»   » 'ಬಿಗ್ ಬಾಸ್'ಗೆ ಸುನಾಮಿ ಕಿಟ್ಟಿ ಇಟ್ಟ ಬೇಡಿಕೆ ಏನು?

'ಬಿಗ್ ಬಾಸ್'ಗೆ ಸುನಾಮಿ ಕಿಟ್ಟಿ ಇಟ್ಟ ಬೇಡಿಕೆ ಏನು?

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಏಳಕ್ಕಿಂತ ಹೆಚ್ಚು ಬಾರಿ ನಾಮಿನೇಟ್ ಆಗಿ ಇತಿಹಾಸ ಸೃಷ್ಟಿಸಿರುವ ಸುನಾಮಿ ಕಿಟ್ಟಿಗೆ ಕಳೆದ ಕೆಲ ದಿನಗಳಿಂದ ಕಿರಿಕಿರಿ ಶುರುವಾಗ್ಬಿಟಿದೆ.

ಅದಕ್ಕೆ ಕಾರಣ ಅಯ್ಯಪ್ಪ ಮತ್ತವರ ಟೀಮ್. ಮೊದಲೇ ಸುನಾಮಿ ಕಿಟ್ಟಿಗೆ ಅಯ್ಯಪ್ಪ, ಪೂಜಾ ಗಾಂಧಿ ಮತ್ತು ಗೌತಮಿ ಕಂಡ್ರೆ ಅಷ್ಟಕಷ್ಟೆ. ಇನ್ನೂ ಟಾಸ್ಕ್ ನಲ್ಲಿ ಅವರ ವಿರುದ್ಧವೇ ಸೋತರೆ ಸುನಾಮಿ ಕಿಟ್ಟಿ ಸುಮ್ಮನೆ ಕೂರುತ್ತಾರಾ? ಖಂಡಿತ ಇಲ್ಲ. [ಅಂತೂ ಇಂತೂ ಸುನಾಮಿ ಕಿಟ್ಟಿ ಸೇಫ್ ಆದರು!]

Bigg Boss Kannada 3 - Day 79 - Tsunami Kitty's request for Bigg Boss

ಮೇಜಿನ ಮೇಲೆ ನಿಲ್ಲುವ ಟಾಸ್ಕ್ ನಲ್ಲಿ ಚಂದನ್ ಚೆನ್ನಾಗಿ ಪರ್ಫಾಮ್ ಮಾಡದ ಕಾರಣ ಚಂದನ್ ಮತ್ತು ಕಿಟ್ಟಿ, ಅಯ್ಯಪ್ಪ ಮತ್ತು ಪೂಜಾ ಗಾಂಧಿ ವಿರುದ್ಧ ಸೋತರು.

ಈ ಬಗ್ಗೆ ಬೇಸರಗೊಂಡ ಕಿಟ್ಟಿ, ಚಂದನ್ ಗೆ ಸಖತ್ತಾಗಿ ಬೆಂಡೆತ್ತಿದರು. ಸಾಲದಕ್ಕೆ 'ಬಿಗ್ ಬಾಸ್' ರವರಲ್ಲಿ ಒಂದು ಬೇಡಿಕೆ ಇಟ್ಟರು. ''ಈ ವಾರ ಇವರೆಲ್ಲಾ (ಅಯ್ಯಪ್ಪ, ಪೂಜಾ ಗಾಂಧಿ ಮತ್ತು ಗೌತಮಿ) ಔಟ್ ಆಗ್ಬಿಟ್ರೆ ಸಾಕಪ್ಪಾ ಅಂತ ಬೇಡಿಕೊಳ್ಳುತ್ತಿದ್ದರು. ['ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!]

ಈ ವಾರ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ. ವೀಕ್ಷಕರ ಎಸ್.ಎಂ.ಎಸ್ ಯಾರಿಗೆ ಕಡಿಮೆ ಸಿಗುತ್ತೋ, ಅವರಿಗೆ ಗೇಟ್ ಪಾಸ್ ಗ್ಯಾರೆಂಟಿ. ಕಿಟ್ಟಿ ಬೇಡಿಕೆ ಈಡೀರುತ್ತೋ, ಇಲ್ವೋ ಅನ್ನೋದು ಈ ಶನಿವಾರ ಗೊತ್ತಾಗಲಿದೆ.

English summary
'Indian' and 'Dancing Star' reality show winner Tsunami Kitty requested 'Bigg Boss' to eliminate Aiyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada