»   » 'ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!

'ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!

Posted By:
Subscribe to Filmibeat Kannada

ಯಾವ ವ್ಯಕ್ತಿತ್ವ ಯಾರಿಗೆ ಸೂಕ್ತ? ಯಾವ ಹಣೆ ಪಟ್ಟಿ ಯಾರಿಗೂ ಇಷ್ಟ ಇಲ್ಲ. 'ಬಿಗ್ ಬಾಸ್' ಮನೆಯಲ್ಲಿ ಟಾಸ್ಕ್ ವಿಚಾರದಲ್ಲಿ ಎಲ್ಲರಿಗೂ ಬೇಸರ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ ಕ್ಯಾಪ್ಟನ್ ರೆಹಮಾನ್. ಒಬ್ಬರ ಪರವಾಗಿ ಹೇಳಿದ್ರೆ, ಇನ್ನೊಬ್ಬರಿಗೆ ಬೇಜಾರು.!

ಇಷ್ಟೆಲ್ಲಾ ನಡೆದದ್ದು ನಿನ್ನೆಯ 'ಬಿಗ್ ಬಾಸ್-3' ಸಂಚಿಕೆಯಲ್ಲಿ. ವ್ಯಕ್ತಿತ್ವದ ಕುರಿತಾಗಿ 'ಬಿಗ್ ಬಾಸ್' ನೀಡಿರುವ ವಿಶೇಷ ಟಾಸ್ಕ್ ನಲ್ಲಿ ನಿನ್ನೆ ಮನೆಯಲ್ಲಿ 'ಪ್ರಾಮಾಣಿಕ' ಯಾರು? ಅನ್ನುವ ಪ್ರಶ್ನೆ ಎದುರಾಯ್ತು. ['ಬಿಗ್ ಬಾಸ್' ಮನೆಯಲ್ಲಿ ಕೃತಿಕಾ ಬಗ್ಗೆ ನಟ ಚಂದನ್ ಹೇಳಿದ್ದೇನು?]

ರೆಹಮಾನ್ ನೀಡಿದ ತೀರ್ಪಿಗೆ ಇಡೀ ಮನೆಯಲ್ಲಿ ಬೇಸರ ಬುಸುಗುಡುತ್ತಿದ್ದರೆ, ನಟ ಚಂದನ್ ಗಳಗಳನೆ ಅತ್ತುಬಿಟ್ಟರು. 'ಬಿಗ್ ಬಾಸ್' ಮನೆಯಲ್ಲಿ 24ನೇ ದಿನ ಏನೇನೆಲ್ಲಾ ಆಯ್ತು ಅನ್ನೋದನ್ನ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಪ್ರಾಮಾಣಿಕ ಯಾರು?

'ಬಿಗ್ ಬಾಸ್' ನೀಡಿದ 'ಪ್ರಾಮಾಣಿಕ' ವ್ಯಕ್ತಿತ್ವಕ್ಕೆ ಎಲ್ಲರೂ ನಾ ಮುಂದು ತಾ ಮುಂದು ಅಂತ ಮೊದಲ ಸ್ಥಾನದ ಮೇಲೆ ಗುರಿಯಿಟ್ಟರು. ಮಾಸ್ಟರ್ ಆನಂದ್ ಮೊದಲನೇ ಸ್ಥಾನದಲ್ಲಿ ನಿಂತುಕೊಂಡಿದ್ದರೆ, ಚಂದನ್ ಎರಡನೇ ಸ್ಥಾನ ಆಯ್ಕೆ ಮಾಡಿಕೊಂಡರು. ['ಬಿಗ್ ಬಾಸ್' ಮನೆಯಲ್ಲಿ ಆರ್.ಜೆ.ನೇತ್ರ ಡಬಲ್ ಗೇಮ್.!]

ಪೂಜಾ ಗಾಂಧಿ - ಶ್ರುತಿಗೆ ಜಾಗ ಇರ್ಲಿಲ್ಲ.!

ಕೊನೆಯಲ್ಲಿ ನಟಿ ಪೂಜಾ ಗಾಂಧಿ ಮತ್ತು ಶ್ರುತಿಗೆ ಉಳಿದದ್ದು ಕೊನೆ ಎರಡು ಸ್ಥಾನಗಳು. ಅದರಲ್ಲಿ ನಿಲ್ಲಲು ನಿರಾಕರಿಸಿದ ನಟಿ ಶ್ರುತಿ, ಚಂದನ್ ಸ್ಥಾನದ ಮೇಲೆ ಕಣ್ಣಿಟ್ಟರು. [ಜೂನಿಯರ್ ವಿಷ್ಣುವರ್ಧನ್ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?]

ಶ್ರುತಿ ಕೊಟ್ಟ ಕಾರಣ ಏನು?

''ಪ್ರಾಮಾಣಿಕ ಅಂದ್ರೆ 'ಬಿಗ್ ಬಾಸ್' ರೂಲ್ಸ್ ಬ್ರೇಕ್ ಮಾಡುವ ಹಾಗಿಲ್ಲ. ಚಂದನ್ ಮೈಕ್ ತೆಗೆದು ಮಾತನಾಡಿದ್ದಾರೆ. ನಾಮಿನೇಷನ್ ಬಗ್ಗೆ ಚರ್ಚೆ ಮಾಡ್ತಾರೆ. ಹೀಗಾಗಿ ಅವರ ಜಾಗಕ್ಕೆ ನಾನು ಸ್ವೈಪ್ ಮಾಡಿಕೊಳ್ಳುವುದಕ್ಕೆ ಇಚ್ಛಿಸುತ್ತೇನೆ'' ಅಂದರು. [ಅವಕಾಶವಾದಿ ನೇತ್ರ-ಅಯ್ಯಪ್ಪ ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ವಾರ್.!]

ಕಣ್ಣೀರಿಟ್ಟ ಚಂದನ್.!

ನಟಿ ಶ್ರುತಿ ಕೊಟ್ಟ ಕಾರಣದಿಂದ ಚಂದನ್ ಗದ್ಗದಿತರಾದರು. ಮಾತನಾಡದೆ ಸೀದಾ ಕೊನೆ ಸ್ಥಾನಕ್ಕೆ ಹೋಗಿ ನಿಂತರು.

ಶ್ರುತಿ ಮುಂದೆ ಅತ್ತ ಚಂದನ್

''ನಾನು ಯಾವತ್ತೂ Dishonest ಆಗಿರ್ಲಿಲ್ಲ. ಮೈಕ್ ತೆಗೆದು ಮಾತನಾಡಿದ್ದೀನಿ ನಿಜ. ಅದಕ್ಕೆ ನನಗೆ ವಾರ್ನಿಂಗ್ ಸಿಕ್ಕಿದೆ. 'ಬಿಗ್ ಬಾಸ್' ಮನೆಯಲ್ಲಿ ನಾನು ಎಲ್ಲಾ ಕೆಲಸ ಮಾಡಿದ್ದೇನೆ. ಗೋಡೆ ಕೂಡ ತೊಳೆದಿದ್ದೇನೆ. ಪೂಜಾ ಗಾಂಧಿ ಹೇಳಿದ್ರೆ ನನಗೆ ಇಷ್ಟು ಬೇಸರವಾಗುತ್ತಿರಲಿಲ್ಲ. ನೀವು ಹೇಳಿದ್ದು ನನಗೆ ಬೇಜಾರಾಯ್ತು. ನೀವು ನನ್ನ ತಾಯಿ ಹಾಗೆ'' ಅಂತ ನಟಿ ಶ್ರುತಿ ಜೊತೆ ಮಾತನಾಡುತ್ತಾ ಚಂದನ್ ಕಣ್ಣೀರು ಹಾಕಿದರು.

ಪ್ರಾಮಾಣಿಕ ನೇಹಾ ಗೌಡ.!

'ಬಿಗ್ ಬಾಸ್' ಮನೆಯಲ್ಲಿ ಇದ್ದೂ ಇಲ್ಲದಂತೆ ಇರುವ ಗಗನಸಖಿ ನೇಹಾ ಗೌಡಗೆ ಕ್ಯಾಪ್ಟನ್ ರೆಹಮಾನ್ 'ಪ್ರಾಮಾಣಿಕ' ಪಟ್ಟ ನೀಡಿದರು.

ಮನೆಯಲ್ಲಿ ಬುಸುಗುಟ್ಟಿದ ಅಸಮಾಧಾನ.!

ನೇಹಾ ಗೌಡಗೆ ಪ್ರಾಮಾಣಿಕ ಪಟ್ಟ ಮತ್ತು ಅದಕ್ಕೆ ರೆಹಮಾನ್ ಕೊಟ್ಟ ಕಾರಣ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರ ಅಸಮಾಧಾನಕ್ಕೆ ಕಾರಣವಾಯ್ತು.

ಒಳಗೆ ಒಂದು ಹೊರಗೆ ಒಂದು ಯಾರಿಗೆ?

'ಬಿಗ್ ಬಾಸ್' ನೀಡಿದ 'ಒಳಗೆ ಒಂದು ಹೊರಗೆ ಒಂದು' ವ್ಯಕ್ತಿತ್ವಕ್ಕೆ ಗಾಯಕ ರವಿ ಮುರೂರುಗೆ ಮೊದಲನೇ ಸ್ಥಾನ ಲಭಿಸಿತು.

ಕಿರಿಕಿರಿ ಯಾರು?

ತಮ್ಮದು 'ಕಿರಿಕಿರಿ' ವ್ಯಕ್ತಿತ್ವ ಅಂತ ಸುನಾಮಿ ಕಿಟ್ಟಿ ಮೊದಲನೇ ಸ್ಥಾನ ಒಪ್ಪಿಕೊಂಡರು.

ಕೃತಿಕಾ ಬೇಸರ.!

ಕಣ್ಣೀರಿಟ್ಟು ತಮ್ಮ ನೋವನ್ನ ಹೊರಹಾಕಿದ್ದು ಯಾರಿಗೂ 'ಕಿರಿಕಿರಿ' ತಂದಿಲ್ಲ. ತಮ್ಮದು ಕಿರಿಕಿರಿ ವ್ಯಕ್ತಿತ್ವ ಅಲ್ಲ ಅಂತ ತಮಗೆ ರೆಹಮಾನ್ ನೀಡಿದ ಸ್ಥಾನದ ಬಗ್ಗೆ ಕೃತಿಕಾ ಬೇಸರ ವ್ಯಕ್ತಪಡಿಸಿದರು.

English summary
Kannada Actor Chandan becomes emotional in Bigg Boss house. Read the article to know what all happened on Day 24 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada