For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್ ವಿಷಯಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಮಾತಿನ ಚಕಮಕಿ

  By Harshitha
  |

  ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ 'ಬಿಗ್ ಬಾಸ್' ಮನೆಯಿಂದ ಹೊರಬಂದು ಐದು ದಿನಗಳು ಕಳೆದಿವೆ. ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ಸಿಕ್ಕಾಪಟ್ಡೆ ಬೋರಿಂಗ್ ಎನ್ನುವವರಿದ್ದಾರೆ. ಕೆಲವರು 'ಬಿಗ್ ಬಾಸ್-3' ನೋಡುವುದನ್ನ ನಿಲ್ಲಿಸಿದ್ದಾರೆ.

  ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಹುಚ್ಚ ವೆಂಕಟ್ ರದ್ದೇ ಸದ್ದು. ಇದೀಗ 'ಬಿಗ್ ಬಾಸ್' ಮನೆಯಲ್ಲೂ ಕೂಡ ಹುಚ್ಚ ವೆಂಕಟ್ ಸೌಂಡ್ ಮಾಡಿದ್ದಾರೆ. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

  'ಆಳು-ಅರಸ' ಟಾಸ್ಕ್ ನಲ್ಲಿ ಹುಚ್ಚ ವೆಂಕಟ್-ಚಂದನ್-ರೆಹಮಾನ್ ನಡುವೆ ಆದ ಜಗಳವನ್ನ ಮತ್ತೆ ಕೆದಕಿದ ಪರಿಣಾಮ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಚಂದನ್-ರೆಹಮಾನ್ ಮತ್ತು ಮಾಸ್ಟರ್ ಆನಂದ್ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದೆ ಓದಿ.....

  ಈ ವಾರದ Luxury Budget ಟಾಸ್ಕ್.!

  ಈ ವಾರದ Luxury Budget ಟಾಸ್ಕ್.!

  'ಮನೆ ರಾಜಕೀಯ' ಎನ್ನುವ Luxury Budget ಟಾಸ್ಕ್ ನ 'ಬಿಗ್ ಬಾಸ್' ಈ ವಾರ ಮನೆ ಸದಸ್ಯರಿಗೆ ನೀಡಿದರು. ಅದರಂತೆ ಪ್ರಾಮಾಣಿಕ ಕಾರ್ಯ ಪಕ್ಷದ ಮುಖಂಡನಾಗಿ ರೆಹಮಾನ್ ಆಯ್ಕೆ ಆದರೆ, ಸತ್ಯ ಪಕ್ಷದ ಮುಖಂಡನಾಗಿ ಮಾಸ್ಟರ್ ಆನಂದ್ ಸೆಲೆಕ್ಟ್ ಆದರು. ['ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!]

  ಪಕ್ಷದ ಸದಸ್ಯರು ಯಾರ್ಯಾರು?

  ಪಕ್ಷದ ಸದಸ್ಯರು ಯಾರ್ಯಾರು?

  ಸುನಾಮಿ ಕಿಟ್ಟಿ, ರವಿ, ಭಾವನಾ ಬೆಳಗೆರೆ, ಪೂಜಾ ಗಾಂಧಿ ಸತ್ಯ ಪಕ್ಷಕ್ಕೆ ಸೇರಿದರೆ ಅಯ್ಯಪ್ಪ, ಚಂದನ್, ನೇಹಾ ಗೌಡ, ನೇತ್ರ ಮತ್ತು ಕೃತಿಕಾ ಪ್ರಾಮಾಣಿಕ ಕಾರ್ಯ ಪಕ್ಷಕ್ಕೆ ಸೇರಿದರು. [ಹುಚ್ಚ ವೆಂಕಟ್ ರಿಂದ ಹೊಡೆತ ತಿಂದ ರವಿ ಈ ಬಾರಿ ಔಟ್?]

  'ಬಿಗ್ ಬಾಸ್' ಅಧಿವೇಶನ.!

  'ಬಿಗ್ ಬಾಸ್' ಅಧಿವೇಶನ.!

  ಪಕ್ಷದ ಕಾರ್ಯ ಚಟುವಟಿಕೆ ಶುರುವಾದ ನಂತರ 'ಬಿಗ್ ಬಾಸ್' ವಿಶೇಷ ಅಧಿವೇಶನ ನಡೆಸುವಂತೆ ಆದೇಶ ನೀಡಿದರು. ಸ್ಪೀಕರ್ ಆಗಿ ನಟಿ ಶ್ರುತಿ ಆಯ್ಕೆ ಆದರು. [ಅವಕಾಶವಾದಿ ನೇತ್ರ-ಅಯ್ಯಪ್ಪ ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ವಾರ್.!]

  'ಆಳು-ಅರಸ' ಟಾಸ್ಕ್ ಬಗ್ಗೆ ಆನಂದ್ ಮಾತು.!

  'ಆಳು-ಅರಸ' ಟಾಸ್ಕ್ ಬಗ್ಗೆ ಆನಂದ್ ಮಾತು.!

  ''ಪ್ರತಿಪಕ್ಷದವರು ಪ್ರಾಮಾಣಿಕ ಕಾರ್ಯ ಪಕ್ಷ ಅಂತ ಹೆಸರಿಟ್ಟುಕೊಂಡಿದ್ದಾರೆ. ಆದ್ರೆ, 'ಆಳು-ಅರಸ' ಟಾಸ್ಕ್ ನ ಅವರು ಪ್ರಾಮಾಣಿಕವಾಗಿ ಮಾಡ್ಲಿಲ್ಲ.'' ಅಂತ ಹೇಳಿದರು.

  ರೊಚ್ಚಿಗೆದ್ದ ಚಂದನ್-ರೆಹಮಾನ್.!

  ರೊಚ್ಚಿಗೆದ್ದ ಚಂದನ್-ರೆಹಮಾನ್.!

  ಆನಂದ್ ಮಾತುಗಳಿಗೆ ರೆಹಮಾನ್ ಮತ್ತು ಚಂದನ್ ರೊಚ್ಚಿಗೆದ್ದರು.

  ಮಾಸ್ಟರ್ ಆನಂದ್ ಪಾಯಿಂಟ್ ಏನು?

  ಮಾಸ್ಟರ್ ಆನಂದ್ ಪಾಯಿಂಟ್ ಏನು?

  ''ಹುಚ್ಚ ವೆಂಕಟ್ ಹೇಳಿದ್ರು ನಾನು ಬೇರೆಯವರಿಂದ ಕಾಲು ಒತ್ತಿಸಿಕೊಳ್ಳುವುದಿಲ್ಲ. ಚಪ್ಪಲಿ ಮುಟ್ಟಿಸುವುದಿಲ್ಲ. ಬೇರೆಯವರಿಗೆ ನಾನು ಅದನ್ನ ಮಾಡುವುದಿಲ್ಲ ಅಂತ. ಮೊದಲು ಅವರು ಒಪ್ಪಿಕೊಳ್ಳಲಿ. ಮುಂದೆ ಏನಾಗುತ್ತೆ ಅಂತ ನನಗೆ ಗೊತ್ತಿಲ್ಲ ಅಂತ ಚಂದನ್ ಫೇಕ್ ಪ್ರಾಮಿಸ್ ಮಾಡಿದರು. ಅದಕ್ಕೆ ಹುಚ್ಚ ವೆಂಕಟ್ ಟಾಸ್ಕ್ ಮಾಡ್ಲಿಲ್ಲ'' ಅಂತ ಮಾಸ್ಟರ್ ಆನಂದ್ ಹೇಳಿದ್ರು.

  ಸೇಡು ತೀರಿಸಿಕೊಳ್ಳುವ ಉದ್ದೇಶ ಇತ್ತು.!

  ಸೇಡು ತೀರಿಸಿಕೊಳ್ಳುವ ಉದ್ದೇಶ ಇತ್ತು.!

  ''ಟಾಸ್ಕ್ ನ ಟಾಸ್ಕ್ ಆಗಿ ಮಾಡಬೇಕೆನ್ನುವ ಉದ್ದೇಶ ಇರ್ಲಿಲ್ಲ. ಸೇಡು ತೀರಿಸಿಕೊಳ್ಳುವ ಉದ್ದೇಶ ಅವರಿಗಿತ್ತು. ಟಾಸ್ಕ್ ಗೆ ಸೇಡಿನ ಬಣ್ಣ ಬಳಿದರು'' ಅಂತ ರೆಹಮಾನ್ ಮತ್ತು ಚಂದನ್ ಮೇಲೆ ಆನಂದ್ ಆರೋಪ ಮಾಡಿದರು.

  ಗುಲಾಮನಾಗಿ ನಟಿಸ್ಬೇಕಿತ್ತು.

  ಗುಲಾಮನಾಗಿ ನಟಿಸ್ಬೇಕಿತ್ತು.

  ''ಅಲಿರುವುದು ಗುಲಾಮ. ಗುಲಾಮನಾಗಿ ನಟಿಸಬೇಕಿತ್ತು. ಅದು ಕಾಲ್ಪನಿಕ ಪಾತ್ರ. ಎಲ್ಲರೂ ಪರ್ಸನಲ್ ಆಗಿ ತಗೊಂಡರು. Ego ಬೇರೆ ಸ್ವಾಭಿಮಾನ ಬೇರೆ'' ಅಂತ ಮಾಸ್ಟರ್ ಆನಂದ್ ಹೇಳಿದರು.

  ರೆಹಮಾನ್-ಚಂದನ್ ವಾದ.!

  ರೆಹಮಾನ್-ಚಂದನ್ ವಾದ.!

  ಮಾಸ್ಟರ್ ಆನಂದ್ ಆಡಿದ ಪ್ರತಿ ಮಾತಿಗೂ ರೆಹಮಾನ್-ಚಂದನ್ ತಾವು ಮಾಡಿದ್ದೇ ಸರಿ ಅನ್ನುವ ರೀತಿಯಲ್ಲಿ ವಾದ ಮಾಡಿದರು.

  ಶ್ರುತಿ ಕೊಟ್ಟ ತೀರ್ಪು ಏನು?

  ಶ್ರುತಿ ಕೊಟ್ಟ ತೀರ್ಪು ಏನು?

  ''ಈ ಟಾಸ್ಕ್ ಮಾತ್ರ ಅಲ್ಲ. ವೆಂಕಟ್ ಯಾವುದೇ ಟಾಸ್ಕ್ ಆದರೂ ಮಾಡ್ತಿರ್ಲಿಲ್ಲ. ವೆಂಕಟ್ ಟಾಸ್ಕ್ ಮಾಡ್ಲಿಲ್ಲ ನಿಜ. ಮಾಡಿ ಅಂತ ಹೇಳೋಕೆ ನಾವು ಯಾರು. ವೆಂಕಟ್ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೀವಿ'' ಅಂತ ನಟಿ ಶ್ರುತಿ ಸ್ಪೀಕರ್ ಸ್ಥಾನದಲ್ಲಿ ತಮ್ಮ ಅಭಿಪ್ರಾಯ ಹೇಳಿದರು.

  English summary
  Kannada Actor Chandan and Master Anand had an argument over Huccha Venkat. Read the article to know what all happened on Day 25 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X