»   » ಬಯಲಾದ ಅಯ್ಯಪ್ಪ ಪ್ರೇಮ ರಹಸ್ಯ ; ಕಣ್ಣೀರಿಟ್ಟ ಪೂಜಾ ಗಾಂಧಿ

ಬಯಲಾದ ಅಯ್ಯಪ್ಪ ಪ್ರೇಮ ರಹಸ್ಯ ; ಕಣ್ಣೀರಿಟ್ಟ ಪೂಜಾ ಗಾಂಧಿ

Posted By:
Subscribe to Filmibeat Kannada

''ನನಗೆ 32 ವರ್ಷ ಆಯ್ತು. ಮದುವೆ ಆಗ್ಬೇಕು. ಆದ್ರೆ ಹುಡುಗರ ಕಂಡ್ರೆ ಭಯ ಆಗುತ್ತೆ. ಯಾಕಂದ್ರೆ ಹುಡುಗರು ಅಂದ್ರೆ ಅಷ್ಟು ಬೇಜಾರಾಗಿದೆ'' ಅಂತ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲೇ ನಟಿ ಪೂಜಾ ಗಾಂಧಿ ಹೇಳಿದ್ದರು.

ಆದಾದ ಮೇಲೆ ಕ್ರಿಕೆಟರ್ ಅಯ್ಯಪ್ಪ ಜೊತೆ ಮಾತನಾಡುವುದಕ್ಕೆ ಶುರುಮಾಡಿದ 'ಮಳೆ ಹುಡುಗಿ' ಪೂಜಾ ಗಾಂಧಿ ಮನಸ್ಸಲ್ಲಿ ಗಿಟಾರ್ ಬಾರಿಸುವುದಕ್ಕೆ ಪ್ರಾರಂಭವಾಯ್ತು.

ಹಿಂದು ಮುಂದು ನೋಡದೆ, ''ನಾನು ಅಯ್ಯಪ್ಪ ರವರನ್ನ ಮದುವೆ ಆಗುವುದಕ್ಕೆ ಸಿದ್ಧ'' ಅಂತ ಘೋಷಿಸಿಬಿಟ್ಟ ನಟಿ ಪೂಜಾ ಗಾಂಧಿಗೆ ನಿನ್ನೆ 'ಬಿಗ್ ಶಾಕ್' ಸಿಕ್ಕಿದೆ. [ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್?]

ತಮ್ಮ ಬಗ್ಗೆ ಅಯ್ಯಪ್ಪ ಮಾತನಾಡಿದ್ದನ್ನ ಕೇಳಿ ನಟಿ ಪೂಜಾ ಗಾಂಧಿ ಕಣ್ಣೀರಿಟ್ಟಿದ್ದಾರೆ. ಮುಂದೆ ಓದಿ.....

ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ

'ಬಿಗ್ ಬಾಸ್' ಮನೆಯಿಂದ ಔಟ್ ಆದ್ಮೇಲೆ ಸೀಕ್ರೆಟ್ ರೂಮ್ ನಲ್ಲಿರುವ ನಟಿ ಪೂಜಾ ಗಾಂಧಿ ಎಲ್ಲರ ಚಟುವಟಿಕೆಗಳನ್ನ ಗಮನಿಸುತ್ತಿದ್ದಾರೆ. ಯಾರು ಯಾರ ವಿರುದ್ಧ ನಿಂತಿದ್ದಾರೆ ಅಂತ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ. [ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ]

ಪೂಜಾ ಗಾಂಧಿ ಬಗ್ಗೆ ಚರ್ಚೆ

''ಪೂಜಾ ಬಬ್ಲಿ ಬಬ್ಲಿಯಾಗಿ ಆಡ್ತಿದ್ದರು. ಆದ್ರೆ ಅಷ್ಟೇ ಅಲ್ಲ. ಅದರ ಜೊತೆ ತುಂಬಾ ಸೆಲ್ಫಿಶ್ ಕೂಡ'' ಅಂತ ಅಯ್ಯಪ್ಪ, ಚಂದನ್ ಜೊತೆ ಮಾತನಾಡಿದ್ದು ಪೂಜಾ ಗಾಂಧಿಗೆ ಬೇಸರವಾಯ್ತು. [ಮಳೆ ಹುಡುಗಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ.!]

ಪೂಜಾ ಗಾಂಧಿ ಔಟ್ ಆಗಿದ್ದು ಯಾಕೆ ಗೊತ್ತಾ?

''ಪೂಜಾ ಗಾಂಧಿ ಇಮೇಜ್ ಗೆ ಡ್ಯಾಮೇಜ್ ಆಗ್ತಿದೆ ಅಂತ ಅವರ ಮನೆಯವರು ಕರೆಯಿಸಿಕೊಂಡರು ಅನ್ಸುತ್ತೆ. ಇಲ್ಲಾಂದ್ರೆ ಇಷ್ಟು ಬೇಗ ಪೂಜಾ ಔಟ್ ಆಗ್ತಿರ್ಲಿಲ್ಲ'' ಅಂತ ಭಾವನಾ ಬೆಳಗೆರೆ ಹೇಳಿದ್ರು. ['ಫ್ಲರ್ಟ್' ಮಾಡೋದು ಹೇಗಂತ ಅಯ್ಯಪ್ಪ ಅವರನ್ನ ಕೇಳಿ!]

ಅಯ್ಯಪ್ಪ ಪ್ರೇಮ ರಹಸ್ಯ ಬಯಲು

''ನನಗೆ ಗರ್ಲ್ ಫ್ರೆಂಡ್ ಇದ್ದಾಳೆ. ಹೆಸರು ಅರ್ಚನಾ ಅಂತ. ಅವಳು ಕೂರ್ಗಿ ಹುಡುಗಿ. ಅವಳಿಗೆ ವಯಸ್ಸು 24 ವರ್ಷ. ನಮ್ಮಿಬ್ಬರಿಗೆ 12 ವರ್ಷ ಗ್ಯಾಪ್ ಇದೆ ಅಂತ ಮನೆಯಲ್ಲಿ ಯೋಚನೆ ಮಾಡ್ತಿದ್ದಾರೆ. ಆದ್ರೂ ಮದುವೆ ಆಗ್ತೀವಿ'' ಅಂತ ಅಯ್ಯಪ್ಪ ಹೇಳಿದರು.

ಗಳಗಳನೆ ಅತ್ತುಬಿಟ್ಟ ಪೂಜಾ ಗಾಂಧಿ

ಅಯ್ಯಪ್ಪ ಪ್ರೇಮ ಕಥೆ ಕೇಳಿ ನಟಿ ಪೂಜಾ ಗಾಂಧಿ ಗಳಗಳನೆ ಅತ್ತುಬಿಟ್ಟರು.

ಹುಡುಗರ ಕಂಡ್ರೆ ಭಯ ಅಂತ ಅಂದೇ ಹೇಳಿದ್ದ ಪೂಜಾ ಗಾಂಧಿ

''ನಾನು ಸಿಂಗಲ್. ನನಗೆ ಬಾಯ್ ಫ್ರೆಂಡ್ ಇಲ್ಲ. ನನ್ನ ತಂಗಿಗೆ ಮದುವೆ ಫಿಕ್ಸ್ ಆಗಿದೆ. ಅವರೆಲ್ಲಾ ಹೊರಗಡೆ ಹೋಗ್ತಾರೆ. ರಾತ್ರಿ ಎರಡು ಗಂಟೆ ಆದರೂ, ಫೋನ್ ನಲ್ಲಿ ಇರ್ತಾರೆ. ಆದ್ರೆ, ನನಗೆ ಯಾರೂ ಇಲ್ಲ. ನನಗೆ ಯಾರೂ ಫೋನ್ ಮಾಡಲ್ಲ. ನನಗೂ ಬೇಜಾರಾಗುತ್ತೆ. ಆದ್ರೆ, ಆಗಿರುವ ಘಟನೆಯಿಂದ ಹುಡುಗರ ಕಂಡ್ರೆ ಭಯ ಆಗುತ್ತೆ'' ಅಂತ ಪೂಜಾ ಗಾಂಧಿ ನಟಿ ಶ್ರುತಿ ಜೊತೆ ಮೊದಲ ವಾರ ಮನಬಿಚ್ಚಿ ಮಾತನಾಡಿದ್ದರು.

ಆಟ ಶುರು ಮಾಡಿದ್ದು ಅಯ್ಯಪ್ಪ.!

ದುಬೈನಲ್ಲಿ ಮೀಟ್ ಆದ ಕಥೆಯನ್ನ ಚಂದನ್ ಗೆ ಹೇಳಿ ಪೂಜಾ ಗಾಂಧಿ ಜೊತೆ ಮಾತನಾಡಲು ಶುರುಮಾಡಿದ್ದು ಕ್ರಿಕೆಟರ್ ಅಯ್ಯಪ್ಪನೇ.!

ಸಂಬಂಧದ ಕಥೆ ಏನು ಅಂತ ಕೇಳಿದವರೂ ಅವರೇ.!

ನೇಹ-ರೆಹಮಾನ್ ಬಗ್ಗೆ ಚರ್ಚೆ ಮಾಡುವಾಗ, ''ಅವರ ಕಥೆ ಇರ್ಲಿ. ನಮ್ಮ ಕಥೆ ಏನು?'' ಅಂತ ಪೂಜಾ ಗಾಂಧಿಗೆ ಅಯ್ಯಪ್ಪ ಕೇಳಿದ್ದರು.

ಮದುವೆ ಆಗಲು ಸಿದ್ಧ ಎಂದಿದ್ದ ಪೂಜಾ

''ಅವರ ಪಾಸ್ಟ್ ನನಗೆ ಬೇಕಾಗಿಲ್ಲ. ಈಗ ನಾನು ಅವರನ್ನ ಮದುವೆ ಆಗುವುದಕ್ಕೆ ಸಿದ್ಧ'' ಅಂತ ಪೂಜಾ ಗಾಂಧಿ ಚಂದನ್ ಬಳಿ ಹೇಳಿದ್ದರು.

ಭಾವನೆಗಳಿಗೆ ಬೆಲೆನೇ ಇಲ್ವಾ?

ಇಷ್ಟೆಲ್ಲಾ ಇದ್ದರೂ ಅಯ್ಯಪ್ಪ ರವರ ಮಾತನ್ನು ಕೇಳಿ, ''ನಾನು ಯಾವುದನ್ನೂ ಫೇಕ್ ಮಾಡ್ಲಿಲ್ಲ. ಅನಿಸಿದ್ದೆಲ್ಲವನ್ನ ಮಾಡಿದ್ದೀನಿ. ಎಲ್ಲರೂ ಇಷ್ಟೊಂದು ಫೇಕ್ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ'' ಅಂತ ಪೂಜಾ ಗಾಂಧಿ ನಿನ್ನೆ ಸೀಕ್ರೆಟ್ ರೂಮ್ ನಲ್ಲಿ ಭಾವುಕರಾದರು.

ವಾಪಸ್ ಹೋಗ್ಬೇಕು.!

''ಇಷ್ಟೆಲ್ಲಾ ನೋಡಿದ್ಮೇಲೆ ನನಗೆ ಮತ್ತೆ 'ಬಿಗ್ ಬಾಸ್' ಮನೆಗೆ ವಾಪಸ್ ಹೋಗುವುದಕ್ಕೆ ಇಷ್ಟ ಇಲ್ಲ. ನಾನು ನನ್ನ ಮನೆಗೆ ಹೋಗ್ಬೇಕು. ನನ್ನ ಮನೆಗೆ ಕಳುಹಿಸಿ ಬಿಗ್ ಬಾಸ್ ಪ್ಲೀಸ್'' ಅಂತ ಕ್ಯಾಮರಾ ಮುಂದೆ ಪೂಜಾ ಗಾಂಧಿ ಬೇಡಿಕೊಳ್ಳುತ್ತಿದ್ದರು.

English summary
Kannada Actress Pooja Gandhi is disheartened about Aiyappa after listening to his love story in the secret room. Read the article to know what all happened on Day 37 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada