»   » 'ಬಿಗ್ ಬಾಸ್-3' ; ಚಂದನ್ ಗೆ ಸಿಕ್ಕ ಸೀಕ್ರೆಟ್ ಟಾಸ್ಕ್ ಏನು?

'ಬಿಗ್ ಬಾಸ್-3' ; ಚಂದನ್ ಗೆ ಸಿಕ್ಕ ಸೀಕ್ರೆಟ್ ಟಾಸ್ಕ್ ಏನು?

Posted By:
Subscribe to Filmibeat Kannada

ಯಾವುದೇ ಸೀಕ್ರೆಟ್ ಟಾಸ್ಕ್ ನೀಡಿದ್ರೂ, ಅದನ್ನ ಪರಿಣಾಮಕಾರಿಯಾಗಿ ನಿಭಾಯಿಸುವುದರಲ್ಲಿ ನಟ ಚಂದನ್ ಎತ್ತಿದ ಕೈ.

ಇದನ್ನ ಗಮನಿಸಿ ನಟ ಚಂದನ್ ಗೆ 'ಬಿಗ್ ಬಾಸ್' ಒಂದು ರಹಸ್ಯ ಸವಾಲು ನೀಡಿದ್ದರು. ಅದರ ಅನುಸಾರ 'ಬಿಗ್ ಬಾಸ್' ಮನೆಯ ಒಬ್ಬ ಸದಸ್ಯರ ಅಮೂಲ್ಯವಾದ ವಸ್ತುವನ್ನು ಕದ್ದು, ಅದನ್ನ OLX ನಲ್ಲಿ ಚಂದನ್ ಮಾರಾಟ ಮಾಡಬೇಕಿತ್ತು. ['ಡೇಂಜರ್ ಝೋನ್'ನಲ್ಲಿದ್ದಾರೆ ಚಂದನ್ ಮತ್ತು ಅಯ್ಯಪ್ಪ!]

Bigg Boss Kannada 3 - Actor Chandan succeeds in Secret Task

ಬಹಳ ಹೊತ್ತು ಯೋಚಿಸಿದ ನಂತರ ನಟ ಚಂದನ್, ನಟಿ ಶ್ರುತಿ ಪ್ರತಿದಿನ ಯೋಗ ಮಾಡಲು ಬಳಸುತ್ತಿದ್ದ ಮ್ಯಾಟ್ ನ ಕದ್ದು ಸ್ಟೋರ್ ರೂಮ್ ನಲ್ಲಿಟ್ಟು, 'ಬಿಗ್ ಬಾಸ್'ಗೆ OLX ನಲ್ಲಿ ಮಾರಾಟ ಮಾಡುವಂತೆ ತಿಳಿಸಿದರು.

ಕೊಟ್ಟ ಟಾಸ್ಕ್ ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕೆ ಚಂದನ್ ಗೆ 200 ವೈಯುಕ್ತಿಕ ಲಕ್ಷುರಿ ಬಜೆಟ್ ಪಾಯಿಂಟ್ಸ್ ಸಿಕ್ತು. 'ಸಮಯದ ಗೊಂಬೆ' ಟಾಸ್ಕ್ ನಲ್ಲಿ 100 ಪಾಯಿಂಟ್ಸ್ ಗಿಟ್ಟಿಸಿದ್ರಿಂದ, ಒಟ್ಟು 300 ಪಾಯಿಂಟ್ಸ್ ಗೆ ಕಾಜು ಮತ್ತು ಬಾದಾಮ್ ಬರ್ಫಿ ತೆಗೆದುಕೊಂಡರು. [ನಟ ಚಂದನ್ 'ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡಿದ್ದು ಯಾಕೆ?]

ಎಲಿಮಿನೇಷನ್ ನಿಂದಲೂ ಸೇಫ್ ಆಗಿರುವ ಚಂದನ್ ಸದ್ಯ ಫೈನಲ್ ಪ್ರವೇಶಿಸಿದ್ದಾರೆ. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಗೆಲ್ಲುವವರು ಯಾರು ಅನ್ನೋದು ಮುಂದಿನ ವಾರ ಬಹಿರಂಗವಾಗಲಿದೆ.

English summary
By stealing Shruthi's yoga mat, Actor Chandan succeeded in Secret Task given by Bigg Boss.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada