»   » ನಾಲ್ಕನೇ ದಿನ ನಡೆದ ನಾಟಕೀಯ ಬೆಳವಣಿಗೆಗಳು

ನಾಲ್ಕನೇ ದಿನ ನಡೆದ ನಾಟಕೀಯ ಬೆಳವಣಿಗೆಗಳು

Posted By:
Subscribe to Filmibeat Kannada
<ul id="pagination-digg"><li class="next"><a href="/tv/bigg-boss-kannada-2-srujan-selected-as-captain-085875.html">Next »</a></li></ul>

ಬಿಗ್ ಬಾಸ್ ಸೀಸನ್ ಒಂದಕ್ಕೆ ಹೋಲಿಸಿದರೆ ಅದ್ಯಾಕೋ ಏನೋ 'ಸೀಸನ್ 2' ಸ್ವಲ್ಪ ಸಪ್ಪೆ ಎನ್ನಿಸುತ್ತಿದೆ. ನಾಲ್ಕನೇ ದಿನವೂ ಮನೆಯ ಸದಸ್ಯರಲ್ಲಿ ನಾಟಕೀಯತೆ ಎದ್ದು ಕಾಣುತ್ತಿತ್ತು. ಸುಖಾ ಸುಮ್ಮನೆ ಒಬ್ಬರಿಗೊಬ್ಬರು ಜಗಳ ಆಡುವುದು, ಧ್ವನಿ ಎತ್ತರಿಸಿ ಮಾತನಾಡುವ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ನಮ್ಮ ಕಡೆಯಲ್ಲಾ ಗರಂ ಮಸಾಲೆ ಹೆಚ್ಚಾಗಿ ಯಾರೂ ಬಳಸಲ್ಲ. ಆದರೆ ನೀವು ಗರಂ ಮಸಾಲೆ ಬಳಸಿದ್ದು ನನಗೆ ಯಾಕೋ ಸರಿಕಾಣಲಿಲ್ಲ ಎಂದು ಅನಿತಾ ಭಟ್ ರಾಗ ಎಳೆದರು. ಇದಕ್ಕೆ ಶ್ವೇತಾ ಚೆಂಗಪ್ಪ ಗರಂ ಮಸಾಲೆ ಬಳಸದೆ ಅಡುಗೆ ಹೇಗೆ ಮಾಡುವುದು ಎಂದು ವಿವರಣೆ ನೀಡಿದರು. ಮನೆಯಲ್ಲಿ ಬೆಳಂ ಬೆಳಗ್ಗೆಯೇ ಗರಂ ಮಾತುಕತೆ ನಡೆಯಿತು. [ಮೂರೇ ದಿನಕ್ಕೆ ಡಾರ್ಲಿಂಗ್ ಎನ್ನಿಸಿಕೊಂಡ ಶಕೀಲಾ]

Bigg Boss 2 highlights

ಇನ್ನೊಂದು ಕಡೆ ಮನೆಯ ಹೊರಗೆ ಕುಳಿತಿದ್ದ ಅಕುಲ್ ಹಾಗೂ ಸಂತೋಷ್ ಇಬ್ಬರೂ ಮಾತನಾಡುತ್ತಾ ರೋಹಿತ್ ಬಗ್ಗೆ ಚರ್ಚಿಸುತ್ತಿದ್ದರು. ಅವನೆಂಗೆ ಆರ್ ಜೆ ಆದ. ನನಗಿಂತಲೂ ಕೋಪಿಷ್ಠ. ಅವನು ಅದೇನು ಪ್ರೋಗ್ರಾಂ ಮಾಡ್ತಾನೋ ಏನೋ. ರಾಕ್ ಸ್ಟಾರ್ ಅಂತ ಅದೇನೋ ನಡೆಸಿಕೊಡ್ತಾನೋ. ಅದರಲ್ಲಿ ಏನೇನೂ ಇರಲ್ಲ. ಬಾತ್ ರೂಂನಲ್ಲೇ ಸೌಂಡ್ ಮಾಡಲ್ಲ. ಅವನಿಗೆ ಅಷ್ಟೇನು ಟ್ಯಾಲೆಂಟ್ ಇಲ್ಲ. ತಲೆಗೆ ಬೇರೆ ವಿಗ್ ಹಾಕಿದ್ದಾನೆ ಅನ್ನಿಸುತ್ತದೆ. ಹಾಗೆ ಹೀಗೆ ಎಂದು ರೋಹಿತ್ ಬಗ್ಗೆ ಸಂತೋಷ್ ಕಾಮೆಂಟ್ ಮಾಡಿದರು.

ಶಕೀಲಾಗೆ ಇಂಗ್ಲಿಷ್ ಜೊತೆ ತೆಲುಗು ಭಾಷೆಯೂ ಬರುತ್ತದೆ ಎಂಬುದು ನಾಲ್ಕನೇ ದಿನ ಗೊತ್ತಾಯಿತು. ಅಕುಲ್ ಜೊತೆ ಶಕೀಲಾ ತೆಲುಗಿನಲ್ಲಿ ಕೊಂಚ ಕೊಂಚ ಸಂಭಾಷಣೆ ಮಾಡಿದರು. ಒಂದು ವೇಳೆ ಲಯ ಕೋಕಿಲ ಬಿಗ್ ಬಾಸ್ ಗೆದ್ದರೆ ಏನಾಗುತ್ತದೆ ಎಂಬ ಬಗ್ಗೆ ಸಂತೋಷ ಕಿಂಡಲ್ ಮಾಡುತ್ತಾ ಏನೇನೋ ಬಡಬಡಾಯಿಸಿದರು. ಲಯೇಂದ್ರ ಅವರು ತಮ್ಮ ಮೊದಲ ಪ್ರೀತಿಯ ಬಗ್ಗೆಯೂ ಹೇಳಿಕೊಂಡರು.

<iframe width="600" height="360" src="//www.youtube.com/embed/EupsiGS4MqY?feature=player_embedded" frameborder="0" allowfullscreen></iframe>

ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಯ್ಕೆ ಮಾಡಿದರು. ವಾರಕ್ಕೆ ಒಬ್ಬರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗುತ್ತದೆ. ಅವರಿಗೇ ಎಂದು ಒಂದು ಕೋಣೆ ಕೊಡಲಾಗುತ್ತದೆ. ನಾಮಿನೇಷನ್ ಪ್ರಕ್ರಿಯೆಯಿಂದ ಅವರು ಹೊರಗುಳಿಯುತ್ತಾರೆ. ಅವರು ಟಾಸ್ಕ್ ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಟಾಸ್ಕನ್ನು ನಿಭಾಯಿಸಬೇಕು. ಅವರ ಕೋಣೆಗೆ ಹೋಗುವಂತಿಲ್ಲ. ಅವರು ಕರೆದರೆ ಮಾತ್ರ ಹೋಗಬೇಕು ಎಂಬ ನಿಬಂಧನೆಗಳನ್ನು ಹೇಳಲಾಯಿತು.

ಕ್ಯಾಪ್ಟನ್ ಪಟ್ಟಕ್ಕೆ ಸೃಜನ್ ಹಾಗೂ ಹರ್ಷಿಕಾ ಹೆಸರನ್ನು ಶಕೀಲಾ ಸೂಚಿಸಿದರು. ಇಬ್ಬರೂ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಳಿಕ ಇಬ್ಬರಲ್ಲಿ ಒಬ್ಬರನ್ನು ಕ್ಯಾಪ್ಟನ್ ಆಗಿ ಮತದಾನದ ಮೂಲಕ ಸದಸ್ಯರು ಆಯ್ಕೆ ಮಾಡಲು ಸೂಚಿಸಲಾಯಿತು.

<ul id="pagination-digg"><li class="next"><a href="/tv/bigg-boss-kannada-2-srujan-selected-as-captain-085875.html">Next »</a></li></ul>
English summary
Bigg Boss Kannada 2 Day four highlights. Do you think Rohith's argumentative nature is going to lead him to being the odd one in the house? Srujan Lokesh selected for captain of the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada