»   » ಎರಡನೇ ದಿನ ಮನೆಯಲ್ಲಿ ಕಿಟಾರನೆ ಚೀರಿದ ಶ್ವೇತಾ

ಎರಡನೇ ದಿನ ಮನೆಯಲ್ಲಿ ಕಿಟಾರನೆ ಚೀರಿದ ಶ್ವೇತಾ

Posted By:
Subscribe to Filmibeat Kannada

ಸುವರ್ಣ ವಾಹಿನಿಯ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ಇದು ತಮಾಷೆನೇ ಅಲ್ಲ ಎರಡನೇ ದಿನದ ಆಟದ ಹಲವು ಪ್ರಮುಖ ಘಟನಾವಳಿಗಳನ್ನು ನೋಡೋಣ ಬನ್ನಿ. ಎರಡನೇ ದಿನದ ಆಟ ಬಹುತೇಕ ನೀರಸವಾಗಿತ್ತು ಎಂಬುದನ್ನು ಹೇಳದೆ ವಿಧಿಯಿಲ್ಲ. ಆದರೂ ಕೆಲವೊಂದು ವಿಷಯಗಳು ಮನೆಯಲ್ಲಿ ಚರ್ಚೆಗೆ ಬಂದವು.

ಮನೆಯ ಲಾನ್ ಏರಿಯಾದಲ್ಲಿ ಕುಳಿತ ಸಂತೋಷ್ ಹಾಗೂ ದೀಪಿಕಾ ಕಾಮಯ್ಯ ಅವರ ನಡುವೆ ಒಂದು ಸಣ್ಣ ಮಾತುಕತೆ ನಡೆಯುತ್ತಿತ್ತು. ಮದುವೆಯಾಗಿ ಇಲ್ಲೇ ಸೆಟ್ಲ್ ಆಗುವಂತಿದ್ದೀಯಾ ಎಂದು ದೀಪಿಕಾ ಅವರನ್ನು ಸಂತೋಷ್ ರೇಗಿಸಿದರು. ಅದಕ್ಕೆ ದೀಪಿಕಾ ಅಷ್ಟೇನು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. [ಮೊದಲ ದಿನವೇ ಮನೆಯಲ್ಲಿ ನೀತೂ ಕಣ್ಣೀರ ಕೋಡಿ]

ಇನ್ನೊಂದು ಕಡೆ ನಾನು ಅಷ್ಟು ಈಸಿಯಾಗಿ ಯಾರ ಜೊತೆಗೂ ಮಿಂಗಲ್ ಆಗಲ್ಲ ಸಂತೋಷ್ ಜೊತೆ ಗುನುಗಿದರು ಅನಿತಾ ಭಟ್. ಹದಿನಾಲ್ಕು ಜನರಲ್ಲಿ ಒಬ್ಬರು ತಾನೆ ಗೆಲ್ಲೋದು ಅದಕ್ಕೆ ನಾನೇಕೆ ತಲೆಕೆಡಿಸಿಕೊಳ್ಳಬೇಕು ಎಂದು ಅನಿತಾ ವೇದಾಂತಿಯಂತೆ ಮಾತನಾಡಿ ಸಂತೋಷ್ ಅವರ ಬಾಯಿಗೆ ಬೀಗ ಜಡಿದರು.

ಲಗ್ಜುರಿ ಬಜೆಟ್ ಟಾಸ್ಕ್ ಕೊಟ್ಟ ಬಿಗ್ ಬಾಸ್

ಇದೇ ಸಂದರ್ಭದಲ್ಲಿ ಸೃಜನ್ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಆಹ್ವಾನಿಸಿದರು. ಈ ಬಾರಿ ಅವರಿಗೆ ಲಗ್ಜುರಿ ಬಜೆಟ್ ಟಾಸ್ಕ್ ಕೊಡಲಾಯಿತು. ಹೊರಜಗತ್ತಿನಲ್ಲಿ ನಿಮ್ಮನ್ನು ತನ್ನಿಷ್ಟಕ್ಕೆ ಆಡಿಸುವವನ್ನು ಭಗವಂತನಾದರೆ ಇಲ್ಲಿ ನಿಮ್ಮನ್ನು ಆಡಿಸುವವನು ಬಿಗ್ ಬಾಸ್ ಎಂಬ ಸಂದೇಶ ರವಾನಿಸಲಾಗಿತ್ತು.

'ಬಿಗ್ ಬಾಸ್ ತುಲಾಭಾರ ಸೇವೆ' ಟಾಸ್ಕ್

ಗಾರ್ಡನ್ ಏರಿಯಾದಲ್ಲಿ ಇರಿಸಿರುವ ತಕ್ಕಡಿಯಲ್ಲಿ 'ಬಿಗ್ ಬಾಸ್ ತುಲಾಭಾರ ಸೇವೆ' ಟಾಸ್ಕ್ ನೀಡಲಾಯಿತು. ಮೊದಲ ದಿನವೇ ಮನೆಯಲ್ಲಿ ಬ್ಯಾಲೆನ್ಸ್ ಆಟ ರೋಚಕವಾಗಿ ಸಾಗಿತಾದರೂ ಆರಂಭದಲ್ಲೇ ತಕ್ಕಡಿ ಸಮತೋಲನ ತಪ್ಪಿತು.

ಕಿಟಾರನೆ ಕಿರುಚಿದ ಶ್ವೇತಾ ಚೆಂಗಪ್ಪ

ಮೊದಲ ದಿನವೇ ಬ್ಯಾಲೆನ್ಸ್ ತಪ್ಪಿದ ತಕ್ಕಡಿ. ತುಲಾಭಾರ ಸೇವೆ ಟಾಸ್ಕ್ ನಲ್ಲಿ ತೂಕ ಹಾಕಲು ಪ್ರಯತ್ನಿಸುತ್ತಿರಬೇಕಾದರೆ ತಕ್ಕಡಿಯ ಸರಪಣಿ ಕಳಚಿ ಅದು ಕೆಳಗೆ ಬಿತ್ತು. ಸ್ವಲ್ಪ ಹೊತ್ತ್ತಿಗೆ ಶ್ವೇತಾ ಚೆಂಗಪ್ಪ ಕಿಟಾರನೆ ಕಿರುಚಿದರು. ಏನಾಯ್ತು ಎಂದು ಎಲ್ಲರೂ ನೋಡಿದರೆ ಶ್ವೇತಾ ಅವರ ಕೈಗೆ ಪೆಟ್ಟು ಬಿತ್ತು. ಅವರಂತೂ ಪೆಟ್ಟು ಬಿದ್ದ ನೋವಿಗೆ ಚಿಕ್ಕಮಕ್ಕಳಂತೆ ಅತ್ತು ಕಣ್ಣೀರಿಟ್ಟರು.

ಮೊದಲ ದಿನವೇ ಬ್ಯಾಲೆನ್ಸ್ ತಪ್ಪಿದ ತಕ್ಕಡಿ

ತುಲಾಭಾರದ ತಕ್ಕಡಿಯ ಸರಪಳಿಯೇ ತುಂಡಾಗಿದ್ದು ದಿನದ ವಿಶೇಷಗಳಲ್ಲಿ ಒಂದು. ಕಡೆಗೆ ಶ್ವೇತಾಗೆ ಎಲ್ಲರೂ ಸಮಾಧಾನಪಡಿಸಿದರು. ಆ ಬಳಿಕ ಹರ್ಷಿಕಾ ಹಾಗೂ ದೀಪಿಕಾ ಅವರನ್ನು ಒಂದು ಕಡೆ ಕೂರಿಸಿ ತಕ್ಕಡಿಯಲ್ಲಿ ಸರಿದೂಗುವ ವೇಳೆಗೆ ಮಧ್ಯಾಹ್ನ ಕಳೆದಿತ್ತು. ದಿನಪೂರ್ತಿ ತುಲಾಭಾರದ ಟಾಸ್ಕ್ ನಡೆಯಿತು. ಆದಷ್ಟು ಎಂಜಾಯ್ ಆಗಿಯೇ ಈ ಟಾಸ್ಕನ್ನು ಮನೆಯ ಸದಸ್ಯರು ನಿಭಾಯಿಸಿದರು.

ಲಯ ಕೋಕಿಲ ಮಾಡಿದ ಎಡವಟ್ಟು

ಇದೇ ಸಂದರ್ಭದಲ್ಲಿ ತಕ್ಕಡಿ ಮೇಲೆ ಬ್ಯಾಲೆನ್ಸ್ ಮಾಡಿ ಕೂತುಕೊಂಡಿದ್ದ ಸೃಜನ್ ಹಾಗೂ ಅನುಪಮಾ ಅವರನ್ನು ಲಯ ಕೋಕಿಲ ಮಾತಿನ ಭರದಲ್ಲಿ ಕೈಹಿಡಿದು ಎಳೆದುಬಿಟ್ಟರು. ತುಲಾಭಾರ ಬ್ಯಾಲೆನ್ಸ್ ತಪ್ಪಿ ಇನ್ನೇನು ನೆಲಕ್ಕೆ ಟಚ್ ಆಗುವಂತಿತ್ತು. ಲಯ ಮಾಡಿದ ಎಡವಟ್ಟಿಗೆ ಒಂದು ಕ್ಷಣ ಎಲ್ಲರೂ ಬೆಚ್ಚಿದರು, ತಕ್ಕಡಿ ಎಲ್ಲಿ ನೆಲಕ್ಕೆ ಟಚ್ ಆಗಿ ತಮ್ಮ ಟಾಸ್ಕ್ ಮಠ ಸೇರುತ್ತದೋ ಎಂದು ಗಾಬರಿಬಿದ್ದರು.

ಈ ಬಂಧನ ಹಾಡಿನ ಬಗ್ಗೆ ಶಕೀಲಾ ಕಾಮೆಂಟ್

ಬಂಧನ ಚಿತ್ರದ "ಈ ಬಂಧನ ಜನುಮಜನುಮದ ಅನುಬಂಧನ.." ಹಾಡಿನ ಬಗ್ಗೆ ಶಕೀಲಾ ಅವರು ತಮ್ಮದೇ ಆದಂತಹ ಕಾಮೆಂಟ್ ನೀಡಿದರು. ಅವರ ಪ್ರಕಾರ ಅದು ದುಃಖ, ಸಂತೋಷ, ಪ್ರೀತಿ ಪ್ರೇಮ ಏನೇ ವಿಚಾರಕ್ಕೂ ಈ ಹಾಡು ಹಾಡುತ್ತಾರಲ್ಲಾ ಎಂದು ಎಲ್ಲರೊಂದಿಗೂ ಹೇಳಿಕೊಂಡರು.

ಕನ್ನಡದಲ್ಲೇ ಮಾತನಾಡಲು ಮತ್ತೊಮ್ಮೆ ವಾರ್ನ್

ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕು ಎಂದು ಬಿಗ್ ಬಾಸ್ ಮತ್ತೊಮ್ಮೆ ಎಚ್ಚರಿಸಿದರು. ಇದನ್ನು ತಪ್ಪಿದರೆ ನಿಮಗೆ ಶಿಕ್ಷೆ ತಪ್ಪಿದ್ದಲ್ಲ ಎಂದೂ ವಾರ್ನಿಂಗ್ ಕೊಟ್ಟರು. ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಿದ್ದಾರೆ ಆದರೆ ಶಕೀಲಾ ಮಾತ್ರ ಕನ್ನಡದಲ್ಲಿ ಮಾತನಾಡಲು ಇನ್ನೂ ಕಷ್ಟಪಡುತ್ತಿದ್ದರು.

ಮನೆಯಲ್ಲಿ ಕಾಮಿಡಿ ಪೀಸ್ ಅದ ಲಯ ಕೋಕಿಲ

ಈ ಲಗ್ಜುರಿ ಟಾಸ್ಕ್ ಗೆದ್ದರೆ ಚಿಕನ್, ಮಟನ್, ಫಿಶ್, ಮೊಟ್ಟೆ ಏನೆಲ್ಲಾ ಬೇಕು ಎಂಬ ಲೆಕ್ಕಾಚಾರ ಶುರುವಾಯಿತು. ಆಗಲೇ ಪಟ್ಟಿಯನ್ನು ಲಯ ಅವರಿಗೆ ಸೃಜನ್ ಹೇಳಿಹೇಳಿ ಉರುಹಚ್ಚಿಸಿದ್ದರು. ಮನೆಯಲ್ಲಿ ಲಯ ಅವರನ್ನು ಒಂದು ಕಾಮಿಡಿ ಪೀಸ್ ಎಂಬಂತೆ ಎಲ್ಲರೂ ನೋಡುತ್ತಿರುವುದು ಗಮನಿಸಬೇಕಾದ ಸಂಗತಿ.

ಇಷ್ಟಕ್ಕೂ ಸಂತೋಷ್ ಹುಡುಗಾನಾ?

ಸಂತೋಷ್ ಅವರು ಅಲ್ಲೇ ಪಕ್ಕದಲ್ಲಿ ಇದ್ದರೂ ಶ್ವೇತಾ ಚೆಂಗಪ್ಪ ಅವರು ಹೊರಗೆ ಹೋಗಿ ಯಾರಾದರೂ ಹುಡುಗನನ್ನು ಕರೆದುಕೊಂಡು ಬರ್ತೀನಿ ಎಂದದ್ದು ಅವರನ್ನು ಸ್ವಲ್ಪ ಕಸಿವಿಸಿಗೆ ಗುರಿಪಡಿಸಿತು. ಪಕ್ಕದಲ್ಲೇ ನಾನು ಹುಡುಗ ಇಲ್ಲೇ ನಿಂತಿರಬೇಕಾದರೆ ಯಾರಾದರೂ ಹುಡುಗನನ್ನು ಕರೆದುಕೊಂಡು ಬರ್ತೀನಿ ಎಂತಿದ್ದಾರಲ್ಲಾ ಎಂದು ಅವರು ಶ್ವೇತಾ ಅವರ ಮೇಲೆ ಬೇಸರಿಸಿಕೊಂಡರು.

ಶಕೀಲಾಗೆ ಇನ್ನೂ ವಯಸ್ಸು ಅಷ್ಟೇನಾ?

ಶಕೀಲಾ ನೋಡು ಎಷ್ಟು ಕೂಲ್ ಆಗಿರುತ್ತಾರೆ. ಅವರ ವಯಸ್ಸಿಗೆ ಹೋದ ಮೇಲೆ ನಾವೂ ಅದೇ ರೀತಿ ಇರ್ತೀವೇನೋ ಎಂದು ನೀತೂ ಹಾಗೂ ಹರ್ಷಿಕಾ ಚರ್ಚಿಸುತ್ತಿದ್ದರು. ಅವರಿಗೆ ಎಷ್ಟು ವಯಸ್ಸು ಎಂದರು ಲಯ ಕೋಕಿಲ, ಅದಕ್ಕೆ ನೀತೂ ಮಾತನಾಡುತ್ತಾ ಇನ್ನೂ 36 ಅಷ್ಟೇ ಎಂದರು. ಅಯ್ಯೋ ಸಾಕು ಸುಮ್ಮನಿರಮ್ಮ ನಾವು ಚಿಕ್ಕು ಹುಡುಗರಿಂದ ಅವರನ್ನು ನೋಡ್ತಾ ಇದ್ದೀವಿ ಎಂದರು ಲಯ. ಸ್ಕ್ರೀನ್ ಏಜ್, ರಿಯಲ್ ಏಜ್ ಬೇರೆ ಹಾಗೆ ಹೀಗೆ ಎಂದು ಹರ್ಷಿಕಾ, ನೀತೂ ಚರ್ಚಿಸಿದರು ಸುಮ್ಮನಾದರು.

ಬಾತ್ ರೂಮಿನಲ್ಲೇ ಕಳೆಯುತ್ತಿರುವ ಸಂತೋಷ್

ಸಂತೋಷ್ ಮದುವೆ ಬಗ್ಗೆ ಎಲ್ಲರೂ ಚರ್ಚಿಸುತ್ತಾ ತಮಾಷೆ ಮಾಡಿದರು. ಯಾವಾಗಲೂ ಅವನು ಬಾತ್ ರೂಮ್ ನಲ್ಲೇ ಇರುತ್ತಾನೆ. ಮದುವೆಯಾದ ಫಸ್ಟ್ ನೈಟ್ ನಲ್ಲೂ ಬಾತ್ ರೂಮ್ ನಲ್ಲೇ ಇರುತ್ತಾನೆ. ಒಂದು ವೇಳೆ ಮೂವಿ ತೆಗೆದರೆ ಅದಕ್ಕೂ 'ಕ್ಯಾ ಬಾತ್ ಹೈ' ಎಂಬ ಶೀರ್ಷಿಕೆ ಕೊಡುತ್ತಾನೆ ಎಂದು ಸೃಜನ್ ಕಿಚಾಯಿಸಿದರು. ಅದಕ್ಕೆ ಸಂತೋಷ್ ಸ್ವಲ್ಪ ಬೇಸರಿಸಿಕೊಂಡಂತಿತ್ತ್ತು.

ಹಗಲು ರಾತ್ರಿ ಮುಂದುವರಿದ ತುಲಾಭಾರ ಸೇವೆ

ಈ ಮಧ್ಯೆ ಬಿಗ್ ಬಾಸ್ ತುಲಾಭಾರ ಸೇವೆ ಲಗ್ಜುರಿ ಟಾಸ್ಕ್ ಹಗಲು ರಾತ್ರಿ ಮುಂದುವರೆದಿತ್ತು. ಒಂದು ಕಡೆ ಮಳೆ ಬೇರೆ ಸುರಿಯುತ್ತಿತ್ತು. ಆದರೂ ಆಟ ಸಾಗಿತ್ತು. ಬಿಗ್ ಬಾಸ್ ಮುಂದಿನ ನಿರ್ದೇಶನದ ತನಕ ಆಟ ನಡೆಯಲಿದೆ. ಎರಡನೇ ದಿನ ಮನೆಯಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪವೇ ಹೊಂದಿಕೊಳ್ಳುತ್ತಿರುವ ಅಂಶ ಗಮನಕ್ಕೆ ಬಂತು.

English summary
How old is the actress Shakeela? Bigg Boss inmate Shakeela's age, Santhosh spending much time in bathroom, Bigg Boss gives a luxuary task to inmates. These all are the Suvarna Channel's Bigg Boss Season 2 day two highlights.
Please Wait while comments are loading...