For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!

  By Harshitha
  |

  ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಕೊನೆಯ ಹಂತಕ್ಕೆ ಬಂದೇ ಬಿಟ್ಟಿದೆ. 'ಬಿಗ್ ಬಾಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮುಂದಿನ ವಾರ ನಡೆಯಲಿದೆ.

  ಸದ್ಯಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಆರು ಸ್ಪರ್ಧಿಗಳಿದ್ದಾರೆ. ನಟಿ ಶ್ರುತಿ, ನಟಿ ಪೂಜಾ ಗಾಂಧಿ, ಮಾಸ್ಟರ್ ಆನಂದ್, ರೆಹಮಾನ್, ಕ್ರಿಕೆಟರ್ ಅಯ್ಯಪ್ಪ ಮತ್ತು ನಟ ಚಂದನ್. [ಅಯ್ಯಪ್ಪಗೆ ಕಪಾಳ ಮೋಕ್ಷ ಮಾಡಬೇಕಂತೆ ಪೂಜಾ ಗಾಂಧಿ!]

  ಇವರಲ್ಲಿ ಈ ವಾರ ಸೇಫ್ ಆಗಿರುವ ನಟಿ ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್ ಡೈರೆಕ್ಟ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಮುಂದೆ ಓದಿ.....

  ಫಿನಾಲೆ ವಾರಕ್ಕೆ ಬಲಗಾಲಿಟ್ಟ ಪೂಜಾ ಗಾಂಧಿ!

  ಫಿನಾಲೆ ವಾರಕ್ಕೆ ಬಲಗಾಲಿಟ್ಟ ಪೂಜಾ ಗಾಂಧಿ!

  'ಬಿಗ್ ಬಾಸ್' ಮನೆಯಿಂದ ಔಟ್ ಆಗಿ, ಒಂದು ವಾರ ರಹಸ್ಯ ಕೋಣೆಯಲ್ಲಿದ್ದು, ಮನೆಯ ಎಲ್ಲಾ ಸದಸ್ಯರ ಚಲನವಲನ, ವರ್ತನೆ ಗಮನಿಸಿದ ನಂತರ ರೀ ಎಂಟ್ರಿಕೊಟ್ಟ ನಟಿ ಪೂಜಾ ಗಾಂಧಿ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವಾರದ ಮೊದಲ ಸ್ಪರ್ಧಿ. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]

  ಮನೆಯ ಕ್ಯಾಪ್ಟನ್ ಆದ ಪೂಜಾ ಗಾಂಧಿ

  ಮನೆಯ ಕ್ಯಾಪ್ಟನ್ ಆದ ಪೂಜಾ ಗಾಂಧಿ

  ಇದುವರೆಗೂ ನಟಿ ಪೂಜಾ ಗಾಂಧಿಗೆ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿರ್ಲಿಲ್ಲ. ಈ ವಾರ ಮನೆಯ ಎಲ್ಲಾ ಸದಸ್ಯರು ಅವರಿಗೆ ಅವಕಾಶ ನೀಡಿದರು.

  ಪೂಜಾ ಗಾಂಧಿಗೆ ವೋಟ್ ಮಾಡಿದವರು ಯಾರು?

  ಪೂಜಾ ಗಾಂಧಿಗೆ ವೋಟ್ ಮಾಡಿದವರು ಯಾರು?

  ನಟಿ ಪೂಜಾ ಗಾಂಧಿ ಕ್ಯಾಪ್ಟನ್ ಆಗಲು ಕ್ರಿಕೆಟರ್ ಅಯ್ಯಪ್ಪ, ನಟಿ ಶ್ರುತಿ, ನಟ ಚಂದನ್ ಮತ್ತು ರೆಹಮಾನ್ ವೋಟ್ ಮಾಡಿದರು.

  ರೆಹಮಾನ್ ವೋಟ್ ನಿಂದ ಪೂಜಾ ಕ್ಯಾಪ್ಟನ್

  ರೆಹಮಾನ್ ವೋಟ್ ನಿಂದ ಪೂಜಾ ಕ್ಯಾಪ್ಟನ್

  ನಟಿ ಶ್ರುತಿಗೂ ಕ್ಯಾಪ್ಟನ್ ಆಗುವ ಸಾಧ್ಯತೆ ಇತ್ತು. ಶ್ರುತಿ ಪರ ಎರಡು ವೋಟ್ ಇತ್ತು. ಕೊನೆಯಲ್ಲಿ ವೋಟ್ ಮಾಡಲು ಬಂದ ರೆಹಮಾನ್ ಪೂಜಾ ಗಾಂಧಿ ಪರ ಮತ ಹಾಕಿದ್ರಿಂದ 'ಮಳೆ ಹುಡುಗಿ'ಗೆ ಮೆಜಾರಿಟಿ ಲಭಿಸ್ತು.

  ಕ್ಯಾಪ್ಟನ್ ಆದ್ರಿಂದ ಫೈನಲ್ ಗೆ ಎಂಟ್ರಿ!

  ಕ್ಯಾಪ್ಟನ್ ಆದ್ರಿಂದ ಫೈನಲ್ ಗೆ ಎಂಟ್ರಿ!

  ಪೂಜಾ ಗಾಂಧಿ ಕ್ಯಾಪ್ಟನ್ ಆದ್ರಿಂದ ಅವರನ್ನ ಯಾರೂ ನಾಮಿನೇಟ್ ಮಾಡುವಂತಿರಲಿಲ್ಲ. ಹೀಗಾಗಿ ಸೇಫ್ ಆಗಿದ್ದ ಪೂಜಾ ಗಾಂಧಿ ಫಿನಾಲೆ ವಾರಕ್ಕೆ ಡೈರೆಕ್ಟ್ ಟಿಕೆಟ್ ಪಡೆದರು.

  ಮಾಸ್ಟರ್ ಆನಂದ್ ಕೂಡ ಸೇಫ್!

  ಮಾಸ್ಟರ್ ಆನಂದ್ ಕೂಡ ಸೇಫ್!

  ಇನ್ನೂ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಾಸ್ಟರ್ ಆನಂದ್ ರನ್ನ ಯಾರೂ ನಾಮಿನೇಟ್ ಮಾಡ್ಲಿಲ್ಲ. ಹೀಗಾಗಿ ಫಿನಾಲೆ ವಾರಕ್ಕೆ ಮಾಸ್ಟರ್ ಆನಂದ್ ಕೂಡ ಸಲೀಸಾಗಿ ಲಗ್ಗೆ ಇಟ್ಟರು.

  ಡೇಂಜರ್ ಝೋನ್ ನಲ್ಲಿರುವವರು....

  ಡೇಂಜರ್ ಝೋನ್ ನಲ್ಲಿರುವವರು....

  ನಟಿ ಶ್ರುತಿ, ಅಯ್ಯಪ್ಪ, ಚಂದನ್ ಮತ್ತು ರೆಹಮಾನ್ ಸದ್ಯ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಸೇಫ್ ಆಗಿ ಫಿನಾಲೆ ತಲುಪುವವರು ಯಾರು ಅಂತ ನಿರ್ಧಾರವಾಗುವುದು ಈ ಶನಿವಾರ.

  English summary
  Since Kannada Actress Pooja Gandhi became Captain and none of them nominated Master Anand, Both has entered 'Bigg Boss Kannada 3' finale week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X