»   » 'ಬಿಗ್ ಬಾಸ್' ಮನೆಯಿಂದ ಈ ವಾರ ಕಿಟ್ಟಿ ಔಟ್ ಆಗ್ತಾರಾ?

'ಬಿಗ್ ಬಾಸ್' ಮನೆಯಿಂದ ಈ ವಾರ ಕಿಟ್ಟಿ ಔಟ್ ಆಗ್ತಾರಾ?

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಮೊದಲ ವಾರ ನಟಿ ಹಾಗು ಮಿಸ್ ಕರ್ನಾಟಕ ಬೆಡಗಿ ಮಾಧುರಿ ಇಟಗಿ ಹೊರಬಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಯಾವುದೇ ಗದ್ದಲ-ಗಲಾಟೆ ಮಾಡಿಕೊಳ್ಳದೇ ಇದ್ದರೂ ಮಾಧುರಿ ಇಟಗಿ ಔಟ್ ಆಗ್ಬೇಕಾಯ್ತು.

ಈ ವಾರ 'ಬಿಗ್ ಬಾಸ್' ಕಾರ್ಯಕ್ರಮದಿಂದ ಎಲಿಮಿನೇಟ್ ಆಗುವುದಕ್ಕೆ ನಾಮಿನೇಟ್ ಆಗಿರುವುದು ಮತ್ತದೇ ಸುನಾಮಿ ಕಿಟ್ಟಿ ಮತ್ತು ಡ್ಯಾನ್ಸರ್ ಕಮ್ ಮಾಡೆಲ್ ಜಯಶ್ರೀ. ['ಬಿಗ್ ಬಾಸ್' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಕನ್ನಡ ಕಿರುತೆರೆಯಲ್ಲಿ ಎರಡು ರಿಯಾಲಿಟಿ ಶೋಗಳನ್ನು ಗೆದ್ದು ಬೀಗಿರುವ ಸುನಾಮಿ ಕಿಟ್ಟಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇದೇ ಕಾರಣಕ್ಕೆ ಮೊದಲನೇ ವಾರ ಸುನಾಮಿ ಕಿಟ್ಟಿ ಸೇಫ್ ಆದರು. ಆದ್ರೀಗ, ಸತತವಾಗಿ ಎರಡನೇ ಬಾರಿ ಸುನಾಮಿ ಕಿಟ್ಟಿ ನಾಮಿನೇಟ್ ಆಗಿದ್ದಾರೆ. ಈ ಬಾರಿ ವೀಕ್ಷಕ ಮಹಾಶಯರು ಅವರನ್ನ ಕಾಪಾಡುತ್ತಾರಾ.?

ಅಷ್ಟಕ್ಕೂ ಕಿಟ್ಟಿ ಮತ್ತು ಜಯಶ್ರೀ ನಾಮಿನೇಟ್ ಆಗಿದ್ಯಾಕೆ.? ಯಾರ್ಯಾರು ಅವರನ್ನ ನಾಮಿನೇಟ್ ಮಾಡಿದರು ಅಂತ ಡೀಟೇಲ್ ಆಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಕೃತಿಕಾ

'ಬಿಗ್ ಬಾಸ್' ಕೊಡುತ್ತಿರುವ ಟಾಸ್ಕ್ ಗಳನ್ನು ಸರಿಯಾಗಿ ಮಾಡುತ್ತಿಲ್ಲ ಅನ್ನುವ ಕಾರಣ ನೀಡಿ ಕಿರುತೆರೆ ನಟಿ ಕೃತಿಕಾ, ಹುಚ್ಚ ವೆಂಕಟ್ ಮತ್ತು ಸುನಾಮಿ ಕಿಟ್ಟಿಯನ್ನ ನಾಮಿನೇಟ್ ಮಾಡಿದರು.

ಚಂದನ್

ನಟ ಚಂದನ್ ಈ ವಾರ ನಾಮಿನೇಟ್ ಮಾಡಿದ್ದು - ನೇಹಾ ಗೌಡ ಮತ್ತು ಜಯಶ್ರೀ.

ಮಾಸ್ಟರ್ ಆನಂದ್

ಸುನಾಮಿ ಕಿಟ್ಟಿ ಮತ್ತು ನೇಹಾ ಗೌಡ ರವರನ್ನ ಮಾಸ್ಟರ್ ಆನಂದ್ ನಾಮಿನೇಟ್ ಮಾಡಿದರು.

ಜಯಶ್ರೀ

ಸುನಾಮಿ ಕಿಟ್ಟಿ ಮತ್ತು ಚಂದನ್ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಬೇಕು ಅಂತ ಜಯಶ್ರೀ ಹೇಳಿದರು.

ರವಿ ಮುರೂರು

ಗಾಯಕ ರವಿ ಮುರೂರು ಸೂಚಿಸಿದ ಹೆಸರುಗಳು - ಜಯಶ್ರೀ ಮತ್ತು ಸುನಾಮಿ ಕಿಟ್ಟಿ.

ರೆಹಮಾನ್

ಹುಚ್ಚ ವೆಂಕಟ್ ಮತ್ತು ರವಿ ಮುರೂರು ರವರನ್ನ ರೆಹಮಾನ್ ನಾಮಿನೇಟ್ ಮಾಡಿದರು.

ಪೂಜಾ ಗಾಂಧಿ

ಮನೆಯಲ್ಲಿ ತುಂಬಾ ಪ್ಲಾನಿಂಗ್ ಮಾಡ್ತಿದ್ದಾರೆ ಅನ್ನುವ ಕಾರಣ ನೀಡಿ ಅಯ್ಯಪ್ಪ ಮತ್ತು ನೇಹಾ ಗೌಡ ರವರನ್ನ ಪೂಜಾ ಗಾಂಧಿ ನಾಮಿನೇಟ್ ಮಾಡಿದರು.

ನೇಹಾ ಗೌಡ

ನೇಹಾ ಗೌಡ ಆಯ್ಕೆ - ಹುಚ್ಚ ವೆಂಕಟ್ ಮತ್ತು ಜಯಶ್ರೀ

ಭಾವನಾ ಬೆಳಗೆರೆ

ಜಯಶ್ರೀ ಮತ್ತು ನೇಹಾ ಗೌಡ ಹೆಸರನ್ನ ಭಾವನಾ ಬೆಳಗೆರೆ ಸೂಚಿಸಿದರು.

ಹುಚ್ಚ ವೆಂಕಟ್

''ಜಯಶ್ರೀ ಸಿಗರೇಟ್ ಸೇದ್ತಾರೆ, ಅವರು ತೊಡುವ ಬಟ್ಟೆಗಳನ್ನ ನೋಡೋಕೆ ಆಗಲ್ಲ. ಅವರು ಔಟ್ ಆಗ್ಬೇಕು'' ಅಂತ ಹೇಳ್ತಾ ಜಯಶ್ರೀ ಮತ್ತು ಸುನಾಮಿ ಕಿಟ್ಟಿ ಹೆಸರನ್ನ ಹುಚ್ಚ ವೆಂಕಟ್ ನಾಮಿನೇಟ್ ಮಾಡಿದರು.

ಸುನಾಮಿ ಕಿಟ್ಟಿ

ಸುನಾಮಿ ಕಿಟ್ಟಿ ಆಯ್ಕೆ - ಅಯ್ಯಪ್ಪ, ಜಯಶ್ರೀ

ನೇತ್ರ

ಸುನಾಮಿ ಕಿಟ್ಟಿ ಮತ್ತು ಜಯಶ್ರೀ ಹೆಸರನ್ನ ನೇತ್ರ ನಾಮಿನೇಟ್ ಮಾಡಿದರು.

ಅಯ್ಯಪ್ಪ

ಅಯ್ಯಪ್ಪ ಆಯ್ಕೆ - ನೇಹಾ ಗೌಡ ಮತ್ತು ಸುನಾಮಿ ಕಿಟ್ಟಿ

ಶ್ರುತಿ

ಟಾಸ್ಕ್ ಸರಿಯಾಗಿ ಮಾಡ್ತಿಲ್ಲ ಅನ್ನುವ ಕಾರಣ ನೀಡಿ ಹುಚ್ಚ ವೆಂಕಟ್ ಮತ್ತು ಜಯಶ್ರೀ ಯನ್ನ ನಟಿ ಶ್ರುತಿ ನಾಮಿನೇಟ್ ಮಾಡಿದರು.

ಅತಿ ಹೆಚ್ಚು ವೋಟ್ ಪಡೆದವರು ಯಾರು?

ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀಗೆ 8 ವೋಟ್ ಗಳು ಲಭಿಸಿದ್ದರೆ, ಸುನಾಮಿ ಕಿಟ್ಟಿಗೆ 7 ವೋಟ್ಸ್ ಸಿಕ್ಕಿವೆ. ಇವರಲ್ಲಿ ಯಾರಿಗೆ ನೀವು ವೋಟ್ ಮಾಡ್ತೀರಾ?

ಸುನಾಮಿ ಕಿಟ್ಟಿ ಔಟ್ ಆಗ್ತಾರಾ?

ಸತತ ಎರಡನೇ ಬಾರಿ ನಾಮಿನೇಟ್ ಆಗಿರುವುದರಿಂದ ಸುನಾಮಿ ಕಿಟ್ಟಿ ಔಟ್ ಆಗ್ತಾರಾ ಅನ್ನುವ ಡೌಟ್ ಎಲ್ಲರನ್ನೂ ಕಾಡ್ತಿದೆ. ಸುನಾಮಿ ಕಿಟ್ಟಿ ಮನೆಯಲ್ಲೇ ಇರಬೇಕಾ? ಅಥವಾ ಹೊರಗಡೆ ಬರಬೇಕಾ? ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

English summary
Tsunami Kitty, and Jayashree are nominated for the second week elimination. Check who nominated whom on Day 8 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada