For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ 'ಬಿಗ್ ಬಾಸ್' ಮನೆಗೆ ಬಂದಿರುವುದು ಯಾಕೆ ಗೊತ್ತಾ?

  By Harshitha
  |

  ''ನಟಿ ಶ್ರುತಿ ನಾಟಕ ಮಾಡ್ತಿದ್ದಾರೆ. ಅವರು ನಿಜವಾಗಲೂ ಇರುವ ಹಾಗೆ 'ಬಿಗ್ ಬಾಸ್' ಮನೆಯಲ್ಲಿ ಇಲ್ಲ. 'ಅಮ್ಮ' ಅಂತ ಹೇಳಿಕೊಂಡು ಸೇಫ್ ಗೇಮ್ ಆಡುತ್ತಿದ್ದಾರೆ'' - ಹೀಗಂತ ನಟಿ ಶ್ರುತಿ ಬಗ್ಗೆ ಅಪವಾದ ಮಾಡಿದವರು ಅನೇಕರು.

  ''ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ ಅಂತ ಅಮ್ಮನ ಬಳಿ ಮಾತು ಕೊಟ್ಟು ಬಂದಿದ್ದೇನೆ'' ಅಂತ ನಟಿ ಶ್ರುತಿ ಕೂಡ ಹೇಳಿದ್ದರು. ಹೀಗಿದ್ದರೂ, ಶ್ರುತಿ ಬಗ್ಗೆ ಆರೋಪ ಕೇಳಿಬರುವುದು ಮಾತ್ರ ಕಮ್ಮಿ ಆಗ್ಲಿಲ್ಲ. [ಶ್ರುತಿ v/s ಸುಷ್ಮಾ! 'ಬಿಗ್ ಬಾಸ್' ಮನೆ ಇಬ್ಭಾಗ.!]

  ಶ್ರುತಿ ಬಗ್ಗೆ ಯಾರು ಎಷ್ಟೇ ನೆಗೆಟಿವ್ ಆಗಿ ಮಾತನಾಡಿದರೂ, ಅವರು ದೃಢ ಮನಸ್ಸಿನಿಂದ 'ಬಿಗ್ ಬಾಸ್' ಮನೆಯಲ್ಲಿ ಇರಲು ಕಾರಣ ಪುತ್ರಿ ಗೌರಿ.

  ಹೌದು, ಗೌರಿಗಾಗಿ 'ಬಿಗ್ ಬಾಸ್-3' ಗೆಲ್ಲಲು ಪಣ ತೊಟ್ಟಿದ್ದಾರಂತೆ ನಟಿ ಶ್ರುತಿ. ಮುಂದೆ ಓದಿ.....

  ಸಮಯದ ಗೊಂಬೆ ಟಾಸ್ಕ್

  ಸಮಯದ ಗೊಂಬೆ ಟಾಸ್ಕ್

  ಮನೆಯ ಸದಸ್ಯರಿಗೆ ಕಾಲ ಚಕ್ರದ ತಿರುಗುವಿಕೆ ಮಹತ್ವ ತಿಳಿಸುವ ಸಲುವಾಗಿ 'ಸಮಯದ ಗೊಂಬೆ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದರು 'ಬಿಗ್ ಬಾಸ್'. ['ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!]

  ಟಾಸ್ಕ್ ನಿಯಮವೇನು?

  ಟಾಸ್ಕ್ ನಿಯಮವೇನು?

  'Pause' ಅಂತ ಶಬ್ದ ಕೇಳಿ ಬಂದ ಕೂಡಲೆ, ನಿಗದಿತ ಸದಸ್ಯರು ನಿಂತಿರುವ ಭಂಗಿಯಲ್ಲೇ ಸ್ತಬ್ಧ ಚಿತ್ರದ ಮಾದರಿಯಲ್ಲಿ ನಿಲ್ಲಬೇಕು. 'Play' ಆದೇಶ ಬಂದ ಕೂಡಲೆ ದೈನಂದಿನ ಕೆಲಸದಲ್ಲಿ ತೊಡಗಬೇಕು. 'Rewind' ಅಂತ ಆದೇಶ ಬಂದ ಕೂಡಲೆ 15 ಸೆಕೆಂಡ್ ಹಿಂದೆ ಇದ್ದ ಭಂಗಿಗೆ ವಾಪಸ್ ಬಂದು ಸ್ತಬ್ಧವಾಗಿ ನಿಲ್ಲಬೇಕು.

  ಆನಂದ್ ತರ್ಲೆ!

  ಆನಂದ್ ತರ್ಲೆ!

  'Play' ಆದೇಶದಲ್ಲಿರುವ ಸದಸ್ಯರು 'Pause' ಆಗಿರುವ ಸದಸ್ಯರನ್ನ distract ಮಾಡಬೇಕು. ಆನಂದ್ ಗೆ 'Play' ಸಿಕ್ಕಾಗ, 'Pause' ಆಗಿದ್ದ ಅಯ್ಯಪ್ಪ ಪ್ಯಾಂಟ್ ಬಿಚ್ಚಿದರು. ಇದಕ್ಕೆ ಪ್ರತಿಫಲವಾಗಿ ಅಯ್ಯಪ್ಪ ಕೂಡ ಆನಂದ್ ಪ್ಯಾಂಟ್ ಬಿಚ್ಚಿದರು. [ನಟಿ ಶ್ರುತಿಗೆ 'ಮಂಡ್ಯದ ಗಂಡು' ಅಂಬರೀಶ್ ಗೊತ್ತಿಲ್ವಾ?]

  'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಗೌರಿ

  'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಗೌರಿ

  ಎಲ್ಲರೂ 'Pause' ಆಗಿದ್ದಾಗ ನಟಿ ಶ್ರುತಿ ಪುತ್ರಿ ಗೌರಿ 'ಬಿಗ್ ಬಾಸ್' ಮನೆಯೊಳಗೆ ಬಂದರು. ಗೌರಿ ಧ್ವನಿ ಕೇಳಿ ನಟಿ ಶ್ರುತಿ ಭಾವುಕರಾದರು. ಇದೇ ಸಂದರ್ಭದಲ್ಲಿ ಎಲ್ಲರೂ ಕಣ್ಣೀರು ಹಾಕಿದರು. ['ಬಿಗ್ ಬಾಸ್-3' - ಈ ನಾಲ್ವರ ಭವಿಷ್ಯ ನಿಮ್ಮ ಕೈಯಲ್ಲಿದೆ.!]

  ಗೌರಿ ಹೇಳಿದ್ದೇನು?

  ಗೌರಿ ಹೇಳಿದ್ದೇನು?

  ''ಅಳಬಾರದು. ನನಗೋಸ್ಕರ ನೀನು ಗೆಲ್ಲಬೇಕು'' ಅಂತ ಶ್ರುತಿಗೆ ಮಗಳು ಗೌರಿ ಧೈರ್ಯ ತುಂಬಿದರು.

  ಶ್ರುತಿ ಹೇಳುವುದೇನು?

  ಶ್ರುತಿ ಹೇಳುವುದೇನು?

  ''ನನ್ನ ಮಗಳಿಗೋಸ್ಕರ ಈ ಶೋ ಗೆಲ್ಲಬೇಕು ನಾನು. ಇದು ನನ್ನ ಬಯಕೆ. 'ಅಮ್ಮ' ಆಗಿ ಈ ಮನೆಯಲ್ಲಿದ್ದೀನಲ್ಲಾ ಇದು ಒಂದು ಟಾಸ್ಕ್ ನನಗೆ. ಒಂದು ನಾಯಿ ಬಿಟ್ಟು ಇರುವುದಕ್ಕೆ ಅಳ್ತೀರಾ, ನಾನು ಮಗಳು ಬಿಟ್ಟು ಬಂದಿದ್ದೀನಿ'' ಅಂತ ಶ್ರುತಿ ಹೇಳಿದರು.

  'ಬಿಗ್ ಬಾಸ್' ಮನೆಗೆ ಅಯ್ಯಪ್ಪ ಅಪ್ಪ

  'ಬಿಗ್ ಬಾಸ್' ಮನೆಗೆ ಅಯ್ಯಪ್ಪ ಅಪ್ಪ

  ಅಯ್ಯಪ್ಪ ತಂದೆ ಚೆಟ್ಟಿಚ್ಚ ಕೂಡ 'ಬಿಗ್ ಬಾಸ್' ಮನೆಗೆ ಬಂದು ಮಗನಿಗೆ ಆಶೀರ್ವಾದಿಸಿದರು.

  English summary
  Kannada Actress Shruthi became emotional after seeing her daughter Gowri in Bigg Boss house. Read the article to know what all happened on Day 86 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X