ್ನೂ ಮಾಡಬೇಕು. ಮೊದಲು ಸೃಜನ್ ಲೋಕೇಶ್ ಅವರನ್ನು ಕನ್ಫೆಷನ್ ರೂಮಿಗೆ ಕರೆದ ಬಿಗ್ ಬಾಸ್ ಅವರನ್ನು ಅಲ್ಲಿ ಜೋರಾಗಿ ಕಿರುಚಲು ಹೇಳಿದರು.

ಅವರು ಕುಳಿತಲ್ಲಿಂದಲೇ ಜೋರಾಗಿ ಕಿರುಚಿದರು. ಇದನ್ನು ಕೇಳಿಸಿಕೊಂಡ ಮನೆಯವರು ಎದ್ದುಬಿದ್ದು ಕನ್ಫೆಷನ್ ರೂಮಿನ ಬಳಿ ಬಂದರು. ಬಳಿಕ ಇದು ಬಿಗ್ ಬಾಸ್ ಆಟ ಎಂದು ಗೊತ್ತಾಗಿ ಅವರು ಸುಮ್ಮನಾದರು. ಲಿವಿಂಗ್ ಏರಿಯಾದಲ್ಲೂ ಎಲ್ಲರ ಮುಂದೆ ಜೋರಾಗಿ ಕಿರುಚುವಂತೆ ಬಿಗ್ ಬಾಸ್ ಹೇಳಿದರು. ಎಂಬತ್ತಾರನೇ ದಿನದ ಹೈಲೈಟ್ಸ್ ನೋಡೋಣ ಬನ್ನಿ.

ಅಕುಲ್ ಬಾಲಾಜಿ ಹಲ್ಲುಜ್ಜಿ ಸ್ವಚ್ಛಗೊಳಿಸಿದ ಶ್ವೇತಾ

ಇನ್ನೊಂದು ಸಲ ಶ್ವೇತಾ ಚೆಂಗಪ್ಪ ಅವರಿಗೆ ಯಾರಾದರು ಒಬ್ಬರನ್ನು ಆಯ್ಕೆ ಮಾಡಿ ಅವರ ಹಲ್ಲುಜ್ಜುವಂತೆ ಹೇಳಿದರು. ಎಸ್ ಬಿಗ್ ಬಾಸ್ ಎಂದು ಅವರು ಅಕುಲ್ ಬಾಲಾಜಿ ಅವರನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಹಲ್ಲುಜ್ಜಬೇಕಾದರೆ ನಾನು ಯಾರಿಗೂ ಬಗ್ಗಿಲ್ಲ ನಿಮಗೆ ಬಗ್ಗುತ್ತಿದ್ದೇನೆ ಹೇಳಿ ಬಾಯಿ ತೆರೆದರು. ಅಕುಲ್ ಅವರ ಹಲ್ಲುಜ್ಜಿ ಸ್ವಚ್ಛಗೊಳಿಸಿದರು.

ಮೂರು ತಿಂಗಳು ಒಂದು ರುಪಾಯಿ ಖರ್ಚಿಲ್ಲ

ಮೂರು ತಿಂಗಳು ಒಂದು ರುಪಾಯಿ ಖರ್ಚು ಇಲ್ಲದೆ ಇಲ್ಲಿದ್ದೀವಿ. ಪೆಟ್ರೋಲ್ ಎಷ್ಟು ಆಗಿದೆಯೋ, ಡೀಸೆಲ್ ಎಷ್ಟಾಗಿದೆಯೋ ಒಂದು ಗೊತ್ತಾಗುತ್ತಿಲ್ಲ ಎಂದು ಅಕುಲ್ ಹಾಗೂ ಸೃಜನ್ ಒಬ್ಬರಿಗೊಬ್ಬರು ಚರ್ಚಿಸಿಕೊಂಡರು. ಇದೇ ಸಂದರ್ಭದಲ್ಲಿ ಝಾರ್ ಬಾಲಿನಲ್ಲಿ ಬಂಧಿಯಾಗಿ ಡಾನ್ಸ್ ಮಾಡಲು ಅಕುಲ್ ಬಾಲಾಜಿ ಗೆ ಬಿಗ್ ಬಾಸ್ ಹೇಳಿದರು.

ಅಕುಲ್ ಗೆ ಮೆಮರಿ ಲಾಸ್ ಭಯ

ನನಗೆ ಭಯವಾಗುತ್ತಿದೆ ಮೆಮರಿ ಲಾಸ್ ಏನಾದರೂ ಆಗ್ತಾ ಇದ್ದೀಯಾ ಎಂದರು ಅಕುಲ್. ಮನೆಯಿಂದ ಹೊರಹೋದವರ ಯಾರ ವಾಯ್ಸ್ ನನಗೆ ಜ್ಞಾಪಕ ಬರುತ್ತಿಲ್ಲ ಎಂದರು. ಆದಿ, ಸಂತೋಷ್, ಗುರುಗಳ ವಾಯ್ಸ್ ನನಗೆ ಗೊತ್ತಾಗುತ್ತಿಲ್ಲ. ಇಷ್ಟು ದಿನ ಕನಸಿನಂತೆ ಇತ್ತು ಎಂದರು.

ಬಟ್ಟೆ ಮೇಲೆ ಬಟ್ಟೆ ಹಾಕಿಕೊಂಡ ಅನು

ಅನುಪಮಾ ಅವರಿಗೆ ಬಟ್ಟೆ ಮೇಲೆ ಬಟ್ಟೆ ಹಾಕಿಕೊಳ್ಳಲು ಬಿಗ್ ಬಾಸ್ ಕೇಳಿದರು. ಈಜುಕೊಳಕ್ಕೆ ಹೋಗಲು ಇಚ್ಛಿಸುತ್ತೀರಾ ಎಂದಾಗ ಎಸ್ ಬಿಗ್ ಬಾಸ್ ಎಂದು ಅವರು ಎರಡೆರಡು ಸಲ ಈಜುಕೊಳಕ್ಕೆ ಇಳಿಯಬೇಕಾಯಿತು.

ರಾತ್ರಿ ಸುಮಧುರ ಗೀತೆಗಳನ್ನು ಕೇಳಿದ ದೀಪಿಕಾ

ರಾತ್ರಿ ಯಾವುದೇ ಸಮಯದಲ್ಲಾದರೂ ಸುಮಧುರ ಗೀತೆಗಳನ್ನು ಕೇಳಲು ಇಚ್ಛಿಸುತ್ತೀರಾ ಎಂದು ದೀಪಿಕಾಗೆ ಹೇಳಿ ಹೊತ್ತಲ್ಲದ ಹೊತ್ತಲ್ಲಿ ಅವರಿಗೆ ಹಾಡುಗಳನ್ನು ಕೇಳಿಸುವ ಶಿಕ್ಷೆ ಕೊಡಲಾಯಿತು. ಈ ಬಾರಿಯ ಲಗ್ಜುರಿ ಬಜೆಟ್ ಗಾಗಿ ಮನೆಯ ಸದಸ್ಯರ ನಡುವೆ ಸೌಹಾರ್ದಯುತ ಪೈಪೋಟಿಯೇ ನಡೆಯಿತು.

English summary
Bigg Boss gave a luxury budget task to the house members. The task was titled as Yes Bigg Boss. Bigg Boss would request the contestant to perform a task. If the contestant had to agree to perform the task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada