»   » 'ಬಿಗ್ ಬಾಸ್' ಮನೆಗೆ ಪೂಜಾ ಗಾಂಧಿ ರೀ ಎಂಟ್ರಿ; ಅಯ್ಯಪ್ಪ ಏನಂದ್ರು?

'ಬಿಗ್ ಬಾಸ್' ಮನೆಗೆ ಪೂಜಾ ಗಾಂಧಿ ರೀ ಎಂಟ್ರಿ; ಅಯ್ಯಪ್ಪ ಏನಂದ್ರು?

Posted By:
Subscribe to Filmibeat Kannada

ಅಂತೂ ಐದು ದಿನಗಳ ಕಾಲ ಸೀಕ್ರೆಟ್ ರೂಮ್ ನಲ್ಲಿದ್ದು 'ಬಿಗ್ ಬಾಸ್' ಮನೆ ಸದಸ್ಯರ ಎಲ್ಲಾ ಚಟುವಟಿಕೆಗಳನ್ನು ಗುಪ್ತವಾಗಿ ವೀಕ್ಷಿಸಿದ ನಟಿ ಪೂಜಾ ಗಾಂಧಿ ನಿನ್ನೆ 'ದೊಡ್ಮನೆ' ಒಳಗೆ ಕಾಲಿಟ್ಟರು.

'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಮೂರನೇ ವಿಶೇಷ ಅತಿಥಿಯಾಗಿ ನಟಿ ಪೂಜಾ ಗಾಂಧಿ 'ಬಿಗ್ ಬಾಸ್' ಮನೆಗೆ ರೀ ಎಂಟ್ರಿ ಪಡೆದುಕೊಂಡರು.[ಬಯಲಾದ ಅಯ್ಯಪ್ಪ ಪ್ರೇಮ ರಹಸ್ಯ ; ಕಣ್ಣೀರಿಟ್ಟ ಪೂಜಾ ಗಾಂಧಿ]

ಅಚ್ಚರಿ ಅಂದ್ರೆ, ನಟಿ ಪೂಜಾ ಗಾಂಧಿ ಕ್ರಿಕೆಟರ್ ಅಯ್ಯಪ್ಪ ಜೊತೆ ಸಲುಗೆಯಿಂದಲೇ ಮಾತಿಗಿಳಿದರು. ಯಾರೊಂದಿಗೂ ಸಿಟ್ಟು-ಸಿಡುಕು ಪ್ರದರ್ಶಿಸದ ಪೂಜಾ ಗಾಂಧಿ ಈ ಬಾರಿ ಸೇಫ್ ಗೇಮ್ ಆಡುವ ಪ್ಲಾನ್ ಮಾಡಿದಂತಿದೆ. ಮುಂದೆ ಓದಿ.....

ಕೃತಿಕಾಗೆ ಸರ್ಪ್ರೈಸ್

ಕನ್ ಫೆಶನ್ ರೂಮ್ ಗೆ ಬಂದ ಕೃತಿಕಾ, ನಟಿ ಪೂಜಾ ಗಾಂಧಿಯನ್ನ ನೋಡಿ ಶಾಕ್ ಆದರು. [ಸೀಕ್ರೆಟ್ ರೂಮ್ ನಲ್ಲಿ ಪೂಜಾ ಗಾಂಧಿ ; ವೀಕ್ಷಕರ ಅಭಿಪ್ರಾಯವೇನು?]

ಪೂಜಾ ಗಾಂಧಿ ನೋಡಿ ಸಂತಸ

ಪೂಜಾ ಗಾಂಧಿ ಮರಳಿ 'ಬಿಗ್ ಬಾಸ್' ಮನೆಗೆ ಬಂದಿದ್ದನ್ನ ನೋಡಿ ಎಲ್ಲಾ ಸದಸ್ಯರು ಸಂತಸ ವ್ಯಕ್ತಪಡಿಸಿದರು. ['ಬಿಗ್ ಬಾಸ್-3' ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ?]

ಪೂಜಾ ಗಾಂಧಿಗೆ ಸ್ಪೆಷಲ್ ಅಡುಗೆ

ಅತಿಥಿಯಾಗಿ ಮನೆಗೆ ಬಂದ ಪೂಜಾ ಗಾಂಧಿ, ಮೀಟ್ ಬಾಲ್ಸ್, ಸ್ಪೆಗೆಟಿ ಸೇರಿದಂತೆ ಹಲವು ಬಗೆಯ ಅಡುಗೆಗಳನ್ನು ಆರ್ಡರ್ ಮಾಡಿದರು. ಎಲ್ಲವನ್ನೂ ರೆಡಿ ಮಾಡಿ ಉಣಬಡಿಸುವ ಜವಾಬ್ದಾರಿ ಅಯ್ಯಪ್ಪ ಮತ್ತು ಶ್ರುತಿ ಹೋಟೆಲ್ ಗಿತ್ತು. [ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?]

ಶ್ರುತಿ ಬಗ್ಗೆ ಪೂಜಾ ಗಾಂಧಿ ಕಾಮೆಂಟ್

''ನನ್ನ ಮೇಲೆ ಅತಿಥಿ ಭಾವನೆ ಯಾರಿಗೂ ಇಲ್ಲ. ಶ್ರುತಿ ಅವರಲ್ಲಿ ಓವರ್ ಆಕ್ಟಿಂಗ್ ಕಾಣುತ್ತಿದೆ'' ಅಂತ ಮಿತ್ರ ಮತ್ತು ಗೌತಮಿ ಬಳಿ ಪೂಜಾ ಗಾಂಧಿ ಹೇಳುತ್ತಿದ್ದರು.

ಮಿತ್ರ ಹೇಳಿದ್ದೂ ಅದನ್ನೇ.!

''ಮೊದಲನೇ ದಿನ ನಾವು ಬಂದಾಗಲೂ ಶ್ರುತಿ ನಡೆಸಿಕೊಂಡಿದ್ದು ತುಂಬಾ ಡ್ರಮಾಟಿಕ್ ಆಗಿತ್ತು. ಎರಡನೇ ದಿನ ಚೇಂಜ್ ಆಗಿತ್ತು'' ಅಂತ ಮಿತ್ರ ಮತ್ತು ಗೌತಮಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅಯ್ಯಪ್ಪ ಹೋಟೆಲ್ ಗೆ ಹೆಚ್ಚು ಟಿಪ್ಸ್ ಕೊಟ್ಟ ಪೂಜಾ ಗಾಂಧಿ!

''ಟೀಮ್ ಎಫರ್ಟ್ ಇಲ್ಲದ ಕಾರಣ ಅಯ್ಯಪ್ಪ ಫೇಲ್ ಆಗ್ತಿದ್ದಾರೆ'' ಎಂದ ಪೂಜಾ ಗಾಂಧಿ ಅಯ್ಯಪ್ಪ ಹೋಟೆಲ್ ಗೆ ಹೆಚ್ಚು ಟಿಪ್ಸ್ ನೀಡಿದರು. ''ಶ್ರುತಿ ಓವರ್ ಡೂಯಿಂಗ್ ಮಾಡಿದ ಕಾರಣ ಅವರಿಗೆ ಟಿಪ್ಸ್ ಕೊಡಲಿಲ್ಲ'' ಅಂತ ಪೂಜಾ ಗಾಂಧಿ ಸಮರ್ಥನೆ ಕೂಡ ನೀಡಿದರು.

ಅದೇ ಅಯ್ಯಪ್ಪ, ಚಂದನ್, ಭಾವನಾ ಬಗ್ಗೆ ಬೇಸರವಾಗಿತ್ತು

'ಅಯ್ಯಪ್ಪ ಹೋಟೆಲ್' ತಂಡದಲ್ಲಿದ್ದ ಅಯ್ಯಪ್ಪ, ಚಂದನ್ ಮತ್ತು ಭಾವನಾ ಬೆಳಗೆರೆ ತಮ್ಮ ಬಗ್ಗೆ ಮಾತನಾಡಿಕೊಂಡಿದ್ದನ್ನ ನೋಡಿ ಪೂಜಾ ಗಾಂಧಿ ಕಣ್ಣೀರಿಟ್ಟಿದ್ದರು. ಹೀಗಿದ್ದರೂ, ಅವರಿಗೇ ಹೆಚ್ಚು ಟಿಪ್ಸ್ ಕೊಟ್ಟಿರೋದನ್ನ ನೋಡಿದ್ರೆ ಪೂಜಾ ಗಾಂಧಿ ಬೇರೆಯದ್ದೇ ಪ್ಲಾನ್ ಮಾಡಿ ರೀ ಎಂಟ್ರಿ ಕೊಟ್ಟಿರಬಹುದಾ ಅನ್ನುವ ಅನುಮಾನ ಕಾಡುವುದು ಸಹಜ.

ಅಯ್ಯಪ್ಪ ಖುಷಿ ಯಾಕ್ ಕೇಳ್ತೀರಾ?

ಪೂಜಾ ಗಾಂಧಿ ಹೆಚ್ಚು ಟಿಪ್ಸ್ ಕೊಟ್ಟಿದ್ದರಿಂದ, ಟಾಸ್ಕ್ ಗೆಲ್ಲುತ್ತಿದ್ದಂತೆಯೇ ಅಯ್ಯಪ್ಪ ಫುಲ್ ಖುಷ್ ಆಗಿ ಕುಣಿದಾಡೋಕೆ ಶುರುಮಾಡಿದರು.

ಅತಿಥಿಗಳೇ ಈಗ 'ಬಿಗ್ ಬಾಸ್' ಸದಸ್ಯರು

'ಬಿಗ್ ಬಾಸ್' ಮನೆಗೆ ಅತಿಥಿಗಳಾಗಿ ಎಂಟ್ರಿಕೊಟ್ಟ ಮಿತ್ರ, ಗೌತಮಿ ಗೌಡ ಮತ್ತು ಪೂಜಾ ಗಾಂಧಿ ಇದೀಗ 'ಬಿಗ್ ಬಾಸ್' ಮನೆ ಸದಸ್ಯರಾಗಿದ್ದಾರೆ.

ಅಯ್ಯಪ್ಪ ಪ್ರತಿಕ್ರಿಯೆ ಹೇಗಿತ್ತು?

''ನನಗೆ ನೀನು ಟಿಪ್ಸ್ ಕೊಟ್ಯಲ್ವಾ ಅವಾಗ್ಲೇ ಅಂದುಕೊಂಡೆ ಯು ಆರ್ ಬ್ಯಾಕ್ ಅಂತ'' ಎಂದು ಪೂಜಾ ಗಾಂಧಿ ಬಳಿ ಅಯ್ಯಪ್ಪ ನಗುನಗುತ್ತಾ ಹೇಳ್ತಿದ್ರು.

ಅಯ್ಯಪ್ಪಗೆ ಹೆಡ್ ಮಸಾಜ್!

ಅಯ್ಯಪ್ಪ ಲವ್ ಸ್ಟೋರಿ ಕೇಳಿ ಗಳಗಳನೆ ಅತ್ತಿದ್ದ ಪೂಜಾ ಗಾಂಧಿ, ಅದೇ ಅಯ್ಯಪ್ಪ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದ್ದು ಅಚ್ಚರಿ ಎನಿಸಿತು.

English summary
Kannada Actress Pooja Gandhi re-enters Bigg Boss house as guest. Read the article to know what all happened on Day 40 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada