»   » 'ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡ ನಟ ಚಂದನ್.!

'ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡ ನಟ ಚಂದನ್.!

Posted By:
Subscribe to Filmibeat Kannada

ನಟ-ನಟಿಯರಿಗೆ ಹೇರ್ ಸ್ಟೈಲ್ ತುಂಬಾ ಮುಖ್ಯ. ಅದ್ರಲ್ಲೂ, ತಮ್ಮ ಲುಕ್ಸ್ ಬಗ್ಗೆ ತುಂಬಾ ಕಾನ್ಶಿಯಸ್ ಆಗಿರುವ ನಟ ಚಂದನ್ ಗೆ ತಮ್ಮ ತಲೆ ಕೂದಲು ಅಂದ್ರೆ ಪಂಚಪ್ರಾಣ.

ಕಿಚ್ಚ ಸುದೀಪ್ ರಂತೆ ಪುಟಾಣಿ ಪೋನಿ ಹಾಕಿಕೊಳ್ಳುತ್ತಿದ್ದ ನಟ ಚಂದನ್ 'ಬಿಗ್ ಬಾಸ್' ಮನೆಯಲ್ಲಿ ತಲೆ ಬೋಳಿಸಿಕೊಂಡಿದ್ದಾರೆ. 'ಆತ್ಮೀಯ'ನ ಜೊತೆ ಫೋನ್ ಬೂತ್ ನಲ್ಲಿ ಆಟ ಆಡಿದ ಪರಿಣಾಮ ನಟ ಚಂದನ್ 'ಹೆಡ್ ಶೇವ್' ಮಾಡುವ ಚಾಲೆಂಜ್ ಎದುರಿಸಬೇಕಾಯ್ತು. ['ಬಿಗ್ ಬಾಸ್' ಮನೆಯಲ್ಲಿ ಚಂದನ್-ಪೂಜಾ ಗಾಂಧಿ ನಡುವೆ ಶೀತಲ ಸಮರ]

'ನಟ ಚಂದನ್ ನಂಬಿಕಸ್ತ ಅಲ್ಲ' ಅಂತ ಹೇಳಿದ್ದ ನಟಿ ಪೂಜಾ ಗಾಂಧಿ, ಚಂದನ್ ತಲೆ ಶೇವ್ ಮಾಡಿದರು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 65ನೇ ದಿನ ನಡೆದ ಹೈಡ್ರಾಮಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

'ಬಿಗ್ ಬಾಸ್' ಮನೆಯಲ್ಲಿ ಫೋನ್ ಬೂತ್

ಇಷ್ಟು ದಿನ ಲಿಖಿತ ರೂಪದಲ್ಲಿ Luxury Budget ಟಾಸ್ಕ್ ನೀಡುತ್ತಿದ್ದ 'ಬಿಗ್ ಬಾಸ್', ಈ ವಾರ ಟೆಲಿಫೋನ್ ಬೂತ್ ಇಟ್ಟು, 'ಆತ್ಮೀಯ'ನ ಫೋನ್ ಕಾಲ್ ಮುಖಾಂತರ ಎಲ್ಲರನ್ನ ಆಟವಾಡಿಸುತ್ತಿದ್ದಾರೆ.

ಟಾಸ್ಕ್ ನಿಯಮಗಳೇನು?

ಫೋನ್ ನಲ್ಲಿ ಮಾತನಾಡುವ 'ಆತ್ಮೀಯ' ಹೇಳುವವರೆಗೂ ಫೋನ್ ಕೆಳಗೆ ಇಡುವ ಹಾಗಿಲ್ಲ. 'ಆತ್ಮೀಯ' ಹೇಳಿದ್ದನ್ನ ಮಾಡಲೇ ಬೇಕು. ಟೆಲಿಫೋನ್ ಬೂತ್ ನಿಂದ ಹೊರಗೆ ಹೋಗುವ ಹಾಗಿಲ್ಲ. 'ಆತ್ಮೀಯ'ನ ಜೊತೆ ನಡೆಸುವ ಸಂಭಾಷಣೆ ಯಾರ ಜೊತೆಗೂ ಹಂಚಿಕೊಳ್ಳುವ ಹಾಗಿಲ್ಲ. ಆಟದಲ್ಲಿ ಸೋತರೆ ಪರಿಣಾಮ ಗಂಭೀರ. ಮುಂದಿನ ವಾರ ನೇರವಾಗಿ ನಾಮಿನೇಟ್ ಆಗುವ ಶಿಕ್ಷೆ.

ಚಂದನ್ ಜೊತೆ ಮೊದಲ ಆಟ

'ಬಿಗ್ ಬಾಸ್' ಕಳುಹಿಸಿದ ಚಿಲ್ಲಿ ಮತ್ತು ಸಾಲ್ಟ್ ಕೇಕ್ ನ ಭಾವನಾ ಬೆಳಗೆರೆ ಮತ್ತು ಪೂಜಾ ಗಾಂಧಿ ತಿನ್ನುವಂತೆ ನಟ ಚಂದನ್ ಮನವೊಲಿಸಬೇಕಿತ್ತು.

ಟಾಸ್ಕ್ ಪೂರ್ಣಗೊಳಿಸಿದ ಅಯ್ಯಪ್ಪ-ಕಿಟ್ಟಿ

ಅತಿಯಾದ ಖಾರ ಮತ್ತು ಉಪ್ಪು ಇದ್ದ ಕಾರಣ ಪೂಜಾ ಗಾಂಧಿ ಮತ್ತು ಭಾವನಾ ಬೆಳಗೆರೆ ಬದಲು ಟಾಸ್ಕ್ ಪೂರ್ಣಗೊಳಿಸುವಂತೆ ಅಯ್ಯಪ್ಪ ಮತ್ತು ಕಿಟ್ಟಿರವರನ್ನ ಚಂದನ್ ಆಯ್ಕೆ ಮಾಡಿದರು.

ತಲೆ ಬೋಳಿಸುವ ಟಾಸ್ಕ್

''ತಲೆ ಕೂದಲು ಅಂದ್ರೆ ತುಂಬಾ ಇಷ್ಟ. ಜೀವನದಲ್ಲೇ ತಲೆ ಕೂದಲು ತೆಗೆಸಿಲ್ಲ'' ಅಂತ ಚಂದನ್ ಹೇಳಿದ ಕೂಡಲೆ, ''ಕೂದಲಿಲ್ಲದಿರುವ ಚಂದನ್ ನ ನೋಡಬೇಕು ಅನ್ನುವ ಆಸೆ'' ಅಂತ 'ಆತ್ಮೀಯ' ಹೇಳಿದರು. ಒಂದ್ವೇಳೆ ಚಂದನ್ ಇದಕ್ಕೆ ಇಚ್ಛಿಸದೆ ಇದ್ದಲ್ಲಿ 'ಬಿಗ್ ಬಾಸ್' ಮನೆಯ ಬೇರೆ ಯಾರಾದರೂ ಒಬ್ಬ ಸದಸ್ಯರನ್ನ ತಲೆ ಬೋಳಿಸಿಕೊಳ್ಳುವಂತೆ ಚಂದನ್ ಮನವೊಲಿಸಬೇಕಿತ್ತು.

ಚಂದನ್ ನಿರ್ಧಾರ.!

''ಬೇರೆ ಯಾರಿಗೂ ತಲೆ ಬೋಳಿಸಿಕೊಳ್ಳುವಂತೆ ಹೇಳುವುದಿಲ್ಲ'' ಎಂದು ಹೇಳಿದ ಚಂದನ್ ತಾವೇ ಹೆಡ್ ಶೇವ್ ಮಾಡಿಕೊಳ್ಳುವ ನಿರ್ಧಾರ ಮಾಡಿದರು. ನಟಿ ಪೂಜಾ ಗಾಂಧಿ ಹೆಡ್ ಶೇವ್ ಮಾಡಬೇಕಿತ್ತು.

ಪೂಜಾ ಗಾಂಧಿ ಮತ್ತು ಚಂದನ್ ನಡುವೆ ನಡೆದ ಸಂಭಾಷಣೆ

ಚಂದನ್ - ''ನೀವು ಹೇಳಿರುವ ಪದಗಳಿಗಿಂತ ಹರ್ಟ್ ಆಗಲ್ಲ. ನಾನು Dishonest ಅಲ್ಲ. ಅದಕ್ಕಿಂತ ನನಗೆ ಹರ್ಟ್ ಆಗಲ್ಲ. ಈಗ ನನಗೆ ಹೆಡ್ ಶೇವ್ ಮಾಡಿ''

ಪೂಜಾ ಗಾಂಧಿ - ''ನನ್ನ ಪರಿಸ್ಥಿತಿ ಹಾಗಿದೆ. ಹೊರಗಡೆ ಹೋದ ಮೇಲೆ ನಾನು ಖಂಡಿತ ಹೇಳ್ತೀನಿ. ನಾನು ಯಾಕೆ ಹಾಗೆ ಹೇಳಿದೆ ಅಂತ. ಈಗ ನಾನು ಅದನ್ನ ಮರೆತು ಬಿಟ್ಟಿದ್ದೀನಿ. ನಿಮ್ಮ ಮೇಲೆ ನನಗೆ ಬೇಸರವಿಲ್ಲ''

ಪೂಜಾ ಗಾಂಧಿಗೆ ಕೋಪ ಯಾಕೆ?

ಚಂದನ್ - ''ಅಷ್ಟೊಂದು ಕೆಟ್ಟ ಪದಗಳು ಬಳಸುವಂತದ್ದು ಏನು ಮಾಡಿದ್ದೀನಮ್ಮ ನಿನಗೆ''

ಪೂಜಾ ಗಾಂಧಿ - ''ನೀವು ಮಾತನಾಡಿರುವುದು ಹಾಗೆ. ನನಗೆ ಗೊತ್ತು. ನಾನು ನೋಡಿದ್ದೀನಿ. ನನ್ನ ಐಡೆಂಟಿಟಿಗೆ ಅದು ಧಕ್ಕೆ ಆದ ಹಾಗೆ. ಆ ಸಮಯದಲ್ಲಿ ನಾನು ನಿಮ್ಮನ್ನ ಹೇಟ್ ಮಾಡಿದ್ದೆ''

ತಾಯಿ ಮೇಲೆ ಆಣೆ!

ಚಂದನ್ - ''ನಾನು ಔಟ್ ಆಗುವುದು ನಿನಗೆ ಇಷ್ಟನಾ?''

ಪೂಜಾ ಗಾಂಧಿ - ''ಇಲ್ಲ. ನಿನ್ನ ತಾಯಿ ಮೇಲೆ ಆಣೆ ಮಾಡಿ ಹೇಳು ನಾನು ಶೇವ್ ಮಾಡ್ಲಿಲ್ಲ ಅಂದ್ರೆ ನೀನು ಔಟ್ ಆಗ್ತೀಯಾ ಅಂತ''

ಚಂದನ್ - ''ನಾನು ಯಾವುದೇ ಕಾರಣಕ್ಕೂ, ಅದು ಹುಡುಗೀರ ಹತ್ತಿರ ತಾಯಿ ಮೇಲೆ ಆಣೆ ಇಡುವುದೇ ಇಲ್ಲ. ದೇವರ ಮೇಲೆ ಆಣೆ, ಬಿಗ್ ಬಾಸ್ ಮೇಲೆ ಆಣೆ. ನನ್ನ ಮೇಲೆ ಆಣೆ''

ತಾಯಿ ತಂಟೆಗೆ ಬಂದ್ರೆ....

ಪೂಜಾ ಗಾಂಧಿ - ''ತಾಯಿ ಮೇಲೆ ಆಣೆ ಮಾಡು, ಆಮೇಲೆ ನಾನು ಮಾಡ್ತೀನಿ. ಇಲ್ಲಾಂದ್ರೆ ಮಾಡಲ್ಲ''

ಚಂದನ್ - ''ನನ್ನ ತಾಯಿನ ಯಾಕಮ್ಮ ಕರಿತಿದೀಯಾ ಇಲ್ಲಿ. ನನ್ನ ತಾಯಿ ವಿಷಯಕ್ಕೆ ಬರಬೇಡ. ನಾನು ರಾಕ್ಷಸ ಆಗ್ಬಿಡ್ತೀನಿ. ನನ್ನ ವಿರುದ್ಧ ಯಾರು ಹೋಗ್ತಿದ್ದಾರೋ, ಅವರೆಲ್ಲಾ ನಾನು ಎವಿಕ್ಟ್ ಆಗ್ಬೇಕು ಅಂತ ಪ್ಲಾನ್ ಮಾಡ್ತಿದ್ದಾರೆ. ಇದು ಸೀರಿಯಸ್ ಮ್ಯಾಟರ್. ಯಾರು ಯಾಕೆ ಅರ್ಥ ಮಾಡ್ಕೊಳ್ತಿಲ್ಲ''

ಪೂಜಾ ಗಾಂಧಿ - ''ಆಯ್ತು ನನ್ನ ಮನಸ್ಸಲ್ಲಿ ಇದೆ. ನೀವು ಇಲ್ಲೇ ಇರ್ಬೇಕು ಅಂತ. ಹಾಗಾಗಿ ಮಾಡ್ತಿದ್ದೀನಿ''

ರೆಹಮಾನ್ ಹೇಳಿದ್ದೇನು?

ರೆಹಮಾನ್ - ''ನನ್ನ ಕೆಟ್ಟವನು ಅಂದ್ಯಲ್ಲ. ಹಾಗಾಗಿ ಶಿಕ್ಷೆ ಕೊಡು ಅಂತ ಮಾಡಿದ ಹಾಗೆ ಆಯ್ತು''

ತಲೆ ಬೋಳಿಸಿಕೊಂಡ ಚಂದನ್

ಹೈಡ್ರಾಮಾ ನಂತರ ಚಂದನ್ ತಲೆ ಬೋಳಿಸಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದರು.

ಮತ್ತೆ ಇಬ್ಬರ ನಡುವೆ ಬಿರುಕು

ಚಂದನ್ - ''ಈ ಟಾಸ್ಕ್ ನ ನಾನು ಕಂಪ್ಲೀಟ್ ಮಾಡ್ಬೇಕಿತ್ತು. ನಾನು ಔಟ್ ಆಗ್ತಿರ್ಲಿಲ್ಲ''

ಪೂಜಾ ಗಾಂಧಿ - ''ನೀನು ಇರ್ಬೇಕಿತ್ತು ಅದಕ್ಕೆ ನಾನು ಮಾಡ್ದೆ. You again used my emotions. I will never trust you again''

English summary
Kannada Actor Chandan shaved his head in Bigg Boss House. Read the article to know what all happened in Bigg Boss Kannada 3 on Day 65.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada