»   » 'ಬಿಗ್ ಬಾಸ್-3' ಶೋ ಕ್ವಿಟ್ ಮಾಡ್ತಾರಾ ನಟಿ ಶ್ರುತಿ?

'ಬಿಗ್ ಬಾಸ್-3' ಶೋ ಕ್ವಿಟ್ ಮಾಡ್ತಾರಾ ನಟಿ ಶ್ರುತಿ?

Posted By:
Subscribe to Filmibeat Kannada

ದಶಕಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ಮೆರೆದಿದ್ದ ನಟಿ ಶ್ರುತಿ 'ಬಿಗ್ ಬಾಸ್' ಮನೆಯಲ್ಲಿ 'ಶ್ರುತಿ ಹೋಟೆಲ್' ಮ್ಯಾನೇಜರ್ ಆಗಿ ಬಂದ ಅತಿಥಿಗಳ ಮುಂದೆ ತಲೆ ಬಗ್ಗಿಸಿದರು.

ತಮ್ಮ ತಂಡದ ಸದಸ್ಯರಿಂದ ಆದ ತಪ್ಪುಗಳಿಗೆ ಕ್ಷಮೆ ಕೇಳಿದರು. ಹೀಗಿದ್ದರೂ, ನಟಿ ಶ್ರುತಿ 'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಗೆಲ್ಲಲಿಲ್ಲ. ಟಾಸ್ಕ್ ನಲ್ಲಿ ಸೋತು ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆದ ಕಾರಣ ನಟಿ ಶ್ರುತಿ ಕಣ್ಣೀರಿಟ್ಟರು. [ಶ್ರುತಿ-ಅಯ್ಯಪ್ಪಗೆ ಬಿಸಿ ಮುಟ್ಟಿಸಿದ 'ಅತಿಥಿ' ಮಿತ್ರ-ಗೌತಮಿ]

'ಟಾಸ್ಕ್ ನಲ್ಲಿ ಸೋತರೆ ಮನೆಗೆ ಹೋಗ್ತೀನಿ' ಎಂದ ಶ್ರುತಿ, ನಟಿ ಪೂಜಾ ಗಾಂಧಿ ಮೇಲೆ ಬೇಸರಗೊಂಡರು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 40ನೇ ದಿನ ಏನೇನೆಲ್ಲಾ ಅಯ್ತು ಅನ್ನೋದನ್ನ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಟಾಸ್ಕ್ ನಲ್ಲಿ ಸೋತ 'ಶ್ರುತಿ ಹೋಟೆಲ್'

'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಅತಿ ಹೆಚ್ಚು ಟಿಪ್ಸ್ ಪಡೆದು 'ಅಯ್ಯಪ್ಪ ಹೋಟೆಲ್' ಗೆಲುವು ಸಾಧಿಸಿತು. ಕಡಿಮೆ ಟಿಪ್ಸ್ ಪಡೆದ ಕಾರಣ 'ಶ್ರುತಿ ಹೋಟೆಲ್' ತಂಡದ ಸದಸ್ಯರು ನೇರವಾಗಿ ನಾಮಿನೇಟ್ ಆದರು. [ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?]

ಟಿಪ್ಸ್ ಸಿಕ್ಕಿದ್ದೆಷ್ಟು.?

ಅಯ್ಯಪ್ಪ ಹೋಟೆಲ್ ತಂಡದವರಿಗೆ ಒಟ್ಟು 14,600 ರೂಪಾಯಿಗಳು ಟಿಪ್ಸ್ ಸಿಕ್ಕಿದ್ದರೆ, ಶ್ರುತಿ ಹೋಟೆಲ್ ತಂಡದವರಿಗೆ 14,300 ರೂಪಾಯಿ ಟಿಪ್ಸ್ ಲಭಿಸಿತ್ತು. [ನಟಿ ಶ್ರುತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಪಶ್ರುತಿ.!]

ನಿಯಮಾನುಸಾರ ನಾಮಿನೇಟ್

'ಅತಿಥಿ ದೇವೋ ಭವ' ಟಾಸ್ಕ್ ನಿಯಮಾನುಸಾರ, ಕಡಿಮೆ ಟಿಪ್ಸ್ ಪಡೆಯುವ ತಂಡ ನೇರವಾಗಿ ನಾಮಿನೇಟ್ ಆಯ್ತು.

ತಂಡದಲ್ಲಿ ಯಾರ್ಯಾರು?

ಟಾಸ್ಕ್ ನಲ್ಲಿ ಸೋತ ಕಾರಣ ನಟಿ ಶ್ರುತಿ, ರೆಹಮಾನ್, ನೇತ್ರ, ಕೃತಿಕಾ ಮತ್ತು ಸುನಾಮಿ ಕಿಟ್ಟಿ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಪೂಜಾ ಗಾಂಧಿ ಮೇಲೆ ಬೇಸರ

'ಅಯ್ಯಪ್ಪ ಹೋಟೆಲ್'ಗೆ ಹೆಚ್ಚು ಟಿಪ್ಸ್ ಕೊಟ್ಟ ಕಾರಣ ನಟಿ ಪೂಜಾ ಗಾಂಧಿ ಮೇಲೆ ಶ್ರುತಿ ಬೇಸರ ವ್ಯಕ್ತಪಡಿಸಿದರು.

ಕಣ್ಣೀರಿಟ್ಟ ನಟಿ ಶ್ರುತಿ

''ಮೂರು ದಿನದಿಂದ ವೀ ಹ್ಯಾವ್ ಡನ್ ದಿ ಬೆಸ್ಟ್. ಯಾರೋ ಬಂದು ಪ್ರೀತಿಯಿಂದ ಟಿಪ್ಸ್ ಕೊಟ್ಟು ಬಿಟ್ಟಾಗ ನಾವು ಸೋತು ಬಿಡೋದಕ್ಕೆ ಆಗಲ್ಲ'' ಅಂತ ನಟಿ ಶ್ರುತಿ ಕಣ್ಣೀರಿಡುತ್ತಾ ಹೇಳಿದರು.

ಮನೆ ಬಿಟ್ಟು ಹೋಗ್ತಾರಾ ನಟಿ ಶ್ರುತಿ?

''ಇಫ್ ಐ ಆಮ್ ಲೂಸಿಂಗ್. ಐ ವಿಲ್ ಕ್ವಿಟ್ ದಿ ಶೋ. ಇಟ್ಸ್ ನಾಟ್ ಫೇರ್ ಮೇಡಂ. ನಾನು ಯಾವುದರಲ್ಲೂ ಕಂಪ್ಲೇಂಟ್ಸ್ ತೆಗೆದುಕೊಂಡಿಲ್ಲ.'' ಅಂತ ಶ್ರುತಿ ತಮ್ಮ ಬೇಸರವನ್ನ ಹೊರಹಾಕಿದರು.

ಒಬ್ಬರಿಂದ ತೀರ್ಮಾನ ಆಗ್ಬಾರ್ದು!

''ಇವತ್ತು ಟಿಪ್ಸ್ ಇಂದಾನೇ ಗೆದ್ದದ್ದು. ಒಂದು ದಿನ ಬಂದೋರು. ಮೂರು ದಿನದ್ದು ತೀರ್ಮಾನ ಮಾಡಬಾರದು. ನಾಳೆನೂ ಇದೇ ಆದರೆ ಏನ್ ಪ್ರಯೋಜನ. ನಮಗೂ ಡಿಗ್ನಿಟಿ ಇದೆ ಅಲ್ವಾ.'' ಅಂತ ಶ್ರುತಿ ನೇತ್ರ ಬಳಿ ಹೇಳ್ತಿದ್ರು.

ಓವರ್ ಡ್ರಾಮಾ ಮಾಡಿದ್ರಾ ಶ್ರುತಿ?

''ಟಾಸ್ಕ್ ನಲ್ಲಿ ಅವರದ್ದು ಓವರ್ ಡೂಯಿಂಗ್ ಇತ್ತು. ಅದಕ್ಕೆ ನಾನು ಹೆಚ್ಚು ಟಿಪ್ಸ್ ಕೊಡ್ಲಿಲ್ಲ'' ಅಂತ ಪೂಜಾ ಗಾಂಧಿ, ಅಯ್ಯಪ್ಪ ಬಳಿ ಹೇಳ್ತಿದ್ರು.

ಕ್ಷಮೆ ಕೇಳಿದ ಶ್ರುತಿ

ಟಾಸ್ಕ್ ಸೋತಿದ್ದಕ್ಕೆ ತಮ್ಮ ತಂಡದ ಸದಸ್ಯರ ಬಳಿ ನಟಿ ಶ್ರುತಿ ಕ್ಷಮೆ ಕೇಳಿದರು.

ಗುರ್ ಎಂದ ರೆಹಮಾನ್

ಟಾಸ್ಕ್ ನಲ್ಲಿ ಗೆದ್ದಾಗ ಅಯ್ಯಪ್ಪ, ಚಂದನ್ ಮತ್ತು ನೇಹ ಕುಣಿದಾಡಿದ್ದಕ್ಕೆ, ಕೋಪಗೊಂಡ ರೆಹಮಾನ್, ''ಆಟದಲ್ಲಿ ಗೆದ್ದಾಗ ಸೆಲೆಬ್ರೇಟ್ ಮಾಡೋದು ತಪ್ಪು. ಯಾರ ವಿರುದ್ಧ ಗೆದ್ದಿದ್ದೀವಿ ಅನ್ನೋದನ್ನ ನೋಡ್ಬೇಕು. ಫಸ್ಟ್ ರೆಸ್ಪೆಕ್ಟ್ ದಿ ಲೂಸಿಂಗ್ ಟೀಮ್. ಸೆಲೆಬ್ರೇಟ್ ಮಾಡಿ ಬೇಡ ಅನ್ನಲ್ಲ. ಬಟ್ ಆ ಕ್ಷಣ. ಏನು ಯಾವುದು ಗೆಲ್ಲುತ್ತಾಯಿದ್ದೀವಿ ನಾವು. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಗೆದ್ದು ಬಿಟ್ಟರೆ ಸೆಲೆಬ್ರೇಷನ್ ನಾವೂ ಒಪ್ಪಿಕೊಳ್ಳುತ್ತೀವಿ. ಇಂಡಿಯಾ ಪಾಕಿಸ್ತಾನ್ ಮ್ಯಾಚಾ ಇದು?'' ಅಂತ ಕಿಟ್ಟಿ ಬಳಿ ತಮ್ಮ ಬೇಸರವನ್ನ ಹೊರಹಾಕುತ್ತಿದ್ದರು.

ಮೊದಲ ಬಾರಿ ಶ್ರುತಿ ನಾಮಿನೇಟ್!

ಐದು ವಾರಗಳಲ್ಲಿ ಮೊದಲ ಬಾರಿ ಎಲಿಮಿನೇಷನ್ ಗೆ ನಟಿ ಶ್ರುತಿ ನಾಮಿನೇಟ್ ಆಗಿದ್ದಾರೆ.

6ನೇ ಬಾರಿ ಸುನಾಮಿ ಕಿಟ್ಟಿ

'ಬಿಗ್ ಬಾಸ್' ಮನೆಗೆ ಕಾಲಿಟ್ಟಾಗಿನಿಂದಲೂ ಕಿಟ್ಟಿ ನಸೀಬು ನೆಟ್ಟಗಿಲ್ಲ. ಸತತ ಆರನೇ ಬಾರಿ ಸುನಾಮಿ ಕಿಟ್ಟಿ ನಾಮಿನೇಟ್ ಆಗಿದ್ದಾರೆ. ಇವರ ಜೊತೆ ರೆಹಮಾನ್, ನೇತ್ರ, ಕೃತಿಕಾ ಕೂಡ ಇದ್ದಾರೆ. ಯಾರು ಔಟ್ ಆಗುವರೋ, ನೋಡೋಣ....

English summary
Kannada Actress Shruthi became emotional as her team lost in Luxury Budget task in Bigg Boss house. Read the article to know what all happened on Day 40 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada