»   » ಬಿಗ್ ಬಾಸ್ ಫೈನಲ್ ತಲುಪೋ ನಂಬಿಕೆ ಇಲ್ಲದವರಿಗೆ 20 ಲಕ್ಷ

ಬಿಗ್ ಬಾಸ್ ಫೈನಲ್ ತಲುಪೋ ನಂಬಿಕೆ ಇಲ್ಲದವರಿಗೆ 20 ಲಕ್ಷ

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಶೋ'ನ ರೋಚಕ ಘಟ್ಟ ಕೊನೆಯ ಹಂತಕ್ಕೆ ತಲುಪಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಬರೀ ಐದು ಜನ ಸ್ಪರ್ಧಿಗಳು ಫೈನಲ್ ಹಂತಕ್ಕೆ ತಲುಪಿದ್ದಾರೆ. ಆ ಐದು ಜನರಲ್ಲಿ ಯಾರು ಗೆಲುವಿನ ಪಟ್ಟ ಹೊತ್ತುಕೊಳ್ಳುತ್ತಾರೆ ಎಂಬುದು ನಾಳೆ (ಜನವರಿ 31) ರಾತ್ರಿ ಜಗಜ್ಜಾಹೀರಾಗಲಿದೆ.

ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಐವರಿಗೂ ದೊಡ್ಡಣ್ಣ ಒಂದು ಬಂಪರ್ ಆಫರ್ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಫೈನಲ್ ಗೆ ಹೋಗಲು ಇಷ್ಟಪಡದ ಸ್ಪರ್ಧಿಯೊಬ್ಬರು 20 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಬಹುದು.[ಕನ್ನಡ 'ಬಿಗ್ ಬಾಸ್' ಸೀಸನ್ 3 ಗೆಲುವಿನ ಪಟ್ಟ ಯಾರಿಗೆ?]

Bigg Boss Kannada 3: Bigg Boss give 20 lack Rs offer for 1 contestant

ನಿನ್ನೆಯ ಬಿಗ್ ಬಾಸ್ ಎಪಿಸೋಡ್ ನಲ್ಲಿ ಬಿಗ್ ಮನೆಗೆ 20 ಲಕ್ಷ ತುಂಬಿರೋ ಬ್ರಿಫ್‌ಕೇಸ್ ಒಂದು ಬಂದಿದ್ದು, ಫೈನಲ್ ಗೆ ಹೋಗಲು ಇಷ್ಟ ಇಲ್ಲದ ಒಬ್ಬ ಸ್ಪರ್ಧಿ ಆ ಬ್ರಿಫ್ ಕೇಸ್ ಅನ್ನ ತೆಗೆದುಕೊಂಡು ಮನೆಯಿಂದ ಹೊರ ಹೋಗಬಹುದಾಗಿದೆ.

ಆದ್ರೆ ಒಂದು ಕಂಡೀಷನ್ ಏನಪ್ಪಾ ಅಂದ್ರೆ, ಫೈನಲ್ ನ ಮೊತ್ತ 50 ಲಕ್ಷದಿಂದ ಈ 20 ಲಕ್ಷ ರೂಪಾಯಿ ಕಡಿತಗೊಳ್ಳುತ್ತದೆ. ಕೊನೆಗೆ ಫೈನಲ್ ನಲ್ಲಿ ಗೆದ್ದ ಸ್ಪರ್ಧಿಗೆ ಸಿಗುವ ಮೊತ್ತ ಕೇವಲ 30 ಲಕ್ಷ ಅಷ್ಟೆ.

Bigg Boss Kannada 3: Bigg Boss give 20 lack Rs offer for 1 contestant

ಅಂದಹಾಗೆ ಈ ಸ್ಪರ್ಧೆಯಲ್ಲಿ ಗೆಲ್ಲೋದು ಮಾತ್ರ ಜನರಿಂದ ಅತೀ ಹೆಚ್ಚು ಓಟ್ ಗಳಿಸಿದವರು. ಆದ್ದರಿಂದ ಯಾರಾದರೂ ಸ್ಪರ್ಧಿಗೆ ತಾನು ಫೈನಲ್ ವರೆಗೆ ಹೋಗಲ್ಲ ಅನ್ನೋ ಭಾವನೆ ಇದ್ರೆ, 20 ಲಕ್ಷ ಇರೋ ಬ್ರಿಫ್ ಕೇಸ್ ಎತ್ಕೊಂಡು ಮನೆಯಿಂದ ಹೊರ ನಡೆಯಬಹುದು.

ಸದ್ಯಕ್ಕೆ ಆ ಬ್ರಿಫ್ ಕೇಸ್ ಅನ್ನು ಯಾರೂ ಕೂಡ ಟಚ್ ಮಾಡಿಲ್ಲ. ಇನ್ನು ಇವತ್ತು ಕೂಡ ಕೊನೆಯ ಅವಕಾಶ ಇದ್ದು, ಯಾರು ತೆಗೆದುಕೊಂಡು ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

English summary
Bigg Boss Kannada 3: Bigg Boss give 20 lack Rs offer for one contestant.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada