»   » ಬಿಗ್ ಬಾಸ್ ನಲ್ಲಿ ಸೃಜನ್ ಯಾಕಷ್ಟು ಟ್ರಿಗರ್ ಆದರು?

ಬಿಗ್ ಬಾಸ್ ನಲ್ಲಿ ಸೃಜನ್ ಯಾಕಷ್ಟು ಟ್ರಿಗರ್ ಆದರು?

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋ ಕೊನೆಯ ಘಟ್ಟ ತಲುಪಿದೆ. ಇನ್ನು ಉಳಿದಿರುವುದು ಕೇವಲ ನಾಲ್ಕೇ ನಾಲ್ಕು ದಿನಗಳು. ಮನೆಯಲ್ಲಿರುವ ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ಶ್ವೇತಾ ಚೆಂಗಪ್ಪ ಹಾಗೂ ದೀಪಿಕಾ ಕಾಮಯ್ಯ. ಇವರಲ್ಲಿ ಒಬ್ಬರು ಮಾತ್ರ 51 ಲಕ್ಷ ರುಪಾಯಿಗಳನ್ನು ಗೆಲ್ಲಲಿದ್ದಾರೆ.

ತೊಂಬತ್ತೊಂದು ಹಾಗೂ ತೊಂಬತ್ತೆರಡನೇ ದಿನ ಅಕುಲ್ ಜತೆ ದೀಪಿಕಾ ಮಾತನಾಡುತ್ತಾ, ನನಗೆ ಈ ಮನೆಯಲ್ಲಿ ನೀತೂ, ಸಂತೂ, ಅಕೂ ಅತ್ಯುತ್ತಮ ಗೆಳೆಯರು. ನೀವೆಲ್ಲಾ ನನ್ನ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದರು.

ಬಿಗ್ ಬಾಸ್ ಕೊನೆಯ ಘಟ್ಟ ತಲುಪಿದೆ. ಈಗಾಗಲೆ ಮನೆಯ ಸದಸ್ಯರು ಬೆಡ್ ರೂಮ್ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ. ಮುಂದಿನ ದಿನಗಳು ಇನ್ನಷ್ಟು ಕಷ್ಟಕರವಾಗಲಿದೆ ಎಂದು ಬಿಗ್ ಬಾಸ್ ಎಚ್ಚರಿಸಿದರು. ಅದರಂತೆ ಒಂದು ಬಾತ್ ಹಾಗೂ ಶೌಚಾಲಯವನ್ನು ಮುಚ್ಚಲಾಗಿದೆ. ಈಗ ಮನೆಯ ನಾಲ್ಕು ಸದಸ್ಯರಿಗೆ ಇರುವುದು ಕೇವಲ ಒಂದೇ ಒಂದು ಶೌಚಾಲಯ.

"ಗೆಲುವು ನನ್ನದೇ" ಎಂಬ ಟಾಸ್ಕ್ ನೀಡಿದ ಬಾಸ್

ಹುಡುಗಿಯರ ಬಾತ್ ರೂಮ್ ಬಿಟ್ಟು ಹುಡುಗರ ಬಾತ್ ರೂಮ್ ಔಟ್ ಆಫ್ ಆರ್ಡರ್ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು ಅಕುಲ್, ಸೃಜನ್ ತಮಾಷೆಯಾಗಿ ಬಿಗ್ ಬಾಸ್ ಹೇಳಿದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ "ಗೆಲುವು ನನ್ನದೇ" ಎಂಬ ಟಾಸ್ಕ್ ನೀಡಿದರು. ಅದರಂತೆ ಬಿಗ್ ಬಾಸ್ ಏಕೆ ಗೆಲ್ಲಬೇಕು, ಉಳಿದ ಮೂವರು ಏಕೆ ಅರ್ಹರಲ್ಲ ಎಂಬುದನ್ನು ತಿಳಿಸಬೇಕು.

ಸೆಲೆಬ್ರಿಟಿ ಎಂಬ ಅಹಂ ಬಿಡಬೇಕು ಎಂದ ಸೃಜನ್

ಸೃಜನ್ ಮಾತನಾಡುತ್ತಾ ಸೆಲೆಬ್ರಿಟಿ ಎಂಬ ಕಿರೀಟವನ್ನು ಹೊರತುಪಡಿಸಿ ನಾನು ಇಲ್ಲಿಗೆ ಬಂದಿದ್ದೇನೆ ಎಂದರು. ಅದೇ ರೀತಿ ಉಳಿದವರು ಬಿಗ್ ಬಾಸ್ ಪಟ್ಟಕ್ಕೆ ಏಕೆ ಅರ್ಹರಲ್ಲ ಎಂಬುದನ್ನೂ ಅವರು ತಮ್ಮದೇ ಆದ ನಿದರ್ಶನಗಳ ಮೂಲಕ ತಿಳಿಸಿದರು.

ನಮ್ಮ ತನ ಮುಚ್ಚಿಟ್ಟುಕೊಳ್ಳಬಾರದು

ನಮ್ಮ ತನವನ್ನು ನಾವು ಮುಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಸೃಜನ್ ಅವರು ತುಂಬಾ ಹಿಡನ್. ಅವರ ಕೋಪ ಎಲ್ಲೋ ಅವರನ್ನು ಹಿಡಿದಿಟ್ಟೆ ಎಂದು ಭಾವಿಸುತ್ತೇನೆ. ಬಿಗ್ ಬಾಸ್ ಎಂಬ ಬಿಗ್ ಚಾಲೆಂಜನ್ನು ನಾನು ಇಟ್ಟುಕೊಂಡು ಬಂದೆ. ಸೆಲೆಬ್ರಿಟಿ ಎಂಬ ಯಾವೊಂದು ಭೂತವೂ ನನ್ನ ತಲೆಯಲ್ಲಿ ಕೂತಿಲ್ಲ. ನಮ್ಮ ಮನೆಯಲ್ಲಿ ಇದ್ದಂಗೆ ಇಲ್ಲೂ ಇದ್ದೆ. ನಟನೆ ಮಾಡಲು ನಾನು ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ಅದಕ್ಕಾಗಿ ನಾನೇ ಗೆಲ್ಲಬೇಕು ಎಂದು ಶ್ವೇತಾ ಚೆಂಗಪ್ಪ ಹೇಳಿಕೊಂಡರು.

ದಿಕ್ಕು ತಪ್ಪಿದ ಬಿಗ್ ಬಾಸ್ ಟಾಸ್ಕ್

ಸೃಜನ್ ತನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ ಎಂದು ಶ್ವೇತಾ ಚೆಂಗಪ್ಪ ಅವರು ಇದ್ದಕ್ಕಿದ್ದಂತೆ ಟ್ರಿಗರ್ ಆದರು. ಇಬ್ಬರ ನಡುವೆ ಸಾಕಷ್ಟು ವಾದ ವಿವಾದ ನಡೆದ ಬಳಿಕ ಸೃಜನ್ ಬೇಸರದಲ್ಲಿ, "ನಿನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡಿದ್ದರೆ ಮೆಟ್ ತಗೊಂಡು ಹೊಡಿ, ಕ್ಯಾರೆಕ್ಟರ್ ಬಗ್ಗೆ ಮಾತನಾಡುವಷ್ಟು ಹಲ್ಕಟ್ ಲೋಫರ್ ನನ್ನ ಮಗ ಅಲ್ಲ ನಾನು. ಮಹಿಳೆಯರನ್ನು ಅಗೌರವಾಗಿ ನಾನು ಎಂದೂ ಕಂಡಿಲ್ಲ. ಮುಖ್ಯವಾಗಿ ನಿನ್ನನ್ನು ನಾನು ಆ ರೀತಿ ಇದುವರೆಗೂ ನೋಡಿಲ್ಲ" ಎಂದರು.

ಇಬ್ಬರ ಜಗಳದಲ್ಲಿ ಅಕುಲ್ ಅನಾಥ

ಇವರಿಬ್ಬರ ಜಗಳದಲ್ಲಿ ಅಕುಲ್ ಬಾಲಾಜಿ ಅವರ ನಾನೇಕೆ ಗೆಲ್ಲಬೇಕು ಎಂಬ ಮಾತುಕತೆ ಅರ್ಧಕ್ಕೆ ನಿಂತುಹೋಗಿತ್ತು. ಇವರಿಬ್ಬರ ಗಲಾಟೆ ತಣ್ಣಗಾದ ಮೇಲೆ ಅವರು ಮಾತು ಮುಂದುವರಿಸಿದರು. ನನಗೆ ಎಲ್ಲರೂ ಕೋಪ ಜಾಸ್ತಿ ಎನ್ನುತ್ತಿದ್ದಾರೆ. ಆದರೆ ಕೋಪ ಯಾರಿಗಿರಲ್ಲ. ನಾನು ಕೋಪಗೊಂಡಾಗ ಆಮೇಲೆ ಅದಕ್ಕೆ ಕ್ಷಮೆಯನ್ನೂ ಕೇಳಿದ್ದೇನೆ ಎಂದು ಹೇಳಿದರು.

ಉಂಡು ಮಲಗುವಷ್ಟರಲ್ಲಿ ನಿಂತ ಗಲಾಟೆ ಸದ್ದು

ಯಾರು ಯಾಕೆ ಗೆಲ್ಲಬೇಕು ಯಾಕೆ ಗೆಲ್ಲಬಾರದು ಎಂಬ ವಾದ ಸೃಜನ್ ಹಾಗೂ ಶ್ವೇತಾ ಅವರಿಂದ ದಿಕ್ಕು ತಪ್ಪಿತು. ಶ್ವೇತಾ ಗೆದ್ದರೆ ನನಗಿಂತಲೂ ಯಾರೂ ಹೆಚ್ಚು ಸಂತೋಷಪಡಲ್ಲ ಎಂದು ಹೇಳಿದರು ಸೃಜನ್. ಕಡೆಗೂ ಇಬ್ಬರೂ ಒಂದಾದರು. ಉಂಡು ಮಲಗುವಷ್ಟರಲ್ಲಿ ಇವರಿಬ್ಬರ ನಡುವಿನ ಗಲಾಟೆ ಮುಗಿಯಿತು.

English summary
This is the final week of the Bigg Boss Kannada Season 2. The participants were given a task to speak out their mind. They had to speak as to why they deserve to win the Bigg Boss show and why the other participants are not worthy of winning.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada